Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
2019 ಹೊಸ ವರ್ಷದಲ್ಲಿ ನೀವು ತೆಗೆದುಕೊಳ್ಳಬೇಕಾದ ನಿರ್ಣಯಗಳು
ದಿನ, ತಿಂಗಳು, ವರ್ಷ ಉರುಳಿದ್ದೇ ಇಂದಿನ ವೇಗದ ಯುಗದಲ್ಲಿ ತಿಳಿಯುತ್ತಲೇ ಇಲ್ಲ. 2018ನೇ ವರ್ಷ ಕೊನೆಗೊಳ್ಳಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. 2019ನೇ ವರ್ಷ ಆರಂಭವಾಗುವ ಮೊದಲು ನೀವು ಕೆಲವೊಂದು ನಿರ್ಣಯಗಳನ್ನು ಮಾಡಿಕೊಳ್ಳಬೇಕು. ಯಾಕೆಂದರೆ ಇದರಿಂದ ನಿಮ್ಮ ಮುಂದಿನ ಜೀವನವು ತುಂಬಾ ಸುಖಕರವಾಗಿರುವುದು. ಹೆಚ್ಚಿನವರು ಹೊಸ ವರ್ಷದಲ್ಲಿ ಪ್ರತೀ ಸಲ ನಿರ್ಣಯಗಳನ್ನು ತೆಗೆದುಕೊಳ್ಳುವರು. ಆದರೆ ಅದನ್ನು ಪಾಲಿಸಿಕೊಂಡು ಹೋಗುವುದು ಮಾತ್ರ ಕಡಿಮೆ. ಹೀಗೆ ಆಗಬಾರದು.
ನೀವು ತೆಗೆದುಕೊಳ್ಳುವಂತಹ ನಿರ್ಣಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋದರೆ ಮಾತ್ರ ಜೀವನವು ಸಮಸ್ಯೆಯಿಂದ ಮುಕ್ತವಾಗಿ, ಆರೋಗ್ಯಕರವಾಗಿರಲು ಸಾಧ್ಯ. ಹೊಸ ವರ್ಷ ಬಂತೆಂದರೆ ಅದು ಹಲವಾರು ಹೊಸ ಸವಾಲುಗಳನ್ನು ತಂದೇ ಬಿಡುತ್ತದೆ. ಇದನ್ನು ನಿಭಾಯಿಸಲು ಕೆಲವೊಂದು ನಿರ್ಣಯಗಳು ಅತೀ ಅಗತ್ಯವಾಗಿರುವುದು. ಜೀವನದ ಎಲ್ಲಾ ಗೊಂದಲವನ್ನು ಬದಿಗಿಟ್ಟು ಹೊಸ ವರ್ಷವನ್ನು ತುಂಬಾ ವಿಶೇಷವಾಗಿ ಆರಂಭಿಸಲಿದ್ದೀರಿ ಎಂದು ನೀವು ಭರವಸೆ ನೀಡಿ. ನೀವು ಹೊಸ ವರ್ಷದಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ಪಾಲಿಸಿದರೆ ಜೀವನ ಸಂತೋಷವಾಗಿರುವುದು.

ಸಂಬಂಧ
ಜೀವನದಲ್ಲಿ ಯಾವಾಗಲೂ ಸಂಬಂಧವು ಅತೀ ಮುಖ್ಯವಾಗಿರುವುದು. ಅದೇ ರೀತಿಯಾಗಿ ಆರೋಗ್ಯಕಾರಿ ಸಂಬಂಧವು. ಸಂಬಂಧವು ಅನಾರೋಗ್ಯಕರವಾಗಿದ್ದರೆ ಆಗ ಅದು ಯಾವಾಗಲೂ ಸರಿಯಾಗಿರಲ್ಲ. ನೀವು ಎಲ್ಲಾ ರೀತಿಯ ಪ್ರಯತ್ನಪಟ್ಟರೂ ಸಂಬಂಧವು ಕೆಲಸ ಮಾಡುತ್ತಿಲ್ಲವೆಂದಾದರೆ ಆಗ ನೀವು ಒಂದು ದೃಢ ನಿರ್ಧಾರ ತೆಗೆದುಕೊಂಡು ಈ ಸಂಬಂಧದಿಂದ ಹೊರಬರಲು ಪ್ರಯತ್ನಿಸಬೇಕು. ಇದರಿಂದ ನೀವು ಜೀವನದಲ್ಲಿ ಒಳ್ಳೆಯದನ್ನು ಪಡೆಯುವಿರಿ.

ನಿಮ್ಮ ಅಗತ್ಯತೆಗಳಿಗೆ ಗಮನಹರಿಸುತ್ತೀರಾ?
ಜೀವನದಲ್ಲಿ ಹೆಚ್ಚಾಗಿ ಜನರು ತಮ್ಮ ಪ್ರೀತಿಪಾತ್ರರ ಬೇಡಿಕೆಗಳನ್ನು ಪೂರೈಸುವುದರಲ್ಲಿ ಜೀವನ ಕಳೆದುಕೊಂಡು ಬಿಡುವರು. ಈ ವೇಳೆ ನಾವು ಅತೀ ಮುಖ್ಯವಾಗಿರುವ ವ್ಯಕ್ತಿಯ ಕಡೆಗೆ ಗಮನ ನೀಡಲು ವಿಫಲವಾಗುತ್ತೇವೆ. ಆ ವ್ಯಕ್ತಿ ಯಾರು ಗೊತ್ತೇ? ಅದೇ ನಮ್ಮ ಬಗ್ಗೆ. ಹೌದು, ಜೀವನದಲ್ಲಿ ನಾವು ನಮ್ಮ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆ. ಬೇರೆಯವರೊಂದಿಗೆ ನಿಮ್ಮ ಭಾವನೆಗಳನ್ನು ಹೂಡಿಕೆ ಮಾಡುವ ಮೊದಲು ನಿಮ್ಮನ್ನು ನೀವು ಪ್ರೀತಿಸಿ. ಇದು ನಿಮ್ಮ ಸಂಗಾತಿಯೇ ಆಗಿರಬಹುದು. ಅದರ ಬಗ್ಗೆ ಚಿಂತೆ ಬೇಡ. ನೀವು ಯಾವಾಗಲೂ ಸಂತೋಷವಾಗಿದ್ದರೆ ಆಗ ಜಗತ್ತು ಕೂಡ ಸಂತೋಷವಾಗಿರುವುದು ಎಂದು ನೀವು ತಿಳಿದಿರಬೇಕು.

ಸ್ವಮಿತಿ ಹೊಂದಿರುವ ಆಲೋಚನೆಗಳು
ಆತ ಅಥವಾ ಆಕೆಗಿಂತ ಉತ್ತಮವಾಗಿರುವವನ್ನು ನಾನು ಪಡೆಯಬಹುದೇ? ನಾನು ಈ ಪ್ರಾಜೆಕ್ಟ್ ನ್ನು ಮುನ್ನಡೆಸಲು ಸಮರ್ಥನಾಗಿದ್ದೇನೆಯಾ? ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಮತ್ತು ನಿಮ್ಮನ್ನು ಏನೂ ಮಾಡದಂತೆ ತಡೆಯುವಂತಹ ಆಲೋಚನೆಗಳನ್ನು ನೀವು ಬಿಟ್ಟುಬಿಡಬೇಕು. ನಿಮಗಾಗಿ ದೊಡ್ಡ ಗುಣಮಟ್ಟ ನಿರ್ಮಿಸಿ, ಕನಸುಗಳ ಬೆನ್ನತ್ತಿ ಮತ್ತು ನಿಮ್ಮದೇ ಆಗಿರುವಂತಹ ಜೀವನ ಸಾಗಿಸಿ.

ನೀವಾಗಿಯೇ ಇರದಿದ್ದರೆ
ನಾವು ಪ್ರೀತಿಸುತ್ತಿರುವ ವ್ಯಕ್ತಿಯ ಮುಂದೆ ಯಾವಾಗಲೂ ತುಂಬಾ ಒಳ್ಳೆಯ ಪರಿಣಾಮ ಬೀರಲು ಪ್ರಯತ್ನಿಸುತ್ತೇ. ಆದರೆ ಇದರರ್ಥ ನಾವು ನಮ್ಮತನವನ್ನು ಬಿಟ್ಟು ತುಂಬಾ ಬದಲಾಗಬೇಕೆಂದಲ್ಲ. ನೀವು ಎಲ್ಲವನ್ನು ಬದಲಾಯಿಸಿಕೊಳ್ಳಬೇಡಿ ಮತ್ತು ಬೇರೆಯವರನ್ನು ಸೆಳೆಯಲು ನಿಮ್ಮತನವನ್ನು ಮರೆತು ಬಿಡಬೇಡಿ. ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಷ್ಟು ಮೌಲ್ಯಯುತ ಆಗಿರುವವರು ಯಾರೂ ಇಲ್ಲ.

ಸಂಗಾತಿಯನ್ನು ಅತಿಯಾಗಿ ಮೆಚ್ಚಿಸಲು ಹೋಗುವುದು
ಜೀವನದಲ್ಲಿ ಸಂಗಾತಿಯು ಕೂಡ ಅತೀ ಅಗತ್ಯವಾಗಿ ಬೇಕು. ಸಂಗಾತಿ ಜೀವನದಲ್ಲಿ ಸಂತೋಷ ಮತ್ತು ವಿಶೇಷವನ್ನು ಉಂಟು ಮಾಡುವರು. ಆದರೆ ಕೆಲವೊಂದು ಸಲ ನಾವು ಅತಿ ಎಂದು ಅನಿಸುವಷ್ಟು ಸಂಗಾತಿಯನ್ನು ಮೆಚ್ಚಿಸಲು ಹೋಗುವೆವು. ಅತಿಯಾಗಿ ಕಾಳಜಿ ಮಾಡುವುದು, ಚಿಂತೆ ಮಾಡುವುದು ಮತ್ತು ಪ್ರೀತಿಸುವುದು ಕೂಡ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು. ನೀವು ತುಂಬಾ ಕೆಟ್ಟ ನಿರೀಕ್ಷೆಯ ಮಟ್ಟವನ್ನು ಬಯಸುತ್ತಿದ್ದೀರಿ ಮತ್ತು ಸಂಗಾತಿಯು ಇದನ್ನು ಬೇರೆ ರೀತಿಯಿಂದ ಪರಿಗಣಿಸಬಹುದು. ಸಂಬಂಧವೆನ್ನುವುದು ಜೋಡೆತ್ತು ಇದ್ದಂತೆ ಮತ್ತು ನೀವು ನೀಡಿದಷ್ಟೇ ಪ್ರೀತಿ, ಕಾಳಜಿ, ಆರೈಕೆಯು ನಿಮಗೂ ಸಿಗಬೇಕು.

ಇತರ ವಿಚಾರಗಳು ಯಾವುದು?
ನಮ್ಮ ಸುತ್ತಲು ಇರುವಂತಹ ಲಿಂಗಭೇದವನ್ನು ನಾವು ತೆಗೆದುಹಾಕಬೇಕು ಮತ್ತು ಬೇರೆಯವರು ಇದರ ಬಗ್ಗೆ ಏನು ಹೇಳುತ್ತಾರೆಯಾ ಎಂದು ಚಿಂತಿಸುವುದನ್ನು ಬಿಟ್ಟು ಬಿಡಬೇಕು. ದೊಡ್ಡ ವಯಸ್ಸಿನ ಯುವಕ ಅಥವಾ ಮಹಿಳೆಯನ್ನು ಡೇಟಿಂಗ್ ಮಾಡುವುದು ಇಂದು ದೊಡ್ಡ ಸಮಸ್ಯೆಯಲ್ಲ. ನೀವು ಕಲಿತಿರುವುದಕ್ಕಿಂತಲೂ ತುಂಬಾ ಭಿನ್ನವಾಗಿರುವ ಉದ್ಯೋಗವನ್ನು ಮಾಡುವುದು ಯಾವುದೇ ರೀತಿಯಿಂದಲೂ ತಪ್ಪಲ್ಲ ಮತ್ತು 30ರ ಹರೆಯದಲ್ಲಿ ಮದುವೆಯಾಗುವುದು ಕೂಡ ದೊಡ್ಡ ಮಟ್ಟದ ಸಮಸ್ಯೆಯಲ್ಲ. ಕಿರಿಕಿರಿಯ ನೆರೆಮನೆಯವರು, ಅನಗತ್ಯ ಸಲಹೆ ಮಾಡುವ ಸಂಬಂಧಿಕರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ನಿಮ್ಮ ಜೀವನವು ಇಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿರುವುದು ಎಂದು ಮೊದಲು ದೃಢಪಡಿಸಿಕೊಳ್ಳಿ.

ದೇಹದ ಬಗ್ಗೆ ಜಾಗೃತವಾಗಿರುವುದು
ನಿಮ್ಮ ದೇಹದ ಬಣ್ಣ, ತೂಕ, ವಿನ್ಯಾಸವು ಏನೇ ಆಗಿದ್ದರೂ ಅದು ನಿಮ್ಮ ದೇಹವಾಗಿರುವುದು. ನೀವು ಯಾವುದೇ ರೀತಿಯ ಆಹಾರ ಪಥ್ಯ, ಆಹಾರ ಕ್ರಮ ಮತ್ತು ಕೆಲವೇ ದಿನಗಳಲ್ಲಿ ದೇಹದ ತೂಕ ಇಳಿಸಿಕೊಂಡು ನಿಮ್ಮನ್ನು ಸುಂದರವಾಗಿಸುತ್ತೇವೆ ಎಂದು ಹೇಳುವಂತಹ ಮಾತುಗಳನ್ನು ಖಂಡಿತವಾಗಿಯೂ ನಂಬಬೇಡಿ. ದೇಹದ ಬಗ್ಗೆ ಇರುವಂತಹ ಅತಿಯಾಗಿರುವ ಚಿಂತೆಯನ್ನು ನೀವು ಮರೆತುಬಿಡಿ. ನಿಮ್ಮ ದೇಹವು ಕೇವಲ ನಿಮ್ಮದು. ಅದರ ಬಗ್ಗೆ ಬೇರೆಯವರಿಗೆ ಟೀಕೆ ಮಾಡಲು ಅವಕಾಶ ನೀಡಬೇಡಿ.

ಅತಿಯಾಗಿ ಚಿಂತಿಸುವುದು
ಕೆಲವು ಜನರು ಯಾವುದೇ ವಿಚಾರವಾದರೂ ಅದರ ಬಗ್ಗೆ ಅತಿಯಾಗಿ ಚಿಂತೆ ಮಾಡುವರು ಮತ್ತು ಇದರಿಂದಾಗಿ ಅವರ ಮಾನಸಿಕ ನೆಮ್ಮದಿಯು ಕೆಡುವುದು. ಅತಿಯಾಗಿ ಆಲೋಚನೆ ಮಾಡುವುದು ಇಲ್ಲದೆ ಇರುವಂತಹ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಂತೆ ಎಂದು ಜ್ಞಾನಿಯೊಬ್ಬರು ಹೇಳಿರುವರು. ಇದು ಖಂಡಿತವಾಗಿಯೂ ನಿಜ. ಭವಿಷ್ಯವು ನಮ್ಮ ಕೈಯಲ್ಲಿ ಇಲ್ಲದೆ ಇರುವಾಗ ನಾವು ವರ್ತಮಾನದಲ್ಲಿ ಅತಿಯಾಗಿ ಚಿಂತೆ ಮಾಡಿಕೊಂಡು ಸಂಭ್ರಮದ ಕ್ಷಣಗಳನ್ನು ಯಾಕೆ ಬಲಿಕೊಡಬೇಕು?

ಏನೋ ಕಳೆದುಕೊಳ್ಳುವ ಭೀತಿ
ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿರುವಂತಹ ಅಂಶವೆಂದರೆ ಏನೋ ಕಳೆದುಕೊಳ್ಳುವ ಭೀತಿ. ಯಾವುದೇ ಪಾರ್ಟಿ, ಭಾನುವಾರದ ರಜೆ ಅಥವಾ ಸ್ನೇಹಿತರೊಂದಿಗೆ ಶಾಪಿಂಗ್ ಗೆ ಹೋಗುವುದನ್ನು ತಪ್ಪಿಸಿಕೊಂಡರೆ ಅದರಿಂದ ಯಾವುದೇ ದೊಡ್ಡ ಹಾನಿ ಆಗದು ಎಂದು ಅರಿತುಕೊಳ್ಳಬೇಕು. ಇದರ ಬದಲಿಗೆ ಯಾವುದಾದರೂ ಒಳ್ಳೆಯ ಪುಸ್ತಕ ಅಥವಾ ಪ್ರೀತಿಪಾತ್ರರಿಂದ ಸಮಯ ಕಳೆದರೆ ಅದರಿಂದ ಖಂಡಿತವಾಗಿಯೂ ಹೆಚ್ಚಿನ ಖುಷಿ ಸಿಗುವುದು. ಇದರಿಂದ ಅಂತಹ ಚಿಂತೆ ಬಿಟ್ಟುಬಿಟ್ಟು ಜೀವನವನ್ನು ಆನಂದಿಸಲು ಪ್ರಯತ್ನಿಸಿ.

ಏನೋ ಕಳೆದುಕೊಳ್ಳುವ ಭೀತಿ
ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿರುವಂತಹ ಅಂಶವೆಂದರೆ ಏನೋ ಕಳೆದುಕೊಳ್ಳುವ ಭೀತಿ. ಯಾವುದೇ ಪಾರ್ಟಿ, ಭಾನುವಾರದ ರಜೆ ಅಥವಾ ಸ್ನೇಹಿತರೊಂದಿಗೆ ಶಾಪಿಂಗ್ ಗೆ ಹೋಗುವುದನ್ನು ತಪ್ಪಿಸಿಕೊಂಡರೆ ಅದರಿಂದ ಯಾವುದೇ ದೊಡ್ಡ ಹಾನಿ ಆಗದು ಎಂದು ಅರಿತುಕೊಳ್ಳಬೇಕು. ಇದರ ಬದಲಿಗೆ ಯಾವುದಾದರೂ ಒಳ್ಳೆಯ ಪುಸ್ತಕ ಅಥವಾ ಪ್ರೀತಿಪಾತ್ರರಿಂದ ಸಮಯ ಕಳೆದರೆ ಅದರಿಂದ ಖಂಡಿತವಾಗಿಯೂ ಹೆಚ್ಚಿನ ಖುಷಿ ಸಿಗುವುದು. ಇದರಿಂದ ಅಂತಹ ಚಿಂತೆ ಬಿಟ್ಟುಬಿಟ್ಟು ಜೀವನವನ್ನು ಆನಂದಿಸಲು ಪ್ರಯತ್ನಿಸಿ.



Click it and Unblock the Notifications











