For Quick Alerts
ALLOW NOTIFICATIONS  
For Daily Alerts

  ಮುಂದಿನ ದಿನಗಳಲ್ಲಿ ಎಲ್ಲಾ ರಾಶಿಯವರಿಗೆ ಪ್ರೇಮ-ಸಂಬಂಧದಲ್ಲಿ ಸಮಸ್ಯೆ ಬರಲಿದೆ!

  By Deepu
  |

  ಪ್ರೀತಿ ಎನ್ನುವುದು ಜೀವನದ ಅತ್ಯಮೂಲ್ಯವಾದ ಸಂಗತಿ. ಯಾರು ಪ್ರೀತಿಯಿಂದ ವಂಚಿತರಾಗಿರುತ್ತಾರೋ ಅಂತಹವರು ಮಾನಸಿಕವಾಗಿ ಉದ್ವಿಘ್ನತೆ ಅಥವಾ ಖಿನ್ನತೆಗಳಿಗೆ ಒಳಗಾಗಿರುತ್ತಾರೆ. ಪ್ರೀತಿ ಎನ್ನುವುದು ಬದುಕನ್ನು ಸಂತೋಷಗೊಳಿಸುವುದು. ಜೊತೆಗೆ ನಮ್ಮವರು-ತಮ್ಮವರು ಎನ್ನುವ ಬಾಂಧವ್ಯವನ್ನು ಗಟ್ಟಿಗೊಳಿಸುವುದು. ಹಾಗಾಗಿ ಪ್ರೀತಿಗಾಗಿ ವ್ಯಕ್ತಿ ಎಂತಹ ಕೆಲಸ ಬೇಕಾದರೂ ಮಾಡುತ್ತಾನೆ.

  ಪ್ರೀತಿಗಾಗಿ ಅದೆಷ್ಟೋ ಜನರು ತಮ್ಮ ಜೀವನವನ್ನು ವಿಭಿನ್ನ ಹಂತಕ್ಕೆ ಕರೆದೊಯ್ದರು ಎನ್ನುವುದಕ್ಕೆ ಇತಿಹಾಸದಲ್ಲಿ ಸಿಗುವ ಸಾಕಷ್ಟು ಕಥೆ ಪುರಾಣಗಳನ್ನು ನೋಡಿದರೆ ತಿಳಿಯುತ್ತದೆ. ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ ಗ್ರಹಗತಿಗಳ ಪ್ರಭಾವ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

  ಈ ತಿಂಗಳ 15ನೇ ತಾರೀಖಿನಂದು ಬುಧನು ತನ್ನ ಸ್ಥಾನದ ಬದಲಾವಣೆಯನ್ನು ತೋರುವನು. ಇದರ ಪರಿಣಾಮವಾಗಿ ವ್ಯಕ್ತಿಯ ಸಂಬಂಧಗಳ ಮೇಲೆ ಅಥವಾ ಪ್ರೀತಿಯ ಜೀವನದಲ್ಲಿ ಗಮನಾರ್ಹ ಪರಿಣಾಮ ಉಂಟಾಗುವುದು ಎಂದು ಹೇಳಲಾಗುತ್ತದೆ. ಬುಧ ಮತ್ತು ಯುರೇನಸ್ ಗ್ರಹಗಳ ಬದಲಾವಣೆಯಿಮದ ರಾಶಿ ಚಕ್ರದ ಮೇಲೆ ಯಾವ ಬಗೆಯ ಬದಲಾವಣೆ ನಿಶ್ಚಿತವಾದದ್ದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.... 

  ಮೇಷ

  ಮೇಷ

  ಸಂವಹನ ಪ್ರಕ್ರಿಯೆಯು ಸಂಬಂಧಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ವ್ಯಕ್ತಿಗಳು ಸಹ ಅದರ ಮೇಲೆ ಹೆಚ್ಚಿನ ಗಮನ ಹರಿಸುವರು. ನೀವು ನಿಮ್ಮ ಸಂಗಾತಿಯು ನಿಮ್ಮನ್ನು ಕೇಳದೆಯೇ ನಿಮ್ಮ ಬಯಕೆಗಳು ಏನು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಬಯಸದಿರಿ. ಅದರ ಬದಲು ಉತ್ತಮ ಸಂವಹನ ಹಾಗೂ ಭಾವನೆಗಳಿಗೆ ಬೆಲೆಕೊಡುವುದನ್ನು ಕಲಿಯಿರಿ. ಇದೀಗ ನಿಮ್ಮ ಜೀವನದಲ್ಲಿ ಪ್ರೀತಿಗೆ ಸಂಬಂಧಿಸಿದಂತೆ ಅತ್ಯುತ್ತಮವಾದ ಸಮಯವಾಗಲಿದೆ. ಸಂಗಾತಿಗೆ ಬೇಕಾದಂತೆ ಹಾಗೂ ಪ್ರೀತಿಗೆ ಅನುಗುಣವಾಗಿ ವರ್ತಿಸಿ.ನಿಮ್ಮ 5ನೇ ಮನೆ ಯಾವುದೇ ಋಣಾತ್ಮಕ ಗ್ರಹಗಳನ್ನು ಹೊಂದಿಲ್ಲ. ಆದ್ದರಿಂದ ಹೊಸ ಸಂಬಂಧಗಳಿಗೆ ಪ್ರವೇಶಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸೌಮ್ಯವಾಗಿರುತ್ತವೆ. ಸಣ್ಣ ವಿವರಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಅವು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ವಾದವನ್ನು ನಿರ್ವಹಿಸುವಾಗ ಸ್ಪಷ್ಟವಾದ ಚಿಂತನೆ ಮತ್ತು ತರ್ಕ ನಿಮಗೆ ಕಾರಣವಾಗಬಹುದು ಎಂದು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಇದು ವರ್ಷವಿಡೀ ನಿಮಗಾಗಿ ಮೃದು ಪ್ರೇಮ ಜೀವನವನ್ನು ಖಚಿತಪಡಿಸುತ್ತದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನೀವು ಪ್ರೀತಿಯ ಸಂಪರ್ಕವನ್ನು ಎದುರಿಸಿದರೆ ವಿರಸ ಉಂಟಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಯಾವುದೇ ಹಳೆಯ ಪ್ರೀತಿಯ ಸಂಬಂಧವೂ ಸಹ ನಿಮ್ಮನ್ನು ಕಳೆದುಕೊಳ್ಳುತ್ತದೆ. ಹಳೆಯದನ್ನು ಉಳಿಸಿಕೊಳ್ಳುವಾಗ ಹೊಸ ಪ್ರೀತಿಯ ಸಂಪರ್ಕವನ್ನು ಮಾಡಲು ಎಚ್ಚರಿಕೆಯಿಂದಿರಿ.

  ವೃಷಭ

  ವೃಷಭ

  ಈ ವ್ಯಕ್ತಿಗಳು ಲೈಂಗಿಕವಾಗಿ ಪ್ರಚೋದಿತರಾಗಬಹುದು. ನೀವು ನಿಮ್ಮ ಸಂಗಾತಿಯೊಂದಿಗೆ ಹೊಂದಿಕೊಳ್ಳುವುದು ಬಹಳ ಪ್ರಮುಖವಾದ ವಿಚಾರವಾಗಿರುತ್ತದೆ. ಲೈಂಗಿಕವಾಗಿ ಇಬ್ಬರೂ ಹೊಂದಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದರೆ ಇಬ್ಬರಲ್ಲೂ ಲೈಂಗಿಕ ಜೀವನದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎನ್ನುವ ಭಾವನೆ ಕಾಡಬಹುದು. ಸಂಬಂಧವು ತುಲನಾತ್ಮಕವಾಗಿ ಹೊಸದಾಗಿದೆ. ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಮುಂದಿನ ಹಂತದ ಜೀವನದಲ್ಲಿ ತೊಂದರೆ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗಿನ ಕಟ್ಟುನಿಟ್ಟಿನ ಗೆರೆಯನ್ನು ದಾಟುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇನ್ನು ನಿಮ್ಮ ಕುಟುಂಬದ ಪರಿಸರ ಶಾಂತಿಯುತವಾಗಿರುವಂತೆ ಕಂಡುಬರುತ್ತದೆ. ಒಂಟಿ ಜೀವಿಗಳಿಗೆ ಈ ತಿಂಗಳ ಹದಿನಾರನೇ ತಾರೀಖಿನ ಬಳಿಕ ಉತ್ತಮ ಅವಕಾಶಗಳು ದೊರಕುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಟ್ಟಾರೆಯಾಗಿ ಈ ರಾಶಿಯ ವ್ಯಕ್ತಿಗಳ ಜೀವನ ಈ ತಿಂಗಳಲ್ಲಿ ಶಾಂತಿಯುತವಾಗಿರುತ್ತದೆ.

  ಮಿಥುನ

  ಮಿಥುನ

  ಇವರಿಗೆ ಈ ಸಮಯವು ಅತ್ಯಂತ ಅದೃಷ್ಟವನ್ನು ತಂದುಕೊಡುವಂತಹ ಸಮಯ ಎಂದು ಹೇಳಬಹುದು. ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಡೇಟಿಂಗ್ ಹೊಂದುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನೀವು ನಿಮ್ಮಂತೆಯೇ ಆರಾಮ ವಲಯದಿಂದ ಹೊರಬರುವ ಮನಸ್ಸಿನವರು ಹಾಗೂ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೊಂದಿಗೆ ಬೆರೆತುಕೊಳ್ಳಬೇಕು. ಇಲ್ಲವಾದರೆ ಭಿನ್ನಾಭಿಪ್ರಾಯಗಳಲ್ಲಿ ನೀವು ಪ್ರಮುಖವಾದ ಗುರಿಯಾಗುವ ಸಾಧ್ಯತೆಗಳಿರುತ್ತವೆ. ಇನ್ನು ಜೂನ್ ತಿಂಗಳ ಮಧ್ಯದ ಸಮಯದ ವರೆಗೂ ಸಂಗಾತಿಯೊಂದಿಗೆ ಸಣ್ಣ ಪುಟ್ಟ ತರ್ಕಗಳು ಹಾಗೂ ವಾದಗಳು ನಡೆಯುತ್ತಲೇ ಇರುತ್ತವೆ. ಇದು ವಿಭಿನ್ನವಾದ ಸ್ವಭಾವ ಹಾಗೂ ಅಭಿಪ್ರಾಯಗಳಿಂದ ಆಗಿರಬಹುದು. ನಿಮ್ಮ ಮಧ್ಯೆ ಉತ್ತಮವಾದ ಸಂಬಂಧ ಬೆಳೆಯಲು ಮುಂದೆ ಹೆಜ್ಜೆಯನ್ನು ಹಾಕಬೇಕು. ಇದರಿಂದ ನೀವೊಬ್ಬ ಉತ್ತಮ ವ್ಯಕ್ತಿಯಾಗುವಿರಿ. ಇದರಿಂದಾಗಿ ನಿಮ್ಮ ಪಾಲುದಾರರ ನಡವಳಿಕೆಯ ಮೇಲೆ ಪ್ರಭಾವ ಬೀರುವುದು. ನಿಮ್ಮ ಪ್ರೀತಿಯ ಜೀವನವು ಸಕ್ರಿಯವಾಗಿರುತ್ತದೆ. ಇದರೊಂದಿಗೆ ನೀವು ಆವರ್ತನದೊಂದಿಗೆ ಹೊಸ ಮತ್ತು ಆಸಕ್ತಿದಾಯಕ ವಿಚಾರದಲ್ಲಿ ಹೆಚ್ಚು ತಲ್ಲೀನರಾಗುವಿರಿ. ವಿರೋಧಾಭಾಸಗಳು ಕಡಿಮೆಯಾಗುವುದರ ಮೂಲಕ ಸಂಬಂಧದಲ್ಲಿ ಆಕರ್ಷಣೆ ಹೆಚ್ಚುವುದು. ಸಾಮಾನ್ಯವಾದ ಗುಣಗಳಿಂದ ಸಂಬಂಧದ ವ್ಯಾಪ್ತಿಯು ಹೆಚ್ಚುವುದು.

  ಕರ್ಕ

  ಕರ್ಕ

  ಇವರು ಅತ್ಯುತ್ತಮ ಆಸಕ್ತರಾಗಿ ಕಾಣಿಸಿಕೊಳ್ಳುವರು. ಇವರ ಪಾಲುದಾರರು ಅವರ ಕಚೇರಿಯಲ್ಲಿ ಕೆಲಸಮಾಡುವವರೇ ಯಾರಾದರೂ ಆಗಬಹುದು ಎಂದು ಹೆಳಲಾಗುತ್ತದೆ. ನಿಮ್ಮ ಕಚೇರಿಯಲ್ಲಿರುವ ವ್ಯಕ್ತಿಯೇ ನಿಮ್ಮ ಸೌಂದರ್ಯದಿಂದ ಅಥವಾ ಯೋಜನೆಗಳಿಗೆ ಆಕರ್ಷಕರಾಗಬಹುದು. ಖಂಡಿತವಾಗಿಯೂ ನಿಮಗೆ ಕೆಲವೊಂದು ವಿಷಯದಲ್ಲಿ ನಿಮಗೂ ಮೆಚ್ಚುಗೆ ಆಗುವುದು. ಅಂತಿಮವಾಗಿ ಈ ಸಂಬಂಧವು ಅತ್ಯುತ್ತಮವಾಗಿರುತ್ತದೆ ಅಥವಾ ಯೋಗ್ಯವಾದದ್ದು ಎನಿಸಿಕೊಳ್ಳುವುದು. ಇನ್ನು ಈ ತಿಂಗಳು ಪ್ರೀತಿಯ ವಿಚಾರದಲ್ಲಿ ನೀವು ಅದೃಷ್ಟವಂತರು ಎಂದು ಹೇಳಬಹುದು. ಏಕೆಂದರೆ ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯು ಇತರರನ್ನು ಸೆಳೆಯುವ ಅಥವಾ ಆಕರ್ಷಿಸುವ ಶಕ್ತಿಯನ್ನು ಹೊಂದಿರುತ್ತವೆ. ವಿವಾಹಿತ ವ್ಯಕ್ತಿಗಳು ತಮ್ಮ ಸಂಸಾರದೊಂದಿಗೆ ವಿಹಾರ ಅಥವಾ ಮೋಜಿನ ಪ್ರವಾಸಕ್ಕೆ ಕರೆದೊಯ್ಯಲು ಉತ್ತಮ ಸಮಯವಾಗಿರುತ್ತದೆ. ಈ ರೀತಿಯ ಪರಿಯಿಂದ ನೀವು ಮಾನಸಿಕವಾಗಿ ಶಾಂತಿಯನ್ನು ಪಡೆದುಕೊಳ್ಳುವಿರಿ.

  ಸಿಂಹ

  ಸಿಂಹ

  ಇವರು ತಮ್ಮ ಸಂಬಂಧದಲ್ಲಿ ಯಾವುದೇ ಹಿಡಿತವನ್ನು ಹೊಂದಿರುವುದಿಲ್ಲ. ಏಕೆಂದರೆ ಇವರು ತಮ್ಮ ಪಾಲುದಾರರನ್ನು ನೋಯಿಸುವ ಕೆಲಸಕ್ಕೆ ಮುಂದಾಗುವುದಿಲ್ಲ. ನಿಮ್ಮ ಪ್ರೀತಿಯ ಬಗ್ಗೆ ನೀವೇ ನಿಮ್ಮ ಸಂಗಾತಿಗೆ ವ್ಯಕ್ತಪಡಿಸುವುದರಿಂದ ಅದು ಇನ್ನಷ್ಟು ಅರ್ಥಗರ್ಭಿತವಾಗಿರುತ್ತದೆ. ಆಗ ಇವರ ಸಂಬಂಧವು ಬಲಗೊಳ್ಳುವುದು. ಒಟ್ಟಿನಲ್ಲಿ ನಿಮಗೆ ನಿಮ್ಮ ಸಂಗಾತಿಯೊಂದಿಗೆ ಪರಿಪೂರ್ಣವಾದ ಸಮಯವನ್ನು ಕಳೆಯುವ ಸಮಯ. ನೀವು ಸಂಬಂಧಗಳನ್ನು ಗೌರವಿಸುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂಗಾತಿಯನ್ನು ಹುಡುಕಲು ಸಾಕಷ್ಟು ಸಾಮಾಜಿಕ ಸಂಪರ್ಕ ಹಾಗೂ ಸಂವಹನವನ್ನು ಪಡೆದುಕೊಳ್ಳುವಿರಿ. ಈಗಾಗಲೇ ಸಂಬಂಧದಲ್ಲಿ ಇರುವವರಿಗೆ ಪ್ರೀತಿಯು ಉತ್ತೇಜನಗೊಳ್ಳುವುದು. ನೀವು ನಿಮ್ಮ ಸಂಗಾತಿಯೊಂದಿಗೆ ನಿಷ್ಠಾವಂತರಾಗಿರಲು ಖಚಿತಪಡಿಸಿಕೊಳ್ಳಿ. ಮೂರನೆ ವ್ಯಕ್ತಿಯ ಹಸ್ತಕ್ಷೇಪವು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನಿಮ್ಮ ಪಾಲುದಾರರನ್ನು ನೀವು ರಕ್ಷಿಸಲು ಕಷ್ಟವಾಗಬಹುದು. ವಿವಾಹಿತರು ತಮ್ಮ ಪಾಲುದಾರರೊಂದಿಗೆ ವಿನೋದದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸರಿಯಾದ ಸಮಯ ಎಂದು ಹೇಳಲಾಗುತ್ತದೆ. ಶೀಘ್ರದಲ್ಲಿಯೇ ನೀವು ನಿಮ್ಮ ಪಾಲುದಾರರಿಂದ ಉತ್ತಮ ಸುದ್ದಿಯನ್ನು ಪಡೆಯುವ ಸಾಧ್ಯತೆಗಳಿವೆ.

  ಕನ್ಯಾ

  ಕನ್ಯಾ

  ಕನ್ಯಾರಾಶಿಗೆ ಇದೊಂದು ಉತ್ತಮವಾದ ಸಮಯ. ಇವರು ತಮ್ಮ ಸಂಬಂಧಗಳಲ್ಲಿ ತೊಡಗಿಕೊಳ್ಳಲು ಅವಕಾಶವನ್ನು ಎದುರುನೋಡುತ್ತಿರುತ್ತಾರೆ. ಸಂಬಂಧದಲ್ಲಿರುವ ಕೆಲವು ವಾಸ್ತವಿಕ ಅಂಶಗಳು ಇವರಿಗೆ ನಿರಾಶೆಯನ್ನು ಉಂಟುಮಾಡಬಹುದು. ನೀವು ನಿಮ್ಮ ಜೀವನದಲ್ಲಿ ಪ್ರಮುಖವಾದ ವ್ಯಕ್ತಿಗಳಿಗೆ ಸಾಕಷ್ಟು ಸಮಯವನ್ನು ನೀಡುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂಬಂಧದಲ್ಲಿ ಕಂಡುಕೊಳ್ಳುವ ಪರಸ್ಪರ ವಿನಿಮಯಗಳು ಅರ್ಥಪೂರ್ಣ ಸಂಪರ್ಕವನ್ನು ಅನುಮತಿಸುತ್ತದೆ.

  ಪ್ರೀತಿಯಲ್ಲಿ ಹುಚ್ಚರಾಗುವಂತೆ ಮಾಡುವ ಸಮಯವಿದು. ಉತ್ತಮ ಸಂಬಂಧವು ನಿಮ್ಮ ಕೈಗೂಡಿಬರುವುದು. ಪ್ರೀತಿಯ ವಿಚಾರದಲ್ಲಿ ಇಬ್ಬರು ಒಂದೇ ಭಾವನೆಯನ್ನು ತಳೆದಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ವೃತ್ತಿ ಜೀವನದ ಜೊತೆಗೆ ಪ್ರೀತಿ ಪಾತ್ರರಿಗೆ ಅಥವಾ ಸಂಗಾತಿಗೂ ಒಂದಿಷ್ಟು ಸಮಯವನ್ನು ಮೀಸಲಿಡಲು ನೀವು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳಬೇಕು. ಇದರಿಂದ ಭಾವನಾತ್ಮಕ ಬೆಂಬಲ ದೊರೆಯುವುದು. ಮಾನಸಿಕ ನೆಮ್ಮದಿ ದೊರೆಯುವುದು. ನಿಮ್ಮ ಪ್ರೀತಿಯನ್ನು ಸಂಗಾತಿಯನ್ನಾಗಿ ಪರಿವರ್ತಿಸಿ ಮನೆಗೆ ಕರೆತರುವುದರಿಂದ ಉತ್ತಮ ಜೀವನವನ್ನು ಕಾಣುವಿರಿ. ಸಂಬಂಧದ ವಿಚಾರ ಬಂದಾಗ ಆದಷ್ಟು ಹೃದಯದ ಮಾತಿಗೆ ಆದ್ಯತೆ ನೀಡಿದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ.

  ತುಲಾ

  ತುಲಾ

  ನೀವು ನಿಮ್ಮ ಸಂಬಂಧದಲ್ಲಿ ಏರಿಳಿತವನ್ನು ಅನುಭವಿಸುತ್ತಿದ್ದರೆ ಇದೀಗ ಮರು ಮೌಲ್ಯಮಾಪನ ಮಾಡುವ ಸಮಯ ಎನ್ನಲಾಗುತ್ತದೆ. ಸಂಬಂಧದಲ್ಲಿ ನಿಮಗಿದ್ದ ಮಾರ್ಗವು ಕುಂಠಿತಗೊಂಡಿದೆ. ಹಳೆಯ ವಿಧಾನವೇ ನಿಮಗೆ ಆಕರ್ಷಣೆಯನ್ನು ತಂದುಕೊಡುವುದು. ನಿಮ್ಮ ಸಂಗಾತಿಯ ಆಸಕ್ತಿಯನ್ನು ಜೀವಂತಗೊಳಿಸಲು ನೀವು ಪ್ರಯತ್ನಸಿದರೆ ಅದು ನಿಮಗೆ ಪುನರುಜ್ಜೀವನ ತಂದುಕೊಡುವ ಸಮಯವಾಗಿ ಪ್ರತಿಫಲಿಸುವುದು. ನಿಮ್ಮ ಪಾಲುದಾರರೊಂದಿಗೆ ಆದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ. ನೀವು ಕೆಲವು ವಿಚಾರವನ್ನು ನಿಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಅನುಚಿತ ಮಾರ್ಗದಿಂದ ಗಳಿಸಿದ ಹಣ ಶಾಶ್ವತವಾಗಿ ಇರದು. ಜೊತೆಗೆ ದೀರ್ಘಾವಧಿಯ ನಂತರ ಅದು ಹಾನಿಗೊಳಗಾಗುವಂತೆ ಮಾಡುವುದು. ವಿವಿಧ ಮೂಲಗಳಿಂದ ಹಣವನ್ನು ಪಡೆಯುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೂ ಅನಗತ್ಯ ಖರ್ಚುಗಳಿಂದ ಆದಷ್ಟು ದೂರ ಇರಬೇಕು. ವಿಶ್ವಾಸಾರ್ಹ ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮಗೆ ಸುಂದರವಾದ ಆದಾಯವನ್ನು ನೀಡುತ್ತದೆ. ಇತರರಿಗೆ ಸಾಲವಾಗಿ ನೀಡಿದ ಹಣವನ್ನು ನೀವು ಪುನಃ ಪಡೆದುಕೊಳ್ಳಲು ಕಷ್ಟವಾಗುವುದು. ಹಣವನ್ನು ಉಳಿತಾಯ ಮಾಡುವ ನಿಯಮಗಳನ್ನು ನೀವು ಅರಿತುಕೊಳ್ಳಬೇಕು. ಜೂನ್ 22ರ ನಂತರ ಆರ್ಥಿಕ ಸ್ಥಿತಿ ಇನ್ನಷ್ಟು ಬಲಗೊಳ್ಳುವುದು.

  ವೃಶ್ಚಿಕ

  ವೃಶ್ಚಿಕ

  ಗ್ರಹಗತಿಗಳ ಈ ಬದಲಾವಣೆಯು ನಿಮ್ಮ ಪ್ರೀತಿಪಾತ್ರರನ್ನು ಆಕರ್ಷಿಸಲು ಸಹಾಯಮಾಡುವುದು. ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ತೋರಿಸಬೇಕು. ಅವರು ನಿಮ್ಮ ಪ್ರಸ್ತಾಪವನ್ನು ತಿರಸ್ಕರಿಸಬಹುದು ಅಥವಾ ಸ್ವೀಕರಿಸಬಹುದು. ಇದರಿಂದಾಗಿ ಒಂದಿಷ್ಟು ವಿಚಾರವನ್ನು ನೀವು ಕಲಿಯುತ್ತೀರಿ. ಒಂದಿಷ್ಟು ಅಹ್ಲಾದಕರವಾದ ಸಮಯವನ್ನು ನೀವು ಅನುಭವಿಸುವಿರಿ. ನಿಮ್ಮ ಪ್ರೀತಿ ಪಾತ್ರರು ನಿಮ್ಮ ಪ್ರಸ್ತಾಪವನ್ನು ಸ್ವೀಕರಿಸಿದಲ್ಲಿ ಅದು ನಿಮ್ಮ ಜೀವನದ ಅತ್ಯಂತ ರೋಮಾಂಚಕಾರಿ ಸಂಬಂಧವಾಗಿರುತ್ತದೆ. ಅದಕ್ಕಾಗಿ ನೀವು ಸಿದ್ಧರಾಗಿರಬೇಕು. ಪ್ರೀತಿಯ ಜೀವನದಲ್ಲಿ ಅಥವಾ ಸಂಬಂಧಗಳಲ್ಲಿ ನೀವು ಒಂದಿಷ್ಟು ಬದ್ಧತೆಯನ್ನು ಹೊಂದಿರುವಿರಿ. ಗ್ರಹಗತಿಗಳ ಸಹಕಾರ ಅಷ್ಟಾಗಿ ಅನುಕೂಲಕರವಾಗಿರದೆ ಇರುವುದರಿಂದ ಸಂಗಾತಿಯೊಂದಿಗೆ ನಿರಾಶೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ನಡುವೆ ತುಸು ವೈಮನಸ್ಸು ಅಥವಾ ಕಹಿಯಾದ ಸ್ಥಿತಿ ಉಂಟಾಗಬಹುದು. ನಿಮ್ಮ ನಡವಳಿಕೆಯು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇಬ್ಬರಿಂದಲೂ ನಕಾರಾತ್ಮಕ ವರ್ತನೆ ಇರುವುದರಿಂದ ಕೊಂಚ ಬೇಸರ ಉಂಟಾಗಬಹುದು. ನಿಮ್ಮ ಭಾವನೆಗಳನ್ನು ಸ್ವಲ್ಪ ನಿಯಂತ್ರಣದಲ್ಲಿ ಇಡಬೇಕು. ಸಂದರ್ಭಗಳನ್ನು ಅರಿತು ನಡೆಯುವುದನ್ನು ಅರಿಯಬೇಕಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಒಂದಿಷ್ಟು ಸಮಯ ನೀಡುವುದು ಉತ್ತಮ. ಪ್ರೀತಿಯ ಕುರಿತು ವ್ಯವಹರಿಸುವಾಗ ವಿವಿಧ ದೃಷ್ಟಿಕೋನಗಳಿಂದ ಚಿಂತಿಸುವುದು ಸೂಕ್ತ.

  ಧನು

  ಧನು

  ಈ ಹಂತವು ಇವರ ಜೀವನದಲ್ಲಿ ಅಥವಾ ಸಂಬಂಧದಲ್ಲಿ ಪರೋಕ್ಷವಾದ ಬದಲಾವಣೆಯನ್ನು ತರುವುದು. ಇದರ ಅರ್ಥ ನಿಮ್ಮ ಹಣಕಾಸಿನ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ಭಾರೀ ಬದಲಾವಣೆ ಉಂಟಾಗುತ್ತದೆ ಎಂದು ಹೇಳಲಾಗುವುದು. ಈ ಎಲ್ಲಾ ವಿಚಾರಗಳು ನಿಮ್ಮ ಸಂಬಂಧಗಳ ಮೇಲೆ ಗಂಭೀರವಾದ ಪರಿಣಾಮ ಬೀರುವುದು. ನೀವು ಪ್ರಸ್ತುತ ಪಾಲುದಾರರಿಂದ ನಿರಾಸಕ್ತರಾಗಬಹುದು. ನಿಮ ಹೊಸ ಸಾಮಾಜಿಕ ವಲಯದಲ್ಲಿ ಹೊಸಬರನ್ನು ಹುಡುಕಲು ಪ್ರಯತ್ನಿಸಬಹುದು. ಸಾಧ್ಯವಾದಷ್ಟು ಪ್ರಾಮಾಣಿಕರಾಗಿರಲು ಪ್ರಯತ್ನಿಸಿ. ಇದರಿಂದ ಜೀವನವು ಸಂತೋಷದಿಂದ ಕೂಡಿರುತ್ತದೆ. ಈ ತಿಂಗಳು ನಿಮ್ಮ ಪ್ರೀತಿಯ ಜೀವನ ನೀವು ನಿರೀಕ್ಷಿಸುತ್ತಿರುವುದನ್ನು ಸ್ವಲ್ಪ ವಿಭಿನ್ನವಾಗಿ ಹೋಗುತ್ತದೆ. ನೀವು ಸ್ವಯಂ ಅನ್ವೇಷಣೆ ಪ್ರಯಾಣವನ್ನು ಮುಂದುವರಿಸುವುದು ಹಾಗೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚೆಂದು ಹೇಳಬಹುದು. ಪಾಲುದಾರರೊಂದಿಗೆ ಉತ್ತಮ ಸಹಕಾರ ಹಾಗೂ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕು. ತೆಗೆದುಕೊಳ್ಳುವ ನಿರ್ಧಾರ ಸೂಕ್ತವಾಗಿದೆಯೇ ಎಂದು ಸೂಕ್ತ ರೀತಿಯಲ್ಲಿ ಚಿಂತಿಸಿ. ವಿವಾಹಿತರಾಗಿದ್ದರೆ ಈ ತಿಂಗಳು ನ್ಯಾಯೋಚಿತ ಪಾಲುದಾರಿಕೆಯನ್ನು

  ಹೊಂದುವಿರಿ. ಈ ತಿಂಗಳು ನಿಮ್ಮ ಜೀವನ ಉತ್ತಮವಾಗಿರಲು ನೀವು ನೆನಪಿಟ್ಟುಕೊಳ್ಳಬೇಕಾದ ಎರಡು ವಿಚಾರವೆಂದರೆ ತಾಳ್ಮೆ ಮತ್ತು ಸಂಯಮ.

  ಮಕರ

  ಮಕರ

  ಇವರು ಪ್ರತಿಯೊಂದು ಚಿಕ್ಕಪುಟ್ಟ ವಿಚಾರಕ್ಕೂ ಸಂಗಾತಿಯನ್ನು ಅವಲಂಭಿಸಿರುತ್ತಾರೆ. ಇದೀಗ ನಿಮ್ಮ ಸ್ವಂತ ಭಾವನೆ ಹಾಗೂ ಕೆಲಸಗಳನ್ನು ತೋರಿಸಲು ಸೂಕ್ತವಾದ ಸಮಯವಾಗಿರುತ್ತದೆ. ಯಾರೋ ಮೂರನೆ ವ್ಯಕ್ತಿಯ ಪ್ರಭಾವದಿಂದ ಹಾಳಾಗದಿರಿ. ನೀವು ಒಬ್ಬ ಮೋಸಗಾರ ಪಾಲುದಾರನನ್ನು ಹೊಂದಿದ್ದರೆ ಅವರ ಸಂಬಂಧವನ್ನು ಅಂತ್ಯಗೊಳಿಸಲು ಇದು ಸೂಕ್ತ ಸಮಯ. ಅಲ್ಲದೆ ಅದು ಉತ್ತಮ ನಿರ್ಧಾರವಾಗಿರುತ್ತದೆ. ನಿಮಗೆ ಬೇಕಾದ ಸಂಬಂಧವನ್ನು ಪಡೆದುಕೊಳ್ಳುವುದರಿಂದ ನಿಮ್ಮ ಆತ್ಮವಿಶ್ವಾಸವು ಹೆಚ್ಚುವುದು.

  ಕುಂಭ

  ಕುಂಭ

  ನೀವು ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರೆ ಅದರಿಂದ ಸ್ವಲ್ಪ ಕಾಲ ದೂರ ಉಳಿಯಲು ಅನುಮತಿಸುವ ಸಮಯ ಇದು. ಇವರು ಸೃಜನಶೀಲ ಹಾಗೂ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ಕಾಣಲು ಬಯಸುವ ನೀವು ಸಂಬಂಧಗಳ ಬಗ್ಗೆ ಸಾಕಷ್ಟು ಪ್ರೀತಿಯನ್ನು ಪಡೆಯಬಹುದು. ಕೆಲಸದಲ್ಲಿ ಹೆಚ್ಚು ಆಸಕ್ತರಾಗಿರುವುದರಿಂದ ಒಂದಿಷ್ಟು ಪ್ರೋತ್ಸಾಹ ಹಾಗೂ ಶ್ಲಾಘನೆಗಳು ದೊರೆಯುತ್ತವೆ. ಬದ್ಧತೆ ಹಾಗೂ ಕಡುಬಯಕೆಯನ್ನು ಈಡೇರಿಸಿಕೊಳ್ಳಲು ಸಮಯ ಸಾತ್ ನೀಡುತ್ತದೆ. ನೀವು ಸಹಜತೆಯಿಂದಲೇ ಸಂಬಂಧದಲ್ಲಿ ತೊಡಗಿಕೊಳ್ಳುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

  ಮೀನ

  ಮೀನ

  ಸುತ್ತಲಿನ ಪರಿಸರದಿಂದ ಉಂಟಾಗುತ್ತಿರುವ ಒತ್ತಡವನ್ನು ಇದೀಗ ನಿಯಂತ್ರಿಸಬೇಕು. ನಿಮ್ಮ ಸಂಬಂಧ ಅಥವಾ ಸಂಗಾತಿಗಾಗಿ ಒಂದಿಷ್ಟು ಸಮಯವನ್ನು ಕೊಡಬೇಕಾಗುವುದು. ನೀವು ಏನು ಮಾಡಬಲ್ಲಿರಿ? ಎನ್ನುವುದನ್ನು ಅತಿಶಯೋಕ್ತಿಯ ರೀತಿಯಲ್ಲಿ ತೋರಿಸದಿರಿ. ಅದು ನಿಮ್ಮ ಸಾಮಥ್ರ್ಯದಲ್ಲಿರುವ ಕೆಲವು ದೋಷಗಳನ್ನು ತೋರಿಸುವುದು. ಹೊಸ ಸಂಬಂಧವನ್ನು ಹೊಂದಿದ್ದರೆ ಅಲ್ಲಿಯೂ ನಿಮ್ಮ ಸಾಮಥ್ರ್ಯದ ಬಗ್ಗೆ ಉತ್ಪ್ರೇಕ್ಷೆಮಾಡದಿರಿ. ಸಂಬಂಧದಲ್ಲಿ ಪ್ರಾಮಾಣಿಕತೆ ಅತಿ ಮುಖ್ಯ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

  English summary

  How Mercury & Uranus Will Create A Major Change In Love Life

  According to astrologers, this position will bring about a huge change in your love life. Usually, this position brings out the good characters of each planets but may work otherwise as well. Want to know how this sextile will affect your love life? Read on to know more.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more