For Quick Alerts
ALLOW NOTIFICATIONS  
For Daily Alerts

ರಾಶಿಚಕ್ರಗಳ ಮೇಲೆ ಚಂದ್ರನ ಮೋಡಿ ಹೇಗಿದೆ ನೋಡಿ

By Divya Pandith
|

ಖಗೋಳದಲ್ಲಿರುವ ಚಂದ್ರನು ನಮ್ಮ ಭವಿಷ್ಯದ ಮೇಲೆ ಬಹಳ ಪ್ರಭಾವ ಬೀರುತ್ತಾನೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಆದರೆ ಅದು ನಿಜ. ನಮ್ಮ ಜಾತಕದಲ್ಲಿ ಗ್ರಹಗಳ ಪ್ರಭಾವ ಹೇಗಿದೆ ಎನ್ನುವುದರ ಆಧಾರದ ಮೇಲೆಯೇ ಭವಿಷ್ಯ ನಿರ್ಧರಿತವಾಗುತ್ತದೆ. ಅದರಲ್ಲೂ ಚಂದ್ರನ ಪ್ರಭಾವವನ್ನು ಬಹಳ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ವ್ಯಕ್ತಿ ಹುಟ್ಟಿದ ಸಮಯದಲ್ಲಿ ಚಂದ್ರನ ಪ್ರಭಾವ ಹೇಗಿದೆ ಎನ್ನುವುದರ ಆಧಾರದ ಮೇಲೆಯೇ ಜೀವನದ ಪ್ರಮುಖ ಭವಿಷ್ಯ ನಿರ್ಧಾರವಾಗುತ್ತದೆ. ಚಂದ್ರನ ಪ್ರಭಾವದಿಂದಲೇ ನಮ್ಮ ಭಾವನೆ ಹಾಗೂ ಆಸೆಗಳು ಹೇಗಿರುತ್ತವೆ ಎನ್ನುವುದನ್ನು ಹೇಳಲಾಗುವುದು.

ಒಂದೇ ರಾಶಿಚಕ್ರದ ಚಿಹ್ನೆಯ ಜನರು ವಿವಿಧ ಬಗೆಯ ಚಂದ್ರನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಸೂರ್ಯನ ಚಿಹ್ನೆಯಿಂದ ಎಷ್ಟು ಬಲವಾದ ಗುಣಲಕ್ಷಣಗಳನ್ನು ಹೊಂದಿದ್ದೀರಿ ಎನ್ನುವುದನ್ನು ಚಂದ್ರನ ಚಿಹ್ನೆ ನಿರ್ಧರಿಸುತ್ತದೆ. ಅಲ್ಲದೆ ಬೇರೊಬ್ಬ ವ್ಯಕ್ತಿಯೊಂದಿಗೆ ನೀವು ಸಂವಹನ ನಡೆಸುವಾಗ ನಿಮ್ಮ ಹಾವ-ಭಾವ ಹೇಗಿರುತ್ತದೆ? ಆ ಸಂವಹನವು ಎಷ್ಟು ಪ್ರಭಾವ ಬೀರುವುದು ಎನ್ನುವುದನ್ನು ಸಹ ಚಂದ್ರನ ಚಿಹ್ನೆ ತೆರೆದಿಡುವುದು.

ಹುಟ್ಟಿದ ಸಮಯದಿಂದ ಚಂದ್ರನ ಪ್ರಭಾವ ಒಂದು ಬಗೆಯಲ್ಲಿದ್ದರೆ, ಪ್ರತಿಯೊಂದು ರಾಶಿಚಕ್ರದ ಮೇಲೂ ಚಂದ್ರನ ಪ್ರಭಾವ ವಿಭಿನ್ನವಾಗಿರುತ್ತದೆ. ನಿಮ್ಮ ರಾಶಿಚಕ್ರದ ಆಧಾರದ ಮೇಲೆ ಯಾವ ಬಗೆಯ ಚಂದ್ರನ ಪ್ರಭಾವವನ್ನು ಹೊಂದಿದ್ದೀರಿ? ಅದರ ಪರಿಣಾಮ ಏನು? ಎನ್ನುವುದನ್ನು ತಿಳಿಸುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಯುದ್ಧ ಮತ್ತು ಆಕ್ರಮಣಕಾರಿ ವಿಚಾರಕ್ಕೆ ಹೆಸರಾದ ಮಂಗಳ ಗ್ರಹವು ಮೇಷ ರಾಶಿಯನ್ನು ಆಳುತ್ತದೆ. ಮೇಷರಾಶಿಯ ಮೇಲೆ ಚಂದ್ರನ ಪ್ರಭಾವದಿಂದ ವ್ಯಕ್ತಿಯು ಮೂಡಿ ಹಾಗೂ ಸುಲಭವಾಗಿ ನಿರಾಶೆಗೆ ಒಳಗಾಗುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಕೋಪಗೊಂಡಾಗ ಬಹಳಷ್ಟು ಹಾನಿಯನ್ನುಂಟು ಮಾಡುತ್ತಾರೆ. ಇವರು ತಮ್ಮದೇ ಆದ ಬಲವಾದ ಭಾವನೆಯನ್ನು ಹೊಂದಿರುತ್ತಾರೆ. ಚಂದ್ರನ ಪ್ರಭಾವದಿಂದ ಇವರು ಕ್ರಿಯಾಶೀಲ ವ್ಯಕ್ತಿಗಳಾಗಿರುತ್ತಾರೆ. ಜೊತೆಗೆ ಸಂಬಂಧದಲ್ಲಿ ಇವರು ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುತ್ತಾರೆ. ನಿರ್ಬಂಧದ ಭಾವನೆಗಳನ್ನು ಇಷ್ಟಪಡುವುದಿಲ್ಲ.

ವೃಷಭ

ವೃಷಭ

ಚಂದ್ರನ ಪ್ರಭಾವದಿಂದ ವೃಷಭ ರಾಶಿಯ ವ್ಯಕ್ತಿಗಳು ಅತ್ಯುತ್ತಮ ವ್ಯಕ್ತಿಗಳಾಗಿರುತ್ತಾರೆ. ಇವರು ಜೀವನದ ಗುಣಮಟ್ಟವನ್ನು ಪ್ರಶಂಸಿಸುತ್ತಾರೆ. ಬಾಹ್ಯ ಆಕರ್ಷಣೆಯಿಂದ ದೂರ ಇರಲು ಬಯಸುವ ಇವರು ಭದ್ರತೆಯನ್ನು ಬಯಸುತ್ತಾರೆ. ಯಾವುದೇ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಅಲ್ಲಿ ಸಾಕಷ್ಟು ಶ್ರಮದಾಯಕವಾಗಿ ದುಡಿದು ತೋರಿಸುವರು. ಐಷಾರಾಮಿ ಜೀವನವನ್ನು ಬಯಸುವ ಇವರು ಸಂಬಂಧದ ವಿಚಾರಕ್ಕೆ ಬಂದಾಗ ತಮ್ಮವರಿಗಾಗಿ ಏನುಬೇಕಾದರೂ ಮಾಡುತ್ತಾರೆ.

ಮಿಥುನ

ಮಿಥುನ

ಚಂದ್ರನ ಪ್ರಭಾವದಿಂದ ಈ ರಾಶಿಯ ವ್ಯಕ್ತಿಗಳು ಹೆಚ್ಚು ಸಾಮಾಜಿಕವಾಗಿರಲು ಹಾಗೂ ಮಾತನಾಡಲು ಬಯಸುತ್ತಾರೆ. ಇವರು ಸಭೆ ಸಮಾರಂಭಗಳಲ್ಲಿ ಸಮಯ ಕಳೆಯಲು ಇಷ್ಟಪಡುವರು. ಅಭೂತಪೂರ್ವ ಶಕ್ತಿಯನ್ನು ಹೊಂದಿರುವ ಈ ವ್ಯಕ್ತಿಗಳು ಅದನ್ನು ತಮ್ಮ ಕೊನೆಯ ಉಸಿರು ಇರುವರವರೆಗೂ ಕಾಯ್ದುಕೊಳ್ಳುತ್ತಾರೆ. ಉಲ್ಲಾಸಕರವಾದ ಹಾಗೂ ಹಾಸ್ಯಮಯವಾದ ಇವರ ಪ್ರವೃತ್ತಿ ನೈಸರ್ಗಿಕವಾಗಿಯೇ ಬಂದಿರುತ್ತದೆ. ಬುಧ ನಿಂದ ಆಳಲ್ಪಡುವ ಈ ಚಿಹ್ನೆಯ ವ್ಯಕ್ತಿಗಳು ತಮ್ಮ ಪಾಲುದಾರರು ಅಥವಾ ಸಂಗಾತಿಯಾಗುವವರು ತಮ್ಮನ್ನು ಹಂಬಲಿಸಬೇಕು ಎಂದು ಬಯಸುತ್ತಾರೆ. ಭಾವನೆಗಳ ವಿಚಾರಕ್ಕೆ ಬಂದಾಗ ಇವರು ಚಂಚಲ ಮನಸ್ಸಿನವರು ಎಂದು ಹೇಳಲಾಗುವುದು.

ಕರ್ಕ

ಕರ್ಕ

ಚಂದ್ರನ ಪ್ರಭಾವದಿಂದ ಕರ್ಕ ರಾಶಿಯವರು ಆರಾಮದಾಯಕ ಜೀವನವನ್ನು ಪ್ರೀತಿಸುತ್ತಾರೆ. ಇವರು ಬಹಳ ಭಾವನಾತ್ಮಕ ವ್ಯಕ್ತಿಗಳು ಎಂದು ಹೇಳಬಹುದು. ಸ್ನೇಹ ಶೀಲರು ಹಾಗೂ ಬಂಧು ಮಿತ್ರೊಡನೆ ಸುಲಭವಾಗಿ ಬೆರೆಯುವರು. ಆಯ್ದ ಹಾಗೂ ರುಚಿಕರ ಆಹಾರವನ್ನು ಸೇವಿಸಲು ಇಷ್ಟ ಪಡುವ ಇವರು ಚಲನ ಚಿತ್ರಗಳ ವೀಕ್ಷಣೆಯನ್ನು ಆನಂದಿಸುವರು.

ಸಿಂಹ

ಸಿಂಹ

ಈ ರಾಶಿಯವರು ಅತ್ಯುತ್ತಮ ನಟನೆಯನ್ನು ಮಾಡುತ್ತಾರೆ. ತಮ್ಮ ಜೀವನದಲ್ಲೂ ಕೆಲವೊಮ್ಮೆ ನಾಟಕೀಯ ಪ್ರವೃತ್ತಿಯನ್ನು ತೋರುತ್ತಾರೆ. ಜೀವನದಲ್ಲಿ ನಿಕಟವರ್ತಿಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಇವರು ಬಹಳ ಹೆಮ್ಮೆ ಮತ್ತು ಭರವಸೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮನ್ನು ತಾವು ಹೆಚ್ಚು ಪ್ರೀತಿಸುವ ಇವರು ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಇವರು ತಾವು ಇಷ್ಟಪಡುವ ವ್ಯಕ್ತಿಗಳು ಅಧಿಕಾರಕ್ಕೆ ಬರಬೇಕೆಂದು ಬಯಸುತ್ತಾರೆ.

ಕನ್ಯಾ

ಕನ್ಯಾ

ಚಂದ್ರನ ಪ್ರಭಾವದಿಂದ ಕನ್ಯಾರಾಶಿಯ ವ್ಯಕ್ತಿಗಳು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಸ್ಥಿರವಾದ ಗುಣವನ್ನು ಹೊಂದಿರುವ ಇವರು ಸ್ನೇಹಪರರು ಹಾಗೂ ಉತ್ತಮ ಸಹಾಯಕರಾಗಿ ನಿಲ್ಲುತ್ತಾರೆ. ಇವರು ಯಾವುದೇ ವಿಚಾರದ ಕುರಿತಾದರೂ ಬಹಳ ಸುಲಭವಾಗಿ ಹಾಗೂ ಆಕರ್ಷಕವಾಗಿ ಮಾತನಾಡಬಲ್ಲರು. ಇವರು ಸದಾ ಪರಿಶ್ರಮದಿಂದ ಕೆಲಸ ಮಾಡಲು ಮುಂದಾಗುತ್ತಾರೆ. ಬುಧನ ಆಳ್ವಿಕೆಗೆ ಒಗಗಾಗುವ ಇವರು ನಿಖರವಾದ ಮಾರ್ಗದಲ್ಲಿ ಚಲಿಸುವರು.

ತುಲಾ

ತುಲಾ

ಚಂದ್ರನ ಪ್ರಭಾವದಿಂದ ಈ ರಾಶಿಯ ವ್ಯಕ್ತಿಗಳು ಸಾಮರಸ್ಯವನ್ನು ಪ್ರೀತಿಸುತ್ತಾರೆ. ಜೀವನದಲ್ಲಿ ಅವ್ಯವಸ್ಥೆಯಿಂದ ದೂರ ಉಳಿಯುತ್ತಾರೆ. ಸದಾ ಸಮತೋಲನದ ಜೀವನವನ್ನು ನಡೆಸುವರು. ತಮ್ಮ ಪಾಲುದಾರರಲ್ಲೂ ಇದೇ ಗುಣವನ್ನು ಕಾಣಲು ಬಯಸುವರು. ಸಮತೋಲನದ ಈ ಪ್ರಚೋದನೆಯು ಅವರನ್ನು ಬಹಳ ರಾಜತಾಂತ್ರಿಕವಾಗಿ ಮಾಡುತ್ತದೆ. ಇವರು ತಮ್ಮ ಜೀವನದ ಎಲ್ಲಾ ಅಂಶಗಳಿಗೂ ನ್ಯಾಯೋಚಿತವಾಗಿರಲು ಬಯಸುತ್ತಾರೆ. ನಿಷ್ಪಕ್ಷಪಾತ ಹಾಗೂ ತಟಸ್ಥ ಗುಣವನ್ನು ತೋರುತ್ತಾರೆ. ಶುಕ್ರನ ಆಳ್ವಿಕೆಗೆ ಒಳಗಾಗುವ ಇವರು ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವರು.

ವೃಶ್ಚಿಕ

ವೃಶ್ಚಿಕ

ಚಂದ್ರನ ಪ್ರಭಾವದಿಂದ ಈ ರಾಶಿಯವರು ತೀವ್ರತೆ ಮತ್ತು ಉತ್ಸಾಹವನ್ನು ವ್ಯಕ್ತಪಡಿಸುತ್ತಾರೆ. ಅವರು ಏನುಬೇಕಾದರೂ ಪಡೆಯಲು ಪ್ರಯತ್ನಿಸುವರು. ಸಂಬಂಧಗಳಲ್ಲಿ ಅಥವಾ ಪಾಲುದಾರರಲ್ಲಿ ಬಲವಾದ ಲೈಂಗಿಕ ಪ್ರಚೋದನೆಯನ್ನು ಬಯಸುತ್ತಾರೆ. ಭದ್ರತೆ ಎನ್ನುವುದು ಇವರಿಗೆ ಅತ್ಯಂತ ದೊಡ್ಡ ವ್ಯವಹಾರದಂತೆ ತೋರುವುದು. ತಮ್ಮ ಭಾವನೆಯನ್ನು ವ್ಯಕ್ತಪಡಿಸುವಾಗ ಇವರು ಸದಾ ನಾಚಿಕೆಯನ್ನು ವ್ಯಕ್ತಪಡಿಸುತ್ತಾರೆ. ಇವರಿಗೆ ದೊಡ್ಡ ಸಮಸ್ಯೆ ಎಂದರೆ ಸಂವಹನ ಕೌಶಲ್ಯ ಇಲ್ಲದಿರುವುದು.

ಧನು

ಧನು

ಚಂದ್ರನ ಪ್ರಭಾವದಿಂದ ಈ ರಾಶಿಚಕ್ರದವರು ಆಕಾಶದಷ್ಟು ಅಗಲವಾದ ಮಿತಿಯನ್ನು ಬಯಸುವರು. ಆಶಾವಾದಿಗಳಾದ ಇವರು ಕೆಟ್ಟ ಸಂದರ್ಭದಲ್ಲೂ ಸಹ ಒಳ್ಳೆಯದನ್ನು ಕಾಣಲು ಬಯಸುತ್ತಾರೆ. ಸ್ವಾತಂತ್ರ್ಯವನ್ನು ಬಯಸುವ ಇವರು ಗಡಿಯನ್ನು ಹಾಕಿಕೊಳ್ಳುವುದನ್ನು ದ್ವೇಷಿಸುವರು. ಸಂಬಂಧಗಳಿಗೆ ಬೆಲೆ ಹಾಗೂ ಪ್ರೀತಿಯನ್ನು ಎರೆಯುವರು. ಗುರು ಗ್ರಹದಿಂದ ಆಳ್ವಿಕೆಗೆ ಒಳಗಾಗುವ ಇವರು ಬುದ್ಧಿವಂತಿಕೆ ಮತ್ತು ಸತ್ಯವನ್ನು ಹಂಬಲಿಸುವರು.

ಮಕರ

ಮಕರ

ಚಂದ್ರನ ಪ್ರಭಾವದಿಂದ ಮಕರ ರಾಶಿಯವರು ಉತ್ತಮ ವ್ಯಾಪಾರ ಗುಣವನ್ನು ಹೊಂದಿರುವರು. ಮಹತ್ವಾಕಾಂಕ್ಷಿಗಳಾದ ಇವರು ಶಿಸ್ತಿಗೆ ಹೆಚ್ಚಿನ ಒತ್ತನ್ನು ನೀಡುವರು. ತಮ್ಮ ಗುರಿಯನ್ನು ಸಾಧಿಸಲು ಬಯಸುವ ಇವರು ಯಶಸ್ಸನ್ನು ಸಹ ಬಹಳ ಸುಲಭವಾಗಿ ಆನಂದಿಸುವರು. ಇವರು ಇತರರ ಅಪೇಕ್ಷೆಯಂತೆಯೇ ಜವಾಬ್ದಾರಿಯನ್ನು ನಿರ್ವಹಿಸುವರು. ತಮ್ಮದೇ ಆದ ಚಿಂತನೆ ಹಾಗೂ ಅಧ್ಯಯನವನ್ನು ನಡೆಸುವರು.

ಕುಂಭ

ಕುಂಭ

ಚಂದ್ರನ ಪ್ರಭಾವದಿಂದ ಈ ರಾಶಿಯವರು ಉತ್ತಮ ಸಂಶೋಧಕರಾಗಿರುತ್ತಾರೆ. ಜೀವನದಲ್ಲಿ ಯಶಸ್ಸು ಹಾಗೂ ಗುರಿಯನ್ನು ತಲುಪಲು ಹಂತಹಂತವಾದ ಯೋಜನೆಯನ್ನು ಕೈಗೊಳ್ಳುವರು. ಈ ವಿಶಿಷ್ಟತೆಯು ಇವರ ಭಾವನೆಯಲ್ಲಿ ಸದಾ ಕುಳಿತಿರುತ್ತದೆ. ಕೆಲವೊಮ್ಮೆ ಕಲ್ಪನೆಯ ಲೋಕದಲ್ಲೂ ಇವರು ಮುಳುಗುವ ಸಾಧ್ಯತೆಗಳಿರುತ್ತವೆ. ಇವರು ಸಾಹಸಗಳನ್ನು ಪ್ರೀತಿಸುವ ಕ್ರಿಯಾಶೀಲ ವ್ಯಕ್ತಿಗಳೂ ಹೌದು.

ಮೀನ

ಮೀನ

ಚಂದ್ರನ ಪ್ರಭಾವದಿಂದ ಈ ರಾಶಿಯ ವ್ಯಕ್ತಿಗಳು ಭಾವನೆಗಳ ಪರದೆಯನ್ನು ಹೊಂದಿರುತ್ತಾರೆ. ಇವರು ನಿಗೂಢವಾದ ಸಂವೇದನಾಶೀಲರು ಎನ್ನಬಹುದು. ಅತ್ಯಂತ ಸೃಜನಾತ್ಮಕ ಗುಣದವರಾದ ಇವರು ಹಗಲು ಕನಸನ್ನು ಕಾಣುತ್ತಾರೆ. ಇವರು ಭಾವನೆಗಳಿಗೆ ಪ್ರಧಾನತೆಯನ್ನು ನೀಡುತ್ತಾರೆ. ಇವರಿಗೆ ಜೀವನವು ಒಂದು ರಂಗಮಂದಿರ ಹಾಗೂ ಪ್ರತಿಯೊಂದರಲ್ಲೂ ಒಂದಷ್ಟು ನಾಟಕವನ್ನು ಮಾಡಲು ಇಷ್ಟಪಡುವರು. ಸಹಾನುಭೂತಿ ಮತ್ತು ನಿಸ್ವಾರ್ಥ ವ್ಯಕ್ತಿಗಳಾಗಿರುತ್ತಾರೆ.

English summary

How is Your Moon Sign Is and How It Affects Your Zodiac

Moon signs are a great way of determining how emotionally compatible you are with someone else. Let's take a look at what the different moon signs mean and how they affect your zodiac sign. Read on to find out what each moon sign means, and figure out what your moon sign is.
Story first published: Wednesday, June 6, 2018, 15:04 [IST]
X
Desktop Bottom Promotion