For Quick Alerts
ALLOW NOTIFICATIONS  
For Daily Alerts

ಟೆನ್ಷನ್ ಆದರೆ ಈ ಮೂರು ರಾಶಿಯವರು ಕೊಲೆ ಮಾಡಲೂ ಹಿಂದೆ-ಮುಂದೆ ನೋಡುವುದಿಲ್ಲವಂತೆ!

By Deepu
|

ಒಂದು ಜೀವನದ ಜೀವ ತೆಗೆಯುವುದು ಎಂದರೆ ಅದೊಂದು ಹಿಂಸೆಯ ಕೆಲಸ. ಆ ಹಿಂಸೆಯ ಕೆಲಸ ಮಾಡಲು ಮನಸ್ಸು ಹಿಂಜರಿಯುವುದಿಲ್ಲ ಎಂದರೆ ಅವರ ಮನಸ್ಸು ಬಹಳ ಒರಟಾಗಿರುವುದು ಎಂದು ಹೇಳಬಹುದು. ಹಿಂಸೆ ಹಾಗೂ ಕೊಲೆ ಎಂದರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಹಿಂಜರಿಯುತ್ತಾರೆ. ಜೊತೆಗೆ ಅಂತಹ ಪಾಪ ಕೃತ್ಯಗಳನ್ನು ಮಾಡಬಾರದು ಎನ್ನುವ ಭಾವನೆಯನ್ನು ಹೊಂದಿರುತ್ತಾರೆ.

ಆದರೆ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಅವೆಲ್ಲವೂ ರಾಶಿಚಕ್ರಗಳ ಆಧಾರದಲ್ಲಿಯೇ ಎಂದು.

ಕೆಲವು ರಾಶಿಚಕ್ರದವರು ಬಹಳ ಸೂಕ್ಷ್ಮ ಪ್ರವೃತ್ತಿಯವರಾಗಿರುತ್ತಾರೆ. ಅವರಿಂದ ಹಿಂಸೆ ಕೊಲೆಗಳು ನಡೆಯುವುದು ಕಷ್ಟ. ಅದೇ ಕೆಲವು ರಾಶಿ ಚಕ್ರದವರು ಬಹಳ ಸಿಟ್ಟಿನ ಪ್ರವೃತ್ತಿಯವರಾಗಿರುತ್ತಾರೆ. ಅವರಲ್ಲಿ ಒಮ್ಮೆ ದ್ವೇಷ ಹುಟ್ಟಿತು ಎಂದಾದರೆ ಅವರು ಕೊಲೆ ಮಾಡಲು ಹಿಂಜರಿಯುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರವದರು ಯಾರು? ಅವರ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದರ ಬಗ್ಗೆ ನೀವು ತಿಳಿದು ಕೊಳ್ಳಬೇಕು ಎಂದಾದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮಿಥುನ

ಮಿಥುನ

ಇವರನ್ನು ಉಭಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಇವರು ಕುಖ್ಯಾತ ಕೊಲೆಗಾರರಾಗಬಲ್ಲರು ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಮನಸ್ಸಿಗೆ ಸುದೀರ್ಘವಾದ ಒತ್ತಡ ಅಥವಾ ನೋವು ಉಂಟುಮಾಡುತ್ತಿದ್ದರೆ ತಾಳ್ಮೆಯನ್ನು ಕಳೆದುಕೊಳ್ಳುವರು. ತಾಳ್ಮೆ ಮೀರಿ ಅತಿರೇಕಕ್ಕೆ ಹೋದಾಗ ಕೊಲೆ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುತ್ತದೆ.

ಮಿಥುನ

ಮಿಥುನ

ಇನ್ನು ಈ ರಾಶಿಯವರು ಯಾವಾಗಲೂ ಉಭಯತ್ವ ತೋರಿಸುತ್ತಾ ಇರುತ್ತಾರೆ. ಇದರಿಂದಾಗಿ ಅವರ ವ್ಯಕ್ತಿತ್ವದಲ್ಲಿ ಯಾವಾಗಲೂ ಅಸ್ಥಿರತೆ ಇರುವುದು. ಇವರ ಮನೋಭಾವ ಆಗಾಗ ಬದಲಾಗುತ್ತಾ ಇರುತ್ತದೆ. ಭಾವನೆ ಹಾಗೂ ಬುದ್ಧಿ ಶಕ್ತಿ ಮಧ್ಯೆ ಇವರಿಗೆ ಸಂಘರ್ಷವಾಗುತ್ತಿರುವುದು. ಇನ್ನು ತಪ್ಪಾದ ನೆಲೆಯನ್ನು ಆರಿಸಿಕೊಳ್ಳುವುದರಿಂದ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಬೇಕಾದುದನ್ನು ಖಚಿತವಾಗಿ ಆಯ್ಕೆ ಮಾಡಿಕೊಳ್ಳದೆ, ಜೀವನದ ಬದಲಾವಣೆಯನ್ನು ಗ್ರಹಿಸುವುದರ ಮೂಲಕ ಭಯ ಪಡುತ್ತಾರೆ. ಅಷ್ಟೇ ಅಲ್ಲದೆ ಜೀವನದ ಸವಾಲುಗಳನ್ನು ಎದುರಿಸಲಾಗದೆ ಕೆಲವೊಮ್ಮೆ ನಾಶದ ಅಂಚನ್ನು ಮುಟ್ಟುತ್ತಾರೆ.

ಕನ್ಯಾ

ಕನ್ಯಾ

ಈ ರಾಶಿಚಕ್ರದವರು ಪರಿಪೂರ್ಣತಾ ವಾದಿಗಳು ಎಂದು ಹೇಳಲಾಗುವುದು. 130 ಜನರನ್ನು ಕೊಂದ ರಾಡ್ನಿ ಅಲ್ಕಲಾ ಮತ್ತು 157 ಜನರನ್ನು ಕೊಂದ ಹೆನ್ರಿ ಲೀ ಲ್ಯೂಕಾಸ್ನ್ ಅವರು ಈ ರಾಶಿಗೆ ಸೇರಿದವರು ಎನ್ನಲಾಗುವುದು. ನಿರುತ್ಸಾಹಗೊಂಡಾಗ ಹಾಗೂ ಮೋಸ ಹೋದ ಸಂದರ್ಭದಲ್ಲಿ ಮಾನಸಿಕವಾಗಿ ಅತಿಯಾದ ನೋವಿಗೆ ಒಳಗಾಗುತ್ತಾರೆ. ಇವರ ನೋವು ಕೊಲೆಗಾರರನ್ನಾಗಿ ಮಾಡಬಲ್ಲದು.

ಕನ್ಯಾ

ಕನ್ಯಾ

ಇನ್ನು ಇವರು ತಮ್ಮ ತಪ್ಪುಗಳನ್ನು ಕಡೆಗಣಿಸುವುದಿಲ್ಲ ಮತ್ತು ಅವರು ತುಂಬಾ ವಿಮರ್ಶನಾತ್ಮಕವಾಗಿರುವರು. ಸಾಮಾನ್ಯವಾಗಿರುವ ಕೆಲವು ವಿಷಯಗಳ ಬಗ್ಗೆ ಅವರು ನಕಾರಾತ್ಮಕವಾಗಿರುವರು. ಅವರಲ್ಲಿ ಬಲಿಷ್ಠ ಇಷ್ಟ ಹಾಗೂ ಇಷ್ಟವಿಲ್ಲದಿರುವ ನಡವಳಿಕೆಯು ಅವರ ನಡವಳಿಕೆ ಚೆನ್ನಾಗಿಲ್ಲದಂತೆ ಮಾಡುವುದು. ತುಲಾ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಯಾವಾಗಲೂ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಒಂದು ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದಾಗ ಅವರು ಅದಕ್ಕೆ ಹಿಂಜರಿಯುವರು ಮತ್ತು ನಿರ್ಧಾರ ಮಾಡಲು ಅವರಿಗೆ ತುಂಬಾ ಕಷ್ಟವಾಗುವುದು. ಅವರು ತಮ್ಮ ಮನಸ್ಸನ್ನು ಪದೇ ಪದೇ ಬದಲಾಯಿಸುತ್ತಿರುವರು. ತುಲಾ ರಾಶಿಯವರಲ್ಲಿ ವಿರೋಧಾತ್ಮಕ ವ್ಯಕ್ತಿತ್ವವಿರುವುದು.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ಬಹಳ ಸೂಕ್ಷ್ಮ ಗುಣವನ್ನು ಹೊಂದಿದವರು. ಹಗಲು ಗನಸು ಕಾನುವವವರು. ಆದರೆ ಇವರ ಬಯಕೆ ಈಡೇರದೆ ಇದ್ದಾಗ ಅಥವಾ ಇತರರಿಂದ ಮೋಸ, ವಂಚನೆಗೆ ಒಳಗಾದಾಗ ಮನಸ್ಸು ಒರಟಾಗುವುದು. ಇವರ ಒರಟು ತನ ಕೊಲೆಗಾರನನ್ನಾಗಿ ಬದಲಾಯಿಸುವುದು. ಸರಣಿ ಕೊಲೆಗಾರರಾಗಿ ಹೊರಬಹುದಾದ ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಬಲ್ಲರು. ಇವರಿಗೆ ನಿರ್ಧಾರ ತೆಗೆದುಕೊಳ್ಳವ ಸಾಮರ್ಥ್ಯವಿರಲ್ಲ ಮತ್ತು ಅವರಿಗೆ ಏನು ಬೇಕು ಎಂದೇ ತಿಳಿದಿರುವುದಿಲ್ಲ. ಅವರು ಯಾವಾಗಲೂ ಕಾಲ್ಪನಿಕ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಈ ರಾಶಿಯವರು ಚಟಕ್ಕೆ ಅಂಟಿಕೊಂಡಿರುವರು. ಯಾಕೆಂದರೆ ಅವರು ಸತ್ಯ ಹಾಗೂ ವಾಸ್ತವತೆ ಎದುರಿಸಲು ಬಯಸುವುದಿಲ್ಲ.

English summary

Most Dangerous Serial Killers According To The Zodiac Signs

It’s really interesting to see where some of the most infamous killers landed. It’s also a great way to humanize them. Serial killers are fascinating to many but they are really just terrible people not the larger than life monsters they want people to believe they are.
Story first published: Monday, June 25, 2018, 16:18 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more