Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಕೆ ಕಾರಿನಲ್ಲಿ ಹೋಗುವಾಗ ಕಣ್ಣಿನ ಮೇಕಪ್ ಮಾಡುತ್ತಿದ್ದಳು, ಆದರೆ ದೇವರ ಆಟವೇ ಬೇರೆಯಿತ್ತು..
ಕಾರ್ ಎಂದರೆ ಅದೇನೋ ಒಂದು ಬಗೆಯ ಆರಾಮದಾಯಕ ಅನುಭವವನ್ನು ನೀಡುತ್ತದೆ. ದೂರದ ಪ್ರದೇಶಗಳಿಗೆ ಹೋಗುವುದಾಗಲಿ ಅಥವಾ ಹತ್ತಿರದ ಪ್ರದೇಶಗಳಿಗೆ ಹೋಗುವುದೇ ಆಗಿರಲಿ ಎಲ್ಲಾ ಸಮಯದಲ್ಲೂ ಸುಖಕರವಾದ ಭಾವನೆಯನ್ನು ನೀಡುತ್ತದೆ. ಕೆಲವರಿಗಂತೂ ಕಾರ್ ಎಂದರೆ ಒಂದು ಸಣ್ಣ ಮನೆ ಇದ್ದಂತೆ. ಕಾರಲ್ಲಿ ಪ್ರಯಾಣಿಸುತ್ತಿದ್ದಂತೆ, ಊಟ-ತಿಂಡಿ ಮಾಡುವುದು, ಮೇಕಪ್ ಮಾಡುವುದು ಹೀಗೆ ಅನುಕೂಲಕ್ಕೆ ತಕ್ಕಂತಹ ಕೆಲಸಗಳನ್ನು ಅಲ್ಲಿಯೇ ಮಾಡಿ ಮುಗಿಸುತ್ತಾರೆ.
ಕಾರ್ ಎನ್ನುವುದು ಎಷ್ಟು ಆರಾಮದಾಯಕ ವಾಹನವೋ ಅಷ್ಟೇ ಅಪಾಯಕಾರಿಯೂ ಹೌದು. ಇದರಲ್ಲಿ ಚಲಿಸುವಾಗ ಮಾಡುವ ಸಣ್ಣ-ಪುಟ್ಟ ತಪ್ಪುಗಳು ಸಹ ಜೀವನವನ್ನೇ ಕೊನೆಗೊಳಿಸುತ್ತದೆ. ಹಾಗಾಗಿ ಕಾರು ಚಲಿಸುವಾಗ ಸೂಕ್ತ ಎಚ್ಚರಿಕೆಯಿಂದಲೇ ಇರಬೇಕು. ಇಲ್ಲವಾದರೆ ಅಪಾಯ ಎನ್ನುವುದು ಕಟ್ಟಿಟ್ಟ ಬುತ್ತಿ. ಹೌದು, ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆಯಿತು. ಮಹಿಳೆಯೊಬ್ಬಳು ಕಾರ್ ಅಲ್ಲಿ ಹೋಗುವಾಗ ಕಣ್ಣಿನ ಪೇಕಪ್ ಮಾಡಲು ಮುಂದಾಗಿದ್ದಳು. ಆ ಸಮಯದಲ್ಲಿ ಅವಳ ಟ್ಯಾಕ್ಸಿ ಅಪಘಾತಕ್ಕೆ ಈಡಾಯಿತು. ಕಣ್ಣಿನ ಅಲಂಕಾರ ಮಾಡಿಕೊಳ್ಳುತ್ತಿದ್ದ ಆಕೆಯ ಸೌಂದರ್ಯ ವರ್ಧಕ ಪೆನ್ಸಿಲ್ ಅಪಾಯಕಾರಿ ಸ್ಥಿತಿಯನ್ನು ಸೃಷ್ಟಿಸಿತು.
ಅನೇಕ ಮಹಿಳೆಯರು ಆಫೀಸ್‍ಗೆ ಹೋಗುವಾಗ ಅಥವಾ ಇನ್ಯಾವುದೋ ಸಭೆ ಸಮಾರಂಭಗಳಿಗೆ ಹೋಗುವಾಗ ಕಾರ್ ಅಲ್ಲಿ ಕುಳಿತು ಮೇಕಪ್ ಮಾಡಿಕೊಳ್ಳುತ್ತಾರೆ. ಇದರಿಂದ ಅಚಾನಕ್ ಎನ್ನುವ ರೀತಿಯಲ್ಲಿ ಭೀಕರ ನೋವಿಗೆ ಒಳಗಾಗಬಹುದು. ಕುರುಡುತನ ಅಥವಾ ಅಂಗ ಹೀನ ಹೀಗೆ ವಿವಿಧ ಆಘಾತಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಪೆನ್ಸಿಲ್ ಕಣ್ಣಿಗೆ ಚುಚ್ಚಿ ಸೋಚನೀಯ ಸ್ಥಿತಿಗೆ ತಲುಪಿದ ಮಹಿಳೆಯ ಬಗ್ಗೆ ತಿಳಿಯಲು ಮುಂದೆ ಓದಿ...

ಸ್ನೇಹಿತರನ್ನು ಭೇಟಿಯಾಗಲು ಹೊರಟಿದ್ದಳು...
ಥೈಲ್ಯಾಂಡ್‍ನ ಬ್ಯಾಂಕಾಕ್‍ಅಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಟ್ರಾಫಿಕ್ ಜಾಮ್ ಅಲ್ಲಿ ಕ್ಯಾಬ್ ಒಂದರ ಹಿಂಭಾಗದಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದಳು. ಅವಳ ಸ್ನೇಹಿತರನ್ನು ಭೇಟಿಯಾಗಲು ಹೊರಟ ಆಕೆ ತನ್ನ ಮೇಕಪ್‍ಗೆ ಕೊನೆಯದಾಗಿ ಒಂದಷ್ಟು ಸ್ಪರ್ಶ ನೀಡುವ ಉದ್ದೇಶದಿಂದ ಐ ಲೈನರ್ ತೆಗೆದು ಅನ್ವಯಿಸುತ್ತಿದ್ದಳು.

ಸ್ನೇಹಿತರನ್ನು ಭೇಟಿಯಾಗಲು ಹೊರಟಿದ್ದಳು...
ಕ್ಯಾಬ್ ನಿಧಾನವಾಗಿ ಚಲಿಸುತ್ತಿತ್ತಾದರೂ ಕ್ಯಾಬ್ ಮುಂದಿರುವ ಪಿಕ್ ಅಪ್ ಟ್ರಕ್ ಗೆ ಅಪ್ಪಳಿಸಿತು. ಇದರ ಪರಿಣಾಮವಾಗಿ ಕ್ಯಾಬ್ ಅಲ್ಲಿ ಕುಳಿತ ಮಹಿಳೆಗೆ ಮುಂದಿನ ಸೀಟ್ ಬಡಿಯಿತು. ಆಗ ಅವಳ ಕೈಲಿದ್ದ ಐ ಲೈನರ್ ಪೆನ್ಸಿಲ್ ಎಡಗಣ್ಣಿಗೆ ಚುಚ್ಚಿತು.

ಅವಳು ಅದೃಷ್ಟವಂತಳು...
ಭಯಾನಕ ಅಪಘಾತದಿಂದ ಮರಳಲು ಮಹಿಳೆ ಅದೃಷ್ಟಶಾಲಿಯಾಗಿದ್ದಳು. ಆ ಪೆನ್ಸಿಲ್ ಕಣ್ಣಿನ ಪ್ರಮುಖ ಭಾಗವನ್ನು ಚುಚ್ಚಿರಲಿಲ್ಲ. ಈ ಕಾರಣದಿಂದ ಯಾವುದೇ ಪರಿಣಾಮಕಾರಿ ಅಪಾಯವಿಲ್ಲ ಎಂದು ಕಣ್ಣಿನ ವೈದ್ಯರು ದೃಢಪಡಿಸಿದರು. ಕಣ್ಣಿನಲ್ಲಿ ಅರ್ಥ ಭಾಗದಷ್ಟು ಪೆನ್ಸಿಲ್ ಒಳಕ್ಕೆ ಹೊಕ್ಕಿತ್ತು. ಈ ಕಾರಣಕ್ಕೆ ಹುಡುಗಿಯ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಇದು ತುಂಬಾ ನೋವಿನಿಂದ ಕೂಡಿತ್ತು ಎಂದು ಹೇಳಲಾಗಿದೆ.

ಚಿಕಿತ್ಸೆ ಮಾಡಲಾಯಿತು...
ವೈದ್ಯರು ಆಕೆಯ ಕಣ್ಣಿನಿಂದ ಪೆನ್ಸಿಲ್‍ಅನ್ನು ಸುರಕ್ಷಿತ ರೀತಿಯಲ್ಲಿಯೇ ತೆಗೆದರು. ಆ ಸಮಯದಲ್ಲಿ ಹುಡುಗಿಗೆ ಪ್ರಜ್ಞೆಯಿತ್ತು ಎಂದು ಹೇಳಲಾಗುತ್ತಿದೆ. ಸೂಕ್ತ ಚಿಕಿತ್ಸೆಯ ಮೂಲಕ ಆಕೆಯ ಚೇತರಿಕೆಯಾಯಿತು.

ಮಹಿಳೆಯರಿಗೊಂದು ಎಚ್ಚರಿಕೆ...
ಕಾರಲ್ಲಿ ಹೋಗುವಾಗ ಬಹುತೇಕ ಮಹಿಳೆಯರು ಮೇಕಪ್ ಮಾಡಿಕೊಳ್ಳುತ್ತಾರೆ. ಕಾರು ಚಲಿಸುತ್ತಿರುವಾಗ ಯಾವುದೋ ಅಚಾನಕ್ ಘಟನೆಗಳಿಂದ ಅಪಘಾತ ಉಂಟಾಗಬಹುದು. ಅಂತಹ ಸಮಯದಲ್ಲಿ ಮೇಕಪ್ ಮಾಡಿಕೊಳ್ಳುತ್ತಿದ್ದರೆ ಅಪಾಯಕಾರಿ ನೋವನ್ನು ಅನುಭವಿಸಬೇಕಾಗುವುದು ಎನ್ನುವುದಕ್ಕೆ ಈ ಘಟನೆಯು ಒಂದು ಉದಾಹರಣೆಯಾಗುತ್ತದೆ. ಕಾರಲ್ಲಿ ಕುಳಿತು ಮೇಕಪ್ ಮಾಡಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ನೆನಪಿನಲ್ಲಿಡಿ.



Click it and Unblock the Notifications
