For Quick Alerts
ALLOW NOTIFICATIONS  
For Daily Alerts

ಮನೆಯ ಸಾಕು ನಾಯಿಯೇ ಈ ಪುಟ್ಟ ಮಗುವಿನ ಮೇಲೆ ದಾಳಿ ಮಾಡಿತು!

|

ಬೆಂಗಳೂರಿನಲ್ಲಿ ಕೆಲವೊಂದು ಬೀದಿನಾಯಿಗಳು ಸಣ್ಣ ಮಕ್ಕಳ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿರುವಂತಹ ಸುದ್ದಿಗಳನ್ನು ನಾವು ಎಷ್ಟೋ ಸಲ ಓದಿರುತ್ತೇವೆ. ಇಂತಹ ಬೀದಿ ನಾಯಿಗಳು ಸಣ್ಣ ಶಿಶುಗಳನ್ನು ಕೊಂದು ಹಾಕಿರುವುದು ಇದೆ. ಆದರೆ ಮನೆಯಲ್ಲಿ ಸಾಕುವಂತಹ ನಾಯಿಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗಿರುವುದು ಅದರ ಯಜಮಾನನ ಕರ್ತವ್ಯ. ಯಾಕೆಂದರೆ ನಾಯಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು, ಅದರ ಸ್ವಭಾವ ಹೇಗೆ ಇರುತ್ತದೆ ಎಂದು ಅರಿಯಬೇಕು. ಇಲ್ಲವಾದರೆ ಸಾಕು ನಾಯಿಗಳು ಕೂಡ ಕೆಲವು ಸಂದರ್ಭದಲ್ಲಿ ಆಕ್ರಮಣಕಾರಿ ಆಗಿರುವುದು ಇದೆ.

ಸಾಕು ನಾಯಿಗಳು ಮನೆಗೆ ಬರುವ ಅಪರಿಚಿತ ವ್ಯಕ್ತಿಗಳ ಮೇಲೆ ದಾಳಿ ಮಾಡುವುದು ಸಹಜ. ಆದರೆ ಮನೆಯಲ್ಲೇ ಇರುವವರ ಮೇಲೆ ದಾಳಿ ಮಾಡಿದರೆ ಹೇಗಾಗಬಹುದು. ಹೌದು, ಇಲ್ಲೊಂದು ಸಾಕು ನಾಯಿಯು ಮನೆಯ ಮಗುವಿನ ಮೇಲೆ ದಾಳಿ ಮಾಡಿದೆ. ಈ ಫೋಟೊವನ್ನು ಮಗುವಿನ ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ನೀವು ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಮುಂದಕ್ಕೆ ಓದುತ್ತಾ ಸಾಗಿ....

ಇದಕ್ಕೂ ಮೊದಲು ನಾಯಿಯು ಆಕ್ರಮಣಕಾರಿಯಾಗಿತ್ತು!

ಇದಕ್ಕೂ ಮೊದಲು ನಾಯಿಯು ಆಕ್ರಮಣಕಾರಿಯಾಗಿತ್ತು!

ಮಗುವಿನ ತಾಯಿ ನ್ಯಾಟ್ ಎಂಬಾಕೆ ಗರ್ಭಿಣಿಯಾಗಿದ್ದ ವೇಳೆ ಕೂಡ ಜರ್ಮನಿ ತಳಿಯ ಸಾಕುನಾಯಿ ತುಂಬಾ ಆಕ್ರಮಣಕಾರಿಯಾಗಿತ್ತು. ನಾಯಿಯು ತುಂಬಾ ಆಕ್ರಮಣಕಾರಿ ಆಗಿ ವರ್ತಿಸುತ್ತಿದೆ ಎಂದು ನೆರೆಮನೆಯವರು ಕೂಡ ದಂಪತಿಗೆ ಮಾಹಿತಿ ನೀಡಿದ್ದರು.

ನ್ಯಾಟ್ ಗರ್ಭಧಾರಣೆ ವೇಳೆ ತುಂಬಾ ಚಿಂತಿತಳಾಗಿದ್ದಳು

ನ್ಯಾಟ್ ಗರ್ಭಧಾರಣೆ ವೇಳೆ ತುಂಬಾ ಚಿಂತಿತಳಾಗಿದ್ದಳು

ತಮ್ಮ ಸಾಕು ನಾಯಿಯು ತುಂಬಾ ಆಕ್ರಮಣಕಾರಿಯಾಗುತ್ತಿರುವುದನ್ನು ನೋಡಿದ್ದ ನ್ಯಾಟ್ ಹುಟ್ಟಲಿರುವಂತಹ ಮಗುವಿನ ಬಗ್ಗೆ ತುಂಬಾ ಚಿಂತೆ ಮಾಡಿದ್ದಳು.

ನಾಯಿಯು ಮಗುವಿನ ಮೇಲೆ ದಾಳಿ ಮಾಡಿತು!

ನಾಯಿಯು ಮಗುವಿನ ಮೇಲೆ ದಾಳಿ ಮಾಡಿತು!

ನ್ಯಾಟ್ ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿನ ಆರೈಕೆಯಲ್ಲಿ ನ್ಯಾಟ್ ಹೆಚ್ಚಿನ ಸಮಯ ವ್ಯಯಿಸುತ್ತಿದ್ದರು. ಆದರೆ ಒಂದು ದಿನ ಕೆಲವು ನಿಮಿಷಗಳ ಕಾಲ ನ್ಯಾಟ್ ಮಗುವನ್ನು ಬಿಟ್ಟು ದೂರ ಹೋದ ವೇಳೆ ಆ ದುರ್ಘಟನೆಯು ಸಂಭವಿಸಿತು. ಆದರೆ ನ್ಯಾಟ್ ಸಣ್ಣ ಮಗಳು ಡಾಲಿಯಾ ಮಾತ್ರ ಕೆಲವು ಸಣ್ಣಪುಟ್ಟ ಗಾಯಗಳೊಂದಿಗೆ ನಾಯಿ ದಾಳಿಯಿಂದ ಪಾರಾದಳು ಮತ್ತು ಬೇಗನೆ ಚೇತರಿಸಿಕೊಂಡಳು. ಆದರೆ ನಾಯಿ ದಾಳಿಯಿಂದ ತುಂಬಾ ಬೇಸರ ಮಾಡಿಕೊಂಡಿರುವ ಮಗುವಿನ ತಾಯಿ ಈ ಘಟನೆಯನ್ನು ತನ್ನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆಕೆಯ ಪೋಸ್ಟ್ ಈ ರೀತಿಯಲ್ಲಿತ್ತು….

ಆಕೆಯ ಪೋಸ್ಟ್ ಈ ರೀತಿಯಲ್ಲಿತ್ತು….

ಮತ್ತಷ್ಟು ವಿವರಣೆ ನೀಡಿರುವ ಆಕೆ``ಹಿಂದೆ ಕೂಡ ಒಮ್ಮೆ ನಾಯಿಯು ತುಂಬಾ ಆಕ್ರಮಣಕಾರಿಯಾಗಿತ್ತು. ಹಲವಾರು ಮಂದಿಗೆ ಅದು ಕಚ್ಚಿತ್ತು. ಇದರಿಂದಾಗಿ ನನ್ನ ಗರ್ಭಧಾರಣೆ ವೇಳೆ ಮಗುವಿನ ಬಗ್ಗೆ ತುಂಬಾ ಚಿಂತೆಯಾಗಿತ್ತು. ಯಾಕೆಂದರೆ ನಾಯಿ ಮಗುವಿಗೆ ಕಚ್ಚಿದರೆ ಎನ್ನುವ ಭೀತಿ ನನ್ನಲ್ಲಿತ್ತು. ನನ್ನ ಮಗಳ ಬಗ್ಗೆ ಅದು ಕ್ಯಾರೇ ಮಾಡುತ್ತಿಲ್ಲ. ಎರಡು ವಾರಗಳ ಮೊದಲು ಡಾಲಿಯಾ ತನ್ನ ಬೊಂಬೆಯನ್ನು ಅದರ ಬಾಯಿಯಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದ್ದ ವೇಳೆ ಅದು ಮಗುವಿನ ಕೈಗೆ ಕಚ್ಚಿತ್ತು. ಇದರ ಬಳಿಕ ನಾನು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿತ್ತು.''

Most Read: 2019ರ ಅದೃಷ್ಟ ಹಾಗೂ ದುರಾದೃಷ್ಟದ ರಾಶಿಚಕ್ರಗಳ ಕಂಪ್ಲೀಟ್ ಡಿಟೇಲ್ಸ್

ಮನೆಯಲ್ಲಿ ಸಾಕು ನಾಯಿ ಇದ್ದರೆ ಆಗ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರಗಳು…

ಮನೆಯಲ್ಲಿ ಸಾಕು ನಾಯಿ ಇದ್ದರೆ ಆಗ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರಗಳು…

ಮನೆಯಲ್ಲಿ ನೀವು ನಾಯಿ ಸಾಕುತ್ತಲಿದ್ದರೆ ಆಗ ಅದು ಬೆಳೆದು ದೊಡ್ಡದಾಗುತ್ತಾ ಇರುವಂತೆ ನೀವು ಕೆಲವೊಂದು ವಿಚಾರಗಳನ್ನು ತುಂಬಾ ಗಮನವಿಟ್ಟು ಪಾಲಿಸಬೇಕಾಗುತ್ತದೆ. ನೀವು ನಾಯಿ ಸಾಕುವ ಮೊದಲು ನಿಮ್ಮಲ್ಲಿರುವಂತಹ ಸಮಯದ ಬಗ್ಗೆ ಪರಿಗಣಿಸಬೇಕು.

ಮನೆಯಲ್ಲಿ ಸಾಕು ನಾಯಿ ಇದ್ದರೆ ಆಗ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರಗಳು…

ಮನೆಯಲ್ಲಿ ಸಾಕು ನಾಯಿ ಇದ್ದರೆ ಆಗ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರಗಳು…

ನೀವು ಅಥವಾ ಮನೆಯಲ್ಲಿ ಬೇರೆ ಯಾರಾದರೂ ಗರ್ಭಿಣಿ ಮಹಿಳೆಯರು ಇದ್ದರೆ ಆಗ ನಾಯಿಯು ತುಂಬಾ ಭಿನ್ನವಾಗಿ ವರ್ತಿಸುವುದು ಎಂದು ಹೇಳಲಾಗುತ್ತದೆ. ಇದರಿಂದ ನೀವು ಸಾಕು ನಾಯಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು.

English summary

Mum Shares Heartbreaking Pictures Of Baby After Dog Attack

Having a pet dog is one of the best decisions a family can take. But understanding the nature of the dog and taking care of it is quite essential. A case of a pet dog behaving aggressively and biting a toddler girl was shared on social media by her mother as she wants the world to know how dangerous pets can turn out to be when they get furious. Check out the details of the pet dog attacking the kid.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more