For Quick Alerts
ALLOW NOTIFICATIONS  
For Daily Alerts

  ಜೂನ್ ತಿಂಗಳಲ್ಲಿ ನಿಮ್ಮ ಭವಿಷ್ಯ ಹೇಗೆ ಬದಲಾಗುತ್ತದೆ ಎಂದು ನೋಡಿ...

  |

  ನಿತ್ಯದ ಸೂರ್ಯ ಹಾಗೂ ಚಂದ್ರ ಎಲ್ಲರಿಗೂ ಸಮಾನವಾಗಿ ಬೆಳಕನ್ನು ನೀಡುತ್ತಾರೆ. ಹೌದು, ಮುಂಜಾನೆ ಹಾಗೂ ಸಂಜೆ ಎನ್ನುವುದು ಯಾರ ನಿಯಂತ್ರಣಕ್ಕೂ ಒಳಗಾಗದೆಯೆ ತನ್ನ ಪಾಡಿಗೆನಡೆಯುತ್ತಲೇ ಇರುತ್ತವೆ. ಆದರೆ ಮುಂಜಾನೆ ಹಾಗೂ ರಾತ್ರಿಯ ನಡುವೆ ಇರುವ ಈ ಅಂತರದಲ್ಲಿ ಪ್ರತಿಯೊಬ್ಬರೂ ವಿಭಿನ್ನವಾದ ಅನುಭವ ಹಾಗೂ ಭವಿಷ್ಯವನ್ನು ಕಾಣುತ್ತಾರೆ. ಅದನ್ನೇ ನಾವು ಬದುಕು ಎನ್ನುತ್ತೇವೆ.

  ಬದುಕಿನ ದಾರಿಯಲ್ಲಿ ಪ್ರತಿಯೊಬ್ಬರೂ ವಿವಿಧ ಅನುಭವಗಳನ್ನು ಅನುಭವಿಸುತ್ತಾ ಸಾಗುತ್ತಾರೆ. ಜೊತೆಗೆ ತಾವು ಅನುಭವಿಸಿದ ಅನುಭವಗಳೇ ಜೀವನ ಎನ್ನುವ ಪಾಠವನ್ನು ಕಲಿಸುತ್ತವೆ. ಹಾಗಾಗಿ ಎಲ್ಲರೂ ಜೀವನದಲ್ಲಿ ಆದಷ್ಟು ಸುಖ ಸಂತೋಷ ದೊರೆಯಲಿ ಎಂದೇ ಬಯಸುವುದು. ಆದರೆ ನಮ್ಮ ಕುಂಡಲಿಯಲ್ಲಿರುವ ಗ್ರಹಗತಿಗಳ ಬದಲಾವಣೆಯು ತಮ್ಮದೇ ರೀತಿಯ ಬದಲಾವಣೆ ಹಾಗೂ ಚಲನೆಯನ್ನು ಹೊಂದುತ್ತಾರೆ. ಇದರ ಪರಿಣಾಮವಾಗಿಯೇ ನಮ್ಮ ಜೀವನದ ಸ್ವಾರಸ್ಯ ಅಡಗಿರುವುದು. ಬದುಕಲ್ಲಿ ಎಂತಹದ್ದೇ ಅವಕಾಶಗಳು ನಮಗೆ ಎದುರಾಗಲಿ ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಮುನ್ನಡೆಯುವುದು ಜಾಣ್ಮೆ ಹಾಗೂ ಜೀವನ ಎನಿಸಿಕೊಳ್ಳುವುದು. ನಿಮಗೂ ನಿಮ್ಮ ಜೂನ್ ತಿಂಗಳ ಭವಿಷ್ಯ ಹೇಗಿದೆ? ಯಾವೆಲ್ಲಾ ಅವಕಾಶಗಳು ದೊರೆಯಬಹುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

  ಮೇಷ

  ಮೇಷ

  ಇದೀಗ ನಿಮ್ಮ ಮನಸ್ಸಿನಲ್ಲಿ ಹಲವಾರು ನವೀನ ಕಲ್ಪನೆಗಳು ಇರಬಹುದು. ಅವುಗಳೆಲ್ಲವನ್ನೂ ಸೂಕ್ತ ರೀತಿಯಲ್ಲಿ ಕಾರ್ಯಗತಗೊಳಿಸುವಲ್ಲಿ ಉತ್ಸುಕರಾಗಿರುತ್ತೀರಿ. ಆದರೆ ಅದರಲ್ಲಿ ಕೆಲವೊಂದು ಕೈಬಿಟ್ಟು ಹೋದರೆ ಅಥವಾ ಯೋಜನೆಯನ್ನು ನಿಮ್ಮ ನಿರೀಕ್ಷೆಯಂತೆ ಯಶಸ್ಸನ್ನು ಪಡೆಯದೆ ವಿಫಲವಾದರೆ ಚಿಂತಿಸಬೇಡಿ. ನಿಮ್ಮ ಸಂವಹನ ಕೌಶಲ್ಯವು ಮೇಲ್ಭಾಗದಲ್ಲಿ ಇರುತ್ತದೆ. ಹಾಗಾಗಿ ನೀವು ಸಾಮಾಜಿಕವಾಗಿ ಸಕ್ರಿಯರಾಗಿರಬಹುದು. ಸರಿಯಾದ ಸಂಪರ್ಕ ಪಡೆದುಕೊಳ್ಳುವುದರಲ್ಲಿ ಗಮನ ನೀಡಿ. ನಿಮಗೆ ನಿಮ್ಮ ಆಲೋಚನೆ ಅಥವಾ ಮಾನಸಿಕ ಚಿಂತನೆಗಳಲ್ಲಿ ಅಸ್ಪಷ್ಟತೆ ಇದೆ ಎಂದಾದರೆ ಧ್ಯಾನ, ವ್ಯಾಯಾಮ ಮಾಡಲು ಪ್ರಯತ್ನಿಸಿ. ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಮುಂಚೆ ಇತರ

  ದೃಷ್ಟಿಕೋನಗಳೊಂದಿಗೆ ಚಿಂತಿಸಿ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಸೂಕ್ತ.

  ವೃಷಭ

  ವೃಷಭ

  ಜೂನ್ ತಿಂಗಳು ಈ ರಾಶಿಯವರಿಗೆ ಕೆಲಸ ಮೊದಲ ಆದ್ಯತೆಯಾಗಿರುತ್ತದೆ. ನಿಮ್ಮ ಗುರಿಯ ಮೇಲೆ ಸ್ಥಿರವಾದ ಕಣ್ಣು ಇಟ್ಟುಕೊಳ್ಳುವುದರ ಮೂಲಕ ಹೃದಯ ಪೂರ್ವಕವಾಗಿ ಶ್ರಮವನ್ನು ವಹಿಸಬಹುದು. ನಿಮ್ಮ ನಿರೀಕ್ಷೆಯಂತೆ ಕೆಲಸವು ಯಶಸ್ಸನ್ನು ಪಡೆಯದೆ ಇದ್ದರೆ ನಿರಾಶೆಗೆ ಒಳಗಾಗದಿರಿ. ಬದಲಿಗೆ ಇನ್ನೊಂದು ಯೋಜನೆಯನ್ನು ಪೂರ್ಣಗೊಳಿಸಲು ಸಿದ್ಧರಾಗಿ. ನಿಮ್ಮ ಕೆಲಸದಿಂದ ಹಿರಿಯರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗುವಿರಿ. ಹೊಸ ಹೂಡಿಕೆಯಲ್ಲಿ ತೊಡಗುವುದು ಲಾಭವನ್ನು ತಂದುಕೊಡುವುದು. ಸಂಬಂಧದಲ್ಲಿ ಆದಷ್ಟು ಹೊಂದಾಣಿಕೆ ಹಾಗೂ ಸಹಕಾರದ ಸ್ವಭಾವದಿಂದ ಉತ್ತಮ ಫಲಿತಾಂಶ ದೊರೆಯುವುದು.

  ಮಿಥುನ

  ಮಿಥುನ

  ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕೆಲಸದ ಒತ್ತಡದಿಂದ ಎಲ್ಲಾ ಸಂಗತಿಯೂ ಒತ್ತಡಕ್ಕೆ ಒಳಗಾಗುವಂತೆ ಮಾಡುವುದು. ಆದಾಯದ ಹೊಸ ಮೂಲಗಳಿಂದ ಹಣದ ಲಾಭ ದೊರೆಯುವುದು. ಇದರಿಂದ ಒಂದಿಷ್ಟು ಸಂತೋಷವನ್ನು ಅನುಭವಿಸುವಿರಿ. ಈ ತಿಂಗಳು ನಿಮಗಾಗಿ ವೃತ್ತಿ ಮಾರ್ಗದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು. ನಿರ್ಲಕ್ಷದಿಂದ ಗಾಡಿ ಓಡಿಸುವುದರಿಂದ ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಪ್ರಬುದ್ಧ ರೀತಿಯಲ್ಲಿ ಸಮಸ್ಯೆಗಳನ್ನು ಮತ್ತು ವಾದಗಳನ್ನು ನಿರ್ವಹಿಸುವುದರ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದು.

  ಕರ್ಕ

  ಕರ್ಕ

  ಗ್ರಹಗತಿಗಳು ಮತ್ತು ನಕ್ಷತ್ರಗಳು ಈ ತಿಂಗಳು ನಿಮ್ಮ ಪರವಾಗಿ ಇರುತ್ತವೆ ಎಂದು ಹೇಳಬಹುದು. ಹಾಗಾಗಿಯೇ ನಿಮ್ಮ ಕೆಲಸದಲ್ಲಿ ಸುಲಭವಾಗಿಯೇ ಸಾಧನೆಯನ್ನು ಗೈಯುವಿರಿ. ಅದಕ್ಕಾಗಿ ಹೆಚ್ಚಿ ಶ್ರಮದ ಅಗತ್ಯವಿರುವುದಿಲ್ಲ. ಕೆಲಸದ ಸ್ಥಳದಲ್ಲಿ ನಿಮ್ಮನ್ನು ನಿರ್ಲಕ್ಷಿಸಬಹುದು. ಭರವಸೆಯನ್ನು ಕಳೆದುಕೊಳ್ಳಬೇಡಿ. ಉತ್ತಮ ಸಮಯ ನಿಮಗಾಗಿಯೇ ಬರುವುದು. ಅಂತಿಮವಾಗಿ ನೀವು ಬಹುಮಾನವನ್ನು ಪಡೆದುಕೊಳ್ಳುವಿರಿ. ಹಿಂದೆ ಮಾಡಿದಂತಹ ಹೂಡಿಕೆಯನ್ನು ಮಾಡುವುದರ ಮೂಲಕ ಬುದ್ಧಿವಂತ ನಿರ್ಣಯವನ್ನು ಕೈಗೊಳ್ಳಿ. ಅತಿಯಾದ ತಿನ್ನುವಿಕೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವವಾಗಬಹುದು. ಆದಷ್ಟು ಸಮಯವನ್ನು ನಿಮ್ಮ ಕುಟುಂಬದವರೊಂದಿಗೆ ಕಳೆಯಲು ಪ್ರಯತ್ನಿಸಿ.

  ಸಿಂಹ

  ಸಿಂಹ

  ನಿಮ್ಮ ಕೆಲಸದಿಂದ ಸಂಪೂರ್ಣವಾದ ತೃಪ್ತಿಯನ್ನು ನೀವು ಈ ತಿಂಗಳು ಪಡೆದುಕೊಳ್ಳುವಿರಿ. ಜೊತೆಗೆ ಮಾನ್ಯತೆ ಹಾಗೂ ಪ್ರಶಂಸೆಯೂ ಲಭಿಸುವುದು. ನಿಮ್ಮ ಅಹಂಕಾರ ಹಾಗೂ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮಿಂದ ಸಾಕಷ್ಟು ಜನರು ದೂರ ಸರಿಯುವ ಸಾಧ್ಯತೆಗಳು ಇವೆ. ನಿಮ್ಮ ಕೆಲಸದಲ್ಲಿ ರಾಜಕೀಯ ಪ್ರಕ್ರಿಯೆ ಎದುರಾಗಬಹುದು. ಆದರೆ ಅದಕ್ಕೆ ನೀವು ಯಾವುದೇ ರೀತಿಯಲ್ಲೂ ಗಮನ ನೀಡದಿರಿ. ನಿಮ್ಮ ಸೃಜನ ಶೀಲತೆಗೆ ಗಮನ ಕೊಡಿ. ಈ ತಿಂಗಳು ನೀವು ಹೂಡಿಕೆ ಮಾಡುವುದನ್ನು ಕಲಿಯುವಿರಿ. ನಿಮ್ಮ ಖರ್ಚುಗಳನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದನ್ನು ನೀವು ಮರೆಯದಿರಿ. ಮಾನಸಿಕ ಆತಂಕಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ನಿಯಮಿತವಾದ ವ್ಯಾಯಾಮ ಮತ್ತು ವಿಶ್ರಾಂತಿಯನ್ನು ಪಡೆಯಬೇಕು. ಸಂಬಂಧದಲ್ಲಿ ನಿಷ್ಠೆ ಎನ್ನುವುದು ಅತ್ಯಂತ ಪ್ರಮುಖವಾದ್ದು ಎನ್ನುವುದನ್ನು ನಂಬಿ.

  ಕನ್ಯಾ

  ಕನ್ಯಾ

  ನಿಮಗೆ ನಿಮ್ಮ ಆಯ್ಕೆಯಲ್ಲಿ ಸಂದಿಗ್ಧತೆ ಉಂಟಾಗಬಹುದು. ಧಾರ್ಮಿಕ ಮಾರ್ಗದಿಂದ ನಿಮಗೆ ಕೆಲವು ಉತ್ತರ ದೊರೆಯುವುದು. ನೀವು ನಿಮ್ಮಲ್ಲಿ ನಿಷ್ಠೆ ಹಾಗೂ ಸತ್ಯವನ್ನು ಉಳಿಸಿಕೊಂಡರೆ ಎಂದಿಗೂ ಸೋಲುವುದಿಲ್ಲ. ನಿಮ್ಮ ಕೆಲಸದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೊಂದುವಿರಿ. ಆಸ್ತಿಯ ವಿಚಾರವಾಗಿ ನೀವು ಲಾಭವನ್ನು ಪಡೆದುಕೊಳ್ಳುವಿರಿ. ಸಂಬಂಧದಲ್ಲೂ ಯಶಸ್ಸನ್ನು ಕಂಡುಕೊಳ್ಳುವಿರಿ ಎಂದು ಹೇಳಲಾಗುತ್ತದೆ. ಅವಿವಾಹಿತರು ವಿವಾಹ ಯೋಗವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅನುಚಿತ ಆಹಾರ ಕ್ರಮವು ಆತಂಕ ಹಾಗೂ ಒತ್ತಡವನ್ನುಂಟುಮಾಡುವುದು. ಜೊತೆಗೆ ಆರೋಗ್ಯ ಸಮಸ್ಯೆಯನ್ನುಂಟುಮಾಡುವುದು.

  ತುಲಾ

  ತುಲಾ

  ನಿಮ್ಮ ಮನಸ್ಸು ಹಾಗೂ ಹೃದಯವು ವಿವಿಧ ದಿಕ್ಕನ್ನು ಪಡೆದುಕೊಳ್ಳುವುದು. ಕೆಲವು ವಿಚಾರಗಳಿಗೆ ನೀವು ನಿರ್ಧಾರವನ್ನು ಕೈಗೊಳ್ಳಲು ಸ್ವಲ್ಪ ಕಷ್ಟವಾಗುವುದು. ಆರ್ಥಿಕ ಸಮಸ್ಯೆಯಿಂದಾಗಿ ಸಂಬಂಧಗಳಲ್ಲೂ ಸಮಸ್ಯೆ ಉಂಟಾಗಬಹುದು. ಕೆಲಸದ ಮುಂಭಾಗದಲ್ಲಿ ಅನೇಕ ಅವಕಾಶಗಳನ್ನು ಕಾಣಬಹುದು. ಕೆಲಸದಲ್ಲಿ ತಪ್ಪು ಗ್ರಹಿಕೆಯು ನಿಮಗೆ ನಿರಾಶೆಯನ್ನುಂಟುಮಾಡುವುದು. ಕಾನೂನು ಬಾಹಿರವಾದ ರೀತಿಯಲ್ಲಿ ಹಣವನ್ನು ಸಂಪಾದಿಸುವ ಮೂಲವನ್ನು ಅನುಸರಿಸದಿರಿ. ಇದರಿಂದ ನಿಮಗೆ ತೊಂದರೆ ಉಂಟಾಗುವ ಸಧ್ಯತೆಗಳಿರುತ್ತವೆ. ಸಾಹಸಮಯವಾದ ಹವ್ಯಾಸಗಳಿಂದ ಕೆಲಸವನ್ನು ಕೈಗೊಳ್ಳಿ ಇದರಿಂದ ಸಾಕಷ್ಟು ಒಳಿತನ್ನು ಕಾಣುವಿರಿ. ಸಂಬಂಧದಲ್ಲಿ ಈ ತಿಂಗಳು ಸಾಕಷ್ಟು

  ಏರಿಳಿತವನ್ನು ಅನುಭವಿಸುವಿರಿ.

  ವೃಶ್ಚಿಕ

  ವೃಶ್ಚಿಕ

  ನೀವು ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಆಕರ್ಷಕ ವಸ್ತುಗಳನ್ನು ಹೊಂದುತ್ತೀರಿ. ಒಂದೇ ಬಗೆಯ ವೇಳಾಪಟ್ಟಿಯು ನಿಮಗೆ ಬೇಸರವನ್ನು ತಂದೊಡ್ಡಬಹುದು. ನೀವು ವೃತ್ತಿ ಬದಲಾವಣೆಯ ಕುರಿತು ಯೋಚಿಸುತ್ತಿದ್ದರೆ ಇದು ನಿಮಗೆ ಉತ್ತಮವಾದ ಸಮಯ ಎನ್ನಬಹುದು. ಸಾಲ ನೀಡದೆ ಇದ್ದರೆ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ನಿಮ್ಮ ದಿನಚರಿಯ ಭಾಗವಾಗಿ ಯೋಗ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕವಾಗಿ ಆರೋಗ್ಯದಿಂದ ಇರುತ್ತೀರಿ. ಅವಿವಾಹಿತರಿಗೆ ಒಂದೇ ನೋಟದಲ್ಲಿ ಪ್ರೀತಿ ಲಭಿಸುವ ಸಾಧ್ಯತೆಗಳಿವೆ.

  ಧನು

  ಧನು

  ಕೆಲಸದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನೀವು ಸಾಕಷ್ಟು ಅವಕಾಶಗಳನ್ನು ಹೊಂದಿರುತ್ತೀರಿ. ನಿಮ್ಮ ಅಂತರ್ಮುಖಿ ಪ್ರಕೃತಿಯನ್ನು ಪಕ್ಕಕ್ಕೆ ಇರಿಸಲು ಮತ್ತು ಅದರಲ್ಲಿ ಹೆಚ್ಚಿನದನ್ನು ಸಾಧಿಸಬಹುದು. ನಿಗೆ ಮೂರನೇ ವ್ಯಕ್ತಿಗಳಿಂದ ಋಣಾತ್ಮಕ ಉಪದೇಶಗಳು ದೊರೆಯಬಹುದು ಅಥವಾ ನಿಮ್ಮ ಆಶಾವಾದವನ್ನು ಕಡಿಮೆ ಮಾಡಬಹುದು. ಎಲ್ಲಾ ಸಮಯದಲ್ಲಿ ಎಲ್ಲರೂ ಸಂತೋಷವಾಗಿರುವುದಿಲ್ಲ ಎನ್ನುವುದನ್ನು ಮನದಟ್ಟುಮಾಡಿಕೊಳ್ಳಿ. ಅನುಭವಸ್ಥರಿಂದ ಆರ್ಥಿಕ ಸಲಹೆಯನ್ನು ಪಡೆದುಕೊಳ್ಳಿ. ನಿಮ್ಮ ಸಂಬಂಧಗಳ ಬಗ್ಗೆ ಭಾವೋದ್ರಿಕ್ತಗೊಳ್ಳಬಹುದು. ಪಾಲುದಾರರೊಂದಿಗೆ ಒಂದಿಷ್ಟು ಸಮಯ ಕಳೆದಿದ್ದರೆ ನಿರಾಶೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ.

  ಮಕರ

  ಮಕರ

  ಈ ತಿಂಗಳು ನಿಮಗಾಗಿ ಸಾಕಷ್ಟು ಕೆಲಸಗಳು ಕಾದು ಕುಳಿತಿವೆ ಎನ್ನಬಹುದು. ನೀವು ಕೈಗೆತ್ತಿಕೊಂಡ ಕೆಲಸದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ಕಾಣುವಿರಿ. ವಿಷಯವು ನಿಮಗೆ ಧನಾತ್ಮಕವಾಗಿಯೇ ಇರುತ್ತದೆ. ನಿಮ್ಮ ಹಿರಿಯರ ಮಾರ್ಗದರ್ಶನ ಪಡೆಯುವುದು ಸೂಕ್ತ. ಹಣಕಾಸಿನ ವಿಚಾರದಲ್ಲಿ ಕೆಲವು ತೊಂದರೆಗಳನ್ನು ಅನುಭವಿಸುವಿರಿ. ಅನಗತ್ಯ ವಸ್ತುಗಳಿಗೆ ಹಣ ವ್ಯಯಿಸದೆ ಇರುವುದು ಹಾಗೂ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಿದರೆ ಒಂದಿಷ್ಟು ಹಣವನ್ನು ಉಳಿಸಬಹುದು ಎಂದು ಸಲಹೆ ನೀಡಲಾಗುತ್ತದೆ.

  ಕುಂಭ

  ಕುಂಭ

  ನಿಮ್ಮ ಮಾರ್ಗವು ಬಹಳಷ್ಟು ಅನಿಶ್ಚಿತತೆಯಿಂದ ಕೂಡಿರುತ್ತದೆ. ಜೀವನದಲ್ಲಿ ಧನಾತ್ಮಕ ವಿಷಯಗಳನ್ನು ಕೇಂದ್ರೀಕರಿಸಲು ಮತ್ತು ಅವುಗಳಿಂದ ಧನಾತ್ಮಕ ಶಕ್ತಿಯನ್ನು ಸೆಳೆಯುವ ಸಲಹೆಯನ್ನು ನೀಡಲಾಗುತ್ತದೆ. ಕೆಲಸದ ವಿಚಾರದಲ್ಲಿ ಹೆಚ್ಚು ತಾಳ್ಮೆಯನ್ನು ವಹಿಸಬೇಕಾಗುವದು. ಏಕೆಂದರೆ ಎಲ್ಲವೂ ನಿಮ್ಮ ನಿರೀಕ್ಷೆಯಂತೆ ನಡೆಯದು. ಮಕ್ಕಳು, ಸಂಗಾತಿ ಹಾಗೂ ಕುಟುಂಬದವರೊಡನೆ ಹೆಚ್ಚು ಸಮಯವನ್ನು ಕಳೆಯುವುದರಿಂದ ವಿಷಯವನ್ನು ಆನಂದಿಸಲು ಸಾಕಷ್ಟು ಸಮಯ ದೊರೆಯುವುದು. ಆದಾಯ ಮತ್ತು ಲಾಭಗಳ ನಡುವೆ ಸಮತೋಲನ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಅಷ್ಟೊಂದು ಸಮಸ್ಯೆ ಉಂಟಾಗದು. ಯಾವುದರೊಲ್ಲೂ ಅತಿಯಾಗಿ ತೊಡಗಿಕೊಳ್ಳದೆ ಇರುವುದು ಸೂಕ್ತ.

  ಮೀನ

  ಮೀನ

  ಈ ತಿಂಗಳು ನಿಮಗೆ ಸಾಕಷ್ಟು ವಿಚಾರದಲ್ಲಿ ಭಾವನಾತ್ಮಕವಾಗಿ ನೋವುಂಟಾಗಬಹುದು. ಸ್ವಾರ್ಥ ಭಾವನೆಯಿಂದ ಹೊರಬಂದು ಇತರರ ಅಗತ್ಯತೆಗಳ ಬಗ್ಗೆ ಯೋಚಿಸಿ. ಅದರಲ್ಲೂ ನಿಮ್ಮ ಕಾಳಜಿವಹಿಸುವವರ ಬಗ್ಗೆ. ಎಲ್ಲರೊಂದಿಗೂ ಉತ್ತಮ ಸಂವಹನವನ್ನು ನಡೆಸಿ. ಅಸಂಪ್ರದಾಯಿಕ ಮಾರ್ಗವನ್ನು ತೆಗೆದುಕೊಳ್ಳುವುದರ ಬಗ್ಗೆ ಪ್ರಚೋದನೆ ಉಂಟಾಗಬಹುದು. ಹೂಡಿಕೆ ಮಾಡುವುದನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ. ಯೋಗ ಹಾಗೂ ವ್ಯಾಯಾಮ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಂಬಂಧವು ತನ್ನದೇ ಆದ ಭದ್ರತೆಯನ್ನು ಪಡೆದುಕೊಂಡಿರುತ್ತದೆ.

  English summary

  Overall - Prediction for June

  Astrology is a medium which will help you get ready for your future by predicting some important events in your life. That is why we bring to you your daily dose of astrology. It is just one of our efforts to keep you in the know and ahead of others always. Here is your Monthly Horoscope for June 2018- Read on to know what lies ahead for you this month
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more