For Quick Alerts
ALLOW NOTIFICATIONS  
For Daily Alerts

ಜೂನ್ 18ರಿಂದ ಆರಂಭವಾಗುವ ವಾರಗಳಲ್ಲಿ ಮೂರು ರಾಶಿಯವರಿಗೆ ಕಷ್ಟ ಬರಲಿದೆ!

By Deepu
|

ಜೀವನದಲ್ಲಿ ಒಳ್ಳೆಯದಾಗಲಿ ಎಂದು ಎಲ್ಲರು ಬಯಸುತ್ತಾರೆ. ಆದರೆ ಕಾಲ ಎನ್ನುವುದು ಕೆಲವೊಮ್ಮೆ ಕೆಟ್ಟದ್ದನ್ನು ಮಾಡುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಒಳ್ಳೆಯದು ಹೇಗೆ ಸಂತೋಷವನ್ನು ನೀಡುತ್ತದೆಯೋ ಹಾಗೆಯೇ ಕಠಿಣವಾದ ಸಮಯವು ಜೀವನದ ಪಾಠವನ್ನು ಹೇಳಿಕೊಡುತ್ತದೆ ಎನ್ನುವುದನ್ನು ಮನದಲ್ಲಿಟ್ಟುಕೊಳ್ಳಬೇಕು. ಕಠಿಣವಾದ ಸಮಯವನ್ನು ಹೆಚ್ಚು ಅನುಭವಿಸಿದಷ್ಟು ನಮ್ಮ ಮನಸ್ಸು ಹಾಗೂ ಆಲೋಚನೆಗಳು ನ್ಯಾಯಯುತವಾಗಿರುತ್ತದೆ. ಜೊತೆಗೆ ಸಮಾಜದಲ್ಲಿ ಒಬ್ಬ ಮಾದರಿ ವ್ಯಕ್ತಿಯನ್ನಾಗಿ ನಿರ್ಮಿಸುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳ 18ರಿಂದ ಆರಂಭವಾಗುವ ವಾರದಲ್ಲಿ ಮೂರು ರಾಶಿಚಕ್ರದವರಿಗೆ ಕಠಿಣ ಸಮಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇವರಿಗೆ ಈ ವಾರದಲ್ಲಿ ಒಂದಷ್ಟು ಗೊಂದಲ ಹಾಗೂ ಒತ್ತಡಗಳು ಉಂಟಾಗಬಹುದು. ಹಾಗಾದರೆ ಆ ಮೂರು ರಾಶಿಚಕ್ರಗಳು ಯಾವವು? ಅವುಗಳ ಮೇಲೆ ಯಾವ ಪರಿಣಾಮ ಉಂಟಾಗುವುದು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಇವರು ತಮ್ಮ ಸ್ವಭಾವವನ್ನು ಆದಷ್ಟು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಕೆಲವು ಪ್ರಚೋದನೆಗಳ ತೀವ್ರತೆಯು ಹೊಸ ತಿರುವನ್ನು ತೆಗೆದುಕೊಳ್ಳುವಂತೆ ಮಾಡಬಹುದು. ಇವರು ಸ್ವಭಾವತಃ ಆಕ್ರಮಣಕಾರಿ ಪ್ರವೃತ್ತಿಯವರು ಹಾಗೂ ಭಾವೋದ್ರಿಕ್ತರಾಗಿರುವುದರಿಂದ ಕೋಪ ಪ್ರಚೋದಿತ ಸಂಗತಿಗಳಿಂದ ಆದಷ್ಟು ದೂರ ಉಳಿಯುವುದು ಒಳಿತು. ಇವರಿಗೆ ಒಂದಿಷ್ಟು ನಿರ್ಬಂಧಗಳಿಗೆ ಒಳಗಾದರೆ ಉದ್ರೇಕಕ್ಕೆ ಒಳಗಾಗುವ ಸಾದ್ಯತೆಗಳಿರುತ್ತವೆ. ಇವರಿಗೆ ಈ ವಾರದಲ್ಲಿ ಸಾಕಷ್ಟು ಗೊಂದಲ ಹಾಗೂ ಒತ್ತಡಗಳು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಆದಷ್ಟು ತಾಳ್ಮೆಯಿಂದ ಇರುವುದನ್ನು ಕಲಿಯಬೇಕಾಗುವುದು.

ಮೇಷ

ಮೇಷ

ಇನ್ನು ಈ ರಾಶಿಯವರು ಜೀವನವನ್ನು ಸದಾ ಧನಾತ್ಮಕರೂಪದಲ್ಲಿ ಕಾಣುತ್ತಾರೆ ಹಾಗೂ ಸದಾ ಜೀವನದಲ್ಲಿ ಆಶಾವಾದಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಸ್ವಂತ ವ್ಯಕ್ತಿತ್ವವುಳ್ಳವರಾಗಿದ್ದು ಯಾವುದೇ ಹಂಗಿನಲ್ಲಿ ಇರಲು ಇಚ್ಛಿಸುವುದಿಲ್ಲ. ನಿಮಗೆ ಅದೃಷ್ಟ ತರುವ ಗುಣವೆಂದರೆ ಪ್ರಯಾಣ! ಪ್ರತಿಸಲವೂ ಯಾವುದಾದರೂ ಹೊಸ ಸ್ಥಳಕ್ಕೆ ಪ್ರಯಾಣಿಸಿದಾಗಲೂ ಅಲ್ಲಿಂದ ಏನಾದರೊಂದು ಹೊಸತನ್ನು ಕಲಿಯುವುದು ನಿಮ್ಮ ಜಾಯಾಮಾನವಾಗಿದೆ. ಸುತ್ತ ಮುತ್ತಲಿನವರಲ್ಲಿನ ಉತ್ತಮ ಗುಣಗಳನ್ನೇ

ಕಾಣುವ ನೀವು ಎಲ್ಲರ ಮೆಚ್ಚುಗೆಯ ವ್ಯಕ್ತಿಯಾಗುತ್ತೀರಿ. ಇವರಿಗೆ ಗಾಢ ಬಣ್ಣಗಳಾದ ಕೆಂಪು ಮತ್ತು ಕಿತ್ತಳೆ ಬಣ್ಣವು ಮಂಗಳವನ್ನು ತರುತ್ತದೆ. ಅದೃಷ್ಟ ಚಿಹ್ನೆಗಳೆಂದರೆ

ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು. ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಅವರು ಬಯಸಿದ್ದನ್ನು ಪಡೆಯಲು ಹೆಚ್ಚು ಶ್ರಮ ಪಡುತ್ತಾರೆ. ಜೊತೆಗ ಮಧ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಾರೆ. ಗ್ರೀಕ್ ಶಾಸ್ತ್ರದ ಇವರ ಅದೃಷ್ಟದ ಸಂಕೇತ ಕೀಲಿ. ಕೀಲಿಯನ್ನು ಸ್ವರ್ಗಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವರ್ಗಕ್ಕೆ ದಾರಿ ಎಂದು ನಂಬಲಾಗುವುದು.

ತುಲಾ

ತುಲಾ

ತುಲನಾತ್ಮಕವಾದ ವ್ಯಕ್ತಿಗಳಾದ ಇವರಿಗೆ ಗಂಭೀರವಾದ ಭಾವನೆಗಳು ಒಂದಿಷ್ಟು ಇರಿಸು-ಮುರಿಸನ್ನುಂಟುಮಾಡುವುದು. ಆಂತರಿಕ ಭಾವನೆಗಳಿಗೆ ಒಂದಿಷ್ಟು ತೊಂದರೆ ಉಂಟಾಗುವುದು. ಇವರು ಕೆಲವು ಆತ್ಮೀಯ ವ್ಯಕ್ತಿಗಳನ್ನು ದೂರಗೊಳಿಸಬಹುದು. ಮೊದಲು ತಮ್ಮ ಅಗತ್ಯತೆಗಳಿಗೆ ಆದ್ಯತೆ ನೀಡುವುದನ್ನು ಕಲಿಯಬೇಕು. ಇವರಿಗೆ ಕೆಲವು ಸಂಗತಿಗಳಿಂದ ಜ್ಞಾನೋದಯವಾಗುವುದು. ಹಾಗಾಗಿ ಇವರಿಗೆ ಈ ವಾರ ಜ್ಞಾನೋದಯದ ವಾರ ಎಂತಲೂ ಹೇಳಬಹುದು. ತಮ್ಮ ವೈಯಕ್ತಿಕ ಬೆಳವಣಿಗೆಗೆ ಗಂಭೀರ ಚಿಂತನೆ ಅಥವಾ ಚಲನೆಯನ್ನು ನಡೆಸುವಂತಹ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ತುಲಾ

ತುಲಾ

ಇನ್ನು ತುಲಾ ರಾಶಿಯವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಪ್ರಸಿದ್ಧಿಯನ್ನು ಪಡೆದುಕೊಳ್ಳುವರು. ಈ ವರ್ಷಪೂರ್ತಿ ನೀವು ಧನಾತ್ಮಕ ಪರಿಸ್ಥಿತಿಯನ್ನೇ ಹೆಚ್ಚಾಗಿ ಅನುಭವಿಸಲಿದ್ದೀರಿ. ಜೀವನದ ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಆಂತರಿಕವಾಗಿ ತೊಳಲಾಟಕ್ಕೆ ಒಳಗಾಗುವಿರಿ. ಅಂತಹ ಘರ್ಷಣೆಗಳ ಮೂಲ ಕಾರಣವನ್ನು ಅರ್ಥೈಸಿಕೊಂಡು, ಅವುಗಳ ಸುಧಾರಣೆಗೆ ಮುಂದಾಗಬೇಕು. ನಿಮ್ಮ ಜೀವನದಲ್ಲಿ ನೀವು ಯಾವ ದಿಕ್ಕಿಗೆ ಸಾಗಬೇಕು ಎನ್ನುವುದನ್ನು ನಿರ್ಧರಿಸಲು ಇದೊಂದು ಉತ್ತಮವಾದ ಸಮಯ. ನಿಮ್ಮ ಮೃದು ಸ್ವಭಾವವನ್ನು ಅರಿತು ಇತರ ವ್ಯಕ್ತಿಗಳು ಅದರ ಸದುಪಯೋಗ ಪಡಿಸಿಕೊಳ್ಳಲು ಬಿಡದಿರಿ. ನಿಮ್ಮ ಪರಿಪೂರ್ಣ ಸಮತೋಲನ ಸಾಮಥ್ರ್ಯ ಅಥವಾ ಕೌಶಲ್ಯದಿಂದ ವೃತ್ತಿ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ಆಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ. ನಿಮ್ಮ ಅಧೀನದಲ್ಲಿರುವ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುವಿರಿ. ಯಾವುದೇ ಅಡೆತಡೆ ಎದುರಾದರೂ ನಿಮ್ಮ ಗುರಿಯನ್ನು ಸಾಧಿಸುವುದನ್ನು ಮರೆಯದಿರಿ.

ವೃಶ್ಚಿಕ

ವೃಶ್ಚಿಕ

ಇವರು ಈ ವಾರ ತಾವು ತೀವ್ರವಾದ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ ಎಂದು ಭಾವಿಸುತ್ತಾರೆ. ಈ ವ್ಯಕ್ತಿಗಳು ವಾರದಲ್ಲಿ ತಮ್ಮ ಮನಸ್ಸಿನಲ್ಲಿ ಅನೇಕ ವಿವಾದಾತ್ಮಕ ವಿಚಾರಗಳನ್ನು ಹೊಂದಿರುತ್ತಾರೆ. ಅದರ ಬಗ್ಗೆ ಯಾರು ನಂಬಿಕೆ ಹೊಂದಿರುತ್ತಾರೆ ಅಥವಾ ಹೊಂದಿರುವುದಿಲ್ಲ ಎನ್ನುವುದರ ಬಗ್ಗೆ ಹೆಚ್ಚಿನ ಚಿಂತನೆ ನಡೆಸುವುದಿಲ್ಲ. ಕುಟುಂಬದ ನಿರೀಕ್ಷೆಗಳು ಮತ್ತು ಅವರ ಜೀವನದ ಗುರಿಗಳ ನಡುವೆ ಇವರು ತೊಳಲಾಟ ನಡೆಸಬೇಕಾಗುವುದು. ಮುಂಬರುವ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲು ಆದಷ್ಟು ಶಾಂತ ಸ್ವಭಾವದಿಂದ ಇರಬೇಕು ಎಂದು ಸಲಹೆ ನೀಡಲಾಗುವುದು.

ವೃಶ್ಚಿಕ

ವೃಶ್ಚಿಕ

ಇನ್ನು ಈ ವಾರದಲ್ಲಿ ವೃಶ್ಚಿಕ ರಾಶಿಯವರು ತಮ್ಮ ಜೀವನದ ಕಠಿಣ ಪಾಠಗಳನ್ನು ಕಲಿತುಕೊಳ್ಳಲಿರುವರು. ಈ ವಾರದಲ್ಲಿ ಇವರಿಗೆ ನೋವಿನ ಶಕ್ತಿಯು ಇವರಿಗೆ ಬರುವ ಕಾರಣದಿಂದಾಗಿ ಕಠಿಣ ಕೆಲಸದಲ್ಲಿ ನಿರತರಾಗುವರು. ಇವರು ಹಳೆಯದೆಲ್ಲವನ್ನು ಮರೆತು ಹೊಸತನ್ನು ಆರಂಭಿಸಬೇಕೆಂದು ತಿಳಿಯಬೇಕು.ಒಂದೇ ಸಲಕ್ಕೆ ಎಲ್ಲವೂ ಕೊನೆಗೊಳ್ಳಲಿದೆ ಎಂದು ಅವರಿಗೆ ಅನಿಸಿದರೆ ಅದು ಬೂದಿಯಿಂದಲೂ ಎದ್ದು ಬರುವಂತಹ ಅವರ ಗುಣದಿಂದಾಗಿ ಮತ್ತು ಇನ್ನೂ ಹೆಚ್ಚಿನ ಶಕ್ತಿ ಗಳಿಸಲು. ತಮ್ಮ ಸುತ್ತಲು ಇರುವಂತಹ ಬದಲಾವಣೆಗಳಿಂದಾಗಿ ಅವರು ತುಂಬಾ ಆರಾಮವಾಗಿರುವರು. ತುಂಬಾ ಕಠಿಣ ಪರಿಸ್ಥಿತಿಯನ್ನು ಅವರು ಎದುರಿಸುವುದರೊಂದಿಗೆ

ಅವರು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಪ್ರೌಢವಾಗಿರುವ ರೀತಿಯಲ್ಲಿ ನಿಭಾಯಿಸುವರು. ಇನ್ನು ವೃಶ್ಚಿಕ ರಾಶಿಯವರು ತುಂಬಾ ಲೆಕ್ಕಾಚಾರದವರು ಮತ್ತು ತಾವು ಯಾರೊಂದಿಗೆ ಸ್ನೇಹ ಮಾಡಬೇಕೆಂದು ಕೂಡ ಅವರು ತುಂಬಾ ಯೋಚಿಸುವರು. ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಪ್ರಭಾವಶಾಲಿಗಳು ಎಂದು ನಂಬಲಾಗಿದೆ. ಅವರ ನಡತೆಯು ಇದನ್ನು ತೋರಿಸಿಕೊಡುವುದು. ಅವರ ಒಳಮನಸ್ಸನ್ನು ತಿಳಿಯಬೇಕಾದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ನಿಮ್ಮನ್ನು ಅವರು ನಂಬಿದರೆ ಸಂಪೂರ್ಣ ಹೃದಯದಿಂದ ನಂಬುವರು. ಇದರಿಂದಾಗಿ ಇತರ ರಾಶಿಯವರಿಗಿಂತ ಅವರು ತುಂಬಾ ಭಿನ್ನ.

English summary

june-18th-week-will-be-the-worst-time-for-these-zodiac-signs

If you belong to any of these three zodiac signs, then there are chances that your week is going to be messy and this is what the stars predict! According to astrologers, there are three zodiac signs which will be unlucky during the week of June 18th. These zodiac signs will face some of the toughest times which they haven't in the recent times.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more