For Quick Alerts
ALLOW NOTIFICATIONS  
For Daily Alerts

ಜುಲೈ 27 ಚಂದ್ರಗ್ರಹಣ- ಇಂದು ಇಂತಹ ತಪ್ಪುಗಳನ್ನು ಮಾಡಲೇಬೇಡಿ

By Deepu
|
Lunar Eclipse July 27, 2018 : ಗ್ರಹಣದ ದಿನ ಈ ತಪ್ಪುಗಳನ್ನ ಯಾರೂ ಮಾಡಬಾರದು | Oneindia Kannada

ಜುಲೈ 27, 2018 ಚಂದ್ರಗ್ರಹಣ. ಇದು ಈ ವರ್ಷ ಬರುತ್ತಿರುವ ಎರಡನೇ ಚಂದ್ರಗ್ರಹಣ. ಮೊದಲ ಚಂದ್ರಗ್ರಹಣವು ಜ.31, 2018ರಂದು ಬಂದಿತ್ತು. ಇದು ಶತಮಾನದ ಅತೀ ದೀರ್ಘ ಕಾಣಿಸಿಕೊಳ್ಳುವ ಚಂದ್ರಗ್ರಹಣವಾಗಿದೆ. ಚಂದ್ರಗ್ರಹಣವು ಭೂಮಿ ಮೇಲೆ ಹಲವಾರು ರೀತಿಯ ಪ್ರಾಕೃತಿಕ ವಿಕೋಪ ಉಂಟು ಮಾಡಬಹುದು ಎಂದು ಹೇಳಲಾಗಿದೆ.

ಜ್ಯೋತಿಷಿಗಳ ಪ್ರಕಾರ ಚಂದ್ರಗ್ರಹಣದಿಂದಾಗಿ ಸುನಾಮಿ, ಚಂಡಮಾರುತು, ಪ್ರವಾಹ, ಅಗ್ನಿ ಅವಘಡಗಳು ಸಂಭವಿಸಬಹುದು. ಅಲ್ಲದೆ ಈ ಚಂದ್ರಗ್ರಹಣವು ನಾಲ್ಕು ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಗಳ ಮೇಲೆ ಧನಾತ್ಮಕವಾದ ಪರಿಣಾಮವಾದರೆ, ಮಕರ, ಮಿಥುನ, ಕನ್ಯಾ ಮತ್ತು ಧನು ರಾಶಿ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಕುಂಭ, ತುಲಾ, ಕರ್ಕಾಟಕ ಮತ್ತು ವೃಷಭ ರಾಶಿಯವರಿಗೆ ಮಿಶ್ರ ಫಲವಿದೆ. ಇನ್ನು ಚಂದ್ರಗ್ರಹಣದ ವೇಳೆ ಕೆಳಗೆ ಹೇಳಿರುವಂತಹ ತಪ್ಪುಗಳನ್ನು ನೀವು ಮಾಡಲೇಬಾರದು. ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಕಾಲವು ಆರಂಭವಾಗುವ ಕಾರಣದಿಂದ ಈ ಸಮಯದಲ್ಲಿ ನೀವು ಇಂತಹ ತಪ್ಪುಗಳನ್ನು ಮಾಡಲೇಬಾರದು...

ಚಂದ್ರಗ್ರಣ ಎಂದರೇನು?
ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣವು ನಡೆಯುವುದು. ಯಾಕೆಂದರೆ ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ. ಗ್ರಹಣದ ವೇಳೆ ಚಂದ್ರನು ತುಂಬಾ ಕೆಂಪಾಗಿ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಇಂತಹ ಗ್ರಹಣವು 104 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಲಿದೆ. ಇದು ಸಂಪೂರ್ಣ ಭಾರತದಲ್ಲಿ ಗೋಚರಿಸುವ ಕಾರಣದಿಂದಾಗಿ ಪ್ರತಿಯೊಂದು ಪ್ರದೇಶದಲ್ಲೂ ಇದರ ಪರಿಣಾಮ ಉಂಟಾಗಲಿದೆ.

ಗರ್ಭಿಣಿ ಮಹಿಳೆಯರು ನೋಡಲೇ ಬಾರದು

ಗರ್ಭಿಣಿ ಮಹಿಳೆಯರು ನೋಡಲೇ ಬಾರದು

ಚಂದ್ರಗ್ರಹಣದ ದಿನ ಗರ್ಭಿಣಿ ಮಹಿಳೆಯರು ಹೊರಗಡೆ ಹೋಗಬಾರದು. ಚಂದ್ರಗ್ರಹಣಕ್ಕೆ ಮೈಯೊಡ್ಡುವುದು ಸರಿಯಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನ ಮೇಲೆ ರಾಹುವಿನ ದೃಷ್ಟಿ ಬಿದ್ದಾಗ ಅದು ದೊಡ್ಡ ಮಟ್ಟದ ಚಂದ್ರದೋಷವೆಂದು ಕರೆಯಲಾಗುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು ಕೆಲವೊಂದು ಅಪವಿತ್ರ ಸ್ಥಾನಗಳಲ್ಲಿ ಇದ್ದರೆ ಆಗ ಚಂದ್ರದೋಷವು ಕಂಡುಬರುವುದು. ಇದರಿಂದಾಗಿ ಅತಿಯಾದ ಚಿಂತೆ ಮತ್ತು ಒತ್ತಡ ಬರುವುದು. ಹಾಗಾಗಿ ಗರ್ಭಿಣಿ ಮಹಿಳೆಯರು ಆದಷ್ಟು ಮಟ್ಟಿಗೆ ನೀವು ಚಂದ್ರಗ್ರಹಣ ನೋಡುವುದರಿಂದ ದೂರವಿರಬೇಕು

ಮನೋರಂಜನೆ ಬೇಡ

ಮನೋರಂಜನೆ ಬೇಡ

ಚಂದ್ರಗ್ರಹಣದ ದಿನ ಯಾವುದೇ ರೀತಿಯ ಮನೋರಂಜನಾ ಕಾರ್ಯಕ್ರಮ ಮಾಡಬಾರದು. ಇದರಿಂದ ಜೀವನದಲ್ಲಿ ಕೆಟ್ಟದಾಗಲಿದೆ.

ಶಿವನಾಮ ಜಪಿ ಹಾಗೂ ಹನುಮಾನ್ ಚಾಲೀಸ ಪಠಿಸಿ

ಶಿವನಾಮ ಜಪಿ ಹಾಗೂ ಹನುಮಾನ್ ಚಾಲೀಸ ಪಠಿಸಿ

ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುವ ಕಾರಣದಿಂದ ಸೂತಕ ಕಾಲಕ್ಕೆ ಮೊದಲು ಪೂಜೆ ಮಾಡಬೇಕು. ಶಿವ ನಾಮ ಜಪಿಸಬೇಕು ಅಥವಾ ಹನುಮಾನ್ ಚಾಲೀಸ್ ಪಠಿಣ ಮಾಡಬೇಕು. ಅಲ್ಲದೆ ನಕಾರಾತ್ಮಕ ಪರಿಣಾಮಕ್ಕೆ ಒಳಗಾಗುವ ರಾಶಿಯವರು ಈಶ್ವರ ದೇವರನ್ನು ಆರಾಧಿಸಬೇಕು. ಚಂದ್ರಗ್ರಹಣದ ದಿನ ದಾನ ಮಾಡಿದರೆ ತುಂಬಾ ಫಲಪ್ರದವಾಗಿರುವುದು. ಯಾವ ರೀತಿಯ ದಾನ ಮಾಡಬೇಕೆಂದರೆ ಚಿನ್ನದಿಂದ ಮಾಡಿದ ಸರ್ಪ, ಬೆಳ್ಳಿ ಅಥವಾ ತಾಮ್ರವನ್ನು ತಾಮ್ರದ ಪಾತ್ರೆಯಲ್ಲಿ ಹಾಕಿ ಅದರೊಟ್ಟಿಗೆ ಕಪ್ಪು ಎಳ್ಳನ್ನು ಹಾಕಿ ಕೊಟ್ಟರೆ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.

ಚಂದ್ರಗ್ರಹಣದ ಮಾಡಿಟ್ಟಿರುವ ಆಹಾರ ಸೇವಿಸಬೇಡಿ

ಚಂದ್ರಗ್ರಹಣದ ಮಾಡಿಟ್ಟಿರುವ ಆಹಾರ ಸೇವಿಸಬೇಡಿ

ಚಂದ್ರಗ್ರಹಣದ ದಿನ ಈಗಾಗಲೇ ಮಾಡಿಟ್ಟಿರುವ ಆಹಾರ ಸೇವನೆ ಮಾಡಬಾರದು. ಅಡುಗೆ ಕೂಡ ಮಾಡಬಾರದು.

ಮಾಂಸಾಹಾರ ಸೇವನೆ ಬೇಡ

ಮಾಂಸಾಹಾರ ಸೇವನೆ ಬೇಡ

ಜ್ಯೋತಿಷಿಗಳ ಪ್ರಕಾರ ಈ ದಿನ ಮಾಂಸಾಹಾರ ಸೇವನೆ ಮಾಡಬಾರದು. ಮಾಂಸಾಹಾರವು ನಕಾರಾತ್ಮಕ ಶಕ್ತಿಯನ್ನು ಬೇಗನೆ ಸೆಳೆಯುವುದು.

ನೀರಿನಿಂದ ದೂರವಿರಿ

ನೀರಿನಿಂದ ದೂರವಿರಿ

ಈ ದಿನ ನೀರಿನಿಂದ ಕೂಡ ದೂರವಿರಬೇಕು. ಯಾಕೆಂದರೆ ಚಂದ್ರನು ನೀರಿಗೆ ಸಂಬಂಧಿಸಿದವನಾಗಿದ್ದಾನೆ. ನೀರು ಕುಡಿಯದೆ ಇರುವುದು ಸಾಧ್ಯವಿಲ್ಲದೆ ಇರುವ ಕಾರಣದಿಂದಾಗಿ ಗಂಗಾಜಲಕ್ಕೆ ತುಳಸಿ ಹಾಕಿ ಕುಡಿಯಬಹುದು.

ಹಾಲು ಮತ್ತು ಮೊಸರು ಸೇವಿಸಬೇಡಿ

ಹಾಲು ಮತ್ತು ಮೊಸರು ಸೇವಿಸಬೇಡಿ

ಹಾಲು ಮತ್ತು ಮೊಸರನ್ನು ಚಂದ್ರಗ್ರಹಣದ ವೇಳೆ ಸೇವಿಸಬಾರದು. ಇದಕ್ಕೆ ತುಳಸಿ ಹಾಕಿಟ್ಟು ಶೇಖರಿಸಿ.

ಈ ದಿನ ಪವಿತ್ರ ಮರಗಳ ಎಲೆಗಳನ್ನು ಕೀಳಬೇಡಿ

ಈ ದಿನ ಪವಿತ್ರ ಮರಗಳ ಎಲೆಗಳನ್ನು ಕೀಳಬೇಡಿ

ಚಂದ್ರಗ್ರಹಣದ ದಿನ ಪವಿತ್ರ ಮರಗಳ ಎಲೆಗಳನ್ನು ಕೀಳಬಾರದು. ಒಂದು ವೇಳೆ ಎಲೆ ಕೀಳಬೇಕೆಂದಿದ್ದರೆ ಆಗ ನೀವು ಆ ಮರಕ್ಕೆ ನೀರು, ಹಾಲು ಮತ್ತು ಮೊಸರನ್ನು ಸೂತಕ ಕಾಲಕ್ಕೆ ಮೊದಲು ಹಾಕಬೇಕು.

ದಂಪತಿಗಳು ಬ್ರಹ್ಮಚಾರ್ಯ ಪಾಲಿಸಬೇಕು

ದಂಪತಿಗಳು ಬ್ರಹ್ಮಚಾರ್ಯ ಪಾಲಿಸಬೇಕು

ಚಂದ್ರಗ್ರಹಣದ ದಿನ ದಂಪತಿಗಳು ಬ್ರಹ್ಮಚಾರ್ಯ ಪಾಲಿಸಬೇಕು. ಈ ವೇಳೆ ಲೈಂಗಿಕ ಕ್ರಿಯೆ ತರವಲ್ಲ.

ಚಾಕು, ಕತ್ತಿ ಮತ್ತು ಕತ್ತರಿ ಬಳಸಬಾರದು

ಚಾಕು, ಕತ್ತಿ ಮತ್ತು ಕತ್ತರಿ ಬಳಸಬಾರದು

ಗ್ರಹಣದ ವೇಳೆ ನೀವು ಚೂಪಾದ ಚಾಕು, ಕತ್ತಿ ಮತ್ತು ಕತ್ತರಿ ಬಳಸಬಾರದು. ಇದು ಕೆಲವು ಕೆಟ್ಟ ಪರಿಣಾಮ ಬೀರಬಹುದು.

ದೇವರ ಪೂಜೆ ಮಾಡಬಾರದು

ದೇವರ ಪೂಜೆ ಮಾಡಬಾರದು

ಚಂದ್ರಗ್ರಹಣದ ಪ್ರಭಾವದಿಂದ ಮೂರ್ತಿಗಳನ್ನು ರಕ್ಷಿಸುವ ಸಲುವಾಗಿ ಗ್ರಹಣದ ವೇಳೆ ದೇವಸ್ಥಾನಗಳು ಸಂಪೂರ್ಣವಾಗಿ ಮುಚ್ಚಿರುವುದು. ಮನೆಯಲ್ಲೂ ದೇವರ ಪೂಜೆ ಮಾಡಬಾರದು. ಸೂತಕ ಕಾಲಕ್ಕೆ ಮೊದಲು ಪೂಜೆ ಮಾಡಿ.

ಪೂಜೆಯ ಕೊಠಡಿಗೆ ಬಟ್ಟೆ ಹಾಕಿ

ಪೂಜೆಯ ಕೊಠಡಿಗೆ ಬಟ್ಟೆ ಹಾಕಿ

ಪೂಜೆಯ ಕೊಠಡಿಗೆ ಬಟ್ಟೆ ಹಾಕಿ. ಕೆಲವರು ದೇವರ ಮೂರ್ತಿಗಳಿಗೆ ಕೂಡ ಬಟ್ಟೆ ಮುಚ್ಚುವರು.

ತಾಳ್ಮೆಯಿಂದ ಇರಿ

ತಾಳ್ಮೆಯಿಂದ ಇರಿ

ಸೂತಕ ಕಾಲದ ವೇಳೆ ತಾಳ್ಮೆಯಿಂದ ಇರಿ ಮತ್ತು ಹೆಚ್ಚು ಮಾತನಾಡಬೇಡಿ.

ನಿದ್ರೆ ಕೂಡ ಮಾಡಬಾರದು

ನಿದ್ರೆ ಕೂಡ ಮಾಡಬಾರದು

ಗ್ರಹಣದ ವೇಳೆ ನಿದ್ರೆ ಕೂಡ ಮಾಡಬಾರದು. ಯಾಕೆಂದರೆ ನಿದ್ರಿಸುವ ವೇಳೆ ನಕಾರಾತ್ಮಕ ಶಕ್ತಿಗಳು ಪರಿಣಾಮ ಬೀರುವುದು.

ಧೂಮಪಾನ- ಮಾದಕ ದ್ರವ್ಯಗಳ ಸೇವನೆ ಮಾಡಬೇಡಿ

ಧೂಮಪಾನ- ಮಾದಕ ದ್ರವ್ಯಗಳ ಸೇವನೆ ಮಾಡಬೇಡಿ

ಧೂಮಪಾನ ಮತ್ತು ಇತರ ಮಾದಕ ದ್ರವ್ಯಗಳ ಸೇವನೆ ಮಾಡುವುದು ಕೂಡ ತುಂಬಾ ಹಾನಿಕಾರಕ. ಇದರಲ್ಲಿನ ಹಾನಿಕಾರಕ ಪರಿಣಾಮಗಳು ಗ್ರಹಣದ ದಿನ ಮತ್ತಷ್ಟು ಹೆಚ್ಚಾಗುವುದು. ಇದರಿಂದ ಈ ದಿನ ಇಂತಹ ಚಟುವಟಿಕೆಗಳಿಂದ ದೂರವಿರಿ.

ಬಟ್ಟೆ, ಪಾದರಕ್ಷೆ ಅಥವಾ ಪುಸಕ್ತಗಳನ್ನು ಖರೀದಿಸಬೇಡಿ

ಬಟ್ಟೆ, ಪಾದರಕ್ಷೆ ಅಥವಾ ಪುಸಕ್ತಗಳನ್ನು ಖರೀದಿಸಬೇಡಿ

ಬಟ್ಟೆ, ಪಾದರಕ್ಷೆ ಅಥವಾ ಪುಸಕ್ತಗಳನ್ನು ಇದು ಖರೀದಿ ಮಾಡಬೇಡಿ. ಗ್ರಹಣದ ದಿನ ಶಾಪಿಂಗ್ ನಿಂದ ದೂರವಿದ್ದರೆ ಒಳ್ಳೆಯದು.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯಲ್ಲಿ ಗ್ರಹಣವು ಸಂಭವಿಸುವ ಕಾರಣದಿಂದಾಗಿ ಈ ರಾಶಿಯವರು ಹೆಚ್ಚಿನ ಕಾಳಜಿ ವಹಿಸಬೇಕು. ಚಂದ್ರಗ್ರಹಣವು ಈ ರಾಶಿಯ ಮೇಲೆ ಹಿಡಿಯುತ್ತದೆ ಎನ್ನಲಾಗಿದೆ. ಇವರಿಗೆ ಕೆಲವು ಅವಕಾಶಗಳು ದೊರೆಯುತ್ತವೆಯಾದರೂ ಮಾನಸಿಕ ಚಿಂತೆ ಹೆಚ್ಚು ಕಾಡುವುದು ಎನ್ನಲಾಗುತ್ತದೆ. ಮಕರ ರಾಶಿಯವರಯ ಶನಿಗ್ರಹದಿಂದ ಆಳಲ್ಪಡುತ್ತಾರೆ ಇವರು ಸಪ್ತ(7)ಮುಖ ಮತ್ತು ಚತುರ್ದಶ ಮುಖ ರುದ್ರಾಕ್ಷಿಯನ್ನು ಧರಿಸಿ "ಓ೦ ಹು೦ ನಮ:" ಮಂತ್ರವನ್ನು ಪಠಿಸಬೇಕು

ಅವಿವಾಹಿತರು ನೋಡಲೇ ಬಾರದು

ಅವಿವಾಹಿತರು ನೋಡಲೇ ಬಾರದು

ಈ ಶತಮಾನದ ತುಂಬಾ ದೀರ್ಘವಾದ ಚಂದ್ರಗ್ರಹಣದಿಂದಾಗಿ ವಿಪತ್ತು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಚಂದ್ರ ಒಮ್ಮೆ ಸುಂದರವಾಗಿದ್ದಾಗ ಶಾಪಗ್ರಸ್ತನಾಗಿದ್ದ ಎಂದು ಹೇಳಲಾಗುತ್ತದೆ. ಇದರಿಂದ ಅವಿವಾಹಿತರು ಇದನ್ನು ನೋಡಬಾರದು. ಇದು ಅವರಿಗೆ ಮದುವೆಗೆ ಸಮಸ್ಯೆಯಾಗಬಹುದು.

English summary

Lunar Eclipse 27 July, Do Not Make These Mistakes

The lunar eclipse of July 27, 2018, will be the longest lunar eclipse of the century and the second big eclipse of the year. The first lunar eclipse took place on Jan 31, 2018. As the eclipse is approaching, the predictions are that the eclipse can cause various disastrous effects on the earth. As per the predictions of astrologers, the eclipse might cause a tsunami, volcano eruption, cyclone, or even fire incidents. Amidst these chances, it is suggested that you do not make the below-mentioned twenty mistakes. Since the Sutak Kal will begin nine hours prior to the onset of the eclipse, it is better to avoid these mistakes especially during this period.
X
Desktop Bottom Promotion