For Quick Alerts
ALLOW NOTIFICATIONS  
For Daily Alerts

  ಜೂನ್ 11: ಸೋಮವಾರದ ದಿನ ಭವಿಷ್ಯ

  |

  ನಾವು ಅಂದುಕೊಂಡಂತೆ ಜೀವನ ಇರುವುದಿಲ್ಲ. ಪ್ರತಿಯೊಂದು ಕ್ಷಣ ಹಾಗೂ ದಿನಗಳು ನಮ್ಮ ಗ್ರಹಗತಿಗಳ ನಿಯಂತ್ರಣದಲ್ಲಿ ಇರುತ್ತವೆ. ಕೆಲವೊಮ್ಮೆ ನಾವು ಅಂದುಕೊಂಡ ಕೆಲಸ ಅಥವಾ ಚಿಂತನೆಗಳು ನೆರವೇರದೆ ಇದ್ದಾಗ ನಮ್ಮ ಪರಿಶ್ರಮಕ್ಕೆ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುತ್ತೇವೆ. ಆದರೆ ಆ ಕಾರ್ಯವನ್ನು ನಾವು ಅಪ್ಪಿ ತಪ್ಪಿಯೂ ಮಾಡಬಾರದು. ಏಕೆಂದರೆ ನಾವು ಇಟ್ಟ ಹೆಜ್ಜೆ ಹಾಗೂ ತೊಟ್ಟ ನಿಲುವು ಇತಿಹಾಸವನ್ನೇ ಸೃಷ್ಟಿಸಬಹುದು. ಹಾಗಾಗಿ ಕಷ್ಟಗಳು ಹಾಗೂ ಸೋಲು ಎದುರಾದಾಗ ನಾವು ಭರವಸೆಯನ್ನು ಕಳೆದುಕೊಳ್ಳಬಾರದು.

  ಮಾಡುವ ಕೆಲಸದಲ್ಲಿ ಸಂಪೂರ್ಣ ಪರಿಶ್ರಮ ಹಾಗೂ ನಿಷ್ಠೆಯಿಂದ ಪ್ರಯತ್ನವನ್ನು ಮುಂದುವರಿಸುತ್ತಲೇ ಸಾಗಬೇಕು. ಆಗ ಬದುಕಿನಲ್ಲಿ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಶ್ರೇಯಸ್ಸು ಹಾಗೂ ಸಂತೋಷವನ್ನು ಪಡೆಯಬಹುದು. ಸೋಮವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಯಾವ ಬದಲಾವಣೆಯನ್ನು ಕಾಣುವಿರಿ ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

  ಮೇಷ

  ಮೇಷ

  ಇಂದು ನೀವು ಸ್ನೇಹಿತರು ಹಾಗೂ ಕುಟುಂಬದವರ ನಡುವೆ ಯಾರನ್ನಾದರೂ ಒಬ್ಬರನ್ನು ಆಯ್ಕೆಮಾಡಿಕೊಳ್ಳಬೇಕಾಗುವುದು. ಆದರೆ ಯಾವುದೇ ರೀತಿಯಲ್ಲೂ ಹಿಂಸೆಗೆ ಒಳಗಾಗಬೇಡಿ. ಆರೋಗ್ಯ ದೃಷ್ಟಿಯಿಂದ ಎಲ್ಲವೂ ಸುಗಮವಾಗಿ ಸಾಗುವುದು. ನಿಮ್ಮ ನೆಲೆಗಾಗಿ ನೀವು ಭದ್ರವಾದ ನಿಲುವನ್ನು ಹೊಂದಬೇಕಾಗುವುದು.

  ವೃಷಭ

  ವೃಷಭ

  ಹತ್ತಿರದವರ ಎದುರು ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡಿಸುವ ಉದ್ದೇಶದಿಂದ ಅತಿಯಾದ ವರ್ತನೆಯನ್ನು ತೋರದಿರಿ. ನಿಮ್ಮನ್ನು ಪ್ರೀತಿಸುವವರು ಅಥವಾ ನಿಮ್ಮವರಾಗಿರುವವರು ನಿಮ್ಮನ್ನು ಸದಾ ಕಾಳಜಿಯಿಂದಲೇ ನೋಡಿಕೊಳ್ಳುವರು. ಜೊತೆಗೆ ನಿಮ್ಮನ್ನು ಬೆಂಬಲಿಸುವರು. ಅವರಿಗೆ ನಿಮ್ಮ ಸ್ಥಿತಿಯ ಬಗ್ಗೆ ಹೇಳಿಕೊಳ್ಳಿ. ನಿಮ್ಮ ಬಗ್ಗೆ ತಿಳಿಯದೆ ಇರುವಾಗ ಅವರು ಸಹಾಯ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನೀವು ಅರಿಯಬೇಕು.

  ಮಿಥುನ

  ಮಿಥುನ

  ನೀವು ನಿಮ್ಮ ಕೌಶಲ್ಯವನ್ನು ಪದಗಳ ಮೂಲಕ ಹಾಗೂ ಮಗುವಿನ ರೀತಿಯಲ್ಲಿ ಮುಗ್ಧವಾಗಿ ಸಾಬೀತುಪಡಿಸಿ. ನೀವು ಸ್ನೇಹ ಗುಣದಿಂದ ಇದ್ದರೆ ಅತ್ಯುತ್ತಮ ವ್ಯಕ್ತಿಗಳಾಗಿ ಉಳಿಯುವಿರಿ. ನಿಮ್ಮ ಪ್ರತಿಕ್ರಿಯೆಯು ಬೇರೆಯವರ ಬೆನ್ನೇರುವ ಸಮಸ್ಯೆಯಾಗಿರಬಾರದು ಎನ್ನುವುದನ್ನು ನೆನಪಿಡಬೇಕು.

  ಕರ್ಕ

  ಕರ್ಕ

  ನೀವು ಕೈಗೊಂಡ ಎಲ್ಲಾ ನಿರ್ಧಾರಗಳು ಎಲ್ಲರನ್ನೂ ಅನುಮೋದಿಸುವುದಿಲ್ಲ ಎನ್ನುವುದನ್ನು ಅರಿಯಿರಿ. ಪ್ರತಿಯೊಬ್ಬರು ಅವರದ್ದೇ ಆದ ಚಿಂತನೆಗಳನ್ನು ಹೊಂದಿರುತ್ತಾರೆ ಎನ್ನುವುದನ್ನು ಅರಿಯಬೇಕು. ಬೇರೆಯವರು ಹೇಗೆ ಯೋಚಿಸುತ್ತಾರೆ? ಎನ್ನುವುದರ ಬಗ್ಗೆ ಹೆಚ್ಚು ಚಿಂತನೆಯಲ್ಲಿ ಮುಳುಗುವ ಬದಲು ನಿಮ್ಮ ಬಗ್ಗೆ ನೀವು ಹೆಚ್ಚು ಗಮನ ಕೊಡುವುದನ್ನು ಕಲಿಯಿರಿ.

  ಸಿಂಹ

  ಸಿಂಹ

  ನಿಮ್ಮ ಚಿಂತನೆಗಳು ಸ್ಪಷ್ಟವಾಗಿರುತ್ತವೆ. ನೀವು ಅಚ್ಚರಿಗೊಂಡ ವಿಚಾರಗಳು ಅಥವಾ ಗೊಂದಲಕ್ಕೆ ಒಳಗಾದ ಸಮಸ್ಯೆಗಳನ್ನು ನೋಡಬಹುದಾಗಿದೆ. ಇಂದು ನೀವು ನಿಮ್ಮ ಜೀವನದ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು. ಅದು ಎಷ್ಟೇ ದೊಡ್ಡದಾಗಿರಬಹುದು ಅಥವಾ ಚಿಕ್ಕದಾಗಿರಬಹುದು.

  ಕನ್ಯಾ

  ಕನ್ಯಾ

  ಹೊಸ ಪರಿಚಯದವರ ಬಗ್ಗೆ ಬಲು ಸುಲಭವಾಗಿ ನಿರ್ಣಯಿಸದಿರಿ. ನಾವು ಇತರರ ಬಗ್ಗೆ ಮಾತನಾಡುವ ಮೊದಲು ಅವರ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು ಎನ್ನುವುದನ್ನು ಮರೆಯದಿರಿ. ಕಾನೂನು ವಿಚಾರದಲ್ಲಿ ಕೊಂಚ ಕಷ್ಟವನ್ನು ಅನುಭವಿಸಬೇಕಾಗುವುದು.

  ತುಲಾ

  ತುಲಾ

  ಸಮಯಕ್ಕೆ ತಕ್ಕಂತೆ ವರ್ತಿಸಲು ಅನುಕೂಲವಾಗುವಂತಹ ಭಾವನೆಗಳನ್ನು ಶುಕ್ರನು ನಿಮಗೆ ಸಹಾಯ ಮಾಡುತ್ತಾನೆ. ಹೆಚ್ಚು ಚಿಂತನೆಯನ್ನು ನಡೆಸದಿರಿ. ಶೀಘ್ರದಲ್ಲಿಯೇ ನಿಮಗೆ ಬೇಕಾಗಿರುವುದೆಲ್ಲವೂ ದೊರೆಯುವುದು.

  ವೃಶ್ಚಿಕ

  ವೃಶ್ಚಿಕ

  ಉಚಿತವಾದ ಸಮಯದಲ್ಲಿ ವಿಶ್ರಾಂತಿ ಕೈಗೊಳ್ಳುವುದನ್ನು ನೀವು ಕಲಿಯಬೇಕು. ಬಹಳ ಒತ್ತಡದ ಪರಿಸ್ಥಿತಿಯನ್ನು ನಿಮ್ಮ ನಕ್ಷತ್ರವು ಅಥವಾ ಗ್ರಹಗತಿಗಳು ಸಡಿಲಗೊಳಿಸುತ್ತವೆ. ಅವುಗಳ ಸೂಕ್ತ ಅನುಭವದಿಂದ ನಿರಂತರ ಒತ್ತಡವನ್ನು ತೊಡೆದುಹಾಕಬಹುದು.

  ಧನು

  ಧನು

  ನೀವು ಕೆಲವು ಪರಿಸ್ಥಿತಿ ಹಾಗೂ ವಿಚಾರಕ್ಕೆ ಸಂಬಂಧಿಸಿದಂತೆ ಒತ್ತಡಕ್ಕೆ ಒಳಗಾಗುವಿರಿ. ಅದರಿಂದ ಆಚೆ ಬರುವ ಪ್ರಯತ್ನವನ್ನು ನೀವು ಬಹಳ ಜಾಗರೂಕತೆಯಿಂದ ಮಾಡಬೇಕು. ಸಂವಾದಗಳು ನಿಮಗೆ ಮೊದಲ ಹೆಜ್ಜೆಯ ರೂಪದಲ್ಲಿ ಸಹಾಯ ಮಾಡುವುದು.

  ಮಕರ

  ಮಕರ

  ಕೆಲವು ಪರಿಸ್ಥಿತಿಗಳು ನಿಮಗೆ ಅವಕಾಶ ಹಾಗೂ ಉತ್ಸಾಹವನ್ನು ನೀಡುವುದು. ಇಂದು ನಿಮಗೆ ಮಹತ್ವವಾದ ದಿನ ಎಂದು ಹೇಳಬಹುದು. ಇಂದು ಹೊಸ ಮುಖದ ಪರಿಚಯವನ್ನು ನೀವು ಮಾಡಿಕೊಳ್ಳುವಿರಿ. ಅದೃಷ್ಟ ಇನ್ನಷ್ಟು ಹೆಚ್ಚಲು ನೀಲಿ ಬಣ್ಣದ ಉಡುಗೆಯನ್ನು ಧರಿಸಿ.

  ಕುಂಭ

  ಕುಂಭ

  ಇಂದು ನಿಮಗೆ ನಾಯಕರಾಗಿ ಇರಲು ಬಯಸುವಿರಿ ಅಥವಾ ಪ್ರಮುಖ ನೇತ್ರತ್ವ ವಹಿಸುವುದರ ಮೂಲಕ ಮುಂದಾಗುವಿರಿ. ಇಂದು ನಿಮಗೆ ಸ್ವಾತಂತ್ರ್ಯ ಪರೀಕ್ಷೆಯ ಸಮಯ ಎಂದು ಹೇಳಬಹುದು. ಅವಿವಾಹಿತರು ಮದುವೆ ಯೋಗದ ಸುದ್ದಿ ಅಥವಾ ನಿಶ್ಚಿತಾರ್ಥದ ಸುದ್ದಿಯನ್ನು ಕೇಳುವರು.

  ಮೀನ

  ಮೀನ

  ನೀವು ಅಂದುಕೊಂಡಂತೆ ಮಾರ್ಗಗಳು ಅಥವಾ ಯೋಜನೆಗಳು ನೆರವೇರದೆ ಇದ್ದರೆ ನೀವು ಹೆಚ್ಚು ಚಿಂತೆ ಅಥವಾ ಒರಟು ಭಾವನೆಗೆ ಒಳಗಾಗದಿರಿ. ನೀವು ಬಯಸಿದ್ದನ್ನು ಪಡೆಯಲು ಒಂದಿಷ್ಟು ಹೋರಾಟ ಮಾಡಬೇಕಾಗುವುದು. ಉತ್ತೇಜಕ ಅವಕಾಶಗಳು ನಿಮಗೆ ಮುಂದಿವೆ ಎನ್ನುವುದನ್ನು ತಿಳಿಯಿರಿ.

  English summary

  Daily Horoscope: 11 June 2018

  Friends and family may ask you to choose between them, but don’t be bullied. Aspects suggest you’re not involved in the dramatics they’ve fallen out over. Stand your ground! You have bigger things to concentrate on.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more