For Quick Alerts
ALLOW NOTIFICATIONS  
For Daily Alerts

  ಪ್ರತೀ ರಾಶಿಚಕ್ರದವರು ಯಶಸ್ಸು ಪಡೆದುಕೊಳ್ಳುವುದು ಹೇಗೆ?

  By Deepu
  |

  ಜೀವನದಲ್ಲಿ ಪ್ರತಿಯೊಬ್ಬರಿಗೂ ಯಶಸ್ವಿಯಾಗುವಂತಹ ಅವಕಾಶಗಳು ಬಂದೇ ಬರುತ್ತದೆ. ಕೆಲವರು ಇದನ್ನು ಬಳಸಿಕೊಂಡು ಯಶಸ್ಸಿನ ಉನ್ನತ ಶಿಖರಕ್ಕೇರಿದರೆ, ಇನ್ನು ಕೆಲವರು ತಮಗೆ ಅವಕಾಶವೇ ಸಿಕ್ಕಿಲ್ಲವೆಂದು ತಮ್ಮ ಅದೃಷ್ಟಕ್ಕೆ ಬೈದುಕೊಳ್ಳುತ್ತಾ ಇರುವರು. ಆದರೆ ಯಶಸ್ಸು ಎನ್ನುವುದು ನಿಮ್ಮ ರಾಶಿಚಕ್ರವನ್ನು ಅವಲಂಬಿಸಿದೆ ಎಂದು ಜೋತಿಷ್ಯವು ಹೇಳುತ್ತದೆ. 

  ತುಲಾ ರಾಶಿಯವರು ಜೀವನದಲ್ಲಿ ಹೆಚ್ಚಿನ ಯಶಸ್ಸು ಪಡೆದುಕೊಳ್ಳುವರು. ಇದಕ್ಕೆ ಕಾರಣ ಅವರಲ್ಲಿ ಇರುವಂತಹ ಸಾಮಾಜಿಕವಾಗಿ ಬೆರೆತುಕೊಳ್ಳುವ ಸಾಮರ್ಥ್ಯ. ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ಸು ಪಡೆಯಲು ತನ್ನದೇ ಆಗಿರುವಂತಹ ದಾರಿಗಳಿವೆ. ಈ ಲೇಖನದಲ್ಲಿ ನಿಮಗೆ ಇದರ ಬಗ್ಗೆ ತಿಳಿಸಿಕೊಡಲಿದ್ದೇವೆ. ಸ್ಕ್ರೋಲ್ ಡೌನ್ ಮಾಡುತ್ತಾ ಸಾಗಿ.....

  ಮೇಷ: ಮಾರ್ಚ್ 21- ಎ.19

  ಮೇಷ: ಮಾರ್ಚ್ 21- ಎ.19

  ಮೇಷ ರಾಶಿಯವರು ಬೇರೆ ಯಾರೂ ತೆಗೆದುಕೊಳ್ಳದೆ ಇರುವ ಅಪಾಯವನ್ನು ಎದುರಿಸಲು ತಯಾರಾಗಿರುವಂತಹ ವ್ಯಕ್ತಿತ್ವದವರು. ಹೂಡಿಕೆದಾರರು, ಜೂಜುಕೋರರು ಮತ್ತು ಉದ್ಯಮಿಯಾಗಿ ಇರುವ ತುಂಬಾ ಕೆಟ್ಟವರು. ಇವರ ಸಾಹಸಿ ಪ್ರವೃತ್ತಿಯಿಂದಾಗಿ ಇವರು ಅಪಾಯ ಎದುರಿಸಿ, ಬೇರೆ ಯಾರು ಪಡೆಯದೇ ಇರುವಂತಹ ಯಶಸ್ಸು ಪಡೆಯಬಹುದು. ಬೇರೆಯವರು ಹೂಡಿಕೆ ಮಾಡಲು ಭೀತಿ ಪಡುವಂತಹ ವಿಚಾರದಲ್ಲಿ ಇವರು ಹೂಡಿಕೆ ಮಾಡುವರು. ಇನ್ನು ಈ ರಾಶಿಯವರು ಈ ರಾಶಿಯವರು ಉತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಮಾತಿನ ಕಲೆ, ಆತ್ಮವಿಶ್ವಾಸ ಮತ್ತು ಹಠಾತ್ ಆಗಿ ನಿರ್ಧಾರಕ್ಕೆ ಬರುವ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಕೆಲಸವೆಂದರೆ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಕಾಮಗಾರಿ ವೃತ್ತಿ, ಹೊಟೇಲ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವು ಸೂಕ್ತವಾಗಿರುವುದು.

  ಮೇಷ: ಮಾರ್ಚ್ 21- ಎ.19ವೃಷಭ: ಎಪ್ರಿಲ್ 20-ಮೇ 20

  ಮೇಷ: ಮಾರ್ಚ್ 21- ಎ.19ವೃಷಭ: ಎಪ್ರಿಲ್ 20-ಮೇ 20

  ಬೇರೆ ಯಾರು ಕೂಡ ಯೋಚಿಸದೆ ಇರುವಂತಹ ವಿಚಾರದ ಕಡೆಗೆ ವೃಷಭ ರಾಶಿಯವರು ಗಮನಹರಿಸುವರು. ಇವರು ಏಕಾಂಗಿಯಾಗಿಯೇ ತಮ್ಮ ಕೆಲಸ ಮಾಡಿಕೊಳ್ಳುವರು ಮತ್ತು ಅವರಿಗೆ ಬೆಂಬಲಕ್ಕೆ ಬೇರೆ ಜನರು ಬೇಕಿರುವುದಿಲ್ಲ. ಏನಾದರೂ ಮಾಡಬೇಕೆಂದು ಇವರು ನಿರ್ಧರಿಸಿದ್ದರೆ ಆಗ ಅದು ಅವರ ಅಂತಿಮ ನಿರ್ಧಾರವಾಗಿರುವುದು. ಈ ರಾಶಿಯವರು ಶ್ರೀಮಂತರಾದರೆ ಅವರು ತುಂಬಾ ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬಂದಿರುವರು. ಇನ್ನು ಈ ರಾಶಿಯವರು ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ.

  ಮಿಥುನ: ಮೇ 21-ಜೂನ್ 20

  ಮಿಥುನ: ಮೇ 21-ಜೂನ್ 20

  ಮಿಥುನ ರಾಶಿಯ ಜನರು ತಮ್ಮ ಇಚ್ಛೆಯನ್ನು ಯಶಸ್ವಿ ಉದ್ಯಮವಾಗಿ ಬದಲಾಯಿಸಿಕೊಳ್ಳುವರು. ಇವರಲ್ಲಿ ವಿಚಾರಗಳಿಗೆ ಕೊರತೆ ಇರುವುದಿಲ್ಲ. ಇವರಲ್ಲಿ ಪ್ರತಿನಿತ್ಯವು ಹೊಸ ಹೊಸ ಆಲೋಚನೆಗಳು ಬರುವುದು ಮತ್ತು ಇದನ್ನು ಅವರು ಅನುಸರಿಸಿಕೊಂಡು ಹೋಗುವರು. ಇವರು ತಮ್ಮ ಆಲೋಚನೆಗಳತ್ತ ಕೆಲಸ ಮಾಡುವರು. ಯಶಸ್ವಿಯಾಗಲು ಸರಿಯಾದ ವ್ಯಕ್ತಿಗಳು ಇವರ ಆಲೋಚನೆಗಳತ್ತ ಗಮನಹರಿಸುವುದು ಅಗತ್ಯವೆಂದು ಇವರು ನೆನಪಿಟ್ಟುಕೊಳ್ಳಬೇಕು. ಇನ್ನು ಈ ರಾಶಿಯವರು ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ.

  ಕರ್ಕಾಟಕ: ಜೂನ್ 21-ಜುಲೈ22

  ಕರ್ಕಾಟಕ: ಜೂನ್ 21-ಜುಲೈ22

  ಕರ್ಕಾಟಕ ರಾಶಿಯವರಿಗೆ ಹಣದ ಬಗ್ಗೆ ಸ್ವಲ್ಪವೂ ಕಾಳಜಿ ಇರುವುದಿಲ್ಲ. ಹಣವೆನ್ನುವುದು ಕೆಲವರ ಪ್ರೀತಿಯನ್ನು ಪ್ರತಿನಿಧಿಸುವುದು ಎನ್ನುವ ಕಾರಣಕ್ಕಾಗಿ ಇವರು ಹಣ ವೆಚ್ಚ ಮಾಡಲು ಬಯಸುವರು. ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ತುಂಬಾ ಕೆಟ್ಟ ವ್ಯಕ್ತಿಗಳು. ಯಶಸ್ವಿ ವ್ಯಕ್ತಿಯಾಗುವ ಕಲ್ಪನೆಯೊಂದಿಗೆ ಇವರು ಬದುಕುತ್ತಾ ಇರುವರು. ಆದರೆ ಇವರು ಶ್ರೀಮಂತರಾಗುವುದಕ್ಕೂ ಇವರ ಆಲೋಚನೆಗೂ ಸಂಬಂಧವೇ ಇರಲ್ಲ. ಈ ರಾಶಿಯವರು ಕರಣಾಮಯಿಗಳು, ಕಲಾತ್ಮಕತೆ ಹಾಗೂ ರಕ್ಷಣಾತ್ಮಕವಾಗಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಚರ್ಚೆ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳುವಲ್ಲಿ ನೈಪುಣ್ಯರು.

  ಸಿಂಹ: ಜುಲೈ 23- ಆ.23

  ಸಿಂಹ: ಜುಲೈ 23- ಆ.23

  ಸಿಂಹ ರಾಶಿಯವರು ಜನರಿಗೆ ಮನರಂಜನೆ ನೀಡುವ ಸಾಮರ್ಥ್ಯ ಹೊಂದಿರುವರು. ಇವರು ಯಾವುದೇ ಕಾರ್ಯಕ್ರಮದಲ್ಲಿ ಸ್ಟಾರ್ ಆಗಿ ಮಿಂಚಲು ಬಯಸುವರು. ಇವರು ಬೆಳೆಯುತ್ತಲೇ ಜನರನ್ನು ಹೇಗೆ ರಂಜಿಸಬೇಕೆಂದು ತಿಳಿದುಕೊಂಡಿರುವವರು. ಬರಹ, ಪ್ರದರ್ಶನ ಮತ್ತು ನವೀನ ಜಾಹೀರಾತುಗಳನ್ನು ರಚಿಸಿ ಜನರನ್ನು ರಂಜಿಸಬಹುದು. ಈ ವ್ಯಕ್ತಿಗಳು ವಿವರಣೆಗೆ ಹೆಚ್ಚಿನ ಮಹತ್ವ ನೀಡುವರು. ಇದರಿಂದಾಗಿ ಇವರು ಯಶಸ್ವಿಯಾಗುವರು.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಸಾಕಷ್ಟು ಹಣ ಹೇಗೆ ಮಾಡುವುದು ಎನ್ನುವ ಬಗ್ಗೆ ಆಲೋಚನೆ ಮಾಡುವುದು ಕನ್ಯಾ ರಾಶಿಯವರಿಗೆ ತುಂಬಾ ಕಷ್ಟವಾಗಿರುವುದು. ಈ ರಾಶಿಯವರು ತಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಉತ್ತಮವಾಗಿರುವರು. ಬೇರೆಯವರಿಗೆ ತುಂಬಾ ನಿರಾಸಕ್ತಿಯೆಂದು ಅನಿಸುವ ವಿಚಾರದಲ್ಲಿ ಇವರಿಗೆ ಆಸಕ್ತಿ ಕಾಣುವುದು. ಇದು ಅವರ ಪರವಾಗಿ ಕೆಲಸ ಮಾಡುವುದು ಮತ್ತು ಯಶಸ್ವಿಯಾಗುವಂತಹ ಅವಕಾಂಶ ಹೆಚ್ಚಿಸುವುದು.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ವೃತ್ತಿಪರ ವಾತಾವರಣದಲ್ಲಿ ಮಿಂಚಲು ಇವರಲ್ಲಿರುವಂತಹ ಸಾಮಾಜಿಕ ಕೌಶಲ್ಯಗಳು ನೆರವಾಗು ಕಾರಣದಿಂದಾಗಿ ತುಲಾ ರಾಶಿಯವರು ಹೆಚ್ಚು ಯಶಸ್ಸು ಪಡೆದುಕೊಳ್ಳುವರು. ವ್ಯಾಪಾರಿಕ ಪಾಲುದಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಜನರನ್ನು ಒಪ್ಪಿಸುವಂತಹ ಸಾಮರ್ಥ್ಯವು ಇವರಲ್ಲಿ ಇರುವುದು. ಜನರು ಇವರನ್ನು ಇಷ್ಟಪಡುವಂತೆ ಮಾಡುವ ಸಮ್ಮೋಹನದ ಗುಣವು ಇವರಲ್ಲಿ ಇರುವುದು. ಇವರು ಸಂಬಂಧ ರೂಪಿಸುವಲ್ಲಿ ತುಂಬಾ ಒಳ್ಳೆಯ ವ್ಯಕ್ತಿಗಳು. ಇದರಿಂದಾಗಿ ಇವರು ಯಶಸ್ಸನ್ನು ಪಡೆದುಕೊಳ್ಳುವರು.

  ವೃಶ್ಚಿಕ: ಅ. 24-ನ.22

  ವೃಶ್ಚಿಕ: ಅ. 24-ನ.22

  ವೃಶ್ಚಿಕ ರಾಶಿಯವರು ಆಕ್ರಮಣಕಾರಿ ಹಂತದಲ್ಲಿ ಆತ್ಮವಿಶ್ವಾಸ ಹೊಂದಿರುವರು. ಇವರು ಯಾವುದೇ ಜನರಿಗೆ ಏನನ್ನೂ ಮಾರಬಲ್ಲರು. ಒಳ್ಳೆಯ ಹೂಡಿಕೆದಾರ ಅಥವಾ ಮಾರಾಟಗಾರನಾಗಿರಬಹುದು. ಇವರಿಗೆ ಯಶಸ್ವಿ ವ್ಯಕ್ತಿಯಾಗಲು ಬೇಕಾದಷ್ಟು ಮಾರ್ಗಗಳು ಇವೆ. ಆದರೆ ಇವರು ಹಳೆಯ ಸಾಂಪ್ರದಾಯಿಕ ವಿಧಾನದಿಂದಲೇ ಹಣ ಗಳಿಸುವರು.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ಇತರ ರಾಶಿಯವರು ಮಾಡದೆ ಇರುವಂತಹ ಕೆಲಸವನ್ನು ಮಾಡುವ ಕುಶಲತೆಯು ಮಕರ ರಾಶಿಯವರಲ್ಲಿ ಇರುವುದು. ಹೆಚ್ಚಿನ ಜನರು ತಮ್ಮ ಆದರ್ಶಗಳಿಗೆ ಅಂಟಿಕೊಂಡಿರುವರು ಮತ್ತು ಇವರಲ್ಲಿ ದೂರದೃಷ್ಟಿಯು ಇರುವುದು. ಇವರು ಕಟು ವಾಸ್ತವಿಕವಾದಿಗಳಾಗಿರುವರು ಮತ್ತು ಅದರಂತೆ ಯೋಚನೆ ಮಾಡುವುದಿಲ್ಲ ಮತ್ತು ತಮ್ಮ ಗುರಿ ಮುಟ್ಟಿಲು ತುಂಬಾ ಪ್ರಾಯೋಗಿಕವಾಗಿರುವರು.

  ಕುಂಭ: ಜ.21- ಫೆ.18

  ಕುಂಭ: ಜ.21- ಫೆ.18

  ಕುಂಭ ರಾಶಿಯವರ ಹೃದಯವು ವಿಶಾಲವಾಗಿರುವುದು ಮತ್ತು ಹಣಕ್ಕಾಗಿ ಬೇರೆಯವರಿಗೆ ನೆರವು ನೀಡಲು ಇಷ್ಟಪಡುವರು. ಕಷ್ಟದಲ್ಲಿ ಇರುವವರಿಗೆ ಇವರು ನೆರವಾಗುವರು. ಇವರು ಜನರಿಗೆ ನೆರವಾಗುತ್ತಲಿರುವರು. ಇದರಿಂದಾಗಿ ಇವರಿಗೆ ಬೇರೆ ರೂಪದಲ್ಲಿ ಹಣವು ಹರಿದುಬರುವುದು. ಇವರ ವಿಶಾಲಹೃದಯವು ಇವರ ಯಶಸ್ಸಿನಲ್ಲಿ ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು.

  ಮೀನ: ಫೆ.19-ಮಾ.20

  ಮೀನ: ಫೆ.19-ಮಾ.20

  ಈ ರಾಶಿಯವರು ತುಂಬಾ ಜನಪ್ರಿಯವಾಗುವಂತಹ ಕಲಾಕೃತಿಗಳನ್ನು ತಯಾರಿಸುವರು. ಇವರು ಹುಟ್ಟು ಕಲಾವಿದರಾಗಿರುವರು. ಇವರು ತಮಗೆ ಸಂತೋಷ ಹಾಗೂ ಅರ್ಥಪೂರ್ಣವೆಂದು ಅನಿಸುವಂತಹ ಕೆಲಸ ಮಾಡಲು ಯಾವುದೇ ಹಣ ಪಡೆಯಲ್ಲ. ಇವರು ತಮಗೆ ಖುಷಿ ನೀಡುವ ಕೆಲಸವನ್ನು ಹಣ ಬರಲಿ ಅಥವಾ ಬರದೇ ಇರಲಿ, ಅದನ್ನು ಮಾಡುತ್ತಲೇ ಇರುತ್ತಾರೆ.

  English summary

  How Does An Individual Of Each Zodiac Sign Attain Success

  Each zodiac sign has its own rate of success and, here, our experts reveal on the best ways in which each individual would gain success based on his/her zodiac sign. For example, Libra individuals are likely to very successful because their social skills help them excel in their professional environment. Each individual has his own way of becoming successful, based on the zodiac sign and here with the help of our experts, we are about to reveal the details of how your success can be like as per your zodiac sign. Check it out...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more