For Quick Alerts
ALLOW NOTIFICATIONS  
For Daily Alerts

  ಜೂನ್ ತಿಂಗಳಲ್ಲಿ ಈ 5 ರಾಶಿಯವರಿಗೆ ಪ್ರೇಮ-ಸಂಬಂಧದಲ್ಲಿ ಸಮಸ್ಯೆ ಬರಲಿದೆ

  By Hemanth
  |

  ಪ್ರತಿ ತಾರಾ ಮಂಡಲದಲ್ಲಿ ಬದಲಾವಣೆಗಳು ಆಗುತ್ತಿರುವ ಕಾರಣ ಅದು ನಿಮ್ಮ ರಾಶಿಚಕ್ರಗಳ ಮೇಲೆ ಕೂಡ ಪರಿಣಾಮ ಬೀರುವುದು. ಜೂನ್ ತಿಂಗಳಲ್ಲಿ ಕೆಲವು ರಾಶಿಯವರಿಗೆ ತುಂಬಾ ಕಠಿಣ ಸಮಯ ಬಂದಿರಬಹುದು ಮತ್ತು ಇನ್ನು ಕೆಲವರಿಗೆ ಪ್ರೇಮ ಸಂಬಂಧದಲ್ಲಿ ಕೆಲವೊಮ್ಮೆ ತುಂಬಾ ಕಷ್ಟಗಳನ್ನು ಎದುರಿಸಿರಬಹುದು.

  ಜೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ ನಿಂದ ಜುಲೈ ತಿಂಗಳ ತನಕ ಗ್ರಹಗಳು ಬದಲಾಗುವ ಕಾರಣದಿಂದಾಗಿ ಸೌಹಾರ್ದತೆ ಮತ್ತು ಸಂಬಂಧವು ಸಮಸ್ಯೆಗಳನ್ನು ಎದುರಿಸುವುದು. ಜೂನ್ ಮಧ್ಯಭಾಗದಲ್ಲಿ ಇದು ಹೊರಹೊಮ್ಮುವುದು. ಜೂನ್ ತಿಂಗಳಲ್ಲಿ ತಮ್ಮ ಪ್ರೇಮ ಸಂಬಂಧದಲ್ಲಿ ತುಂಬಾ ಕಠಿಣ ಸಂಬಂಧ ಎದುರಿಸುವಂತಹ ರಾಶಿಚಕ್ರಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ನಾವು ತಿಳಿಸಿಕೊಡಲಿದ್ದೇವೆ. ಇದನ್ನು ಓದಿಕೊಳ್ಳಿ.... 

   ವೃಷಭ: ಎ.20-ಮೇ 20

  ವೃಷಭ: ಎ.20-ಮೇ 20

  ವೃಷಭ ರಾಶಿಯವರಿಗೆ ಶನಿಯು ಸಪ್ಟೆಂಬರ್ ತನಕ ಬದ್ಧತೆಯ ಮನೆಗೆ ಪ್ರವೇಶಿಸಲಿರುವನು. ತಾವು ಭವಿಷ್ಯದಲ್ಲಿ ಯಾರೊಂದಿಗೆ ಇರಬೇಕೆಂದು ಬಯಸುತ್ತಿರುವ ವ್ಯಕ್ತಿ ಅವರಾಗಿರುವುದಿಲ್ಲವೆಂದು ಮನವರಿಕೆ ಮಾಡಿಕೊಳ್ಳಬೇಕು. 2018ರ ಗ್ರಹಗತಿಯ ಪ್ರಕಾರ ಯುರೇನಸ್ ಗ್ರಹವು ಎಪ್ರಿಲ್ 2026ರ ತನಕ ಈ ರಾಶಿಯಲ್ಲಿರುವುದು. ಇದರಿಂದಾಗಿ ಇವರು ಕೆಲವೊಂದು ಅಸಹಜ ಸಂಬಂಧದಲ್ಲಿ ಸಿಲುಕುವರು. ಕಠಿಣ ಸಮಯ ಎದುರಾಗುತ್ತಿರುವ ಕಾರಣ ಈ ವ್ಯಕ್ತಿಗಳು ಯಾರತ್ತ ಆಕರ್ಷಿತರಾಗಿದ್ದೇವೆ ಮತ್ತು ಜೀವನದಲ್ಲಿನ ಆಕಾಂಕ್ಷೆಗು ಏನು ಎಂದು ತಿಳಿದುಕೊಳ್ಳಬೇಕು. ಇನ್ನು ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ವೈಯಕ್ತಿಕ ಆಕರ್ಷಣೆಯು ಪಾಲುದಾರರನ್ನು

  ಆಕರ್ಷಿಸಲು ಸಹಾಯ ಮಾಡುತ್ತದೆ. ನೀವು ಇನ್ನೂ ವಿವಾಹವಾಗದವರಾಗಿದ್ದರೆ ನಿಮ್ಮ ಜೀವನದಲ್ಲಿ ವರ್ಧಕವನ್ನು ಕಾಣುವಿರಿ. ಶುಕ್ರನು ನಿಮ್ಮ ರಾಶಿಚಕ್ರದ ಮನೆಯಲ್ಲಿಯೇ ಸಕ್ರಿಯನಾಗಿರುತ್ತಾನೆ. ಇದರಿಂದ ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ವಿವಾಹಿತರಲ್ಲಿ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ನೀವು ವಿಷಯವನ್ನು ದೀರ್ಘ ಸಮಯದವರೆಗೆ ಎಳೆಯದೆ ಅಲ್ಲಿಯೇ ಬಿಟ್ಟುಬಿಡಿ. ಸಣ್ಣ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಸಂತೋಷವನ್ನು ಅನುಭವಿಸಬಹುದಾಗಿದೆ. ವಿವಾಹಿತರಲ್ಲಿ ಸಂಗಾತಿಯನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು.

  ಕರ್ಕಾಟಕ: ಜೂನ್ 21- ಜುಲೈ 22

  ಕರ್ಕಾಟಕ: ಜೂನ್ 21- ಜುಲೈ 22

  ಜೂನ್ ನಿಂದ ಸಪ್ಟೆಂಬರ್ ತನಕ ಕರ್ಕಾಟಕ ರಾಶಿಯವರ ರೋಮ್ಯಾನ್ಸ್ ನ ಮನೆಯಲ್ಲಿ ಶನಿಯಿರುವನು. ಇದರಿಂದಾಗಿ ಅವರ ವೈವಾಹಿಕ ಜೀವನದಲ್ಲಿ ಕೆಲವೊಂದು ಅಡೆತಡೆಗಳು ಬರಬಹುದು. ತಮ್ಮೊಂದಿಗೆ ಸಮಯ ಕಳೆಯಬೇಕೆಂದು ಸಂಗಾತಿಯು ಒತ್ತಾಯಿಸುತ್ತಿದ್ದರೂ ಇವರಿಗೆ ಅದು ಸಾಧ್ಯವಾಗದೆ ಇರಬಹುದು. ಇನ್ನೊಂದು ಬದಿಯಲ್ಲಿ ಸಂಬಂಧಲ್ಲಿ ಇವರು ಕಟ್ಟಿಹಾಕಿದಂತೆ ಆಗುವರು ಮತ್ತು ಹೆಚ್ಚು ಸಂಭ್ರಮಿಸಲು ಆಗಲ್ಲ. ಇವರು ಸಂಗಾತಿಗೆ ಸಮಯ ಕೊಡುವುದು ಕೂಡ ಅಗತ್ಯವಾಗಿದೆ.ಇನ್ನು ಈ ರಾಶಿಯವರು ಕರ್ಕಾಟಕ ರಾಶಿಯವರಿಗೆ ನಿರಾಶೆಯಾದಾಗ ಅಥವಾ ಮನಸ್ಸಿಗೆ ನೋವಾದಾಗ ಅವರ ಸುತ್ತಲು ಇರುವವರು ಇದನ್ನು ಅನುಭವಿಸಬೇಕಾಗುತ್ತದೆ. ಅವರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ನೀವು ಗೊಂದಲಕ್ಕೆ ಒಳಗಾಗಬಹುದು. ಅವರನ್ನು ಏಕಾಂಗಿಯಾಗಿ ಸ್ವಲ್ಪ ಹೊತ್ತು ಬಿಟ್ಟರೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವರು.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಕನ್ಯಾ ರಾಶಿಯವರು ಈ ತಿಂಗಳಲ್ಲಿ ಮಿಶ್ರ ಭಾವನೆಗಳನ್ನು ಪಡೆದುಕೊಳ್ಳುವರು. ಈ ತಿಂಗಳ ಆರಂಭದಲ್ಲಿ ಇವರು ರೋಮ್ಯಾನ್ಸ್ ನಲ್ಲಿ ಸ್ವಲ್ಪ ಹಿಂದುಳಿಯುವರು. ಒಳ್ಳೆಯ ಸಂಬಂಧದಲ್ಲಿ ಇರಲು ಯಾಕೆ ಸಾಧ್ಯವಾಗಲಿಲ್ಲ ಎನ್ನುವ ಬದಲಿಗೆ ಅವರು ತಮ್ಮನ್ನು ಸರಿಯಾಗಿಟ್ಟುಕೊಳ್ಳಬೇಕಾಗಿದೆ. ಜೂನ್ ಅಂತ್ಯದ ವೇಳೆಗೆ ಪ್ರೀತಿಯ ಗ್ರಹ ಶುಕ್ರನು ಇವರ ರಾಶಿಗೆ ಬರುವ ಕಾರಣದಿಂದಾಗಿ ಇವರು ತುಂಬಾ ಪುನರ್ಚೇತನ ಗೊಳ್ಳುವರು. ಇನ್ನು ಕನ್ಯಾ ರಾಶಿಯ ವ್ಯಕ್ತಿಗಳು ಪರಿಪೂರ್ಣತೆಗೆ ಒತ್ತ

  ನೀಡುವವರಾಗಿದ್ದು ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವವರಾಗಿರುತ್ತಾರೆ. ಈ ವ್ಯಕ್ತಿಗಳು ತಮಗೆ ಇಷ್ಟವಿರುವ ಕೆಲಸದಲ್ಲಿ ಮಗ್ನರಾಗುವ ಮೂಲಕ ಸಂತುಷ್ಟರಾಗುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಅಪಾರ ತಾಳ್ಮೆಯುಳ್ಳವರೂ, ಕಾಳಜಿ ವಹಿಸುವವರೂ ತಮ್ಮ ಆತ್ಮೀಯರಿಗೆ ಕೈಲಾದ ಸಹಾಯ ಮಾಡುವ ಗುಣವುಳ್ಳವರೂ ಆಗಿರುತ್ತಾರೆ. ಅಲ್ಲದೇ ಇವರು ತಮ್ಮ ಸ್ವಸಾಮರ್ಥ್ಯದ ಬಗ್ಗೆ ಖಚಿತ ಮಾಹಿತಿ ಹೊಂದಿರುತ್ತಾರೆ ಹಾಗೂ ನೈತಿಕತೆ, ವಿಧೇಯತೆ ಹಾಗೂ ಉತ್ತಮ ನಡವಳಿಕೆಯ ವ್ಯಕ್ತಿಗಳೂ ಆಗಿರುತ್ತಾರೆ.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ಜೂನ್ ತಿಂಗಳಲ್ಲಿ ತುಲಾ ರಾಶಿಯವರ ಪ್ರೀತಿ ಮತ್ತು ರೋಮ್ಯಾನ್ಸ್ ಶುಕ್ರ ನಿಂದಾಗಿ ಸಾಮಾನ್ಯವಾಗಿರಲಿದೆ. ಸ್ನೇಹಕ್ಕೆ ಸರಿಯಾದ ಮೌಲ್ಯ ನೀಡದೆ ಇರುವ

  ಕಾರಣದಿಂದ ಇವರನ್ನು ಕಡೆಗಣಿಸಲಾಗಿದೆ ಎನ್ನುವ ಭಾವನೆ ಬಿಟ್ಟರೆ ಆಗ ಹಲವಾರು ಜನರಿಗೆ ಏಕಕಾಲದಲ್ಲಿ ರೋಮ್ಯಾನ್ಸ್ ಭಾವನೆ ಬರುವ ಸಾಧ್ಯತೆಯಿದೆ. ಸ್ನೇಹಿತರಿಂದ ಪಡೆಯುವಂತಹ ಪ್ರೀತಿಯನ್ನು ಇವರು ನಿರ್ಲಕ್ಷ್ಯ ಮಾಡಬಾರದು. ಇನ್ನು ಜೂನ್ ತಿಂಗಳಲ್ಲಿ ಗ್ರಹಗತಿಗಳ ಪ್ರಭಾವದಿಂದ ಈ ತಿಂಗಳು ನೀವು ಉತ್ತಮ ಪ್ರೀತಿಯ ಜೀವನವನ್ನು ಹೊಂದುವಿರಿ. ನಿಮ್ಮ ಪಾಲುದಾರರೊಂದಿಗೆ ಸಿಹಿ-ಕಹಿ ಜೀವನವನ್ನು ಅನುಭವಿಸುವಿರಿ. ನಿಮ್ಮ ನಡುವೆ ಉತ್ತಮ ಹೊಂದಾಣಿಕೆ ಹಾಗೂ ತಿಳಿವಳಿಕೆ ಇರುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ಪ್ರೀತಿಯು ಹೆಚ್ಚುತ್ತದೆ. ಆದರೆ ಕೆಲವು ಸಮಸ್ಯೆಗಳು ಆಗಾಗ ದುಃಖವನ್ನು ಉಂಟುಮಾಡಬಹುದು. ಪರಸ್ಪರ

  ಸಹಕಾರ ಹಾಗೂ ಪ್ರೀತಿಯನ್ನು ಹೊಂದಿರುವುದರಿಂದ ಉತ್ತಮ ಬದುಕನ್ನು ಕಾಣುವಿರಿ. ಅವಿವಾಹಿತರು ವಿವಾಹವಾಗಲು ಅಥವಾ ಸಂಗಾತಿಯನ್ನು ಹೊಂದಲು ಸ್ವಲ್ಪ ಕಷ್ಟವಾಗಬಹುದು. ಗ್ರಹಗಳ ಉತ್ತಮ ಸಹಕಾರ ದೊರೆಯದ ಕಾರಣ ಪ್ರೇಮಿಗಳು ಭಾವೋದ್ರಿಕ್ತತೆಗೆ ಒಳಗಾಗುವ ಸಾಧ್ಯತೆಗಳಿವೆ. ವಿವಾಹಿತರು ಕುಟುಂಬದಲ್ಲಿ ಸಿಹಿ ಸುದ್ದಿಯನ್ನು ಪಡೆದುಕೊಳ್ಳುವರು.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರು ಕಳೆದ ತಿಂಗಳು ಹಲವಾರು ಸಮಸ್ಯೆಗಳನ್ನು ಎದುರಿಸಿರಬಹುದು. ಜೂನ್ ತಿಂಗಳಲ್ಲಿ ಇವರಿಗೆ ಕೆಲವೊಂದು ಅಚ್ಚರಿಗಳು ಕಾದಿರುವುದು. ಇವರು ಕ್ರಿಯಾತ್ಮಕ ಯೋಜನೆ ಮತ್ತು ತಮ್ಮ ಗುರಿ ಸಾಧಿಸುವ ಬಗ್ಗೆ ಸಂಪೂರ್ಣ ಗಮನಹರಿಸುವರು. ಇದು ಅವರು ತುಂಬಾ ಅಗತ್ಯವಾಗಿದೆ. ಇನ್ನು ಈ ರಾಶಿಯವರಿಗೆ ಪ್ರೀತಿಯ ಜೀವನದಲ್ಲಿ ಅಥವಾ ಸಂಬಂಧಗಳಲ್ಲಿ ನೀವು ಒಂದಿಷ್ಟು ಬದ್ಧತೆಯನ್ನು ಹೊಂದಿರುವಿರಿ. ಗ್ರಹಗತಿಗಳ ಸಹಕಾರ ಅಷ್ಟಾಗಿ ಅನುಕೂಲಕರವಾಗಿರದೆ

  ಇರುವುದರಿಂದ ಸಂಗಾತಿಯೊಂದಿಗೆ ನಿರಾಶೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ನಡುವೆ ತುಸು ವೈಮನಸ್ಸು ಅಥವಾ ಕಹಿಯಾದ ಸ್ಥಿತಿ ಉಂಟಾಗಬಹುದು. ನಿಮ್ಮ ನಡವಳಿಕೆಯು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇಬ್ಬರಿಂದಲೂ ನಕಾರಾತ್ಮಕ ವರ್ತನೆ ಇರುವುದರಿಂದ ಕೊಂಚ ಬೇಸರ ಉಂಟಾಗಬಹುದು. ನಿಮ್ಮ ಭಾವನೆಗಳನ್ನು ಸ್ವಲ್ಪ ನಿಯಂತ್ರಣದಲ್ಲಿ ಇಡಬೇಕು. ಸಂದರ್ಭಗಳನ್ನು ಅರಿತು ನಡೆಯುವುದನ್ನು ಅರಿಯಬೇಕಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಒಂದಿಷ್ಟು ಸಮಯ ನೀಡುವುದು ಉತ್ತಮ. ಪ್ರೀತಿಯ ಕುರಿತು ವ್ಯವಹರಿಸುವಾಗ ವಿವಿಧ ದೃಷ್ಟಿಕೋನಗಳಿಂದ ಚಿಂತಿಸುವುದು ಸೂಕ್ತ.

  English summary

  Love Predictions Of Zodiacs Who Are Going To Have A Bad Time

  According to astrology, the planet of harmony and relationships seems to in the fixed fire sign from June until July, and this means that the middle part of the month would be the time when certain individuals' love relationships would fizzle out. Here, in this article, we are revealing about the zodiac signs that are going to have a tough time during this month of June. Check out if your zodiac sign is also mentioned here...
  Story first published: Sunday, June 10, 2018, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more