For Quick Alerts
ALLOW NOTIFICATIONS  
For Daily Alerts

  ನೈಜಕಥೆ: ಜನನಾಂಗವಿಲ್ಲದೇ ಜನಿಸಿದ ಹೆಣ್ಣಿನ ಕಣ್ಣೀರ ಕಥೆ..

  |

  ಜನನಾಂಗಗಳಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ವಿಚಿತ್ರ ಎನಿಸುತ್ತದೆ ಅಲ್ಲವೇ? ಆದರೆ ಈ ಜಗತ್ತಿನಲ್ಲಿ ಶಿಶ್ನವಿಲ್ಲದೇ ಜನಿಸಿದ ಗಂಡುಮಗು ಹಾಗೂ ಯೋನಿಯೇ ಇಲ್ಲದೇ ಜನಿಸಿದ ಹೆಣ್ಣುಮಗುವಿನ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಕಂಡುಬರುತ್ತಲೇ ಇರುತ್ತವೆ.

  ಇಂದಿನ ಲೇಖನದಲ್ಲಿ ಈ ಪರಿಯಾಗಿ ಜನಿಸಿದ ಹೆಣ್ಣುಮಗುವಿಗೆ ಮೀನಿನ ಚರ್ಮದಿಂದ ಗುಪ್ತಾಂಗವೊಂದನ್ನು ಸೃಷ್ಟಿಸಿ ಆಕೆಗೊಂದು ಬದುಕನ್ನು ನೀಡಲಾಗಿರುವ ಕಥೆಯನ್ನು ವಿವರಿಸಲಾಗಿದೆ. ಸಾಮಾನ್ಯ ಗ್ರಹಿಕೆಗೆ ಇದು ಅಸಾಧ್ಯ ಎಂದು ಕಂಡುಬರುವ ಈ ನೈಜ ಕಥೆಯನ್ನು ಓದಿ...

  ಈ ಪ್ರಕರಣ ಕಂಡುಬಂದಿದ್ದು ಎಲ್ಲಿ?

  ಈ ಪ್ರಕರಣ ಕಂಡುಬಂದಿದ್ದು ಎಲ್ಲಿ?

  ಈ ಕಥೆಯ ಮುಖ್ಯಪಾತ್ರವಾಗಿರುವ ಜ್ಯೂಸಿಲೀನ್ ಮಾರಿನ್ಹೋ ಎಂಬ ಇಪ್ಪತ್ತಮೂರು ವಯಸ್ಸಿನ ಮಹಿಳೆ ಬ್ರಜಿಲ್ ದೇಶದಲ್ಲಿ ಜನಿಸಿದಾಗ ಆಕೆಯ ದೇಹದಲ್ಲಿ ಯೋನಿಮಾರ್ಗವೇ ಇರಲಿಲ್ಲ. Mayer-Rokitansky-Küster-Hause (MRKH) condition ಎಂಬ ವೈದ್ಯಕೀಯ ಹೆಸರಿನ ಈ ಕೊರತೆಯೊಂದಿಗೆ ಜನಿಸಿದ ಮಗುವಿನ ದೇಹದಲ್ಲಿ ಗರ್ಭಾಶಯ, ಗರ್ಭನಾಳ ಅಥವಾ ಗರ್ಭಕಂಠವೇ ಇರುವುದಿಲ್ಲ. ಅಂದರೆ ಈ ಮಹಿಳೆ ಜನ್ಮತಃ ಬಂಜೆಯಾಗಿದ್ದು ಮಕ್ಕಳಾಗುವ ಸಾಧ್ಯತೆ ಇರುವುದಿಲ್ಲ. ಕಳೆದ ವರ್ಷ ಈಕೆಯ ಶರೀರದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಸಹಜವಾದ ಯೋನಿಮಾರ್ಗವನ್ನು ನಿರ್ಮಿಸಲು neovaginoplasty ಎಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು.

  ಈ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತದೆ?

  ಈ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತದೆ?

  ನಿಯೋವಜೈನೋಪ್ಲಾಸ್ಟಿ ಎಂಬ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಶರೀರದಲ್ಲಿ ನೈಸರ್ಗಿಕವಾಗಿ ಗರ್ಭಕಂಠವಿರಬೇಕಾದ ಸ್ಥಳದಲ್ಲಿ ಮುಚ್ಚಿದ್ದ ಭಾಗವನ್ನು ತೆರೆಯಲಾಗುತ್ತದೆ. ಈ ಭಾಗದಲ್ಲಿ ಹೆಣ್ಣಿನ ಭಗಭಾಗವನ್ನೇ ಹೋಲುವ ಅಚ್ಚೊಂದನ್ನು ಅಳವಡಿಸಲಾಗುತ್ತದೆ, ಈ ಅಚ್ಚಿನ ಗೋಡೆಗಳನ್ನು ಟಿಲಾಪಿಯಾ ಎಂಬ ಮೀನಿನ ಚರ್ಮದ ಭಾಗದಿಂದ ಆವರಿಸಿರಲಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ದೇಹ ಈ ಅಚ್ಚನ್ನು ಸ್ವೀಕರಿಸಿ ಮೀನಿನ ಚರ್ಮವನ್ನು ತನ್ನದೇ ಭಾಗವನ್ನಾಗಿ ಸ್ವೀಕರಿಸುತ್ತದೆ ಹಾಗೂ ನಿಧಾನವಾಗಿ ರಕ್ತನಾಳಗಳು ಬೆಳೆದು ಸಹಜವಾದ ಸಂವೇದನೆಯನ್ನು ಪಡೆಯಲು ಸಾಧ್ಯವಾಗುತ್ತದೆ.

  ಈಕೆಗೆ ಹದಿನೈದು ವರ್ಷವಾಗುವವರೆಗೂ ಈ ಸ್ಥಿತಿ ಇದ್ದುದೇ ಗೊತ್ತಿರಲಿಲ್ಲ

  ಈಕೆಗೆ ಹದಿನೈದು ವರ್ಷವಾಗುವವರೆಗೂ ಈ ಸ್ಥಿತಿ ಇದ್ದುದೇ ಗೊತ್ತಿರಲಿಲ್ಲ

  ಮಾರಿನ್ಹೋ ರವರಿಗೆ ಸುಮಾರು ಹದಿನೈದು ವರ್ಷವಾಗುವವರೆಗೂ ಹೀಗೊಂದು ಕೊರತೆ ಇದ್ದುದೇ ಗೊತ್ತಿರಲಿಲ್ಲ. ಆ ವಯಸ್ಸಿನ ಎಲ್ಲ ಹೆಣ್ಣುಮಕ್ಕಳಂತೆ ಈಕೆಯೂ ಸಹಜವಾದ ದೇಹದ ಬೆಳವಣಿಗೆ ಹಾಗೂ ಮಾಸಿಕ ದಿನಗಳಲ್ಲಿ ಎದುರಾಗುವ ಹೊಟ್ಟೆ ನೋವನ್ನು ಅನುಭವಿಸಿದ್ದರೂ ಎಂದೂ ಋತುಸ್ರಾವವನ್ನು ಕಂಡಿರಲಿಲ್ಲ. ಕೆಲವಾರು ತಿಂಗಳು ಕಳೆದ ಬಳಿಕ ಹೇಗಾಗದೇ ಇದ್ದುದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಲು ವೈದ್ಯರ ಬಳಿ ಹೋಗಿ ತಪಾಸಿಸಿಕೊಂಡಾಗಲೇ ವೈದ್ಯರಿಗೆ ಈಕೆಯ ದೈಹಿಕ ಕೊರತೆಯ ಬಗ್ಗೆ ತಿಳಿದುಬಂದಿತ್ತು!

  ಮೀನಿನ ಚರ್ಮದ ನೆರವಿನ ಶಸ್ತ್ರಚಿಕಿತ್ಸೆಯ ಬಗ್ಗೆ

  ಮೀನಿನ ಚರ್ಮದ ನೆರವಿನ ಶಸ್ತ್ರಚಿಕಿತ್ಸೆಯ ಬಗ್ಗೆ

  ಈ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗಿರುವ ಮೀನಿನ ಚರ್ಮದ ಬೆಲೆ ನಿಕೃಷ್ಟವೆಂದು ಕಂಡುಬಂದರೂ ಇದು ನೀಡುವ ಪರಿಣಾಮವನ್ನು ಮಾತ್ರ ಹಣದ ಪ್ರಮಾಣದಲ್ಲಿ ಅಳೆಯಲಾಗದು. ಏಕೆಂದರೆ ಸಾಮಾನ್ಯವಾಗಿ ನಮ್ಮ ದೇಹ ತನ್ನ ಸ್ವಂತ ಅಂಗಗಳ ಹೊರತಾಗಿ ಇತರ ಅಂಗಗಳನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಆದರೆ ಕೋರಲ್ ಎಂಬ ಸಮುದ್ರದ ಚಿಪ್ಪು (ಮೂಳೆಗಳ ಚಿಕಿತ್ಸೆಗಾಗಿ) ಹಾಗೂ ಟಿಲಾಪಿಯಾ ಮೀನಿನ ಚರ್ಮ ಮೊದಲಾದವುಗಳನ್ನು ಸ್ವೀಕರಿಸುತ್ತದೆ. ಈ ಚರ್ಮದಲ್ಲಿ ಹೆಚ್ಚಿನ ಪ್ರಮಾಣದ ಆರ್ದತೆ ಹಾಗೂ ನಮ್ಮ ಚರ್ಮದಲ್ಲಿಯೇ ಕಂಡುಬರುವಂತಹ ಕೊಲ್ಯಾಜೆನ್ ಇದೆ. ಇದು ಗಾಯಗಳನ್ನು ಮಾಗಿಸಲು, ನಷ್ಟವಾಗಿದ್ದ ಚರ್ಮದ ಭಾಗವನ್ನು ತುಂಬಿಸಿಕೊಡಲು ನೆರವಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿಯೂ ಮಹಿಳೆಗೆ ಅಗತ್ಯವಿದ್ದ ಚರ್ಮದ ಭಾಗವನ್ನು ಈ ಮೀನಿನ ಚರ್ಮ ಒದಗಿಸಿಕೊಡುತ್ತದೆ ಹಾಗೂ ನಿಧಾನವಾಗಿ ಚರ್ಮದಲ್ಲಿ ರಕ್ತನಾಳಗಳು ಬೆಳೆದ ಬಳಿಕ ಸಹಜಚರ್ಮದಂತೆಯೇ ಪರಿವರ್ತನೆಗೊಳ್ಳುತ್ತದೆ. ಇದಕ್ಕಾಗಿ ಮೀನಿನ ಚರ್ಮವನ್ನು ಒಂದಿನಿತೂ ಹುರುಪೆ, ವಾಸನೆ ಅಥವಾ ಸೋಂಕುಕಾರಕ ಕ್ರಿಮಿಗಳಿಲ್ಲದಂತೆ ಅತ್ಯಂತ ಸ್ವಚ್ಛನಾಗಿಸಿ ಉಪಯೋಗಿಸಲಾಗುತ್ತದೆ. ಶಸ್ತ್ರಚಿಕಿತ್ಸೆಗಳಿಗೆ ಸಿದ್ಧರೂಪದಲ್ಲಿ ಲಭ್ಯವಾಗುವಂತೆ ಈ ಚರ್ಮವನ್ನು ಸ್ವಚ್ಛಗೊಳಿಸಿ, ಕ್ರಿಮಿಶುದ್ಧೀಕರಣದ ಬಳಿಕ ಫ್ರಿಜ್ಜುಗಳಲ್ಲಿ ಎರಡು ವರ್ಷಗಳವರೆಗೂ ಕೆಡದಂತೆ ಕಾಪಾಡಬಹುದು.

  ಮಹಿಳೆಗೆ ಹೆಣ್ತನ ನೀಡಿದ ವೈದ್ಯರ ಸ್ಪಷ್ಟೀಕರಣ

  ಮಹಿಳೆಗೆ ಹೆಣ್ತನ ನೀಡಿದ ವೈದ್ಯರ ಸ್ಪಷ್ಟೀಕರಣ

  ಈ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದ ವೈದ್ಯರೊಬ್ಬರು ಈ ಬಗ್ಗೆ ಹೀಗೆ ಹೇಳಿದ್ದಾರೆ: ಈಕೆಗೊಂದು 'ಹೊಸ ಯೋನಿ'ಯನ್ನು ನೀಡಲು ನಾವು ಭಗಭಾಗವನ್ನೇ ಹೋಲುವ ಅಚ್ಚೊಂದನ್ನು ಅಕ್ರಿಲಿಕ್ ಸಾಮಾಗ್ರಿಯಿಂದ ತಯಾರಿಸಿ ಇದಕ್ಕೆ ಟಿಲಾಪಿಯಾ ಮೀನಿನ ಚರ್ಮವನ್ನು ಹೊದಿಸಿ ಯೋನಿಯಿರಬೇಕಾದ ಸ್ಥಳದಲ್ಲಿ ಅಂದರೆ ಮೂತ್ರಕೋಶ ಹಾಗೂ ಮಲದ್ವಾರದ ನಡುವಿನ ಸ್ಥಳದಲ್ಲಿ ಅಳವಡಿಸಿದೆವು.

  ಇದುವರೆಗೆ ಕೇವಲ ನಾಲ್ವರು ಮಹಿಳೆಯರಿಗೆ ಈ ಶಸ್ತ್ರಚಿಕಿತ್ಸೆಯಾಗಿದೆ

  ಇದುವರೆಗೆ ಕೇವಲ ನಾಲ್ವರು ಮಹಿಳೆಯರಿಗೆ ಈ ಶಸ್ತ್ರಚಿಕಿತ್ಸೆಯಾಗಿದೆ

  ಜಗತ್ತಿನಲ್ಲಿ ಹೆಣ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ ಪಡೆದ ಕೇವಲ ನಾಲ್ಕು ಅದೃಷ್ಟಶಾಲಿ ಮಹಿಳೆಯರಲ್ಲಿ ಈಕೆ ನಾಲ್ಕನೆಯವಳಾಗಿದ್ದಾರೆ. ಈ ಶಸ್ತ್ರಚಿಕಿತ್ಸೆಗಾಗಿ ಆಕೆಯನ್ನು ನಾಲ್ಕು ವಾರಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದು ಬಳಿಕ ಮನೆಗೆ ಕಳುಹಿಸಿಕೊಡಲಾಗಿತ್ತು. ಪೂರ್ಣ ಚೇತರಿಕೆಯ ಬಳಿಕ ಈಕೆಗೆ ಹೇಗೆನಿಸುತ್ತದೆ ಎಂದು ಕೇಳಿದಾಗ, ಸಹಜ ಹೆಣ್ತನವನ್ನು ಅನುಭವಿಸುವುದು ಹೊಸ ಚೈತನ್ಯ ನೀಡಿದೆ ಎಂದು ಆಕೆ ತಿಳಿಸುತ್ತಾರೆ.

  ಈಕೆ ಈಗ ಸಹಜ ಜೀವನ ಸಾಗಿಸಬಹುದು

  ಈಕೆ ಈಗ ಸಹಜ ಜೀವನ ಸಾಗಿಸಬಹುದು

  ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಈತ ಇತರ ಮಹಿಳೆಯರಂತೆಯೇ ತನ್ನ ಸಂಗಾತಿಯೊಡನೆ ಸಂಸರ್ಗ ನಡೆಸಬಲ್ಲವಳಾಗಿದ್ದು ಹೊಸ ಜೀವನವನ್ನು ಸುಖಕರವಾಗಿ ಕಳೆಯುತ್ತಿದ್ದಾರೆ. "ಹೆಚ್ಚಿನ ಮಹಿಳೆಯರಿಗೆ ನೈಸರ್ಗಿಕವಾಗಿ ಸಿಕ್ಕಿರುವ ಈ ಭಾಗ್ಯ ತನಗೂ ಒದಗಿರುವಂತಾಗಿದ್ದು ನನಗೆ ಅತೀವ ಸಂತಸ ನೀಡಿದೆ" ಎಂದು ಆಕೆ ಉದ್ಗರಿಸುತ್ತಾರೆ. ಈಕೆಯ ಮುಂದಿನ ಜೀವನ ಸುಖಮಯವಾಗಿರಲಿ, ಶಸ್ತ್ರಚಿಕಿತ್ಸೆಯ ಪ್ರಭಾವದಿಂದ ಶೀಘ್ರವೇ ಪೂರ್ಣವಾಗಿ ಗುಣಮುಖರಾಗಲಿ ಎಂದು ನಾವೆಲ್ಲರೂ ಹಾರೈಸೋಣ.

  English summary

  Girl Born Without A Vagina Who Created One Using Fish Skin!

  Have you ever imagined a life without your sex organs? Sounds strange, right? But, there are a few cases of people who are born without a vagina or penis. Here, in this article, we bring in the details of one such case of a woman who did not have a vagina, but it was created later using the skin of a fish! How unbelievable is that! Check out on the details of this unique case on how the vagina was created using the skin of a fish...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more