For Quick Alerts
ALLOW NOTIFICATIONS  
For Daily Alerts

ಹೆಂಗಸರು ಹೀಗೂ ಪರಾಕಾಷ್ಠೆಯ ಸುಖ ಅನುಭವಿಸಬಲ್ಲರು!

|

ಓರ್ವ ಹೆಂಗಸು ಸೆಕ್ಸ್‌ನ ಪರಾಕಾಷ್ಠೆಯ ಸುಖ ಅನುಭವಿಸಬೇಕಾದರೆ ಒಂದೋ ಸಂಗಾತಿ ಜೊತೆಗಿರಬೇಕು ಅಥವಾ ಸ್ವರತಿಯ ಮೊರೆ ಹೋಗಬೇಕು. ಈ ಎರಡು ದಾರಿಗಳಲ್ಲದೆ ಇನ್ನಾವ ರೀತಿಯಿಂದ ಆ ಸುಖ ಪಡೆಯಲು ಸಾಧ್ಯ? ನಂಬಿದರೆ ನಂಬಿ ಅಥವಾ ಬಿಡಿ.. ಕೆಲ ವಿಚಿತ್ರ ಸಂದರ್ಭಗಳಲ್ಲಿ ಹೆಂಗಸರು ಸಂಗಾತಿ ಅಥವಾ ಹಸ್ತ ಮೈಥುನ ಇದಾವುದೂ ಇಲ್ಲದೆ ಪರಾಕಾಷ್ಠೆಯ ಸುಖ ಅನುಭವಿಸಬಲ್ಲರು. ಮಶ್ರೂಮ್‌ನ ಪರಿಮಳದಿಂದ ಅಥವಾ ರೋಲರ್ ಕೋಸ್ಟರ್‌ನಲ್ಲಿ ಕುಳಿತಾಗ ಹೀಗೆ ಇನ್ನೂ ಕೆಲ ವಿಚಿತ್ರ ಹಾಗೂ ನಂಬಲಸಾಧ್ಯವಾದ ಸಂದರ್ಭಗಳಲ್ಲಿ ಹೆಂಗಸರು ಆ ಕ್ಷಣದ ಸುಖವನ್ನು ಅನುಭವಿಸುತ್ತಾರಂತೆ.

ಪಾದಗಳಲ್ಲಿನ ಸಂವೇದನೆಯಿಂದ ಸುಖ

ಪಾದಗಳಲ್ಲಿನ ಸಂವೇದನೆಯಿಂದ ಸುಖ

ಪಾದಗಳಲ್ಲಿನ ಲೈಂಗಿಕ ಸಂವೇದನೆಯ ಬಗ್ಗೆ ಸಾಕಷ್ಟು ವಿಚಾರಗಳು ಪ್ರಚಲಿತದಲ್ಲಿವೆ. ಆದರೆ ಪಾದದಿಂದಲೇ ಸೆಕ್ಸ್‌ನ ಆ ಎಲ್ಲ ಸುಖ ಪಡೆಯುವುದು ಸಾಧ್ಯವೆ? ಹೌದು ಎನ್ನುತ್ತಾರೆ ವೈದ್ಯರು. ನೆದರ್ಲೆಂಡ್‌ನ ಮಹಿಳೆಯೋರ್ವಳು ಬರಿಗಾಲಿನಿಂದ ನಡೆದಾಡಿದರೆ ಸಾಕು ಅವಳಿಗೆ ಸ್ಖಲನವಾಗಿ ಪರಾಕಾಷ್ಠೆಯ ಸುಖ ಸಿಗುತ್ತದಂತೆ. ಒಮ್ಮೆ ಅವಳ ದೇಹದಲ್ಲಿನ ನರಮಂಡಲ ವ್ಯವಸ್ಥೆ ವಿಫಲವಾಗಿತ್ತಂತೆ. ಅದರ ನಂತರ ಪಾದ ಹಾಗೂ ಯೋನಿಯ ಮಧ್ಯದ ವ್ಯತ್ಯಾಸವನ್ನು ಗುರುತಿಸಲು ನರಮಂಡಲಕ್ಕೆ ಸಾಧ್ಯವಾಗದೆ ಇಂಥದೊಂದು ವಿಚಿತ್ರ ಸನ್ನಿವೇಶ ಉಂಟಾಗಿದೆ. ಜಗತ್ತಿನಲ್ಲಿ ಎಷ್ಟೋ ಜನರಿಗೆ ಇಂಥ ವಿಚಿತ್ರ ಅನುಭವಗಳಾಗಿರುತ್ತವೆಯಾದರೂ ಜನ ಏನೆಂದುಕೊಳ್ಳುವರೋ ಎಂಬ ಹೆದರಿಕೆ ಹಾಗೂ ನಾಚಿಕೆಯಿಂದ ಅವರು ತಮ್ಮ ಅನುಭವಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲವಂತೆ.

ರೋಲರ್ ಕೋಸ್ಟರ್

ರೋಲರ್ ಕೋಸ್ಟರ್

ಫನ್ ಫೇರ್‌ಗಳಲ್ಲಿ ಅಥವಾ ಇನ್ನಿತರ ಉತ್ಸವಗಳಲ್ಲಿ ಹಾಕಲಾಗುವ ರೋಲರ್ ಕೋಸ್ಟರ್‌ನಲ್ಲಿ ನೀವು ಒಮ್ಮೆಯಾದರೂ ಕುಳಿತಿರಬಹುದು. ಜೋರಾಗಿ ಚಲಿಸುವ ತೊಟ್ಟಿಲು ಭಯವಾಗುವಷ್ಟು ವೇಗದಲ್ಲಿ ಹತ್ತಿ ಇಳಿದು ಜೀವವೇ ಬಾಯಿಗೆ ಬಂದಂತಾಗುತ್ತದೆ. ಆದರೆ ಇಂಥ ರೋಲರ್ ಕೋಸ್ಟರ್‌ಗಳು ಕೆಲವರಿಗೆ ಭಯ ತರಿಸಿದರೆ ಇನ್ನು ಕೆಲ ಮಹಿಳೆಯರು ಅದರಲ್ಲಿ ಕುಳಿತು ಚಲಿಸುವಾಗ ಸೆಕ್ಸ್ ಸುಖದ ಪರಾಕಾಷ್ಠೆ ಅನುಭವಿಸುತ್ತಾರಂತೆ. ಎಂಥ ವಿಚಿತ್ರ ಅಲ್ಲವೆ! ಹಲವಾರು ಮಹಿಳೆಯರು ಇದನ್ನು ದೃಢಪಡಿಸಿದ್ದು, ಯೂಟ್ಯೂಬ್‌ನಲ್ಲಿ ಇದರ ಸಾಕಷ್ಟು ವಿಡಿಯೋಗಳನ್ನು ಸಹ ನೀವು ನೋಡಬಹುದು. ರೋಲರ್ ಕೋಸ್ಟರ್ ಅಷ್ಟೆ ಅಲ್ಲ ಸ್ಕೈ ಡೈವಿಂಗ್ ಮಾಡುವಾಗಲೂ ಕೆಲ ಹೆಣ್ಣು ಮಕ್ಕಳು ಆ ಸುಖ ಅನುಭವಿಸುತ್ತಾರಂತೆ.

Most Read: ಇಲ್ಲಿ ಯಾವುದಾದರು ಒಂದು ಕಣ್ಣನ್ನು ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಿ!

ಮಶ್ರೂಮ್‌ಗಳ ಸುವಾಸನೆ

ಮಶ್ರೂಮ್‌ಗಳ ಸುವಾಸನೆ

ಇದು ಜಗತ್ತಿನ ಮತ್ತೊಂದು ವಿಚಿತ್ರವಾಗಿದೆ. ಮಶ್ರೂಮ್‌ಗಳ ವಾಸನೆಯಿಂದ ಸೆಕ್ಸ್ ಸುಖದ ಅನುಭವ ಪಡೆಯುವುದು ಕೆಲ ಹೆಂಗಸರಿಗೆ ಸಾಧ್ಯವಂತೆ. ಹವಾಯಿ ದ್ವೀಪದಲ್ಲಿ ಬೆಳೆಯುವ ಒಂದು ನಿರ್ದಿಷ್ಟ ಜಾತಿಯ ಡಿಕ್ಟಿಯೊಫೋರಾ ಹೆಸರಿನ ಮಶ್ರೂಮ್‌ನ ಪರಿಮಳ ಆಘ್ರಾಣಿಸಿದಾಗ ಹಲವಾರು ಹೆಂಗಸರಿಗೆ ಸ್ಖಲನದ ಅನುಭವವಾಗಿ ಪರಾಕಾಷ್ಠೆಯ ಸುಖ ಸಿಕ್ಕಿತಂತೆ. ಈ ಪ್ರಯೋಗಕ್ಕೆ ಒಳಪಟ್ಟ ಅರ್ಧಕ್ಕೂ ಹೆಚ್ಚು ಹೆಣ್ಣು ಮಕ್ಕಳು ಸುಖ ಪಡೆದಿದ್ದನ್ನು ಖಚಿತಪಡಿಸಿದರು ಎಂದು ಔಷಧೀಯ ಮಶ್ರೂಮ್‌ಗಳ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಆಕಳಿಕೆಯಿಂದಲೂ ಸಾಧ್ಯವೆ?

ಆಕಳಿಕೆಯಿಂದಲೂ ಸಾಧ್ಯವೆ?

ಕೆನಡಾದ ಮಾನಸಿಕ ಆರೋಗ್ಯ ಜರ್ನಲ್ ಹಾಗೂ 1995 ರಲ್ಲಿ ಟೆಲೆಗ್ರಾಫ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳ ಪ್ರಕಾರ ಖಿನ್ನತೆ ನಿರೋಧಕ ಔಷಧಿ ತೆಗೆದುಕೊಳ್ಳುತ್ತಿದ್ದ ನಾಲ್ವರು ರೋಗಿಗಳು ಸೆಕ್ಸ್ ಪರಾಕಾಷ್ಠೆಯ ಸುಖ ಅನುಭವಿಸಿದ ಬಗ್ಗೆ ಹೇಳಿಕೊಂಡಿದ್ದರು. ಆವರು ಆಕಳಿಸಿದಾಗಲೆಲ್ಲ ಖಿನ್ನತೆ ನಿರೋಧಕ ಔಷಧಿಯ ಕಾರಣದಿಂದ ಸ್ಖಲನವಾಗಿ ಸುಖದ ಅನುಭವವಾಗುತ್ತಿತ್ತು. ಆದರೆ ಸಹಜವಾದ ಸೆಕ್ಸ್ ಸಂದರ್ಭದಲ್ಲಿ ಸುಖ ಅನುಭವಿಸುವುದು ಮಾತ್ರ ಇವರಿಂದ ಸಾಧ್ಯವಾಗುತ್ತಿರಲಿಲ್ಲವಂತೆ.

Most Read: ಮಹಿಳೆಯರ ಪರಾಕಾಷ್ಠೆಯ ಬಗ್ಗೆ ದೊಡ್ಡ ರಹಸ್ಯ ಬಹಿರಂಗ!

ಮಗು ಜನಿಸುವಾಗ

ಮಗು ಜನಿಸುವಾಗ

ಮಗು ಜನಿಸುವಾಗ ಪರಾಕಾಷ್ಠೆಯ ಸುಖ ಅನುಭವಿಸುವುದು ತೀರಾ ವಿರಳವಾದರೂ ಆಗಾಗ ಈ ಬಗ್ಗೆ ವರದಿಗಳು ಬರುತ್ತಿರುತ್ತವೆ. ಈ ಕುರಿತು ನಡೆಸಲಾದ ಅಧ್ಯಯನವೊಂದರಲ್ಲಿ 20,600 ಹೆಂಗಸರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದರಲ್ಲಿ 9 ಮಹಿಳೆಯರು ತಾವು ಮಗು ಹೆರುವಾಗ ಸೆಕ್ಸ್ ಸುಖದ ಅನುಭವವಾಯಿತು ಎಂದು ಹೇಳಿದರು. ಇನ್ನು ಇದರಲ್ಲಿ 668 ಹೆಂಗಸರು ಒಂಚೂರು ಸಂವೇದನೆ ಅನುಭವಿಸಿದ್ದಾಗಿ ಹಾಗೂ 868 ಹೆಂಗಸರು ಆ ಸುಖದ ಅನುಭವ ಆಗಿದ್ದಾಗಿಯೂ ಹೇಳಿದರು.

Most Read: ಕಣ್ಣೀರು ತರಿಸುವ ಸ್ಟೋರಿ: ಈಕೆ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದರೂ 50 ಜನರ ಪ್ರಾಣ ಉಳಿಸಿದಳು!

ವ್ಯಾಯಾಮ ಮಾಡುವಾಗ

ವ್ಯಾಯಾಮ ಮಾಡುವಾಗ

ವ್ಯಾಯಾಮ ಮಾಡುವ ಸಂದರ್ಭಗಳಲ್ಲಿ ಅನೇಕ ಹೆಣ್ಣು ಮಕ್ಕಳು ಸೆಕ್ಸ್ ಸ್ಖಲನದ ಪರಾಕಾಷ್ಠೆಯ ಸುಖ ಅನುಭವಿಸುತ್ತಾರೆ ಎಂದು ವಿಜ್ಞಾನಿಗಳು ಹಾಗೂ ಆರೋಗ್ಯ ತಜ್ಞರು ದೃಢ ಪಡಿಸಿದ್ದಾರೆ. ಯಾವುದೇ ಬಾಹ್ಯ ಸೆಕ್ಸ್ ಪ್ರಚೋದನೆ ಇಲ್ಲದೆಯೇ ಸುಮಾರು ಶೇ.40 ರಷ್ಟು ಮಹಿಳೆಯರು ವ್ಯಾಯಾಮ ಮಾಡುವಾಗ ಈ ಸುಖ ಅನುಭವಿಸುತ್ತಾರೆ ಎನ್ನಲಾಗಿದೆ.

English summary

Ladies, here are weird ways you can orgasm

According to the most of us, the only two ways to orgasm are sex and masturbation. But wait, that’s not true. There are plenty of other ways apart from these that can make women orgasm. From smelling mushrooms to getting a ride on a roller coaster, there are other weird ways women can orgasm.
Story first published: Thursday, December 13, 2018, 15:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more