For Quick Alerts
ALLOW NOTIFICATIONS  
For Daily Alerts

ಈ 3 ರಾಶಿಯವರಿಗೆ ಜೂನ್ ತಿಂಗಳಲ್ಲಿ ಸ್ವಲ್ಪ ಕಷ್ಟ ಬರಲಿದೆ! ಆದರೆ ಚಿಂತಿಸದಿರಿ...

By Divya Pandit
|

ಜೂನ್ ತಿಂಗಳು ಒಂದು ವಿಶೇಷವದ ತಿಂಗಳು ಎನ್ನಬಹುದು. ಮಕ್ಕಳಿಗೆ ಶಾಲೆಯ ಆರಂಭ, ಪ್ರಕೃತಿಯು ಬೇಸಿಗೆಯ ಬಿಸಿಯಿಂದ ಮುಕ್ತಾಯ ಪಡೆದು ಮಳೆನೀರಿನ ತಂಪಾದ ಎರಕ ಹೊಂದುವುದು, ಹೊಸದಾಗಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುವುದು, ಬಹುತೇಕ ಸಂಸ್ಥೆಗಳಲ್ಲಿ ಭಡ್ತಿ ಹಾಗೂ ಸಂಬಳದಲ್ಲಿ ಹೆಚ್ಚಳವನ್ನು ಮಾಡುವಂತಹ ಸಮಯ ಎಂದು ಹೇಳಲಾಗುವುದು. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಹೆಚ್ಚಿನ ಸಂತೋಷ ಅನುಭವಿಸಲು ಸಿದ್ಧರಾಗಿರುತ್ತಾರೆ. ಜೊತೆಗೆ ಜೀವನದಲ್ಲಿ ಯಾವುದೋ ಸಂತೋಷದ ಕ್ಷಣಗಳು ಎದುರಾಗುವುದು ಎನ್ನುವ ಕಾತುರದಲ್ಲಿ ಇರುತ್ತಾರೆ.

ಈ ಜೂನ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯು ಅನೇಕರಿಗೆ ವಿಶೇಷ ಫಲಗಳನ್ನುನೀಡಲಿದೆ ಎನ್ನುವುದು ನಿಜ. ಅದೇ ರೀತಿ ಕೆಲವರಿಗೆ ಅತ್ಯಂತ ಕಷ್ಟದ ಸ್ಥಿತಿಯನ್ನು ಒಡ್ಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದರಲ್ಲೂ 3 ರಾಶಿಚಕ್ರದವರಿಗೆ ಅತ್ಯಂತ ಕಠಿಣ ಸ್ಥಿತಿಯನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು.

ಆದರೆ ಅವರ ಜೀವನಕ್ಕೆ ಇದೇ ಅಂತ್ಯದ ವಿಚಾರ ಎಂದಲ್ಲ ಎಂದು ಹೇಳಬಹುದು. ಅದೇ ಜೂನ್ ಅಂತ್ಯದ ವೇಳೆಗೆ ಒಂದಿಷ್ಟು ನಿರಾಳ ಭಾವನೆಯನ್ನು ಅನುಭವಿಸುವರು ಎಂದು ಹೇಳಲಾಗುವುದು. ತಿಂಗಳಲ್ಲಿ ಕಷ್ಟದ ಅನುಭವಕ್ಕೆ ಒಳಗಾಗುವ ರಾಶಿಚಕ್ರಗಳು ಯಾವವು? ಅವು ಅನುಭವಿಸುವ ಸ್ಥಿತಿ ಹೇಗಿರುತ್ತದೆ? ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರವೇನು? ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಈ ರಾಶಿಯವರು ಆದಷ್ಟು ತಾಳ್ಮೆ ಹಾಗೂ ಎಚ್ಚರಿಕೆಯಲ್ಲಿ ಇರಬೇಕು. ಈ ತಿಂಗಳು ಇವರಿಗೆ ಎಲ್ಲಾ ವಿಚಾರದಲ್ಲೂ ಹಿನ್ನೆಡೆ ಉಂಟಾಗುವ ಸಾಧ್ಯತೆಗಳಿವೆ. ಇವರನ್ನು ಆಳುವ ಗ್ರಹವಾದ ಮಂಗಳವು ಜೂನ್ ಅಂತ್ಯದ ವೇಳೆಗೆ ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುವುದು. ಹಾಗಾಗಿ ಇದರ ಪರಿಣಾಮ ಇವರ ಮೇಲೆ ಗಂಭೀರವಾಗಿಯೇ ಉಂಟಾಗುವುದು. ಇವರು ಆದಷ್ಟು ಮುಕ್ತ ಹಾಗೂ ವಿಮೋಚನೆಗೊಳ್ಳುವ ತೀವ್ರವಾದ ಆಸೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ.

ಮೇಷ

ಮೇಷ

ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗ ಆದಷ್ಟು ಕಾಳಜಿಯಿಂದ ಇರುವುದನ್ನು ಕಲಿಯಿರಿ. ಮಂಗಳನ ಹಿಮ್ಮುಖ ಚಲನೆಯಿಂದ ನಿಮ್ಮ ಮಾರ್ಗದಲ್ಲಿ ಅಡೆತಡೆ ಉಂಟಾಗುವುದು. ಜೊತೆಗೆ ಒಂದಿಷ್ಟು ಮಾನಸಿಕ ಒತ್ತಡ ಹಾಗೂ ಉದ್ವಿಘ್ನೆತೆಗೆ ಒಳಗಾಗಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ಇವರು ಈ ತಿಂಗಳಲ್ಲಿ ಸಾಕಷ್ಟು ಒತ್ತಡವನ್ನು ಅನುಭವಿಸುವರು. ಜೂನ್ 26ರ ಹೊತ್ತಿಗೆ ಆಳ್ವಿಕೆಯ ಗ್ರಹಗಳ ಹಿಮ್ಮುಖ ಚಲನೆಯು ಅಗಾಧವಾದ ಪರಿಣಾಮವನ್ನು ಬೀರುವುದು. ಇದರಿಂದಾಗಿ ಎಲ್ಲಾ ಕೆಲಸವೂ ನಿಮಗೆ ಕಷ್ಟ ಎಂಬ ಭಾವನೆ ಉಂಟಾಗುವುದು. ಏಪ್ರಿಲ್ 22ರ ವರೆಗೆ ನಿಮಗೆ ಪ್ಲುಟೋ ಗ್ರಹವು ಹಿಮ್ಮುಖ ಚಲನೆಯನ್ನು ಪಡೆದುಕೊಂಡಿತ್ತು ಆ ವೇಳೆಗೆ ಶಕ್ತಿಯನ್ನು ಹೆಚ್ಚಿಸುವ ಹಾಗೂ ರಕ್ಷಣಾತ್ಮಕ ಭಾವನೆಯನ್ನು ತಳೆದಿದ್ದಿರಿ. ಇದೀಗ 8ನೇ ಮನೆಯಲ್ಲಿ ಸೂರ್ಯ ಮತ್ತು ಬುಧನು ಇರುವುದರಿಂದ ಅತಿಯಾದ ಶಕ್ತಿಯಿಂದ ಕೂಡಿರುತ್ತವೆ.

ವೃಶ್ಚಿಕ

ವೃಶ್ಚಿಕ

ನಿಮ್ಮ ಭಾವನೆಯ ಉದ್ರೇಕಗಳು ಮತ್ತು ಪ್ರವೃತ್ತಿಗಳು ಅತಿಯಾದ ವೇಗವನ್ನು ಪಡೆದುಕೊಳ್ಳುವುದು. ನಿಮ್ಮಆಕಾಂಕ್ಷೆಗಳು ಹೆಚ್ಚಾಗಿರುತ್ತವೆ ಅಥವಾ ಉನ್ನತ ಮಟ್ಟದಲ್ಲಿರುತ್ತವೆ. ಆದರೆ ವಾಸ್ತವದಲ್ಲಿ ನೀವು ಪಡೆಯುವುದು ಅತ್ಯಂತ ಕಡಿಮೆ ಮಟ್ಟದಲ್ಲಿರುವುದು ಎಂದು ಹೇಳಲಾಗುವುದು. ವ್ಯವಹಾರಗಳಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳದಂತೆ ಎಚ್ಚರಿಕೆಯನ್ನು ವಹಿಸಬೇಕು.

ಮಕರ

ಮಕರ

ಇವರು ಸಾಮಾನ್ಯವಾಗಿ ಈ ತಿಂಗಳು ಅತಿಯಾಗಿ ಭಾವನಾತ್ಮಕ ಅನುಭವವನ್ನು ಹೊಂದುವಿರಿ. ಜೂನ್ 28ರ ಹುಣ್ಣಿಮೆಯಿಂದ ಒಂದಿಷ್ಟು ಉತ್ತಮ ಫಲಗಳನ್ನು ಪಡೆಯಬಹುದು. ನಂಬಲಾಗದಂತಹ ಸನ್ನಿವೇಶಗಳು ಎದುರಾಗಬಹುದು. ಆಧ್ಯಾತ್ಮಿಕವಾಗಿ ಒಂದಷ್ಟು ಪ್ರತಿಫಲವನ್ನು ಅನುಭವಿಸುವಿರಿ. ಅಲ್ಲದೆ ಅತೀಂದ್ರಿಯ ಶಕ್ತಿಯು ನಿಮಗೆ ಸಹಾಯ ಮಾಡುವುದು. ತಿಂಗಳ ಆರಂಭ ಹಾಗೂ ಮಧ್ಯಂತರದ ಸಮಯದಲ್ಲಿ ಗ್ರಹಗಳ ಬದಲಾವಣೆಯು ಒಂದಿಷ್ಟು ನೋವು ಹಾಗೂ ಒತ್ತಡವನ್ನು

ತಂದೊಡ್ಡುವುದು. ಅದೇ ಶನಿಯನ್ನು ಸಂಧಿಸುವ ಹುಣ್ಣಿಮೆಯ ನಂತರ ನಿಮ್ಮ ಭಾವನೆಗಳು ಅತ್ಯಂತ ಗಂಭೀರವಾಗಿರುತ್ತದೆ ಎಂದು ಹೇಳಲಾಗುವುದು. ಕೆಲವು ವೃತ್ತಿಪರರಿಗೆ ವಿಮರ್ಶಾತ್ಮಕ ಸಂಗತಿಗಳು ಎದುರಾಗಬಹುದು. ಸಮಸ್ಯೆಗಳು ಎದುರಾದಾಗ ಸೂಕ್ತ ರೀತಿಯ ನಿರ್ವಹಣೆ ಹಾಗೂ ಅದರ ಪರಿಣಾಮದಿಂದ ಉಂಟಾಗುವ ಬದಲಾವಣೆಯನ್ನು ಸ್ವೀಕರಿಸಲು ಸಿದ್ಧರಾಗಿರಬೇಕು.

English summary

For these 3 Zodiac Signs June 2018 Will Be The Worst Month!

With so many positive vibes swirling through baby blue skies and poolside afternoons in the heat, it may seem like low-spirits and the month of June are mutually exclusive. However, there’s a reason Lana Del Rey wrote about “Summertime Sadness,” and truth be told, it’s almost worse than any other form of seasonal sadness. Why? Because it just doesn’t make sense. If you’re feeling the blues too, you’re definitely not alone, because June 2018 will be the worst month for these zodiac signs: Aries, Scorpio, and Capricorn.
Story first published: Saturday, June 16, 2018, 8:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more