Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರಿಬ್ಬರ ಜಗಳವಾಡಿದಾಗ ಕೂದಲೇ ಕಿತ್ತು ಬಂತು!- ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಇರುವವರಿಗೆ ಮನರಂಜನೆಗೆ ಏನೂ ಕಡಿಮೆಯಿರುವುದಿಲ್ಲ. ಯಾಕೆಂದರೆ ಪ್ರತಿನಿತ್ಯ ನೂರಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದರಲ್ಲಿ ಕೆಲವು ಸಾಮಾಜಿಕ ಕಾಳಜಿ ಹೊಂದಿದ್ದರೆ, ಇನ್ನು ಕೆಲವು ಕೇವಲ ಮನರಂಜನೆಗೆ ಮಾತ್ರ ಸೀಮಿತ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತಹ ವೀಡಿಯೊದಲ್ಲಿ ಇಬ್ಬರು ಮಹಿಳೆಯರು ಮಾಲ್ ಒಂದರ ಒಳಗಡೆ ಜಗಳವಾಡುತ್ತಾರೆ. ಈ ವೇಳೆ ಒಬ್ಬಳು ಮಹಿಳೆಯರು ಕೃತಕ ಕೂದಲು ಕಿತ್ತು ಬಂದು ಸಂಪೂರ್ಣವಾಗಿ ಹರಡಿರುವುದು. ಇದು ರೆನಾಲ್ಡ್ಸ್ಬರ್ಗ್, ಓಹಿಯೋದಲ್ಲಿ ನಡೆದಿರುವುದು. ಬಿದ್ದ ಕೂದಲನ್ನು ವಾಲ್ ಮಾರ್ಟ್ ನ ಸಿಬ್ಬಂದಿಗಳು ಹೆಕ್ಕುತ್ತಿರುವುದು ಇದರಲ್ಲಿ ಇದೆ. ಮುಂದಕ್ಕೆ ಓದಿ....

ಮಹಿಳೆಯರು ಜಗಳವಾಡಿಕೊಳ್ಳುತ್ತಿದ್ದಾರೆ...
ವೀಡಿಯೋದಲ್ಲಿ ಕಾಣಿಸುತ್ತಿರುವ ನಾಲ್ಕು ಮಹಿಳೆಯರು ರೆನಾಲ್ಡ್ಸ್ಬರ್ಗ್, ಓಹಿಯೋದಲ್ಲಿ ವಾಲ್ ಮಾರ್ಟ್ ನ ಒಳಗಡೆ ಜಗಳವಾಡುತ್ತಿದ್ದಾರೆ. ಒಬ್ಬ ಮಹಿಳೆಯು ಮತ್ತೊಬ್ಬ ಮಹಿಳೆಯ ಕೂದಲಿಗೆ ಕೈ ಹಾಕುತ್ತಾಳೆ. ಮುಂದೇನು....
ಕೃತಕ ಕೂದಲು ಉದುರಿ ಬಿತ್ತು
ಕೆಲವೇ ಸೆಕೆಂಡುಗಳಲ್ಲಿ ಮಹಿಳೆಯ ಏಳು ಕೃತಕ ಕೂದಲುಗಳ ವಿಸ್ತರಣೆಯು ತಲೆಯಿಂದ ಉದುರಿ ಬಿತ್ತು. ಆಕೆಯ ಕೂದಲು ನೆಲದಲ್ಲಿ ಹರಡಿಕೊಂಡಿತು.
ಜಗಳ ನಿಲ್ಲಿಸಲು ಸಿಬ್ಬಂದಿಗಳು ಪ್ರಯತ್ನಿಸಿದರು
ಮಹಿಳೆಯರ ಈ ಜಗಳ ನಿಲ್ಲಿಸಲು ಸಿಬ್ಬಂದಿಗಳು ತುಂಬಾ ಪ್ರಯತ್ನಪಟ್ಟರು. ಅದೃಷ್ಟದಿಂದ ಮಹಿಳೆಯರು ಜಗಳ ನಿಲ್ಲಿಸಿದರು. ಆದರೆ ಅದಾಗಲೇ ಮಹಿಳೆಯ ಕೃತಕ ಕೂದಲಿಗೆ ಹಾನಿಯಾಗಿತ್ತು. ಅದೆಲ್ಲವೂ ನೆಲದ ಮೇಲಿತ್ತು ಮತ್ತು ಅದನ್ನು ಹೆಕ್ಕುವ ಸಮಯವೂ ಆಕೆಗೆ ಸಿಗಲಿಲ್ಲ.
ಮಾಲ್ ತೊರೆಯಲು ಸೂಚಿಸಲಾಯಿತು
ಬೇರೆ ಮಹಿಳೆಯರು ಮತ್ತು ಅಂಗಡಿಯವರು ಇವರ ಜಗಳದಿಂದ ಬೇಸತ್ತು ಬೊಬ್ಬೆ ಹಾಕಲು ಆರಂಭಿಸಿದ್ದರು ಮತ್ತು ಅಲ್ಲಿಂದ ಹೋಗಲು ಸೂಚಿಸುತ್ತಿದ್ದರು. ಮಹಿಳೆಯರು ಅಲ್ಲಿಂದ ತೆರಳಿದರು.
ಜಗಳಕ್ಕೆ ಕಾರಣ ತಿಳಿದುಬಂದಿಲ್ಲ!
ಮಹಿಳಾ ಮಣಿಗಳಿಬ್ಬರ ಜಗಳಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ ಮತ್ತು ಪೊಲೀಸರು ಈ ಸ್ಥಳಕ್ಕೆ ಬಂದಿದ್ದಾರೆ ಎನ್ನುವುದು ಸ್ಪಷ್ಟವಿಲ್ಲ. ಆದರೆ ಜಗಳವನ್ನು ನಿಟಿಜನ್ ಗಳು ದೀರ್ಘಕಾಲ ತನಕ ನೆನಪಿನಲ್ಲಿ ಇಟ್ಟುಕೊಳ್ಳುವರು.
ವೀಡಿಯೊ
ಇದು ಸ್ವಲ್ಪ ತಮಾಷೆಯ ವೀಡಿಯೋವಾಗಿದೆ. ಇದಕ್ಕೆ ಭಾವನಾತ್ಮಕವಾಗಿ ಸ್ವಲ್ಪ ಮಿಶ್ರ ಪ್ರತಿಕ್ರಿಯೆ ಬಂದಿದೆ. ಮಹಿಳೆಗೆ ತನ್ನ ಕೃತಕ ಕೂದಲು ಸಿಗಲಿ ಎನ್ನುವುದೇ ನಮ್ಮ ಆರೈಕೆ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಬರೆದು ತಿಳಿಸಿ. ಇಂತಹ ವೀಡಿಯೋಗಳು ಹಾಗೂ ಬರಹಗಳಿಗಾಗಿ ಈ ಸೆಕ್ಷನ್ ನಲ್ಲಿ ಓದುತ್ತಲಿರಿ.



Click it and Unblock the Notifications
