For Quick Alerts
ALLOW NOTIFICATIONS  
For Daily Alerts

ಮುಖೇಶ್ ಅಂಬಾನಿ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

By Sushma Charhra
|

ಮುಖೇಶ್ ಅಂಬಾನಿ ಅಥವಾ ಅಂಬಾನಿಗಳ ಬಗ್ಗೆ ತಿಳಿದಿಲ್ಲದ ಯಾರಾದರೂ ಅಲ್ಲಿಗೆ ಬಂದಿದ್ದರೆ ನಾವು ಅನುಮಾನಿಸುತ್ತೇವೆ! ದುಡ್ಡಿನ ಹೆಸರಿನಲ್ಲಿ, ಮತ್ತು ಈ ದೊಡ್ಡ ಮನುಷ್ಯರು ತಮ್ಮ ದೊಡ್ಡ ಮಟ್ಟದ ಜೀವನಶೈಲಿಯಿಂದಲೇ ಪ್ರಸಿದ್ಧಿ ಪಡೆದಿರುವವರು. ಮುಖೇಶ್ ಅಂಬಾನಿ ಮನೆ ಕಟ್ಟಿಸಿದಾಗ, ಇಡೀ ವಿಶ್ವವೇ ಅದು ಹೇಗಿದೆ ಎಂದು ತಿಳಿಯಲು ಕಾತುರದಿಂದ ಕಾದಿತ್ತು. ಅವರ ನಿವಾಸವನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ ಮತ್ತು ಅದು 27 ಮಹಡಿಗಳನ್ನು ಹೊಂದಿದೆ.

ಆದರೆ ನೀವು ಯಾವತ್ತಾದರೂ ಯೋಚಿಸದ್ದೀರಾ? ಅವರ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಅವರು ಎಷ್ಟು ಸಂಬಳ ನೀಡುತ್ತಿರಬಹುದು, ಯಾರು ಆ ಆಂಟಿಲಿಯಾ ಮನೆಯನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸುವರೋ ಅವರ ಸಂಬಳ ಎಷ್ಟಿರಬಹುದು ಎಂದು ಊಹೆ ಮಾಡಿದ್ದೀರಾ? ಸಂಬಳದ ವಿಚಾರದ ಬಗ್ಗೆ ಹಲವು ವ್ಯತ್ಯಾಸಗಳು ಮತ್ತು ಗಾಸಿಪ್ ಗಳು ಇರುತ್ತದೆ. ಆದರೆ ಮುಖೇಶ್ ಅಂಬಾನಿ ನಿವಾಸದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಬಳದ ವಿವರಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಆದರೆ ಸಂಬಳ ಪ್ಯಾಕೇಜ್ ಬಗ್ಗೆ ತಿಳಿದುಕೊಳ್ಳುವ ಮೊದಲು, ಅಂಟಿಲಿಯಾ ಬಗ್ಗೆ ಅಂದರೆ ಮುಖೇಶ್ ಅಂಬಾನಿ ಮತ್ತು ಅವನ ಕುಟುಂಬದವರು ವಾಸಿಸುವ ಮನೆಯ ಬಗ್ಗೆ ತಿಳಿದುಕೊಳ್ಳೋಣ.....

ಆಂಟಿಲಿಯಾ ಮನೆಯ ಬಗೆಗಿನ ಮಾಹಿತಿ...

ಆಂಟಿಲಿಯಾ ಮನೆಯ ಬಗೆಗಿನ ಮಾಹಿತಿ...

ಬುಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನ ನಂತರ ಇದು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮನೆಗಳಲ್ಲಿ ಇದು ಒಂದಾಗಿದೆ. ವರದಿಯ ಅನ್ವಯ ಈ ಮನೆಯ ನೆಟ್ ವ್ಯಾಲ್ಯೂ ಒಂದು ಬಿಲಿಯನ್ ಡಾಲರ್ ಗೂ ಅಧಿಕವಾಗಿದೆ.ಅದೇ ಕಾರಣಕ್ಕೆ ಇದು ವಿಶ್ವದ ದುಬಾರಿ ಆಸ್ತಿಯಾಗಿ ಗುರುತಿಸಿಕೊಂಡಿದೆ. ಆಂಟಿಲಿಯಾವು ಮುಂಬೈನ ಆಲ್ಟಾಮೌಂಟ್ ರಸ್ತೆಯ ಕಂಬಲ್ಲಾ ಹಿಲ್ ನಲ್ಲಿದೆ.

ಮನೆಯ ಬಗೆಗಿನ ಇನ್ನಷ್ಟು ಮಾಹಿತಿ

ಮನೆಯ ಬಗೆಗಿನ ಇನ್ನಷ್ಟು ಮಾಹಿತಿ

ಒಂದು ವೇಳೆ ಭೂಮಿಯಲ್ಲಿ ರಿಕ್ಟರ್ ಮಾಪಕದಲ್ಲಿ 8 ಎಂದು ಸೂಚಿಸುವ ಮಟ್ಟದ ಭೂಕಂಪ ಬಂದರೂ ಕೂಡ ಉಳಿದುಕೊಳ್ಳಬಹುದಾದ ಸಾಮರ್ಥ್ಯವನ್ನು ಈ ಮನೆ ಹೊಂದಿದೆ. ಈ ಮನೆ ವಿವಿಧ ವಿವಾದಗಳಿಗೂ ಕಾರಣವಾಗಿತ್ತು. ಅದರ ಡಿಸೈನ್ ಮತ್ತು ಒಂದು ಕುಟುಂಬಕ್ಕೆ ಇಷ್ಟು ದೊಡ್ಡ ಮನೆಯ ಅಗತ್ಯತೆಯಾದರೂ ಏನು ಎಂಬ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದರು. ಇಂತಹ ಐಷಾರಾಮಿ ಮನೆ, ಖಂಡಿತವಾಗಿಯೂ ದೊಡ್ಡ ಮಟ್ಟದ ಕೆಲಸಗಾರರನ್ನು ಬಯಸುತ್ತದೆ ಯಾಕೆಂದರೆ ಅದರ ನಿರ್ವಹಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ..!

ಮನೆಯ ನಿರ್ವಹಣೆಗೆ ಸುಮಾರು 600 ಮಂದಿ ಕೆಲಸಗಾರರಿದ್ದಾರೆ..!

ಮನೆಯ ನಿರ್ವಹಣೆಗೆ ಸುಮಾರು 600 ಮಂದಿ ಕೆಲಸಗಾರರಿದ್ದಾರೆ..!

ಮುಖೇಶ್ ಅಂಬಾನಿ ತನ್ನ ಕೆಲಸಗಾರರಿಗೆ ಸಂಬಳ ನೀಡುವ ವಿಷಯ ಬಂದಾಗ ಹಿಂದೇಟು ಹಾಕುವುದಿಲ್ಲ.ಹಾಗಾಗಿ ಅವರು, ಈ ಮನೆಯ ನಿರ್ವಹಣೆ ಮಾಡುವ 600 ಕೆಲಸಗಾರರಿಗೆ ಸಂಬಳ ನೀಡಲು ಉದಾರ ಮನಸ್ಸು ತೋರುತ್ತಾರೆ.ವರದಿಯ ಪ್ರಕಾರ ಇಲ್ಲಿನ ಸಿಬ್ಬಂದಿ ಮೊದಲು ಪ್ರಾಥಮಿಕವಾಗಿ 6000 ರೂಪಾಯಿ ನೀಡಲಾಗುತ್ತಿತ್ತು ಮತ್ತು ಈಗ 2 ಲಕ್ಷ ತಿಂಗಳ ಸಂಬಳವನ್ನು ಅವರು ಪಡೆಯುತ್ತಿದ್ದಾರಂತೆ..! ಇದರಲ್ಲಿ ವಿದ್ಯಾಭ್ಯಾಸ ಭತ್ಯೆ, ಲೈಫ್ ಇನ್ಸುರೆನ್ಸ್ ಗಳು ಕೂಡ ಸೇರಿರುತ್ತದೆ. ಅವರಲ್ಲಿ ಇಬ್ಬರು ಕೆಲಸಗಾರರ ಮಕ್ಕಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರಂತೆ.

ಅವರ ಭದ್ರತಾ ಪಡೆಯ ಸಂಬಳ

ಅವರ ಭದ್ರತಾ ಪಡೆಯ ಸಂಬಳ

ಆಂಟಿಲಿಯಾಗೆ z ಭದ್ರತೆಯನ್ನು ನೀಡಲಾಗುತ್ತಿದ್ದು, ಅದಕ್ಕಾಗಿ ಅಂಬಾನಿ ತಿಂಗಳಿಗೆ 15 ಲಕ್ಷ ಪಾವತಿಸುತ್ತಾರೆ.. ಸಿಆರ್ಪಿಎಫ್ ತಮ್ಮ ಸಂಪನ್ಮೂಲವನ್ನು ವ್ಯಾಪಾರದ ಉದ್ಯಮಿಗೆ Z ಭದ್ರತೆಯಾಗಿ ನಿಯೋಜಿಸಲು ಹೆಸರುವಾಸಿಯಾಗಿದೆ. ನಾವು ಖಂಡಿತ ಹೇಳುತ್ತಿದ್ದೇವೆ. ಈ ಸಂಬಳದ ನಂಬರ್ ಕೇಳಿಸಿಕೊಂಡ ನಂತರ ನಿಮಗೆ ಅಲ್ಲಿ ಕೆಲಸ ಮಾಡುವ ಕೆಲಸಗಾರರ ಬಗ್ಗೆ ಹೊಟ್ಟೆಕಿಚ್ಚು ಆಗಿರತ್ತಿರಬಹುದಲ್ಲವೇ? ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಕಮೆಂಟ್ ಮಾಡುವುದನ್ನು ಮರೆಯಬೇಡಿ.

English summary

did-you-know-mukesh-ambani-s-servant-s-salary

We doubt if there is any man out there who does not know Mukesh Ambani or the Ambanis! With the name and the money, these biggies are also known for their high-end lifestyles. When Mukesh Ambani built his residence, the entire world was curious to know what it looks like. His residence is known as Antilia and it is a whooping 27-storey building.
X
Desktop Bottom Promotion