Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಶಿಭವಿಷ್ಯ: ಮೋದಿ -ರಾಹುಲ್ ಗಾಂಧಿ ನಾಯಕತ್ವದ ಗುಣಗಳು ಹೇಗಿದೆ ನೋಡಿ

ಮುಂದಿನ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುತ್ತಾರಾ? ಅಥವಾ ರಾಹುಲ್ ಗಾಂಧಿಗೆ ಈ ಅದೃಷ್ಟ ಒಲಿದು ಬರಲಿದೆ ಎನ್ನುವ ಚರ್ಚೆಗಳು ಈ ವಿಶ್ವವ್ಯಾಪಿಯಾಗಿ ನಡೆಯುತ್ತಲಿದೆ. ರಾಹುಲ್ ಗಾಂಧಿ ಅವರು ಒಂದು ಶ್ರೀಮಂತ ರಾಜಕೀಯ ಕುಟುಂಬದಿಂದ ಬಂದಿರುವ ನಾಯಕನಾದರೆ, ನರೇಂದ್ರ ಮೋದಿ ಅವರು ತಾನು ಬಡ ಕುಟುಂಬದಿಂದ ಬಂದಿದ್ದೇನೆ ಮತ್ತು ಆಮ್ ಆದ್ಮಿ ಎಂದು ತೋರಿಸಿಕೊಟ್ಟಿದ್ದಾರೆ. ಮೋದಿ ಅವರನ್ನು ಜನರು ಕೂಡ ಇಷ್ಟಪಟ್ಟಿದ್ದಾರೆ.
ಅದೇ ರೀತಿ ಮುಂದಿನ ಚುನಾವಣೆಯು ಕತ್ತುಕತ್ತಿನ ಹೋರಾಟವೆಂದರೆ ಸುಳ್ಳಲ್ಲ. ಯಾಕೆಂದರೆ ಈಗಾಗಲೇ ಎಲ್ಲಾ ವಿರೋಧ ಪಕ್ಷಗಳು ಜತೆಯಾಗಿ ಮೋದಿ ಅವರ ವಿರುದ್ಧ ಹೋರಾಡುವ ಸೂಚನೆ ನೀಡಿದೆ. ಇವರಿಬ್ಬರ ರಾಶಿಚಕ್ರದ ಬಗ್ಗೆ ಕೂಡ ಹಲವಾರು ಜ್ಯೋತಿಷಿಗಳು ಹೇಳಿರಬಹುದು. ಈ ಲೇಖನದಲ್ಲಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರ ರಾಶಿಫಲಗಳು ಮತ್ತು ಜಾತಕವನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಯಾರಿಗೆ ಪಟ್ಟ ಎಂದು ಈ ಲೇಖನ ಓದಿದರೆ ನಿಮಗೆ ತಿಳಿದುಬರುವುದು...

ರಾಹುಲ್ ಗಾಂಧಿ ಅವರ ರಾಶಿ ಮಿಥುನ
ರಾಹುಲ್ ಗಾಂಧಿ ಅವರು ಜೂನ್ 18, 1970ರಲ್ಲಿ ಗುರುವಾರದಂದು ಮಿಥುನ ರಾಶಿಯರಲ್ಲಿ ಜನಿಸಿರುವರು. ಈ ರಾಶಿಯ ಧ್ಯೇಯವಾಕ್ಯ: `ನಾನು ಯೋಚಿಸುತ್ತೇನೆ. ಈ ರಾಶಿಯವರು ತುಂಬಾ ತಮಾಷೆ, ಕುತೂಹಲಿ ಮತ್ತು ಆಶಾವಾದಿ ಪ್ರವೃತ್ತಿಯವರು. ಇದರಿಂದಾಗಿ ಇವರು ಗಂಭೀರತೆಯಿಂದ ದೂರವಿರುವರು. ಇವರು ಯಾವಾಗಲೂ ಮೋಜು ಹಾಗೂ ಸಂತೋಷ ಇಷ್ಟಪಡುವರು.

ಈ ರಾಶಿಯವರು ಚಂಚಲ ಮನಸ್ಸಿನವರು
ಈ ರಾಶಿಯವರಿಗೆ ಅಧಿಕಾರ ಮತ್ತು ದೈನಂದಿನ ಚಟುವಟಿಕೆಗಳು ಇಷ್ಟವಾಗಲ್ಲ. ಇವರಿಗೆ ವಿಶ್ರಾಂತಿ ಮತ್ತು ಮನಸ್ಸು ತಬ್ಬಿಬ್ಬಾದಾಗ ಬೇಗನೆ ಖಿನ್ನತೆಗೆ ಒಳಗಾಗುವುದು ಸಾಮಾನ್ಯ ವಿಚಾರ. ಈ ರಾಶಿಯವರಿಗೆ ಬೇಸರ ಮೂಡುವುದು ಬೇಗ. ಇದರಿಂದಾಗಿ ಈ ರಾಶಿಯವರಿಗೆ ನಿರೀಕ್ಷಿತವಾಗಿರುವ ಯಶಸ್ಸು ಸಿಗುವುದು ಕಷ್ಟ.

ರಾಹುಲ್ ಗಾಂಧಿ ಜಾತಕ
ವೇದಿಕ ಜ್ಯೋತಿಷ್ಯದ ಪ್ರಕಾರ ರಾಹುಲ್ ಗಾಂಧಿ ಅವರ ಜನ್ಮಕುಂಡಲಿಯ ಪ್ರಕಾರ ನಾಲ್ಕನೇ ಮನೆಯಲ್ಲಿ ಸಿಂಹರಾಶಿಯಿದೆ ಮತ್ತು ಇದನ್ನು ಕೇತು ಕಬಳಿಸಿದ್ದಾನೆ. ಕಾಂಗ್ರೆಸ್ ನ ಕಳೆದುಹೋಗಿರುವ ಜನಪ್ರಿಯತೆ ಮತ್ತು ನೆಹರೂ-ಗಾಂಧಿ ಕುಟುಂಬದ ಮ್ಯಾಜಿಕ್ ನ್ನು ಮತ್ತೆ ತರಲು ಆತ ನಿಂತಿದ್ದಾನೆ. ಆತ ಬಹುಸಂಖ್ಯೆಯ ಜನರ ಕಡೆಗೆ ತನ್ನ ನಿಲುವು ಬದಲಾಯಿಸಿದರೆ ಮಾತ್ರ ಇದು ಸಾಧ್ಯ. ಆದರೆ ವರದಿ ಪ್ರಕಾರ ರಾಹುಲ್ ಗಾಂಧಿಯಿಂದ ಯಾವುದೇ ರೀತಿಯ ಕಠಿಣ ಪರಿಶ್ರಮ ಕಂಡುಬರುತ್ತಿಲ್ಲ.

ನರೇಂದ್ರ ಮೋದಿಯವರು ರಾಶಿಚಕ್ರ
ನರೇಂದ್ರ ಮೋದಿ ಅವರು 1950ರ ಸೆಪ್ಟಂಬರ್ 17ರಂದು ವೃಶ್ಚಿಕ ರಾಶಿಯಲ್ಲಿ ಜನಿಸಿರುವರು. ಈ ರಾಶಿಯವರಿಗೆ ಪ್ರತಿಯೊಂದರ ಮೇಲೆ ನಿಯಂತ್ರಣವಿರುವುದು. ಇವರಲ್ಲಿ ತೀವ್ರವಾದ ದೃಷ್ಟಿಕೋನ ಮತ್ತು ಗಿಡುಗನಂತಹ ಕಣ್ಣಿರುವ ಕಾರಣದಿಂದ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವರು.

ನರೇಂದ್ರ ಮೋದಿ ಅವರಿಗೆ ಯೋಗವಿದೆ
ಮೋದಿ ಅವರ ರಾಶಿಚಕ್ರದ ಪ್ರಕಾರ ಅವರಿಗೆ ಯೋಗವಿದೆ. ಇದರಿಂದಾಗಿ ಅವರ ವ್ಯಕ್ತಿತ್ವವು ತುಂಬಾ ಹೆಮ್ಮೆ, ಕಲಿತ, ಸಂಪದ್ಭರಿತ, ಜನಪ್ರಿಯ ಮತ್ತು ಸ್ಥಿರನಡತೆ ತೋರಿಸುವುದು. ಇವರು ತುಂಬಾ ನಂಬಿಕಸ್ಥ ವ್ಯಕ್ತಿ. ಇವರು ತನ್ನ ಬದ್ಧತೆ ಹಾಗೂ ಸ್ಪಷ್ಟ ನಿರ್ಧಾರಗಳಿಂದ ಸ್ಥಿರತೆ ಮತ್ತು ಬಾಳಿಕೆ ತರುವರು.

ನರೇಂದ್ರ ಮೋದಿ ಅವರ ಕುಂಡಲಿ
ಮೋದಿ ಅವರ ಜನ್ಮ ಕುಂಡಲಿ ಪ್ರಕಾರ ಐದನೇ ಮನೆಯನ್ನು ರಾಹು ಆಕ್ರಮಿಸಿದ್ದಾನೆ ಮತ್ತು ಗುರು ನಾಲ್ಕನೇ ಮನೆಯಲ್ಲಿದೆ. ಇವರಿಗೆ ತನ್ನ ಐಡಿಯಾಗಳನ್ನು ಸುಂದರವಾಗಿ ಹೇಳುವ ಕಲೆ ತಿಳಿದಿದೆ. ಆದರೆ ರಾಹುವಿನ ಉಪಸ್ಥಿತಿಯಿಂದಾಗಿ ವ್ಯಕ್ತಿಯ ಅರ್ಥಗರ್ಭಿತವಾದ ಜ್ಞಾನ ಮೇಲೆ ಪರಿಣಾಮ ಬೀರುವುದು ಮತ್ತು ಭ್ರಮೆ ಉಂಟು ಮಾಡುವುದು. ಇದರಿಂದಾಗಿ ಮೋದಿ ಅವರು ತನ್ನ ಆಲೋಚನೆ ಮತ್ತು ತತ್ವಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಇದುವೇ ಅವರ ಯಶಸ್ಸು ಮತ್ತು ಅಪಯಶಸ್ಸಿಗೆ ಕಾರಣವಾಗಬಹುದು. ಎರಡು ರಾಶಿಗಳು ತುಂಬಾ ಪ್ರಭಾವಿಯಾಗಿದೆ. ಆದರೆ ಇದರ ಸ್ಪಷ್ಟ ಚಿತ್ರಣ ಸಿಗಲು ಮುಂದಿನ ಲೋಕಸಭಾ ಚುನಾವಣೆ ತನಕ ಕಾಯಬೇಕು.



Click it and Unblock the Notifications











