For Quick Alerts
ALLOW NOTIFICATIONS  
For Daily Alerts

  ಜೂನ್ 12: ಮಂಗಳವಾರದ ದಿನ ಭವಿಷ್ಯ

  |

  ಜೀವನದಲ್ಲಿ ಕೆಲವೊಂದು ವಿಚಾರಗಳು ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವುಗಳನ್ನು ನಾವು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕಾಗುವುದು. ಅದರಲ್ಲೂ ಸಮಯ, ಸ್ನೇಹ, ಆರೋಗ್ಯ, ಪ್ರೀತಿ, ಸಂಬಂಧಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವುಗಳನ್ನು ಎಂದು ನಾವು ನಮ್ಮ ಜೀವನದಲ್ಲಿ ಕಳೆದು ಕೊಳ್ಳುತ್ತೇವೆಯೋ ಆಗ ಅದರ ನಿಜವಾದ ಬೆಲೆ ಏನೆಂದು ಅರಿವಾಗುತ್ತದೆ. ಹಾಗಾಗಿ ಅವುಗಳನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು.

  ಆದರೆ ನಮ್ಮ ಗ್ರಹಗತಿಗಳ ಬದಲಾವಣೆ ಹಾಗೂ ಅದರ ಸಂಚಾರದ ಪರಿಣಾಮವಾಗಿ ನಮ್ಮ ಜೀವನದಲ್ಲಿ ಸಂದಿಗ್ಧ ಸ್ಥಿತಿಗಳು ಹಾಗೂ ಅದೃಷ್ಟಗಳು ಒದಗಿ ಬರುತ್ತವೆ. ಅಂತಹ ಸಮಯದಲ್ಲಿ ಅಮೂಲ್ಯ ಸಂಗತಿಗಳು ನಮ್ಮಿಂದ ದೂರವಾಗಬಹುದು ಅಥವಾ ಅದನ್ನು ನಿಭಾಯಿಸುವಂತಹ ಪರೀಕ್ಷೆ ನಮ್ಮೆದುರಿಗೆ ಬರಬಹುದು. ಅಂತಹ ಸಮಯದಲ್ಲೂ ಅವುಗಳನ್ನು ಜೋಪಾನ ಮಾಡುವಂತಹ ಸಾಮಥ್ರ್ಯ ನಮ್ಮಲ್ಲಿ ಇರಬೇಕು. ಆಗಲೇ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯ. ಮಂಗಳವಾರವಾದ ಇಂದು ನಿಮ್ಮ ಬದುಕಿನಲ್ಲಿ ಎಂತಹ ಸಮಯಗಳು ನಿಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಈ ಮುಂದಿರುವ ರಾಶಿ ಭವಿಷ್ಯವನ್ನು ನೋಡಿ ತಿಳಿಯಿರಿ....

  ಮೇಷ

  ಮೇಷ

  ಸಣ್ಣ ಪುಟ್ಟ ವಿಚಾರಗಳಿಗೆ ನೀವು ತಗ್ಗಿ ಬಗ್ಗಿ ನಡೆದುಕೊಳ್ಳದಿದ್ದರೆ ಒಬ್ಬಂಟಿಯಾಗಿ ಅಥವಾ ಏಕಾಂಗಿಯಾಗಿ ಸಮಯವನ್ನು ಕಳೆಯಬೇಕಾಗುವುದು. ನಿಮಗೆ ವಹಿಸಿದ ಕೆಲಸವನ್ನು ಮಾಡದೆ ಇದ್ದರೆ ನಿಮ್ಮ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುವುದು. ನಿಮ್ಮ ಸ್ವಭಾವದಿಂದಾಗಿ ನಿಮ್ಮ ಪ್ರೇಮಿಯು ನಿಮ್ಮೊಂದಿಗೆ ಬರಲು ಇಷ್ಟಪಡದೆ ಇರುವರು. ಹಾಗಾಗಿ ನಡವಳಿಕೆ ಹಾಗೂ ಸ್ವಭಾವದಲ್ಲಿ ಆದಷ್ಟು ಸುಧಾರಣೆ ಮಾಡಿಕೊಳ್ಳುವುದು ಸೂಕ್ತ.

   ವೃಷಭ

  ವೃಷಭ

  ಇಂದು ನೀವು ಕೆಲವು ಸಾಮಾಜಿಕ ಚಟುವಟಿಕೆಗಳಿಂದ ಒಂದಿಷ್ಟು ಆನಂದವನ್ನು ಅನುಭವಿಸಬಹುದು. ಇತರರು ನಿಮ್ಮ ಕೆಲಸವನ್ನು ಮಾಡಬೇಕು ಎಂದು ಅಪೇಕ್ಷೆ ಪಡದಿರಿ. ಸಾಧ್ಯವಾದರೆ ವಿಶ್ರಾಂತಿಯನ್ನು ಪಡೆಯಿರಿ. ನೀವು ಅಂತಿಮವಾಗಿ ನಿಮ್ಮ ಮನೆಯ ಮುಂದೆ ಎದುರಾಗುವ ವಿವಾದಗಳನ್ನು ತಗ್ಗಿಸುವಿರಿ. ಅನಿರೀಕ್ಷಿತ ಅಥವಾ ಅನುಚಿತ ವಿಚಾರ ಹಾಗೂ ವ್ಯಕ್ತಿಗಳನ್ನು ಪಕ್ಕಕ್ಕೆ ಇಡುವುದನ್ನು ಮರೆಯದಿರಿ.

  ಮಿಥುನ

  ಮಿಥುನ

  ನಿಮ್ಮ ಹೊರ ಜಗತ್ತಿನಲ್ಲಿರುವ ಅತ್ಯುತ್ತಮ ವಿಚಾರಗಳನ್ನು ವೀಕ್ಷಿಸಿ. ಯಾವುದೋ ಮೂರ್ಖತನದ ಕಾರಣಕ್ಕೆ ನಿಮ್ಮ ಸಂತೋಷವನ್ನು ವ್ಯರ್ಥಮಾಡಿಕೊಳ್ಳದಿರಿ.

  ಕರ್ಕ

  ಕರ್ಕ

  ಪ್ರಣಯ ಜೀವನಕ್ಕೆ ಇಂದು ನಿಮಗೆ ಅದ್ಭುತವಾದ ಸಮಯ ಎಂದು ಹೇಳಬಹುದು. ನಿಮ್ಮ ಪ್ರೀತಿಪಾತ್ರರ ಮುಂದೆ ನಿಮ್ಮ ಪ್ರೀತಿಯನ್ನು ಸರಿಯಾಗಿ ವ್ಯಕ್ತಪಡಿಸಿ. ನಿಮ್ಮ ಪ್ರೀತಿ ಹಾಗೂ ಸ್ನೇಹ ಪರ ಗುಣವನ್ನು ಎಲ್ಲೆಡೆ ಪಸರಿಸಬಹುದು ಎಂದು ಹೇಳಲಾಗುತ್ತಿದೆ.

  ಸಿಂಹ

  ಸಿಂಹ

  ಉತ್ತಮ ವ್ಯಾಪಾರದ ದೃಷ್ಟಿಯಿಂದ ಸುಧಾರಣೆ ಮಾಡಲು ಇಂದು ಅತ್ಯುತ್ತಮವಾದ ದಿನ. ಅನುಚಿತ ವ್ಯಕ್ತಿಗಳೊಂದಿಗೆ ಅತಿಯಾದ ಸಮಯವನ್ನು ಕಳೆಯದಿರಿ. ಅವರಿಂದ ಆದಷ್ಟು ದೂರ ಇರಲು ಪ್ರಯತ್ನಿಸಿ. ಪ್ರಯಾಣ ಮತ್ತು ಶೈಕ್ಷಣಿಕ ಚಟುವಟಿಕೆಗಳು ನೀವು ಅನುಭವಿಸುತ್ತಿರುವ ಒತ್ತಡವನ್ನು ನಿವಾರಿಸಲು ಸಹಾಯ ಮಾಡುವುದು.

  ಕನ್ಯಾ

  ಕನ್ಯಾ

  ವಿವರವಾಗಿ ಕೆಲಸ ಮಾಡಲು ನಿಮ್ಮ ಸ್ಪಷ್ಟ ಪ್ರತಿಭೆಯನ್ನು ಬಳಸಿ. ಏನಾದರೂ ನಿಮಗೆ ಉತ್ತಮವಾಗಿ ಬರಬಹುದು. ಉತ್ತಮ ಹಿತಾಸಕ್ತಿಯನ್ನು ಹುಟುಕುವಂತಹ ಒಬ್ಬ ಒಳ್ಳೆಯ ಸ್ನೇಹಿತನನ್ನು ಪಡೆದುಕೊಳ್ಳಿ. ವಾಲಿಬಾಲ್ ಅಥವಾ ಇತರ ಹೊರಾಂಗಣ ಕ್ರೀಡೆಗಳನ್ನು ಆಡುವುದರ ಮೂಲಕ ಕಾರ್ಯಸೂಚಿಯಾಗಿರಲು ಪ್ರಯತ್ನಿಸಿ.

  ತುಲಾ

  ತುಲಾ

  ನಿಮ್ಮ ವರ್ತನೆಯು ಅಥವಾ ಬದಲಾದ ಮನೋಭಾವವು ನಿಮ್ಮ ಮನೆಯ ವಾತಾವರಣವನ್ನು ಅಡ್ಡಿಪಡಿಸುವುದು. ನೀವು ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸಬೇಕು. ಟೀಕೆಯು ನಿಮ್ಮನ್ನು ಅಸಮಧಾನಗೊಳಿಸುವುದು. ಹ್ಯಾಶಲ್ಸ್ ನಿಮ್ಮ ಯೋಜನೆಯನ್ನು ವಿಳಂಬಗೊಳಿಸುತ್ತದೆ.

  ವೃಶ್ಚಿಕ

  ವೃಶ್ಚಿಕ

  ಮಾನಸಿಕವಾಗಿ ತೀಕ್ಷ್ಣ ಮತ್ತು ಸ್ಪಷ್ಟವಾಗಿದ್ದೀರಿ. ಹೊಸ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವು ಹೆಚ್ಚಾಗಿರುತ್ತದೆ. ನೀವು ನಿಮ್ಮ ಆಲೋಚನೆಗಳನ್ನು ಚೆನ್ನಾಗಿ ವಿವರಿಸಬಹುದು ಮತ್ತು ಅಭಿವ್ಯಕ್ತಿಸಬಹುದು. ಬೌದ್ಧಿಕ ಕುತೂಹಲ ಕೂಡ ಹೆಚ್ಚು. ಯೋಜನೆಗಳು ಮತ್ತು ತಂತ್ರಗಳನ್ನು ಮಾಡಲು ಅಥವಾ ಅಧ್ಯಯನವನ್ನು ಪ್ರಾರಮಭಿಸಲು ಇದು ಒಳ್ಳೆಯ ಸಮಯ.

  ಧನು

  ಧನು

  ಇತರ ವ್ಯಕ್ತಿಗಳ ಸಮಸ್ಯೆಗಳಿಗೆ ನೀವು ಹಸ್ತಕ್ಷೇಪ ಮಾಡುತ್ತಿದ್ದರೆ ಇತರರ ಭಾವನೆಗಳ ಮೇಲೆ ಪರಿಣಾಮ ಬೀರುವುದು. ನೀವು ನಿಮ್ಮ ಹಣ, ಕ್ರೆಡಿಟ್ ಕಾರ್ಡ್, ಚೆಕ್ ಬುಕ್ ಎಲ್ಲವನ್ನೂ ಮನೆಯಲ್ಲಿಯೇ ಇಡಿ. ಸಮಸ್ಯೆಗಳನ್ನು ನಂತರ ವಿಶ್ಲೇಷಿಸಿ. ಜೊತೆಗೆ ಜಾಗರೂಕತೆಯಿಂದ ನಿರ್ಣಯವನ್ನು ಕೈಗೊಳ್ಳಿ. ಪ್ರಯಾಣ ಅಥವಾ ಸಂವಹನದ ಮೂಲಕ ರೋಮ್ಯಾಂಟಿಕ್ ಅವಕಾಶಗಳು ಏಳಿಗೆಗೊಳ್ಳುತ್ತವೆ.

  ಮಕರ

  ಮಕರ

  ನಿಮ್ಮ ಕಲ್ಪನೆಯು ಇಂದು ಪ್ರಪಂಚದ ಅದ್ಭುತವನ್ನು ರಚಿಸಬಹುದು. ಹಾಗಾಗಿ ನೀವು ನಿಮ್ಮ ಸೃಜನಶೀಲ ಕಲ್ಪನೆಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಮಕ್ಕಳು ಸಂತೋಷವನ್ನು ತಂದುಕೊಳ್ಳಬಹುದು. ಆದ್ದರಿಂದ ನೀವು ಯುವಕರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಿರಿ.

  ಕುಂಭ

  ಕುಂಭ

  ಪ್ರೀತಿ ಮತ್ತು ಪ್ರಣಯವು ಭವ್ಯವಾದದ್ದು. ಅದು ಸಿಗಲಿ ಅಥವಾ ಸಿಗದೆ ಇರಲಿ ನಿಮಗೆ ಅದು ವಿಷಯವಾಗಿರುವುದಿಲ್ಲ. ಅದ್ಭುತ ಪ್ರೀತಿಯ ಜೀವನದ ಕಥೆಯನ್ನು ಕಂಡುಕೊಳ್ಳುವಿರಿ. ಪ್ರೀತಿಯನ್ನು ಕಳೆದುಕೊಂಡು ಒಂದಷ್ಟು ನೋವನ್ನು ಸಹ ಅನುಭವಿಸುವ ಸಾಧ್ಯತೆಗಳಿವೆ.

  ಮೀನ

  ಮೀನ

  ವೃತ್ತಿ ಬದಲಾವಣೆ ಇಂದು ನಿಮಗೆ ಸೂಕ್ತವಾದುದಲ್ಲ. ಆದರೆ ದೀರ್ಘಕಾಲಾವಧಿಯಲ್ಲಿ ಅವರು ನಿಮ್ಮ ಅನುಕೂಲಕ್ಕೆ ಇರುತ್ತಾರೆ. ನಿಮಗೆ ಸ್ವಲ್ಪ ವಿಶ್ರಾಂತಿ ಬೇಕು. ನೀವು ಆಸ್ತಿ ಅಥವಾ ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡಿದ್ದಿದ್ದರೆ ಏಳಿಗೆ ಪಡೆಯಬಹುದು. ನಿಮ್ಮ ಉದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಗಾಯ ಅಥವಾ ನೋವನ್ನುಂಟು ಮಾಡುವ ಕೆಲಸಕ್ಕೆ ಮುಂದಾಗದಿರಿ.

  English summary

  daily-horoscope-12-june-2018

  Most of us know that weekly predictions are as famous as the daily predictions, as most of us tend to check them before we start our week.So, here, with the help of our astro experts, we bring in the details about the weekly predictions for each zodiac sign.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more