For Quick Alerts
ALLOW NOTIFICATIONS  
For Daily Alerts

  ಮೇಷದಿಂದ ಮೀನದವರೆಗೆ, ಎಲ್ಲಾ ಹನ್ನೆರಡು ರಾಶಿಗಳ ಜುಲೈ ತಿಂಗಳ ರಾಶಿ ಭವಿಷ್ಯ

  By Hemanth Amin
  |

  ಜ್ಯೋತಿಷ್ಯವೆಂದರೆ ಕೇವಲ ಭವಿಷ್ಯದ ಬಗ್ಗೆ ಮಾತ್ರ ತಿಳಿದುಕೊಳ್ಳುವುದಲ್ಲ, ಬದಲಿಗೆ ಮುಂದೆ ಬರಬಹುದಾದ ಸಮಸ್ಯೆ ಹಾಗೂ ತೊಂದರೆಗಳನ್ನು ಯಾವ ರೀತಿ ಬಗೆಹರಿಸಬಹುದು ಅಥವಾ ಬರದಂತೆ ತಡೆಯುವುದು ಹೇಗೆ ಎಂದು ತಿಳಿಯಬಹುದು. ಇದರಿಂದ ನಮಗೆ ಆ ಸಮಸ್ಯೆಗೆ ತಯಾರಾಗಲು ಸಾಧ್ಯವಾಗುವುದು. ವರ್ಷ ಭವಿಷ್ಯವನ್ನು ಜನವರಿ ತಿಂಗಳ ಆರಂಭದಲ್ಲೇ ನೋಡಿರುತ್ತೇವೆ. ಆದರೆ ಇದನ್ನು ನೆನಪಿನಲ್ಲಿಟ್ಟುಕೊಂಡು ಪಾಲಿಸುವುದು ಕೂಡ ಕಷ್ಟ. ಅದಕ್ಕೆಂದೇ ದಿನ ಭವಿಷ್ಯ, ವಾರ ಭವಿಷ್ಯ ಹಾಗೂ ತಿಂಗಳ ಭವಿಷ್ಯ ಎಂದು ನೀಡಲಾಗುತ್ತದೆ.

  ಈ ಲೇಖನದಲ್ಲಿ ಜುಲೈ ತಿಂಗಳಲ್ಲಿ ಪ್ರತಿ ರಾಶಿಗಳಿಗೆ ಯಾವ ಫಲಾಫಲಗಳು ಸಿಗಲಿದೆ ಎಂದು ತಿಳಿಯಲು ನಿಮಗೆ ನೆರವಾಗಲಿದೆ. ಜುಲೈ 6 ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಇದರ ಪರಿಣಾಮವು ರಾಶಿಚಕ್ರಗಳ ಮೇಲೆ ಬೀರುವುದು. ಇದನ್ನು ತಿಳಿದುಕೊಂಡು ಜುಲೈ ತಿಂಗಳ ಯೋಜನೆಗಳನ್ನು ನೀವು ರೂಪಿಸಿಕೊಳ್ಳಬಹುದು... 

  ಮೇಷ: ಮಾರ್ಚ್ 21-ಎಪ್ರಿಲ್ 19

  ಮೇಷ: ಮಾರ್ಚ್ 21-ಎಪ್ರಿಲ್ 19

  ಮೇಷ ರಾಶಿಯವರಿಗೆ ಮನೆ, ಕುಟುಂಬ ಮತ್ತು ವೈಯಕ್ತಿಕ ಭದ್ರತೆ ಮೇಲೆ ಗಮನವು ಕೇಂದ್ರೀಕರಿಸಿರುವುದು. ಮುಂಬರುವ ಯಶಸ್ಸು ಹಾಗೂ ಸಾಧನೆಗೆ ಬುನಾದಿ ಹಾಕಲು ಈ ರಾಶಿಯವರು ಹೆಚ್ಚಿನ ಸಮಯ ವ್ಯಯಿಸಲಿರುವರು. ಇವರ ಜಾಣ್ಮೆಯ ಆಲೋಚನೆಗಳನ್ನು ಇವರನ್ನು ತುದಿಗಾಲಿನಲ್ಲಿ ನಿಲ್ಲಿಸಲಿದೆ. ಇನ್ನೊಂದು ಕಡೆಯಲ್ಲಿ ಇವರಲ್ಲಿರುವಂತಹ ಅಂತರಂಗದ ಕಾರ್ಯವ್ಯಸನದ ಸ್ವಭಾವವು ಅತಿಯಾಗಿ ಕೆಲಸ ಮಾಡುವಂತೆ ಮಾಡುವುದು. ಪ್ರೀತಿಯ ಜೀವನದಲ್ಲಿ ಇವರಿಗೆ ತುಂಬಾ ಶಕ್ತಿ ಒದಗಿಬರುವ ಅನುಭವವಾಗುವುದು. ಇದೆಲ್ಲವನ್ನೂ ಹೊರತುಪಡಿಸಿ ಇವರ ಸಾಮಾಜಿಕ ಜೀವನವು ಉನ್ನತ ಮಟ್ಟದಲ್ಲಿರಲಿದೆ. ಇವರು ತಮ್ಮ ಭಾವನೆಗಳನ್ನು ಪ್ರೀತಿಪಾತ್ರರಲ್ಲಿ ಹೇಳಿಕೊಳ್ಳಬೇಕಾಗಿದೆ.

   ವೃಷಭ: ಎಪ್ರಿಲ್ 20-ಮೇ 20

  ವೃಷಭ: ಎಪ್ರಿಲ್ 20-ಮೇ 20

  ವೃಷಭ ರಾಶಿಯವರಿಗೆ ಜುಲೈ ತಿಂಗಳ ಪ್ರತಿಯೊಂದು ದಿನವೂ ಶ್ರೇಷ್ಠವಾಗಿರುವುದು. ಇವರ ಮಾತನಾಡುವ, ಬರೆಯುವ ಮತ್ತು ಕಲಿಯುವ ಸಾಮರ್ಥ್ಯವು ಅಗ್ರ ಪ್ರಾಶಸ್ತ್ಯ ಪಡೆಯಲಿದೆ. ಈ ವ್ಯಕ್ತಿಗಳು ತಮ್ಮ ಅಸ್ತಿತ್ವದ ಬಗ್ಗೆ ಆಳವಾದ ಜ್ಞಾನ ಪಡೆದುಕೊಳ್ಳಲು ಹೆಚ್ಚಿನ ಸಮಯ ಕಳೆಯುವರು. ಇವರ ವೈಯಕ್ತಿಕ ಬದುಕು ಹಲವಾರು ಚಟುವಟಿಕೆಗಳಿಂದ ಕೂಡಿರಲಿದೆ. ಈ ತಿಂಗಳಲ್ಲಿ ಅವರು ತಮ್ಮ ಪ್ರೀತಿಪಾತ್ರರೊಂದಿಗೆ ಹಲವಾರು ಮಾತುಕತೆಗಳನ್ನು ನಡೆಸಲಿದ್ದಾರೆ. ಕುಟುಂಬದವರೊಂದಿಗೆ ವಾಗ್ವಾದವಾಗುವುದನ್ನು ತಪ್ಪಿಸಬೇಕು. ಇದರ ಹೊರತಾಗಿ ಹೊಸ ಮನೆ ಕಟ್ಟುವುದು, ಮನೆ ರಿಪೇರಿಯ ಕೆಲಸಗಳು ಬುಧನ ವಿರುದ್ಧಗತಿಯ ಮೊದಲು ನಡೆಯಬೇಕು.

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ಜುಲೈ ತಿಂಗಳು ಮಿಥುನ ರಾಶಿಯವರಿಗೆ ಆರ್ಥಿಕ ಮತ್ತು ವೈಯಕ್ತಿಕ ಬದಲಾವಣೆಗಳ ತಿಂಗಳಾಗಲಿದೆ. ಇವರು ಸಂಪತ್ತು, ಸ್ಥಾನಮಾನ ಮತ್ತು ಸ್ವಯಂಮೌಲ್ಯದ ಕಡೆಗೆ ಹೆಚ್ಚಿನ ಗಮನಹರಿಸುವರು. ಇನ್ನೊಂದು ಕಡೆಯಲ್ಲಿ ಪ್ರೀತಿಪಾತ್ರರೊಂದಿಗೆ ಇವರ ಸಂವಹನವು ಹೆಚ್ಚಾಗಲಿದೆ. ಇವರು ಬಳಸುವಂತಹ ಶಬ್ಧಗಳ ಬಗ್ಗೆ ಹೆಚ್ಚಿನ ಗಮಹರಿಸುವುದು ಉತ್ತಮ. ಯಾಕೆಂದರೆ ಇವು ವಿಧ್ವಂಸಕಕಾರಿ ಯಾಗಬಹುದು. ಎಪ್ರಿಲ್ ತಿಂಗಳಿಂದ ಶುಕ್ರನು ಈ ರಾಶಿಯಲ್ಲಿ ಪಯಣಿಸುತ್ತಿರುವ ಕಾರಣದಿಂದ ವೈಯಕ್ತಿಕ ಹಾಗೂ ಸಮಾಜ ಮುಖಿಯಾಗಿರುವರು.

  ಕರ್ಕಾಟಕ: ಜೂನ್ 21-ಜುಲೈ 22

  ಕರ್ಕಾಟಕ: ಜೂನ್ 21-ಜುಲೈ 22

  ಕರ್ಕಾಟಕ ರಾಶಿಯವರು ತುಂಬಾ ಶಾಂತ, ಕಾಳಜಿ ಮತ್ತು ಪೋಷಣೆ ಮಾಡುವ ರಾಶಿಯವರು. ಈ ರಾಶಿಯವರಿಗೆ ವರ್ಷದ ಗ್ರಹಗತಿಗಳ ಪರಿಣಾಮದ ಅನುಭವವಾಗುವುದು. ಯಾಕೆಂದರೆ ಶನಿಯು ಇವರ ಪ್ರಾಮಾಣಿಕತೆಯ ಸ್ವಯಂಮೌಲ್ಯಮಾಪನ ಮಾಡುವಂತೆ ಕಲಿಸಲಿದ್ದಾನೆ. ಇದರೊಂದಿಗೆ ಇವರು ತಮ್ಮ ದುರ್ಬಲತೆ ಹಾಗೂ ನ್ಯೂನ್ಯತೆಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಲಿದೆ. ಹಣ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೇರೆಯವರೊಂದಿಗೆ ಮಾತುಕತೆ ಮಾಡಬೇಕಾಗಿ ಬರಬಹುದು. ಪ್ರೀತಿಪಾತ್ರರಿಗೆ ಕಾಳಜಿ ಬೇಕೆಂದು ಇವರು ಅರ್ಥ ಮಾಡಿಕೊಳ್ಳಬೇಕು. ಇದರ ಹೊರತಾಗಿ ಇವರು ಅನಗತ್ಯ ಹಾಗೂ ಅತಿಯಾದ ಖರ್ಚಿಗೆ ಕಡಿವಾಣ ಹಾಕಬೇಕು ಮತ್ತು ಬೇರೆಯವರನ್ನು ಬೇಗನೆ ನಂಬುವ ಬುದ್ಧಿ ಬಿಡಬೇಕು.

   ಸಿಂಹ: ಜುಲೈ 23-ಆ.23

  ಸಿಂಹ: ಜುಲೈ 23-ಆ.23

  ಕಳೆದ ಕೆಲವು ದಿನಗಳಿಂದ ಸಿಂಹ ರಾಶಿಯವರು ಎದುರಿಸುತ್ತಿರುವ ಸಮಸ್ಯೆಯು ತಿಂಗಳ ಮಧ್ಯದಲ್ಲಿ ಬಗೆಹರಿಯಲಿದೆ. ಇದಕ್ಕಾಗಿ ಇವರು ಹೆಚ್ಚು ಮಾತುಕತೆ ನಡೆಸಬೇಕಾಗಿದೆ. ಇವರ ಜನ್ಮ ರಾಶಿಯಲ್ಲಿ ಆ.10ರ ತನಕ ಮಂಗಳನು ಪ್ರಯಾಣಿಸುತ್ತಿರುವ ಕಾರಣದಿಂದಾಗಿ ಇವರು ಹೆಚ್ಚಿನ ಶಕ್ತಿ ವಿನಿಯೋಗಿಸಬೇಕಾಗಿದೆ. ಇವರ ಸಾಮಾಜಿಕ ಸಂಪರ್ಕವು ಹೆಚ್ಚಾಗಲಿರುವ ಕಾರಣದಿಂದಾಗಿ ಇವರು ವಿರುದ್ಧ ಲಿಂಗಿಯ ಜತೆಗೆ ಮಾತುಕತೆ ನಡೆಸುವಂತಹ ಪರಿಸ್ಥಿತಿಯು ಬರಬಹುದು. ವೃತ್ತಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಇವರಿಗೆ ಈ ತಿಂಗಳು ಜ್ಞಾನೋದಯವಾಗಲಿದೆ.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಈ ತಿಂಗಳಲ್ಲಿ ಕನ್ಯಾ ರಾಶಿಯ ಜನರ ಪ್ರಾಯೋಗಿಕ, ವಿಶ್ಲೇಷಣಾತ್ಮಕ ಮತ್ತು ಆತ್ಮಸಾಕ್ಷಿಯ ವ್ಯಕ್ತಿತ್ವವು ಬೆಳಕಿಗೆ ಬರುವುದು. ಉನ್ನತ ಮಟ್ಟದ ಗುರಿಗಾಗಿ ಇವರು ಸ್ವಲ್ಪ ಮಟ್ಟದಲ್ಲಿ ಧ್ಯಾನಾಸಕ್ತರಾದರೆ ತುಂಬಾ ಒಳ್ಳೆಯದು. ಇವರಿಗೆ ಉದ್ಯಮ ಹಾಗೂ ವೃತ್ತಿ ಬದುಕಿನಲ್ಲಿ ತುಂಬಾ ಒಳ್ಳೆಯ ಪರಿಸ್ಥಿತಿ ಒದಗಿ ಬರಲಿದೆ. ಇವರು ತಮ್ಮಲ್ಲಿರುವ ಕೆಲವು ರಹಸ್ಯ ಹಾಗೂ ಮಾತನಾಡದೆ ಇರುವಂತಹ ಶಬ್ಧಗಳ ಬಗ್ಗೆ ಗಮನಹರಿಸಬೇಕು. ಯಾಕೆಂದರೆ ಇದೇ ಇವರಿಗೆ ತೊಂದರೆ ನೀಡಬಹುದು.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ನಿಮ್ಮ ಅಧಿಪತ್ಯದ ಗ್ರಹವು ಮಿಥುನ ರಾಶಿಯಲ್ಲಿದ್ದ ಪರಿಣಾಮವಾಗಿ ಕಳೆದ ಕೆಲವು ತಿಂಗಳಿಂದ ತುಲಾ ರಾಶಿಯವರಿಗೆ ಅಭಿವ್ಯಕ್ತಗೊಳಿಸುವ ಸಮಯವಾಗಿತ್ತು. ವಿವಿಧ ರೀತಿಯ ಅರಿವಿನ ಅನುಭವವು ಇವರ ದೃಷ್ಟಿಕೋನ ವಿಸ್ತರಿಸಿದಂತೆ ತೋರುತ್ತದೆ. ಇದು ಈ ತಿಂಗಳು ಇವರು ಮಾಡುವಂತಹ ಕೆಲಸದಲ್ಲಿ ವೈಯಕ್ತಿಕ ಪ್ರಗತಿಯನ್ನು ತೋರಿಸಲಿದೆ. ವ್ಯಕ್ತಿಗಳು ಮತ್ತು ಅವರ ಪ್ರೀತಿ ಪಾತ್ರರು ತಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಗಾಗಿ ಪ್ರಶಂಸೆಗೆ ಒಳಗಾಗುವರು. ಗುರಿ ಹಾಗೂ ಮಹಾತ್ವಾಕಾಂಕ್ಷೆಯ ಬಗ್ಗೆ ಅಧಿಕ ನಿರೀಕ್ಷೆಯನ್ನಿಟ್ಟುಕೊಂಡು ಹೋದರೆ ಆಗ ಇದು ಅವರ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಯಬೇಕು. ಮನೆ, ಕುಟುಂಬ ಅಥವಾ ಭದ್ರತಾ ವಿಚಾರಗಳಿಗೆ ಸಂಬಂಧಿಸಿದಂತೆ ಇವರಿಗೆ ಜ್ಞಾನೋದಯವಾಗಲಿದೆ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರಿಗೆ ನಿರಂತರ ಪಾಲ್ಗೊಳ್ಳುವಿಕೆ ಮತ್ತು ಭಾವನಾತ್ಮಕವಾಗಿ ರೂಪಾಂತವಾಗುವುದು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಇವರಿಗೆ ನೆರವಾಗುವುದು. ಹೊಸದೊಂದು ಅಧ್ಯಯನವು ಇವರಿಗೆ ವೃತ್ತಿಯಲ್ಲಿ ನೆರವಿಗೆ ಬರಲಿದೆ. ಆದರೆ ಇವರು ತಮ್ಮ ಜೀವನದ ಅರ್ಥಕ್ಕಾಗಿ ಹುಡುಕುತ್ತಲಿರುವರು. ಪ್ರಯಾಣಕ್ಕೆ ಈ ತಿಂಗಳು ಅತ್ಯುತ್ತಮವಾಗಿರಲಿದೆ. ಇನ್ನೊಂದು ಬದಿಯಲ್ಲಿ ವೃತ್ತಿಪರ ಬದುಕಿನಲ್ಲಿ ಇವರ ಸಂವಹನವು ಅತೀ ಅಗತ್ಯವಾಗಿದೆ. ಇವರ ಸಾಮಾಜಿಕವಾಗಿ ತಮ್ಮ ಹೆಸರನ್ನು ಉತ್ತಮಪಡಿಸಬೇಕು. ಇದರ ಹೊರತಾಗಿ ಇವರ ಕ್ರಿಯಾತ್ಮಕ ಶಕ್ತಿಯು ಇವರ ವೃತ್ತಿಗೆ ನೆರವಾಗಲಿದೆ. ಬೇರೆಯವರ ಜತೆ ವಾಗ್ವಾದ ಮಾಡದಂತೆ ಎಚ್ಚರಿಕೆ ವಹಿಸಬೇಕು. ಈ ತಿಂಗಳಲ್ಲಿ ಇವರು ಲೈಂಗಿಕ ಜೀವನವು ಹೆಚ್ಚು ಆಳ ಹಾಗೂ ತೀವ್ರತೆಯಿಂದ ಕೂಡಿರಲಿದೆ.

  ಧನು: ನ.23-ಡಿ.22

  ಧನು: ನ.23-ಡಿ.22

  ಧನು ರಾಶಿಯವರಿಗೆ ಈ ತಿಂಗಳಲ್ಲಿ ಅವರ ಸುತ್ತಮುತ್ತಲು ಹೆಚ್ಚಿನ ತೀವ್ರತೆಯಿರಲಿದೆ. ಇವರು ತಮ್ಮ ಸಂಪನ್ಮೂಲದ ಮಿತಿಯ ಬಗ್ಗೆ ಈಗಲೂ ಕಲಿಯುತ್ತಲಿದ್ದಾರೆ ಮತ್ತು ಇತರರ ಮೇಲೆ ಹೆಚ್ಚು ಅವಲಂಬಿತವಾಗಿರಬಾರದು ಎಂದು ತಿಳಿದುಕೊಂಡಿದ್ದಾರೆ. ಹೊಸ ವೃತ್ತಿಯು ಇವರ ಜೀವನದಲ್ಲಿ ಹೊಸ ದಾರಿ ಮಾಡಿಕೊಡುವುದು ಮಾತ್ರವಲ್ಲದೆ ಆತ್ಮದಲ್ಲಿಯೂ ಇವರನ್ನು ಆಳವಾಗಿ ಎಚ್ಚರಿಸಲಿದೆ. ಕೆಲವರು ಈ ತಿಂಗಳಲ್ಲಿ ಮದುವೆಯಾಗಬಹುದು. ಇನ್ನೊಂದು ಕಡೆಯಲ್ಲಿ ಕಾನೂನು ಸಂಬಂಧಿಸಿದ ವಿಚಾರಗಳು ಕೋರ್ಟ್ ನ ಹೊರಗಡೆ ಬಗೆಹರಿಯಲಿದೆ. ಹೊಸ ಅನುಭವಗಳು ಇವರನ್ನು ಎದುರುನೋಡುತ್ತಲಿದೆ. ಈ ತಿಂಗಳಲ್ಲಿ ಪ್ರಯಾಣದ ಅವಕಾಶವಿದೆ.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ಮಕರ ರಾಶಿಯವರಿಗೆ ಜತೆಗಾರಿಕೆ ಅಥವಾ ಸಂಬಂಧವು ತುಂಬಾ ಚಿಂತೆಯ ವಿಷಯವಾಗಲಿದ್ದು, ಇದರ ಬಗ್ಗೆ ತಕ್ಷಣ ಗಮನಹರಿಸಬೇಕಾಗಿದೆ. ಈ ರಾಶಿಯಲ್ಲಿ ಶನಿಯು ತಿರುಗುತ್ತಲಿರುವ ಕಾರಣದಿಂದಾಗಿ ಬದ್ಧತೆ ಮತ್ತು ಸಂಬಂಧದಲ್ಲಿ ನಿರೀಕ್ಷೆಗಳ ಬಗ್ಗೆ ವಿಶ್ಲೇಷಣೆ ಮಾಡಿಕೊಂಡು ಅದರ ಕಡೆ ಗಮನಹರಿಸುವುದು ಅತೀ ಅಗತ್ಯ. ಸ್ವಯಂ ಆಗಿ ಅಡಗಿರುವಂತಹ ವಿಚಾರ ನೋಡಿಕೊಳ್ಳಬೇಕು. ತಮ್ಮ ಪ್ರೀತಿಪಾತ್ರರೊಂದಿಗೆ ತೀವ್ರ ಹಾಗೂ ಗಾಢವಾದ ಮಾತುಕತೆಯಲ್ಲಿ ತೊಡಗುವರು. ಮಕರ ರಾಶಿಯವರಿಗೆ ಈ ತಿಂಗಳು ಸಂಶೋಧನೆ ಮತ್ತು ತನಿಖೆ ಮಾಡಲು ಇದೆ. ಆಹಾರ ಮತ್ತು ಕುಡಿತದಲ್ಲಿ ಅತಿಯಾಗಿ ಮುಳುವ ಪ್ರವೃತ್ತಿ ಈ ತಿಂಗಳಲ್ಲಿ ಕಂಡುಬರಲಿದೆ.

  ಕುಂಭ: ಜ.21-ಫೆ.18

  ಕುಂಭ: ಜ.21-ಫೆ.18

  ಕುಂಭ ರಾಶಿಯವರ ಕೆಲಸದಲ್ಲಿ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ನಾವೀನ್ಯತೆ ಮತ್ತು ಸ್ವಂತಿಕೆಯು ಕಂಡುಬರಲಿದೆ. ಈ ತಿಂಗಳಲ್ಲಿ ದೈನಂದಿನ ಕೆಲಸ ಮತ್ತು ಸೇವೆಗಳ ಬಗ್ಗೆ ಕಲಿಯುವುದು ಮತ್ತು ಆರೋಗ್ಯಕರ ದೇಹ ಕಾಪಾಡುವ ಸಮಯವಾಗಲಿದೆ. ಪಾಲುದಾರಿಕೆ ಮತ್ತು ಸಂಬಂಧದ ಬಗ್ಗೆ ಸಂವಹನವು ಸೃಜನಾತ್ಮಕವಾಗಿ ಹರಿಯುತ್ತದೆ ಎಂದು ಊಹಿಸಲಾಗಿದೆ. ಇವರ ಜೀವನದಲ್ಲಿ ಹೊಸ ಜನರು ಪ್ರವೇಶಿಸಬಹುದು. ಮನರಂಜನೆ, ಸಂಭ್ರಮ ಮತ್ತು ಒಳ್ಳೆಯ ಸಮಯವು ಇವರಿಗೆ ದೊಡ್ಡ ಆಸ್ತಿಯಾಗಲಿದೆ. ಹೊಸ ಸಂಬಂಧವು ಆರಂಭವಾಗುವ ಸಾಧ್ಯತೆಯಿದೆ. ಈ ತಿಂಗಳಲ್ಲಿ ಇವರು ಇತರರೊಂದಿಗೆ ಕೂಡ ಬೆರೆಯುತ್ತಲಿರಬೇಕಾಗುತ್ತದೆ.

  ಮೀನ: ಫೆ.19-ಮಾರ್ಚ್ 20

  ಮೀನ: ಫೆ.19-ಮಾರ್ಚ್ 20

  ಮೀನ ರಾಶಿಯವರು ರೋಮ್ಯಾನ್ಸ್, ಕ್ರಿಯಾತ್ಮಕತೆ ಮತ್ತು ಖುಷಿಯನ್ನು ಈ ತಿಂಗಳು ಪಡೆಯಲಿದ್ದಾರೆ. ಇವರು ವೈಯಕ್ತಿಕ ಕ್ರಿಯಾತ್ಮಕತೆ ಮತ್ತು ಆತ್ಮಾಭಿವ್ಯಕ್ತಿಗೆ ಹೆಚ್ಚಿನ ಸಮಯ ನೀಡಲಿರುವರು. ಇನ್ನೊಂದು ಕಡೆಯಲ್ಲಿ ಇವರ ಅಸ್ತಿತ್ವದ ಉದ್ದೇಶವು ದೊಡ್ಡ ಮಟ್ಟದ ಚಿಂತೆಯಾಗಿದೆ. ಇವರ ದೈನಂದಿನ ಜೀವನವು ವ್ಯಸ್ತವಾಗಿರಲಿದೆ. ಆರೋಗ್ಯದ ಸಮಸ್ಯೆಯು ಇವರನ್ನು ಕಾಡಬಹುದು. ಮನೆ ಹಾಗೂ ಕುಟುಂಬದ ವಾತಾವರಣವು ಉತ್ತಮವಾಗಿರಲಿದೆ.

  English summary

  Monthly Zodiac Predictions For July 2018

  According to your zodiac sign, the monthly predictions reveal a lot about what is coming your way. It explains about the oncoming events as July has retrograde Mars phase happening around all the zodiac signs and learning about the hurdles coming your way as per your sign. Monthly Predictions For July 2018.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more