For Quick Alerts
ALLOW NOTIFICATIONS  
For Daily Alerts

ಈ ಊರಿನಲ್ಲಿ ವಧು-ವರ ಮೂರು ದಿನ ಶೌಚಾಲಯಕ್ಕೆ ಹೋಗುವಂತಿಲ್ಲ!

By Hemanth Amin
|

ವಿಶ್ವದ ವಿವಿಧ ದೇಶಗಳಲ್ಲಿ ಮದುವೆಯ ಬಗೆಬಗೆಯ ಸಂಪ್ರದಾಯಗಳು ಇವೆ. ನಮ್ಮ ದೇಶವನ್ನೇ ಪರಿಗಣಿಸಿದರೆ ಒಂದೊಂದು ರಾಜ್ಯ ಹಾಗೂ ಧರ್ಮ ಹಾಗೂ ಜಾತಿಯಲ್ಲಿ ಸಂಪ್ರದಾಯಗಳು ಭಿನ್ನವಾಗಿರುತ್ತದೆ. ಅದರಲ್ಲೂ ಕೆಲವೊಂದು ಬುಡಗಟ್ಟು ಜನಾಂಗದವರ ಮದುವೆಯ ಸಂಪ್ರದಾಯವಂತೂ ತುಂಬಾ ವಿಚಿತ್ರವಾಗಿರುವುದು.

ಈ ಲೇಖನದಲ್ಲಿ ನಾವು ನಿಮಗೆ ಇಂಡೋನೇಶಿಯಾದ ಬುಡುಗಟ್ಟು ಜನಾಂಗವೊಂದರ ಮದುವೆ ಸಂಪ್ರದಾಯದ ಬಗ್ಗೆ ತಿಳಿಸಿಕೊಡಲಿದ್ದೇವೆ. ಇಲ್ಲಿ ಮದುವೆಯಾದ ವಧು ಹಾಗೂ ವರನಿಗೆ ಮೂರು ದಿನಗಳ ಕಾಲ ಶೌಚಾಲಯ ಮತ್ತು ಸ್ನಾನಗೃಹದ ಬಾಗಿಲು ಮುಚ್ಚಿರುತ್ತದೆ! ನೀವು ಒಮ್ಮೆಲೇ ಹೌಹಾರಿ ಬೀಳಬೇಡಿ, ಇದು ಅವರ ಸಂಪ್ರದಾಯ. ನಮಗಿದು ದೊಡ್ಡ ಶಿಕ್ಷೆ ಎಂಬಂತೆ ಕಂಡುಬಂದರೂ ಅವರಿಗೆ ಇದು ಸಂಪ್ರದಾಯ.

ಶೌಚಾಲಯ ಮತ್ತು ಸ್ನಾನಗೃಹಕ್ಕೆ ಹೋಗದಂತೆ ಮನೆಯ ಹಿರಿಯರು ಇವರ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಇದರಿಂದ ಇವರು ಸಂಪ್ರದಾಯ ಮುರಿಯದಂತೆ ನೋಡಿಕೊಳ್ಳುವರು. ಇದರ ಬಗ್ಗೆ ಪೂರ್ಣ ಮಾಹಿತಿ ತಿಳಿಯುವಂತಹ ಕುತೂಹಲವು ನಿಮ್ಮಲ್ಲಿ ಮೂಡಿದೆ ಎನ್ನುವುದು ತಿಳಿದಿದೆ. ಇದಕ್ಕಾಗಿ ಸ್ಕ್ರೋಲ್ ಡೌನ್ ಮಾಡುತ್ತಾ ಹೋಗಿ....

ಇದು ಕಟ್ಟುನಿಟ್ಟಿನ ಸಂಪ್ರದಾಯ

ಇದು ಕಟ್ಟುನಿಟ್ಟಿನ ಸಂಪ್ರದಾಯ

ಇಂಡೋನೇಶಿಯಾದ ಟಿಡಾಂಗ್ ಸಮುದಾಯದಲ್ಲಿ ಶತಮಾನಗಳಿಂದಲೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಾ ಇದೆ. ಸಮುದಾಯದವರು ಈ ಸಂಪ್ರದಾಯವನ್ನು ತುಂಬಾ ಗಂಭೀರವೆಂದು ಪರಿಗಣಿಸಿದ್ದಾರೆ. ಇದು ಅವರು ಆರೋಗ್ಯಕರ ಹಾಗೂ ನೈಸರ್ಗಿಕವೆಂದು ಟಿಡಾಂಗ್ ಸಮುದಾಯದವರು ಭಾವಿಸಿದ್ದಾರೆ. ಇದನ್ನು ಕೆಲವು ನಿಯಮಗಳೊಂದಿಗೆ ಪಾಲಿಸಲಾಗುತ್ತದೆ.

 ಹೊಸ ದಂಪತಿಗೆ ಶಿಕ್ಷೆ ನೀಡಿದಂತೆ ಭಾಸವಾಗುವುದು!

ಹೊಸ ದಂಪತಿಗೆ ಶಿಕ್ಷೆ ನೀಡಿದಂತೆ ಭಾಸವಾಗುವುದು!

ಕಾರಣವಿಲ್ಲದೆ ಹೊಸ ದಂಪತಿಗಳನ್ನು ಶಿಕ್ಷಿಸಲಾಗುತ್ತಿದೆ ಎನ್ನುವ ಭಾವನೆಯು ಈ ಸಂಪ್ರದಾಯದ ಬಗ್ಗೆ ಬರುವುದು. ಮೂರು ದಿನಗಳ ಕಾಲ ವ್ಯಕ್ತಿಯು ನೈಸರ್ಗಿಕ ಕರೆಗೆ ಓಗೊಡದೆ ಕೂರಲು ಹೇಗೆ ಸಾಧ್ಯ? ಸಂಪ್ರದಾಯ ಮುರಿಯದಂತೆ ಮನೆಯ ಹಿರಿಯರು ನಿಗಾ ವಹಿಸುವರು.

ಸಂಪ್ರದಾಯದ ಬಗ್ಗೆ ಇರುವ ನಂಬಿಕೆ!

ಸಂಪ್ರದಾಯದ ಬಗ್ಗೆ ಇರುವ ನಂಬಿಕೆ!

ಮೂರು ದಿನ ಹಾಗೂ ಮೂರು ರಾತ್ರಿ ಹೊಸ ದಂಪತಿಯು ಶೌಚಾಲಯ ಬಳಸದಂತೆ ತಡೆಯುವಂತಹ ಈ ವಿಚಿತ್ರ ಸಂಪ್ರದಾಯವು ಅದೃಷ್ಟ ತರುತ್ತದೆಯಂತೆ! ಮದುವೆ ವಿಚ್ಛೇದನ, ದಾಂಪತ್ಯ ದ್ರೋಹ ಮತ್ತು ಸಣ್ಣ ವಯಸ್ಸಿನಲ್ಲಿ ಮಕ್ಕಳು ಸಾವನ್ನಪ್ಪುವುದರಿಂದ ದಂಪತಿ ಪಾರಾಗಬಹುದು ಎನ್ನುವ ಬಲವಾದ ನಂಬಿಕೆಯು ಈ ಸಮುದಾಯದವರಲ್ಲಿದೆ.

ಸಂಪ್ರದಾಯವು ಪೂರ್ತಿಗೊಂಡ ಬಳಿಕ...

ಸಂಪ್ರದಾಯವು ಪೂರ್ತಿಗೊಂಡ ಬಳಿಕ...

ಸಂಪ್ರದಾಯದ ವೇಳೆ ದಂಪತಿಗೆ ತೀರ ಕಡಿಮೆ ಆಹಾರ ನೀಡಲಾಗುತ್ತದೆ. ಈ ಸಂಪ್ರದಾಯವು ಮೂರು ದಿನ ಹಾಗೂ ಮೂರು ರಾತ್ರಿಗಳಲ್ಲಿ ಕೊನೆಗೊಂಡ ಬಳಿಕ ಇವರಿಗೆ ಸ್ನಾನ ಮಾಡಲು ಮತ್ತು ಶೌಚಾಲಯಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಇದರ ಬಳಿಕ ಇವರು ಸಾಮಾನ್ಯ ಜೀವನ ಸಾಗಿಸಬಹುದು.

ಇವರು ಪಾಲಿಸುವ ಇತರ ಸಂಪ್ರದಾಯಗಳು

ಇವರು ಪಾಲಿಸುವ ಇತರ ಸಂಪ್ರದಾಯಗಳು

ವರನು ಹಲವಾರು ಪ್ರೇಮಗೀತೆಗಳನ್ನು ಹಾಡಿ ವಧುವನ್ನು ಸಂತೋಷಪಡಿಸುವ ತನಕ ಆಕೆಯ ಮುಖ ನೋಡಲು ಆತನಿಗೆ ಅವಕಾಶವಿರುವುದಿಲ್ಲ. ವರನ ಗಾಯನದಿಂದ ವಧು ಸಂತೋಷಗೊಂಡ ಬಳಿಕ ನಡುವೆ ಇರುವ ಪರದೆಯನ್ನು ತೆಗೆಯಲಾಗುತ್ತದೆ. ಇದರ ಬಳಿಕ ಇವರು ಪರಸ್ಪರರನ್ನು ನೋಡಬಹುದು.

ಮತ್ತೊಂದು ಸಂಪ್ರದಾಯ

ಮತ್ತೊಂದು ಸಂಪ್ರದಾಯ

ಮದುವೆಗೆ ವರನು ವಿಳಂಬವಾಗಿ ಬಂದರೆ ಆಗ ಆತ ಆಭರಣದ ರೂಪದಲ್ಲಿ ದಂಡ ಕಟ್ಟಬೇಕಾಗುತ್ತದೆ. ಇದರಿಂದ ವರನು ಅಲ್ಲಿ ಬೇಗನೇ ಬರುತ್ತಾನೆ. ಆದರೆ ವಧು ಮಾತ್ರ ವರ ಬೇಗ ಬರದಿರಲಿ ಎಂದು ಪ್ರಾರ್ಥಿಸುತ್ತಿರುತ್ತಾಳಂತೆ! ಇಂತಹ ತುಂಬಾ ವಿಚಿತ್ರವಾಗಿರುವ ಸುದ್ದಿಗಳ ಬಗ್ಗೆ ನಿಮಗೆ ಓದಲಿಕ್ಕಿದ್ದರೆ ಇದೇ ಸೆಕ್ಷನ್ ನಲ್ಲಿ ಓದುತ್ತಲಿರಿ.

English summary

Couple Not Allowed To Use Washroom

According to a custom in Indonesia, the newlywed couples are not allowed to use toilets for three days, as it is considered bad luck. The better half keeps a constant watch on the other, so that they don't break this tradition. The belief is to force them to hold their bladders for 3 days, as it is believed to strengthen the bond.
X
Desktop Bottom Promotion