For Quick Alerts
ALLOW NOTIFICATIONS  
For Daily Alerts

ರಾಶಿಚಕ್ರಗಳ ಮೇಲೆ ಮಂಗಳನ ವಿರುದ್ಧಗತಿಯ ಪರಿಣಾಮಗಳು

By Hemanth
|

ಆಕಾಶಕಾಯದಲ್ಲಿ ಆಗುವಂತಹ ಪ್ರತಿಯೊಂದು ಬದಲಾವಣೆಯು ನಮ್ಮ ರಾಶಿಚಕ್ರದ ಮೇಲೆ ಪರಿಣಾಮ ಬೀರುವುದು ಖಚಿತ. ಇದರಲ್ಲಿ ಒಂದು ಮುಖ್ಯ ಗ್ರಹವಾಗಿರುವಂತಹ ಮಂಗಳನು ವಿರುದ್ಧ ಗತಿಯಲ್ಲಿ ಸಾಗುವುದು ಕೂಡ ಗ್ರಹಗತಿಯಲ್ಲಿ ಬದಲಾವಣೆಗಳನ್ನು ಉಂಟು ಮಾಡುವುದು. ಇದರ ಕಾಲ ಮಿತಿಯು ಜೂನ್ 27ರಿಂದ ಆಗಸ್ಟ್ 27ರ ತನಕವಿರುವುದು. ಹೆಚ್ಚಿನ ಜ್ಯೋತಿಷಿಗಳು ಇದರಿಂದ ಆಗುವಂತಹ ಬದಲಾವಣೆಗಳನ್ನು ಗಮನಿಸಿಕೊಂಡು ಸಲಹೆ ಸೂಚನೆಗಳನ್ನು ನೀಡುವುದು ತುಂಬಾ ಕಡಿಮೆ.

zodiacs in kannada

ಆದರೆ ಬೋಲ್ಡ್ ಸ್ಕೈಯ ತಜ್ಞ ಜ್ಯೋತಿಷ್ಯರು ನಿಮಗೋಸ್ಕರ ಮಂಗಳನ ವಿರುದ್ಧ ಗತಿಯಿಂದ ಆಗುವಂತಹ ಬದಲಾವಣೆಗಳನ್ನು ತಿಳಿಸಿಕೊಡಲಿದ್ದಾರೆ. ಕುಂಭ ರಾಶಿಯಲ್ಲಿ ಮಂಗಳನ ವಿರುದ್ಧಗತಿಯ ಆರಂಭವಾಗುವುದು ಮತ್ತು ಮಕರದಲ್ಲಿ ಇದು ಕೊನೆಯಾಗುವುದು. ಈ ಸಮಯದಲ್ಲಿ ಶಕ್ತಿಯು ಬರುವುದು, ಇನ್ನು ಕೆಲವು ಸಲ ಶಕ್ತಿಯು ನಾಶವಾಗುವುದು. ಮಂಗಳನ ವಿರುದ್ಧಗತಿಯು ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಈ ಲೇಖನದಲ್ಲಿ ತಿಳಿಯುವ.

ಮೇಷ: ಮಾ.21-ಎಪ್ರಿಲ್ 19

ಮೇಷ: ಮಾ.21-ಎಪ್ರಿಲ್ 19

ಮೇಷ ರಾಶಿಯವರಿಗೆ ಮಂಗಳನ ಈ ವಿರುದ್ಧಗತಿಯು ತುಂಬಾ ಒಳ್ಳೆಯದನ್ನು ಉಂಟುಮಾಡಲಿದೆ. ಇದು ಮುಂದಡಿ ಇಡುವಂತೆ ಪ್ರೇರೇಪಿಸಲಿದೆ ಮತ್ತು ಸಾಮಾಜಿಕ ಸಂಪರ್ಕವನ್ನು ವಿಸ್ತರಿಸಲಿದೆ. ಈ ವ್ಯಕ್ತಿಗಳು ಜನರಿಂದ ಹೆಚ್ಚಿನದನ್ನು ಕೇಳಲಿದ್ದಾರೆ. ಇದುವೇ ಅವರಿಗೆ ತುಂಬಾ ಹತಾಶೆ ಉಂಟು ಮಾಡುವುದು. ಹೆಚ್ಚಿನದನ್ನು ನೀಡಲು ಇವರು ತಯಾರಾಗಿರುವರು. ಆದರೆ ಇನ್ನೊಂದು ಬದಿಯಲ್ಲಿ ಇವರು ಬೇರೆಯವರನ್ನು ಉದ್ದೇಶಿಸಿ ಮಾತನಾಡುವಾಗ ತಮ್ಮ ಮಾತುಗಳ ಬಗ್ಗೆ ಗಮನವಿಡಬೇಕು. ಯಾಕೆಂದರೆ ಇದರಿಂದ ಬೇರೆಯವರಿಗೆ ನೋವಾಗಬಾರದು. ಮಾತಿಗೆ ಮೊದಲು ಚೆನ್ನಾಗಿ ಆಲೋಚನೆ ಮಾಡಬೇಕು.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ಈ ಹಂತದಲ್ಲಿ ವೃಷಭ ರಾಶಿಯವರಿಗೆ ಯಾವುದೇ ಪರಿಣಾಮ ಬೀರದಂತೆ ಅದನ್ನು ನಿಭಾಯಿಸುವರು. ಇವರು ತಾವು ಒದಗಿಸುವುದಕ್ಕಿಂತ ಹೆಚ್ಚಿನದನ್ನು ಮಂಗಳನ ವಿರುದ್ಧಗತಿಯು ಕೇಳಲಿದೆ. ಕಾಸ್ಮಿಕ್ ಶಕ್ತಿಯು ಇವರ ಕೆಲಸದ ಕಡೆ ಗಮನಹರಿಸುವಂತೆ ಮಾಡಲಿದೆ ಮತ್ತು ದುರಾದೃಷ್ಟದಿಂದ ಇವರ ಶಕ್ತಿಯನ್ನು ಇದು ಹೀರಿಕೊಳ್ಳಲಿದೆ. ಅದಾಗ್ಯೂ ಇನ್ನೊಂದು ಬದಿಯಲ್ಲಿ ಈ ವ್ಯಕ್ತಿಗಳು ತಮ್ಮ ವೃತ್ತಿ ಅಭಿವೃದ್ಧಿಪಡಿಸಬಹುದು. ಇವರಿಗೆ ಅದೃಷ್ಟವು ಜತೆಗಿದೆ. ಸ್ವಲ್ಪ ತಾಳ್ಮೆಯಿಂದ ಇರಬೇಕಷ್ಟೇ.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಮಂಗಳನ ಈ ವಿರುದ್ಧ ಗತಿಯು ಮಿಥುನ ರಾಶಿಯವರಿಗೆ ತುಂಬಾ ಪ್ರೇರಣೆಯಾಗಲಿದೆ. ಇವರು ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಇವರು ದೊಡ್ಡ ಹೆಜ್ಜೆಯನ್ನಿಡಲಿದ್ದಾರೆ. ಜೀವನದಲ್ಲಿ ಮಹತ್ವದ ಹೆಜ್ಜೆಯನ್ನಿಡುವ ಮೊದಲು ಇವರು ಯೋಜನೆ ಹಾಕಿಕೊಳ್ಳಬೇಕು. ಸಣ್ಣ ಹೆಜ್ಜೆಯಿಂದ ಜೀವನದ ದೊಡ್ಡ ಪ್ರಯಾಣವು ಆರಂಭವಾಗುವುದು ಮತ್ತು ಇದಕ್ಕಾಗಿ ಯೋಜನೆ ಹಾಕಿಕೊಳ್ಳಬೇಕು ಎಂದು ಅವರು ತಿಳಿಯಬೇಕು.

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ ರಾಶಿಯವರಿಗೆ ಮಂಗಳನು ತುಂಬಾ ಫೇವರಿಟ್ ಎಂದು ಪರಿಗಣಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ರಾಶಿಯವರ ಶಕ್ತಿಯ ಮಟ್ಟವು ಅದ್ಭುತವಾಗಿರಲಿದೆ. ಇವರ ಕಾಮಾಸಕ್ತಿಯು ಅಗಸದಲ್ಲಿರಲಿದೆ. ಇವರಿಗೆ ಜೀವನದಲ್ಲಿ ಹಠಾತ್ ಆಗಿ ಕಾಮೋತ್ತೇಜನ ಆದಂತೆ ಇರುವುದು. ಇವರು ತಮ್ಮ ಸ್ವಭಾವನೆಯನ್ನು ನಿಭಾಯಿಸಿಕೊಂಡು ಹಲವಾರು ವಿಷಯಗಳಿಗೆ ತಮ್ಮ ಬುದ್ದಿ ಬಳಸಿಕೊಳ್ಳುವರು. ಇವರು ಯಾವುದೇ ವರ್ತನೆ ತೋರಿಸುವ ಮೊದಲು ಒಂದು ಹೆಜ್ಜೆ ಹಿಂದಿಟ್ಟುಕೊಳ್ಳಬೇಕು.

ಸಿಂಹ: ಜುಲೈ 23-ಆ.23

ಸಿಂಹ: ಜುಲೈ 23-ಆ.23

ಮಂಗಳನ ಈ ವಿರುದ್ಧಗತಿಯು ಇವರು ಜೀವನದ ಪ್ರಮುಖ ಸಂಬಂಧದಲ್ಲಿ ಕೆಲವೊಂದು ಗೊಂದಲಗಳನ್ನು ಉಂಟು ಮಾಡುವುದು. ತಮ್ಮ ಸಂಗಾತಿಗಳ ಜತೆ ಇವರು ಹೇಗೆ ವರ್ತಿಸಲಿದ್ದಾರೆ ಎನ್ನುವುದನ್ನು ಮಂಗಳನು ನೋಡಲಿದ್ದಾನೆ. ಇವರು ನೇರವಾಗಿ ಮತ್ತು ಯಾವುದೇ ಜಗಳವಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಇದು ಸರಿಯಾದ ಅವಕಾಶ. ಯಾವುದರ ಕಡೆ ಗಮನಹರಿಸಬೇಕು ಎನ್ನುವುದನ್ನು ಕಂಡುಕೊಳ್ಳಲು ಇದು ಸರಿಯಾದ ಸಮಯ.

ಕನ್ಯಾ: ಆ.24-ಸೆ.22

ಕನ್ಯಾ: ಆ.24-ಸೆ.22

ಮಂಗಳನ ವಿರುದ್ಧ ಗತಿಯ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಹೆಚ್ಚಿನ ಶಕ್ತಿ ಕಳೆದುಕೊಂಡ ಅನುಭವವಾಗಲಿದೆ. ಇವರು ಸರಿಯಾದ ಆಹಾರ ಕ್ರಮ ಮತ್ತು ದೈನಂದಿನ ಚಟುವಟಿಕೆಯನ್ನು ಪಾಲಿಸಿಕೊಂಡು ಹೋಗಬೇಕು. ಏನು ಮಾಡಬೇಕೆಂದು ಇವರಿಗೆ ಸರಿಯಾಗಿ ತಿಳಿದಿದೆ. ತಮ್ಮ ಆರೋಗ್ಯದ ಕಡೆ ಗಮನಹರಿಸುವುದು ಇವರಿಗೆ ಅತೀ ಅಗತ್ಯವಾಗಿದೆ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ತುಂಬಾ ಗುಪ್ತವಾಗಿ ಅನುಭವಿಸಬೇಕೆಂದು ಬಯಸಿರುವಂತಹ ಕಾಮವನ್ನು ತುಲಾ ರಾಶಿಯವರಿಗೆ ಮಂಗಳನ ವಿರುದ್ಧಗತಿಯು ನೆನಪಿಸಲಿದೆ. ಮುಂದಿನ ಕೆಲವು ತಿಂಗಳಲ್ಲಿ ಇವರು ತಮ್ಮ ಭಾವನೆಗಳನ್ನು ಮತ್ತೆ ಪರಿಶೀಲಿಸಿಕೊಂಡು, ತಮಗೆ ಯಾವುದು ಒಳ್ಳೆಯದು ಎಂದು ನೋಡಿಕೊಳ್ಳಬೇಕು. ಹಲವಾರು ಆಕಾಂಕ್ಷೆಗಳು ಇವರು ಬುದ್ಧಿಯನ್ನು ತಡೆಯಬಹುದು. ಆದರೆ ಹತಾಶೆಗೊಳಗಾಗದಂತೆ ಇವರು ನೋಡಿಕೊಳ್ಳಬೇಕು.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ವೃಶ್ಚಿಕ ರಾಶಿಯವರಿಗೆ ಈ ವಿರುದ್ಧಗತಿಯ ಸಮಯವು ಒಳ್ಳೆಯ ಸುದ್ದಿ ನೀಡಲಿದೆ. ಇವರು ಲೈಂಗಿಕ ಜೀವನವು ಮುಂದಿನ ಕೆಲವು ತಿಂಗಳಲ್ಲಿ ಪುನರುಜ್ಜೀವನಗೊಳ್ಳಲಿದೆ. ಇವರು ತಮ್ಮನ್ನು ತುಂಬಾ ಭಿನ್ನವಾಗಿ ನೋಡಲಿದ್ದಾರೆ ಮತ್ತು ತಾವು ಕನಸಿನಲ್ಲೂ ನೆನೆಸಿರದ ಕೆಲವು ಅನುಭವ ಪಡೆಯಲಿದ್ದಾರೆ. ಈ ವಿರುದ್ಧಗತಿಯ ಸಮಯದಲ್ಲಿ ಇವರು ಮನೆಯ ಕಡೆ ಕೂಡ ಹೆಚ್ಚಿನ ಗಮನಹರಿಸಲಿದ್ದಾರೆ. ಎಲ್ಲಾ ಒತ್ತಡಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದನ್ನು ಇವರು ಕಲಿಯುವುದು ಅತೀ ಅಗತ್ಯ.

ಧನು: ನ.23-ಡಿ.22

ಧನು: ನ.23-ಡಿ.22

ಧನು ರಾಶಿಯವರು ತಾವು ಮಾಡುತ್ತಿರುವ ಕೆಲಸವು ಒಳ್ಳೆಯದಕ್ಕೆ ಎಂದು ಭಾವಿಸಿಕೊಳ್ಳುವರು. ಆದರೆ ಇವರಿಗೆ ನಿಕಟವಾಗಿರುವ ಜನರು ಇದನ್ನು ಒಪ್ಪಿಕೊಳ್ಳಲ್ಲ. ಇವರು ಉದ್ದೇಶಪೂರ್ವಕವಾಗಿ ಅವರನ್ನು ಮರೆತ್ತಿದ್ದರೆ ಆಗ ಅವರು ಕಡೆಗಣಿಸಲ್ಪಟ್ಟ ಭಾವನೆಗೆ ಒಳಗಾಗುವರು. ಇವರು ತಮ್ಮ ಗಾಯಗಳಿಗೆ ಮದ್ದು ಮಾಡಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕಾಗಿದೆ. ಮುಂದಿನ ತಿಂಗಳುಗಳಲ್ಲಿ ಮಂಗಳನ ವಿರುದ್ಧಗತಿಯು ಕೆಲವೊಂದು ರಹಸ್ಯ ವಿಚಾರಗಳನ್ನು ಇವರಿಗೆ ತಿಳಿಯುವಂತೆ ಮಾಡಲಿದೆ.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಮಕರ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಮಂಗಳನ ವಿರುದ್ಧ ಗತಿಯು ಈ ರಾಶಿಗೆ ಬರಲಿದೆ. ಈ ವೇಳೆ ಈ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಸಮಸ್ಯೆಯಾಗಲಿದೆ. ಮುಂದಿನ ಕೆಲವು ತಿಂಗಳಲ್ಲಿ ಇವರು ತಮ್ಮ ಆರ್ಥಿಕ ಸ್ಥಿತಿ ಪುನರುಜ್ಜೀನವಗೊಳಿಸಲು ಕೆಲವು ಪ್ರಾಯೋಗಿಕ ವಿಧಾನಗಳನ್ನು ಕಂಡುಕೊಳ್ಳಬೇಕು. ಖರ್ಚನ್ನು ಇವರು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು. ಇವರು ತುಂಬಾ ಜಾಣರಾಗಿರುವ ಕಾರಣದಿಂದ ತಮ್ಮ ಯೋಜನೆ ಹಾಕಿಕೊಂಡು ಅದರತ್ತ ಗಮನಹರಿಸಬೇಕು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಮಂಗಳನ ವಿರುದ್ಧಗತಿಯ ಸಮಯದಲ್ಲಿ ಕುಂಭ ರಾಶಿಯವರು ತಮ್ಮನ್ನು ತಾವೇ ಗುರುತಿಸಿಕೊಳ್ಳುತ್ತಿಲ್ಲವೆನ್ನುವ ಭಾವನೆಗೆ ಒಳಗಾಗುವರು. ಈ ಶಕ್ತಿಯು ಕುಂಭ ರಾಶಿಯವರ ಮೇಲೆ ದೃಷ್ಟಿಹಾಕಿರುವ ಕಾರಣದಿಂದ ಇವರು ವಿಶ್ರಾಂತಿ ಪಡೆಯಲು ಬಯಸುವರು. ಆದರೆ ದುರಾದೃಷ್ಟದಿಂದ ಜೀವನವು ಇವರಿಗೆ ತುಂಬಾ ಕಡಿಮೆ ಅವಕಾಶ ನೀಡುವುದು. ಮಂಗಳನ ವಿರುದ್ಧ ಗತಿಯಿಂದಾಗಿ ಇವರು ತಮ್ಮ ಜೀವನದ ಉದ್ದೇಶ ಮತ್ತು ಗುರಿಯನ್ನು ಮರುಪರಿಶೀಲಿಸಬೇಕು.

ಮೀನ: ಫೆ.19-ಮಾ.20

ಮೀನ: ಫೆ.19-ಮಾ.20

ಮಂಗಳನ ವಿರುದ್ಧಗತಿಯು ಸಮಯವು ಮೀನ ರಾಶಿಯವರಿಗೆ ಈಗಾಗಲೇ ಅನುಭವಕ್ಕೆ ಬಂದಿರುವುದು. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇವರು ಪ್ರಯತ್ನಿಸುತ್ತಾ ಇದ್ದರೂ ಮುಂದಿನ ದಿನಗಳಲ್ಲಿ ಇದು ಮರಳಿ ಬರಲಿದೆ. ಸ್ನೇಹಿತರೊಂದಿಗೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಇದು ಅಷ್ಟು ನಂಬಿಕೆಗೆ ಅರ್ಹವಾಗಿರಲ್ಲ.

English summary

How The Retrograde Of Mars Will Affect You:June 27 – August 27, 2018

In astrology, retrograde of Mars is considered to be one of the most challenging times of the year. This is one of the reasons why astrologers rarely discuss this or even make any predictions around this period. Astrologers tend to avoid analysing the zodiac signs based on this aspect of the retrograde of Mars, most of the time.
X
Desktop Bottom Promotion