Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಗೈಯಲ್ಲಿ ಹಲವಾರು ರೇಖೆಗಳಿವೆಯಾ? ಇಲ್ಲಿದೆ ನೋಡಿ ಅದರ ಹಿಂದಿನ ರಹಸ್ಯ!
ಪ್ರತಿಯೊಬ್ಬನ ಅಂಗೈ ಮೇಲೆ ಮೂರು ಪ್ರಮುಖ ರೇಖೆಗಳು ಇರುವುದು. ಈ ಮೂರು ರೇಖೆಗಳು ತುಂಬಾ ಆಳವಾಗಿರುವುದು. ಒಂದು ಅಂಗೈಯ ಮಧ್ಯಭಾಗದಲ್ಲಿದ್ದರೆ, ಮತ್ತೊಂದು ಮೇಲಿನ ಭಾಗ ಮತ್ತು ಮೂರನೇಯದ್ದು ಕೆಳಭಾಗದಲ್ಲಿರುವುದು. ಮೇಲಿನ ಭಾಗದಲ್ಲಿ ಇರುವುದನ್ನು ಹೃದಯ ರೇಖೆ ಮತ್ತು ಮಧ್ಯಭಾಗದಲ್ಲಿ ಇರುವುದನ್ನು ಮೆದುಳಿನ ರೇಖೆ ಎಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಹಲವಾರು ರೇಖೆಗಳು ಇದ್ದರೆ ಆಗ ಆ ವ್ಯಕ್ತಿಗಳು ಬೇರೆಯವರ ಅಭಿಪ್ರಾಯದಿಂದ ಸುಲಭದಲ್ಲಿ ಪ್ರಭಾವಿತನಾಗುವನು ಎಂದು ಹೇಳಲಾಗುತ್ತದೆ.
ಕೆಲವೊಂದು ಸಲ ಆ ವ್ಯಕ್ತಿಯು ಹೃದಯ ಮತ್ತು ಬುದ್ಧಿಯ ಮಾತಿನ ಮಧ್ಯೆ ಒದ್ದಾಡುತ್ತಿರುವನು. ಈ ರೇಖೆಗಳು ಹೃದಯ ರೇಖೆಯನ್ನು ಛೇದಿಸಿದ್ದರೆ ಆಗ ಆತ ಪ್ರೇಮ ವೈಫಲ್ಯಕ್ಕೆ ಒಳಗಾಗುತ್ತಾನೆ ಎನ್ನುವುದು ನಿಶ್ಚಿತ. ಇದು ಆತನ ಮಾನಸಿಕತೆ ಮೇಲೆ ಕೂಡ ಪರಿಣಾಮ ಬೀರುವುದು.

ಮೆದುಳಿನ ರೇಖೆ ಛೇದಿಸುವ ಹಲವಾರು ರೇಖೆಗಳು
ಹಲವಾರು ರೇಖೆಗಳು ಮೆದುಳಿನ ರೇಖೆ ಛೇದಿಸಿದರೆ ಆಗ ಇದು ವ್ಯಕ್ತಿಯ ಸೂಕ್ಷ್ಮ ನಡವಳಿಕೆ ಸೂಚಿಸುತ್ತದೆ. ಸಣ್ಣ ವಿಷಯಗಳು ಈ ವ್ಯಕ್ತಿಯ ಮೇಲೆ ಮಾನಸಿಕವಾಗಿ ಪರಿಣಾಮ ಬೀರುವುದು.

ಗುರುವಿನ ಶಿಖರದ ಮೇಲೆ ಹಲವಾರು ರೇಖೆಗಳು
ತೋರು ಬೆರಳಿನ ಕೆಳಗಡೆ ಗುರುವಿನ ಬೆಟ್ಟವಿದೆ. ಈ ಭಾಗದಲ್ಲಿ ತುಂಬಾ ರೇಖೆಗಳು ಇರುವವರನ್ನು ಅದೃಷ್ಟವಂತರೆಂದು ನಂಬಲಾಗುತ್ತದೆ.

ಚಂದ್ರನ ಬೆಟ್ಟದ ಮೇಲೆ ಸಾಕಷ್ಟು ರೇಖೆಗಳು
ಅಂಗೈಯಲ್ಲಿ ಹೆಬ್ಬೆರಳಿಗೆ ವಿರುದ್ಧ ದಿಕ್ಕಿನಲ್ಲಿ ಸ್ವಲ್ಪ ಎತ್ತರದ ಭಾಗವಿದೆ. ಕೆಲವರ ಅಂಗೈಯಲ್ಲಿ ಇದು ಉಬ್ಬಿಕೊಂಡಿರುವುದು ಮತ್ತು ಇನ್ನು ಕೆಲವರಲ್ಲಿ ಅಷ್ಟು ಉಬ್ಬಿರಲ್ಲ. ಈ ಭಾಗದಲ್ಲಿ ತುಂಬಾ ರೇಖೆಗಳು ಇರುವ ವ್ಯಕ್ತಿಯು ತುಂಬಾ ಜಾಣ್ಮೆಯ ವ್ಯಕ್ತಿಯಾಗಿರುವನು. ಹಲವಾರು ಆಲೋಚನೆಗಳಿಂದ ಆತನಿಗೆ ವಿಶ್ರಾಂತಿಯಿಲ್ಲದಂತೆ ಆಗುವುದು. ಈ ರೇಖೆಗಳು ತುಂಬಾ ಆಳವಾಗಿರದೆ ಇದ್ದರೆ ಆ ವ್ಯಕ್ತಿಯು ಆತ್ಮವಿಶ್ವಾಸದ ಕೊರತೆ ಮತ್ತು ಬೇಗನೆ ನೋವಿಗೊಳಗಾಗುವ ಸಂಭವವಿರುವುದು.

ಅಂಗೈಯ ಮಧ್ಯಭಾಗದಲ್ಲಿ ತುಂಬಾ ಗೆರೆಗಳು
ಅಂಗೈಯ ಮಧ್ಯಭಾಗವು ರಾಹುವಿನ ಸ್ಥಾನವಾಗಿದೆ. ಈ ಭಾಗದಲ್ಲಿ ಹೆಚ್ಚಿನ ಗೆರೆಗಳು ಇರುವ ವ್ಯಕ್ತಿಗಳು ಬೇಗನೆ ಕೋಪಗೊಳ್ಳುವವರು ಮತ್ತು ನಕಾರಾತ್ಮಕವಾಗಿರುವವರು. ಇವರು ಅಷ್ಟು ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಮತ್ತು ಇಂತಹ ವ್ಯಕ್ತಿಗಳಿಗೆ ಒಂದು ವಿಷಯದ ಬಗ್ಗೆ ಗಮನ ಕೇಂದ್ರೀಕರಿಸಲು ಆಗಲ್ಲ. ದಡುಗೆರೆಗಳು ಕೋಪದ ಸೂಚನೆಯಾಗಿದೆ. ಧೈರ್ಯಗುಂದುವ ಶಕ್ತಿಯು ಈ ಜನರಲ್ಲಿ ಹೆಚ್ಚಾಗಿರುವುದು.

ಅಂಗೈಯ ಮಧ್ಯಭಾಗದಲ್ಲಿ ತುಂಬಾ ಗೆರೆಗಳು
ಒಟ್ಟಾರೆಯಾಗಿ ಹೆಚ್ಚು ರೇಖೆಗಳು ಇರುವ ವ್ಯಕ್ತಿಗಳು ತುಂಬಾ ಕ್ರಿಯಾತ್ಮಕ, ಬೇಗನೆ ಕುಪಿತರಾಗುವ ಮತ್ತು ಕೆಲವೊಂದು ಸಲ ನಕಾರಾತ್ಮಕವಾಗಿದ್ದರೂ ಪ್ರತಿಭಾವಂತರು. ನಿಮ್ಮನ್ನು ನೀವು ಶಾಂತ ಹಾಗೂ ಸ್ಥಿರತೆಯಿಂದ ಇಡಲು ಧ್ಯಾನ ಮತ್ತು ಆರಾಮ ನೀಡುವ ವ್ಯಾಯಾಮಗಳನ್ನು ಮಾಡಬೇಕು. ನಿಮ್ಮ ಜ್ಞಾನ ಹೆಚ್ಚಿಸುವ ಕೆಲಸ ಮಾಡಬೇಕು. ಇದರಿಂದ ನಿಮ್ಮ ಜಾಣ್ಮೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದು. ಹೃದಯ ಮತ್ತು ಬುದ್ಧಿಯ ಮಧ್ಯೆ ಸಿಲುಕಿಕೊಳ್ಳುವುದು ಇಂತಹ ರೇಖೆಗಳಿಂದಾಗಿಯೇ.



Click it and Unblock the Notifications
