Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್ ನಲ್ಲಿ ಜನಿಸುವ ನಾಲ್ಕು ವಿಧದ ಜನರ ನಡವಳಿಕೆಗಳು
ವರ್ಷದ ಹನ್ನೆರಡು ತಿಂಗಳುಗಳಲ್ಲಿ ಒಬ್ಬರಲ್ಲದೆ, ಮತ್ತೊಬ್ಬರ ಜನನ ಆಗುತ್ತಲೇ ಇರುವುದು. ಅದರಲ್ಲಿ ಆಯಾಯ ತಿಂಗಳಿಗೆ ಅನುಗುಣವಾಗಿ ಅವರ ವ್ಯಕ್ತಿತ್ವ ಕೂಡ ಬಂದಿರುವುದು. ಇದು ಸಹಜ ಎನ್ನುತ್ತವೆ ಜೋತಿಷ್ಯಶಾಸ್ತ್ರ. ಅದೇ ರೀತಿ ಜೂನ್ ನಲ್ಲಿ ಹುಟ್ಟಿರುವವರು ತುಂಬಾ ಆಕರ್ಷಣೀಯವಾಗಿರುವರು ಮತ್ತು ಅವರನ್ನು ಹಲವಾರು ಮಂದಿ ಸ್ನೇಹಿತರು ಸುತ್ತಿಕೊಂಡಿರುವರು. ಯಾವುದೇ ಪಾರ್ಟಿಗೆ ಹೋದರೆ ಅಲ್ಲಿ ಇವರೇ ಆಕರ್ಷಣೆಯ ಕೇಂದ್ರ.
ಇದೇ ರೀತಿ ಜೂನ್ ನಲ್ಲಿ ನಾಲ್ಕು ವಿಧದ ಜನರು ಜನಿಸುತ್ತಾರೆಂದು ನಿಮಗೆ ತಿಳಿದಿದೆಯಾ? ನೀವು ಜೂನ್ ನಲ್ಲಿ ಹುಟ್ಟಿದ್ದರೆ ನಿಮ್ಮ ವ್ಯಕ್ತಿತ್ವವು ಈ ಲೇಖನಕ್ಕೆ ಅನುಗುಣವಾಗಿ ಇದೆಯಾ ಎಂದು ತಿಳಿಯಿರಿ. ಜುನ್ ನಲ್ಲಿ ಹುಟ್ಟಿರುವಂತಹವರಲ್ಲಿ ಹಠಮಾಠಿ ಧೋರಣೆಯಿಂದಾಗಿಯೇ ಅವರು ಯಾವಾಗಲೂ ಸಮಸ್ಯೆಗೆ ಸಿಲುಕುವರು. ನಿಮ್ಮ ವ್ಯಕ್ತಿತ್ವ ಹೇಗೆ ಇರುವುದು ಎಂದು ನೀವು ತಿಳಿಯಿರಿ.

1-8ನೇ ತಾರೀಕಿನ ತನಕ ಜನಿಸಿರುವವರು
ಈ ದಿನಾಂಕದ ಪರಿಧಿಯಲ್ಲಿ ಹುಟ್ಟಿರುವಂತಹವರು ತಮ್ಮ ಸಾಮಾಜಿಕ ಜೀವನದಲ್ಲಿ ಅತ್ಯುತ್ತಮವಾದ ಭವಿಷ್ಯ ಹೊಂದಿರುವರು. ಇವರ ಕೌಟುಂಬಿಕ ಜೀವನ ಮತ್ತು ಆರ್ಥಿಕತೆಯು ಇವರ ಜೀವನದ ಮೇಲೆ ಪರಿಣಾಮ ಬೀರುವುದು. ವೈಯಕ್ತಿಕ ಮತ್ತು ವೃತ್ತಿಪರ ಬದ್ಧತೆಯು ಅವರನ್ನು ಯಾವಾಗಲೂ ವ್ಯಸ್ತವಾಗಿಡುವುದು. ಇವರು ತುಂಬಾ ಸಾಮಾಜಿಕ ಹಾಗೂ ಅರ್ಥ ಮಾಡಿಕೊಳ್ಳುವವರು. ಇದನ್ನು ಹೊರತುಪಡಿಸಿ, ಇವರು ತಮ್ಮ ಸಂಪ್ರದಾಯ ಮತ್ತು ಧರ್ಮದ ಬಗ್ಗೆ ಕಾಳಜಿ ಹೊಂದಿರುವರು. ಇವರು ಅದ್ಭುತವಾಗಿ ಜಾಣರಾಗಿರುವ ಕಾರಣದಿಂದಾಗಿ ಯಶಸ್ವಿ ಹಾದಿಯಲ್ಲಿ ಮುನ್ನಡೆಯುವರು. ಇವರು ತುಂಬಾ ತಾಳ್ಮೆಯ ವ್ಯಕ್ತಿ ಮತ್ತು ಕೇಳುಗರಾಗಿರುವರು. ಸಂಬಂಧದ ವಿಚಾರದಲ್ಲಿ ಇವರು ಮೊದಲಿಗೆ ತಮ್ಮ ಬಗ್ಗೆ ಆಲೋಚನೆ ಮಾಡಿಕೊಳ್ಳುವರು. ಈ ವ್ಯಕ್ತಿಗಳು ಸ್ನೇಹಿತರಿಗೆ ಮೊದಲ ಪ್ರಾಶಸ್ತ್ಯ ನೀಡುವರು. ಇವರು ಯಾವುದೇ ಸಮಯದಲ್ಲೂ ತಮ್ಮ ಸ್ನೇಹಿತರಿಗೆ ಒಳ್ಳೆಯ ಪರಿಸ್ಥಿತಿ ನಿರ್ಮಿಸಿಕೊಡುವರು.
9-15ರ ಮಧ್ಯೆ ಜನಿಸಿದವರು
ಜೂನ್ 9-15ರ ಮಧ್ಯೆ ಜನಿಸಿರುವಂತಹವರು ತುಂಬಾ ಸಮಸ್ಯೆಯನ್ನು ಉಂಟು ಮಾಡುವವರು. ಇವರು ಅತಿಸೂಕ್ಷ್ಮವಾಗಿರುವ ಮತ್ತು ತಮ್ಮ ನಡತೆಯಲ್ಲಿ ಯಾವಾಗಲೂ ಸ್ಥಿರತೆ ಇಲ್ಲದವರು ಎಂದು ನಂಬಲಾಗಿದೆ. ಇವರಿಗೆ ಎರಡು ಮುಖವಿದೆ. ಇವು ಒಂದು ಕಡೆ ತುಂಬಾ ತೀವ್ರತೆ ತೋರಿಸುವರು. ಇನ್ನೊಂದು ಕಡೆಯಲ್ಲಿ ಇವರು ಕೆಲವೇ ಸೆಕೆಂಡುಗಳಲ್ಲಿ ತಮ್ಮ ಮನಸ್ಸು ಮತ್ತು ಮನಸ್ಥಿತಿ ಬದಲಾಯಿಸುವರು. ಇವರು ಒಳ್ಳೆಯ ಸಲಹೆಗಾರರಾಗಿರುವರು. ಇದರಿಂದಾಗಿಯೇ ಇವರು ಒಳ್ಳೆಯ ಮನಶಾಸ್ತ್ರಜ್ಞರಾಗಿರುವರು. ಇದೆಲ್ಲವನ್ನೂ ಇವರು ತಮಗೋಸ್ಕರ ಮಾಡುವುದಿಲ್ಲ. ಇದರಿಂದ ಅವರು ಬೇರೆಯವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆಂದು ತೋರಿಸುತ್ತದೆ.
ಜೂನ್ 16-ಜೂನ್ 22
ಜೂನ್ 16ರಿಂದ 22ರ ಮಧ್ಯೆ ಜನಿಸಿರುವಂತಹವರು ದೀರ್ಘಕಾಲದ ತನಕ ಬದುಕುವರು ಎಂದು ನಂಬಲಾಗಿದೆ. ಇವರು ದೀರ್ಘ ಪ್ರವಾಸ ಮಾಡುವವರು. ಇವರು ತುಂಬಾ ಪ್ರೀತಿಪಾತ್ರರು ಮತ್ತು ಶ್ರೇಷ್ಠ ಸಂಗಾತಿಗಳಾಗುವರು. ಈ ದಿನಾಂಕಗಳಲ್ಲಿ ಹುಟ್ಟಿರುವಂತಹವರು ತುಂಬಾ ಸೌಮ್ಯ, ಭಾವನಾತ್ಮಕ ಮತ್ತು ಶ್ರೇಷ್ಠ ಅಡುಗೆಯವರಾಗಿರುವರು. ಇವರ ಭಾವನೆಗಳು ಎಷ್ಟು ಬಲಿಷ್ಠ ಮತ್ತು ಶುದ್ಧವಾಗಿರುತ್ತದೆ ಎಂದರೆ ಬೇರೆಯವರು ಇವರನ್ನು ಅಪಾರ್ಥ ಮಾಡಿಕೊಳ್ಳುವರು. ಇವರು ನಡವಳಿಕೆಯಲ್ಲಿ ತುಂಬಾ ಭಾವನಾತ್ಮಕವಾಗಿರುವರು ಮತ್ತು ಇವರ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಇವರ ಸುತ್ತಲಿನವರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ಕಡೆಯಲ್ಲಿ ಇವರು ಶ್ರೇಷ್ಠ ಅಡುಗೆಯವರಾಗಿರುವರು.
23ರಿಂದ 30ರ ತನಕ ಜನ್ಮ ತಾಳಿರುವವರು
ಈ ದಿನಾಂಕಗಳಲ್ಲಿ ಜನ್ಮ ತಾಳಿರುವಂತಹ ಜನರು ಸಾಮಾಜಿಕವಾಗಿ ತುಂಬಾ ಕ್ರಿಯಾತ್ಮಕ ವ್ಯಕ್ತಿಯೆಂದು ನಂಬಲಾಗಿದೆ. ಇವರು ತುಂಬಾ ಧೈರ್ಯಶಾಲಿಗಳು ಮತ್ತು ಅಗತ್ಯಬಿದ್ದಾಗ ತಮ್ಮ ಅಭಿಪ್ರಾಯವನ್ನು ಮಂಡಿಸುವರು. ಈ ಜನರು ಸ್ವಹಿತಾಸಕ್ತಿ ಉಳ್ಳವರು. ಇವರಿಗೆ ತಾವು ಏನು ಮತ್ತು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರುವುದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಬದ್ಧತೆ ಮತ್ತು ಗಂಭೀರತೆಯಿಂದ ತಮ್ಮ ಕೆಲಸಗಳನ್ನು ಮಾಡುವರು. ಹೊಸ ಆಲೋಚನೆಗಳು ಮತ್ತು ಪ್ರಯೋಗಗಳನ್ನು ಸ್ವೀಕರಿಸುವಾಗ ಈ ಜನರು ಹೆಚ್ಚು ಪ್ರೋತ್ಸಾಹಕಾರಿಯಾಗಿರಲ್ಲ. ಇವರು ಯಾವಾಗಲೂ ಹಳೆಯ ಹಾದಿಯಲ್ಲೇ ಸಾಗಲು ಬಯಸುವರು. ಇವರು ವೈವಾಹಿಕ ಜೀವನದಲ್ಲಿ ಯಶಸ್ವಿಯಾಗದೆ ಇರುವಂತಹ ಗುಂಪಿಗೆ ಸೇರ್ಪಡೆಯಾಗಿರುವರು. ಈ ಗುಂಪಿಗೆ ಸೇರಿರುವ ಮಹಿಳೆಯರು ಹೆಚ್ಚಾಗಿ ಕೆಲವೇ ಮಂದಿಯನ್ನು ತಮ್ಮ ಸ್ನೇಹಿತರಾಗಿ ಪರಿಗಣಿಸುವರು.



Click it and Unblock the Notifications











