For Quick Alerts
ALLOW NOTIFICATIONS  
For Daily Alerts

ಬಣ್ಣಗಳ ಆಯ್ಕೆಯಿಂದ ನಿಮ್ಮ ವ್ಯಕ್ತಿತ್ವ ತಿಳಿಯಿರಿ

By Hemanth
|

ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವವೆನ್ನುವುದು ಇದ್ದೇ ಇರುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುವುದು. ನಮಗೆ ಒಬ್ಬರೊಂದಿಗೆ ವ್ಯವಹರಿಸುವಾಗ ಅವರ ವ್ಯಕ್ತಿತ್ವ ಹೇಗೆ ಇದೆ ಎಂದು ತಿಳಿದುಬರುತ್ತದೆ. ಕೆಲವರು ಮುಖ ನೋಡಿಕೊಂಡು ಅಥವಾ ಮಾತಿನಲ್ಲಿ ವ್ಯಕ್ತಿತ್ವ ತಿಳಿಯಬಹುದು. ಆದರೆ ನೀವು ಆಯ್ಕೆ ಮಾಡಿಕೊಳ್ಳುವ ಬಣ್ಣದಿಂದಲೂ ವ್ಯಕ್ತಿತ್ವ ತಿಳಿಯಬಹುದು ಎನ್ನುವುದು ನಿಮಗೆ ತಿಳಿದಿದೆಯಾ? ಬಣ್ಣವನ್ನು ಆಧರಿಸಿಕೊಂಡು 1950ರಲ್ಲಿ ಖ್ಯಾತ ಮನಶಾಸ್ತ್ರಜ್ಞ ಡಾ. ಮ್ಯಾಕ್ಸ್ ಲುಚೆರ್ ವ್ಯಕ್ತಿತ್ವ ಪರೀಕ್ಷೆ ಮಾಡಿದರು.

ಇದರ ಪ್ರಕಾರ ಬಣ್ಣಗಳು ನಮ್ಮ ವ್ಯಕ್ತಿತ್ವ, ಆಲೋಚನೆ, ಭಾವನೆಗಳನ್ನು ಹೇಗೆ ತಿಳಿಸುವುದು ಎಂದು ಅವರು ಹೇಳಿದ್ದಾರೆ. ಸಾಮಾನ್ಯ ಬಣ್ಣಗಳನ್ನು ಇಟ್ಟುಕೊಂಡು ಅವರು ಪರೀಕ್ಷೆ ನಡೆಸಿದ್ದಾರೆ. ಅವರ ಪ್ರಕಾರ ಪ್ರತಿಯೊಬ್ಬರಿಗೂ ತನ್ನದೇ ಆಗಿರುವ ಬಣ್ಣಗಳ ಆಯ್ಕೆಯಿರುವುದು. ನೀವು ಕೆಳಗೆ ನೀಡಿರುವ ಬಣ್ಣಗಳಲ್ಲಿ ನಿಮಗಿಷ್ಟದ ಬಣ್ಣ ಆಯ್ಕೆ ಮಾಡಿಕೊಂಡು ಅದು ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯುತ್ತದೆ ಎಂದು ಹೇಳಬಹುದು.

Colour

1ನೇ ಬಣ್ಣ ಆಯ್ಕೆ ಮಾಡಿದ್ದರೆ...
ನೀವು ಮೊದಲನೇಯದ್ದನ್ನು ಆಯ್ಕೆ ಮಾಡಿದ್ದರೆ ಇದು ತುಂಬಾ ತಟಸ್ಥವಾಗಿರುವಂತಹ ಕಪ್ಪು, ಕಂದು ಬಣ್ಣವಾಗಿದೆ. ಇಂತಹ ಬಣ್ಣ ಆಯ್ಕೆ ಮಾಡಿರುವುದರಿಂದ ನೀವು ತುಂಬಾ ಅನುಕಂಪವುಳ್ಳ ವ್ಯಕ್ತಿಯೆಂದು ಹೇಳಬಹುದು. ನೀವೀಗ ದೊಡ್ಡ ಹೊಂಡದಲ್ಲಿ ಬಿದ್ದಿದ್ದೀರಿ ಮತ್ತು ಅದರಿಂದ ಹೊರಬರಲು ಹೇಗೆ ಎನ್ನುವುದು ನಿಮಗೆ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮವಿಶ್ವಾಸ ಕುಂದುವುದು ಮತ್ತು ಖಿನ್ನತೆಗೆ ಒಳಗಾಗುವಿರಿ. ಕೆಲವೊಂದು ಸಂದರ್ಭಗಲಳಲ್ಲಿ ನೀವು ಆತಂಕಕ್ಕೆ ಕೂಡ ಈಡಾಗುವಿರಿ. ಈ ಬಣ್ಣ ಆಯ್ಕೆಯಿಂದಾಗಿ ನೀವು ತುಂಬಾ ಅಸಂತುಷ್ಟ ಹಾಗೂ ಮೌಲ್ಯವಿಲ್ಲದಂತಾಗಿದ್ದೀರಿ. ನಿಮ್ಮಲ್ಲಿ ನಂಬಿಕೆ ಇಟ್ಟುಕೊಂಡು ಸಂಪೂರ್ಣ ಸಾಮರ್ಥ್ಯ ಹೊರಹಾಕಬೇಕಾಗಿದೆ. ವೈಯಕ್ತಿಕವಾಗಿ ನೀವು ತುಂಬಾ ಬದ್ಧತೆ ಹೊಂದಿರುವವರು.

2ನೇ ಬಣ್ಣ ಆಯ್ಕೆಯಾದರೆ...
ಇದು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ನೇರಳೆ ಬಣ್ಣ ಸಂಪೂರ್ಣವಾಗಿ ಹೊಂದಿಕೊಂಡಿದ್ದೀರಿ ಎಂದು ಹೇಳಬಹುದು. ಈ ಬಣ್ಣವನ್ನು ಆಯ್ಕೆ ಮಾಡಿದ್ದರೆ ನಿಮ್ಮನ್ನು ಬೇಗನೆ ಮಂತ್ರಮುಗ್ಧಗೊಳಿಸಬಹುದು ಮತ್ತು ನೀವು ಹೆಚ್ಚಾಗಿ ಹಗಲುಗನಸು ಕಾಣುತ್ತಾ ಇರುತ್ತೀರಿ. ಇನ್ನೊಂದು ಕಡೆಯಲ್ಲಿ ನೀವು ತುಂಬಾ ರೋಮ್ಯಾಂಟಿಕ್ ವ್ಯಕ್ತಿ ಮತ್ತು ಹೆಚ್ಚಿನ ಪ್ರೀತಿ ನೀಡುವಿರಿ. ಆದರೆ ನಿಮ್ಮಲ್ಲಿ ಕೆಲವೊಂದು ಅವಾಸ್ತವಿಕವಾಗಿರುವ ಆಕಾಂಕ್ಷೆಗಳು ಇರುವುದು. ಆದರೆ ಇದು ನೀವು ಕನಸು ಕಾಣದಂತೆ ಮಾಡದೆ ಇರಲು ಸಾಧ್ಯವಿಲ್ಲ. ನೀವು ಕಲ್ಪನಾಲೋಕದಲ್ಲಿ ವಿಹರಿಸಲು ತಪ್ಪಿಸಿಕೊಳ್ಳುವ ವ್ಯಕ್ತಿತ್ವದವರು. ಯಾಕೆಂದರೆ ನೀವು ತುಂಬಾ ಕ್ರಿಯಾಶೀಲ ಹಾಗೂ ಆಯೋಜನೆ ಮಾಡುವವರು.

ನಿಮ್ಮ ಆಯ್ಕೆ 3 ಆಗಿದ್ದರೆ
ನೀವು ಇದನ್ನು ಆಯ್ಕೆ ಮಾಡಿದ್ದರೆ ಆಗ ನೀಲಿ ಬಣ್ಣಕ್ಕೆ ನೀವು ತುಂಬಾ ಹೊಂದಿಕೊಂಡಿದ್ದೀರಿ ಎಂದು ಹೇಳಬಹುದು. ಇದರರ್ಥ ನೀವು ತುಂಬಾ ಭಾವನತ್ಮಕವಾಗಿದ್ದೀರಿ ಮತ್ತು ಭಾವನೆಗೆ ಹೊಂದಿಕೊಂಡಿದ್ದೀರಿ ಎಂದು ಹೇಳಲಾಗುತ್ತದೆ. ನೀವು ತುಂಬಾ ಸಹಾನುಭೂತಿ ಹೊಂದಿರುವ ಶಾಂತ ಸ್ವಭಾವದ ವ್ಯಕ್ತಿತ್ವ ಹೊಂದಿರುವಿರಿ. ಇನ್ನೊಂದು ಕಡೆಯಲ್ಲಿ ನೀವು ತುಂಬಾ ಆಧ್ಯಾತ್ಮಿಕ ದಾರಿಯಲ್ಲಿ ಸಂತೋಷವನ್ನು ಪಡೆಯುವಿರಿ. ವೈಯಕ್ತಿಕವಾಗಿ ನೀವು ತುಂಬಾ ಶಾಂತ ಹಾಗೂ ಮೌನದಿಂದ ಇರುವ ವ್ಯಕ್ತಿಯಾಗಿರುವಿರಿ. ನೀವು ವಾದ ವಿವಾದವನ್ನು ತುಂಬಾ ದೂರವಿಡುವಿರಿ. ಯಾವಾಗಲೂ ಪರಿಸ್ಥಿತಿ ತುಂಬಾ ಶಾಂತವಾಗಿರಬೇಕೆಂದು ಬಯಸುವಿರಿ. ನಿಮಗೆ ಇದು ಇಷ್ಟವಾಗಿದ್ದರೆ ಇದನ್ನು ಶೇರ್ ಮಾಡಿ ಮತ್ತು ಇನ್ನಷ್ಟು ಇಂತಹ ಲೇಖನಗಳಿಗಾಗಿ ಇದೇ ಸೆಕ್ಷನ್ ನಲ್ಲಿ ಓದುತ್ತಲಿರಿ.

English summary

Colour Test To Reveal Your Personality

Have you ever thought, that the colours that we choose have a lot to reveal as per out personality and choices? Well, a psychological test based on colours was performed in 1950 by an renowned psychologist named Dr. Max Luscher. The test reveals about the subtle and profound way in which the different colours can affect our thoughts, moods and feelings. Here in this experiment, all that you need to do is to pick any one of the colours and see on how the hidden meaning behind it.
X
Desktop Bottom Promotion