For Quick Alerts
ALLOW NOTIFICATIONS  
For Daily Alerts

ಇಲ್ಲಿ ಯಾವುದಾದರು ಒಂದು ಕಣ್ಣನ್ನು ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಿ!

|

ನಮಗೆ ತಿಳಿಯದೆ ಇರುವಂತೆ ನಮ್ಮ ಅಂತಃಶಕ್ತಿಯು ಕೆಲವೊಂದು ಆಯ್ಕೆಗಳನ್ನು ಮಾಡುತ್ತದೆ ಎಂದು ನಾವು ಕೇಳಿದ್ದೇವೆ. ಇದರಲ್ಲಿ ಪ್ರಮುಖವಾಗಿ ನಾವು ಪ್ರಕೃತಿಯಲ್ಲಿರುವಂತಹ ಏನಾದರೊಂದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ನಮ್ಮ ಕಣ್ಣಿಗೆ ಕಾಣಿಸಿದೆಲ್ಲವೂ ನಮಗೆ ಸುಂದರವಾಗಿ ಕಾಣಿಸುವುದಿಲ್ಲ. ಅದು ನಮ್ಮ ಮನಸ್ಸಿಗೆ ಕೂಡ ಹಿಡಿಸಿದರೆ ಮಾತ್ರ ಆಯ್ಕೆ ಮಾಡುತ್ತೇವೆ. ಹೀಗೆ ಆಯ್ಕೆ ಮಾಡುವ ವೇಳೆ ನಮ್ಮ ವ್ಯಕ್ತಿತ್ವ ಕೂಡ ಹೊರಬರುವುದು ಎಂದು ಹೇಳಲಾಗುತ್ತದೆ. ಕೆಲವು ಮನಶಾಸ್ತ್ರಜ್ಞರು ಯಾವುದೇ ವಸ್ತು ಅಥವಾ ಚಿತ್ರಗಳನ್ನು ನೀಡಿ ಅವರ ಮುಂದಿರುವ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವರು.

ನಾವು ಕೂಡ ಇದೇ ರೀತಿಯಾಗಿ ಬೇರೆಯವರ ವ್ಯಕ್ತಿತ್ವ ತಿಳಿಯಬಹುದು. ಆದರೆ ಇದಕ್ಕೆ ಸ್ವಲ್ಪ ಮಟ್ಟದ ಸಾಧನೆ ಮುಖ್ಯವಾಗಿ ಬೇಕು. ಈ ಲೇಖನದಲ್ಲಿ ನಾವು ನಿಮಗೆ ಕೆಲವೊಂದು ಕಣ್ಣಿನ ಚಿತ್ರಗಳನ್ನು ನೀಡಲಿದ್ದೇವೆ. ಇದನ್ನು ನೀವು ಆಯ್ಕೆ ಮಾಡಿದರೆ ಅದರಿಂದ ನೀವು ಯಾವ ರೀತಿಯ ವ್ಯಕ್ತಿತ್ವ ಹೊಂದಿದ್ದೀರಿ ಎಂದು ತಿಳಿಯಬಹುದು. ಇದನ್ನು ಸಾಮಾನ್ಯವಾಗಿ ಅಂತಃಪ್ರಜ್ಞೆ ಎಂದು ಕರೆಯಲಾಗುತ್ತದೆ. ನಾವಿಲ್ಲಿ ನಿಮಗೆ ವಿವಿಧ ಬಗೆಯ ಕಣ್ಣಿನ ಚಿತ್ರಗಳನ್ನು ನೀಡಿದ್ದೇವೆ. ನೀವು ಒಂದು ಅಥವಾ ಎರಡನ್ನು ಆಯ್ಕೆ ಮಾಡಿಕೊಂಡು ವ್ಯಕ್ತಿತ್ವ ಪರೀಕ್ಷೆ ಮಾಡಿಕೊಳ್ಳಬಹುದು.

ನಿಮ್ಮ ಆಯ್ಕೆಯು ಮೊದಲ ಕಣ್ಣು ಆಗಿದ್ದಲ್ಲಿ…

ನಿಮ್ಮ ಆಯ್ಕೆಯು ಮೊದಲ ಕಣ್ಣು ಆಗಿದ್ದಲ್ಲಿ…

ನೀವು ಚಿತ್ರದಲ್ಲಿರುವಂತಹ ಮೊದಲ ಕಣ್ಣನ್ನು ಆಯ್ಕೆ ಮಾಡಿದ್ದರೆ ಆಗ ನಿಮ್ಮನ್ನು ವಿವರಿಸಲು ಇರುವಂತಹ ಒಳ್ಳೆಯ ಪದವೆಂದರೆ ನೀವು ತುಂಬಾ ಮುಕ್ತರು. ನೀವು ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ಇತರರೊಂದಿಗೆ ಬೇಗನೆ ಸಂಪರ್ಕ ಸಾಧಿಸಲಿದ್ದೀರಿ ಮತ್ತು ಅವರಿಗೆ ನಿಮ್ಮ ಹೃದಯದಲ್ಲಿ ಜಾಗ ನೀಡಲಿದ್ದೀರಿ. ನೀವು ಯಾವಾಗಲೂ ಮೌನವಾಗಿರುವುದನ್ನು ಮತ್ತು ಹೊರಜಗತ್ತಿನಿಂದ ದೂರವಾಗಿರುವುದನ್ನು ಬಯಸಲ್ಲ. ಏನು ಹೇಳದೆ ಸುಮ್ಮನೆ ಇರುವ ಬದಲು ಎಲ್ಲವನ್ನು ಹೇಳಿ ಬಿಡುವುದು ಉತ್ತಮವೆಂದ ಭಾವಿಸಿದವರು ನೀವು. ಅಪಾಯಗಳನ್ನು ಎದುರಿಸಲು ಮತ್ತು ಈ ಪ್ರಕ್ರಿಯೆಯಲ್ಲಿ ನಿಮಗೆ ಹಾನಿಯಾದರೂ ಅದರ ಬಗ್ಗೆ ಹೆಚ್ಚಿಗೆ ಗಮನಹರಿಸಲ್ಲ. ಅದಾಗ್ಯೂ, ಸಮಸ್ಯೆಗಳು ನಿಮ್ಮದೇ ಆಗಿರುವುದು ಮತ್ತು ಇದನ್ನು ನೀವೇ ಖಾಸಗಿಯಾಗಿ ಬಗೆಹರಿಸಿಕೊಳ್ಳಬೇಕು ಎಂದು ನೀವು ಬಯಸುವಿರಿ. ನೀವು ಎಲ್ಲರಿಗೂ ನೆರವು ನೀಡಲು ಮುಂದಾಗುವಿರಿ ಮತ್ತು ಇದರಿಂದಾಗಿ ನಿಮ್ಮ ಒಳಮನಸ್ಸಿಗೂ ತುಂಬಾ ಸಂತೋಷವಾಗುವುದು.

Most Read:ಕಣ್ಣೀರು ತರಿಸುವ ಸ್ಟೋರಿ: ಈಕೆ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದರೂ 50 ಜನರ ಪ್ರಾಣ ಉಳಿಸಿದಳು!

ಎರಡನೇ ಕಣ್ಣಿನ ಆಯ್ಕೆ ನೀವು ಮಾಡಿದ್ದರೆ…

ಎರಡನೇ ಕಣ್ಣಿನ ಆಯ್ಕೆ ನೀವು ಮಾಡಿದ್ದರೆ…

ನೀವು ಎರಡನೇ ಕಣ್ಣನ್ನು ಆಯ್ಕೆ ಮಾಡಿದ್ದರೆ ನಿಮ್ಮನ್ನು ವಿವರಿಸಲು ಒಳ್ಳೆಯ ಪದವೆಂದರೆ ಆತ್ಮಸಾಕ್ಷಿ. ನೀವು ತುಂಬಾ ಆಶಾದಾಯಕ ವ್ಯಕ್ತಿಯಾಗಿರುವಿರಿ ಮತ್ತು ನಿಮ್ಮ ಕಾರ್ಯಗಳು ವಿಶ್ವದಲ್ಲಿ ಬದಲಾವಣೆ ಉಂಟು ಮಾಡುವುದು ಎಂದು ನಂಬಿರುವಿರಿ. ನೀವು ಯಾವಾಗಲೂ ಸರಿಯಾದ ಕೆಲಸ ಮಾಡಲು ಬಯಸುವಿರಿ. ರೂಪಾರ್ಥವಾಗಿ ಹೇಳುವುದಾದರೆ ನೀವು ವಿಶ್ವದ ಕವಿಯಂತೆ. ಸಮಾಜದಲ್ಲಿ ಇರುವಂತಹ ಎಲ್ಲಾ ಅನ್ಯಾಯ ಮತ್ತು ದುಷ್ಟತೆಗಳನ್ನು ನೀವು ನೋಡುವಿರಿ. ಅದಾಗ್ಯೂ, ಆದರೆ ಆ ನೋವನ್ನೆಲ್ಲಾ ನೀವು ನುಂಗಿಕೊಳ್ಳುವಿರಿ ಮತ್ತು ಹೆಚ್ಚಾಗಿ ಇದನ್ನು ತೋರಿಸಿಕೊಡಲ್ಲ. ವಿಶ್ವವನ್ನು ಉತ್ತಮವಾಗಿ ಮಾಡಬೇಕೆಂದು ನೀವು ಯಾವಾಗಲೂ ಬಯಸುವಿರಿ.

ಮೂರನೇ ಕಣ್ಣಿನ ಆಯ್ಕೆ ನಿಮ್ಮದಾಗಿದ್ದರೆ…

ಮೂರನೇ ಕಣ್ಣಿನ ಆಯ್ಕೆ ನಿಮ್ಮದಾಗಿದ್ದರೆ…

ಮೂರನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದರೆ ಆಗ ನಿಮ್ಮನ್ನು ವರ್ಣಿಸಲು ಇರುವಂತಹ ಅತ್ಯುತ್ತಮ ಪದವೆಂದರೆ ನೀವು ಇನ್ನು ಭೂತಕಾಲದಲ್ಲಿಯೇ ಜೀಸುತ್ತಿದ್ದೀರಿ. ನೀವು ಹಿಂದೆ ಬಹಳ ಕ್ಷೋಭೆ ಹಾಗೂ ಪ್ರಕ್ಷುಬದ್ದತೆ ಹೊಂದಿದ್ದೀರಿ ಎಂದು ನಿಮಗೆ ತಿಳಿದಿದೆ. ಇದರಿಂದ ಹೊರಬರಲು ನಿಮಗೆ ಇದುವರೆಗೂ ಸಾಧ್ಯವಾಗಿಲ್ಲ. ನೀವು ಆದಷ್ಟು ಮಟ್ಟಿಗೆ ಶಾಂತಿ ಪಡೆಯಲು ಬಯಸುವಿರಿ ಮತ್ತು ಈ ಕಾರಣದಿಂದಾಗಿಯೇ ನೀವು ಹೆಚ್ಚಿನ ಸಮಯ ಮೌನವಾಗಿಯೇ ಇರುತ್ತೀರಿ. ನಿಮಗೆ ಇನ್ನು ಹಲವಾರು ಕೆಲಸಗಳನ್ನು ಮಾಡಲೇ ಬೇಕಾಗಿದೆ. ಆದರೆ ಇದರೆಲ್ಲದರ ಮೇಲ್ಮುಖವಾದ ಭಾಗವೊಂದು ಇದೆ ಎಂದು ನಿಮಗೆ ತಿಳಿದಿದೆಯಾ? ನಿಮ್ಮ ಗ್ರಹಿಕೆಯು ಕೆಲವೊಂದು ಸಂದರ್ಭದಲ್ಲಿ ಸರಿಯಾಗಿ ಇರುವುದು ಕೂಡ. ಆದರೆ ನೀವು ಹಿಂದಿನದೆಲ್ಲವನ್ನು ಮರೆತು ಬಿಡಬೇಕಾಗಿದೆ.

ನಾಲ್ಕನೇ ಕಣ್ಣಿನ ಆಯ್ಕೆ ಮಾಡಿದ್ದರೆ

ನಾಲ್ಕನೇ ಕಣ್ಣಿನ ಆಯ್ಕೆ ಮಾಡಿದ್ದರೆ

ನಾಲ್ಕನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದರೆ ಆಗ ನಿಮ್ಮ ವರ್ಣಿಸಲು ಇರುವಂತಹ ಒಳ್ಳೆಯ ಪದವೆಂದರೆ ನೀವು ಅತಿಯಾಗಿ ಆಲೋಚಿಸುವವರು. ನೀವು ಎಲ್ಲಾ ವಿಚಾರಗಳ ಬಗ್ಗೆ ಅತಿಯಾಗಿ ಆಲೋಚನೆ ಮಾಡುವಿರಿ. ಇದು ಯಾಕೆಂದರೆ ನೀವು ವಿಚಾರದ ಆಳದ ತನಕ ಹೋಗಲು ಬಯಸುತ್ತೀರಿ ಮತ್ತು ಇದಕ್ಕೆ ಅರ್ಥವೇನೆಂದು ತಿಳಿಯಲು ಬಯಸುವಿರಿ. ಇದರಿಂದಾಗಿ ನೀವು ತತ್ವಜ್ಞಾನಿಯಂತೆ ಆಗುವಿರಿ. ಈ ಕಾರಣದಿಂದ ನೀವು ಆಲೋಚನೆಯ ವ್ಯಕ್ತಿಯಾಗುವಿರಿ. ನೀವು ಯಾವಾಗಲೂ ನಿಮ್ಮದೇ ಆಲೋಚನೆಯಲ್ಲಿ ಕಳೆದುಕೊಂಡು ಬಿಡುವಿರಿ. ಇದರಿಂದಾಗಿ ಜೀವನವು ಒಂದು ದೊಡ್ಡ ಒಗಟು ಮತ್ತು ಅದನ್ನು ಬಿಡಿಸಬೇಕು ಎಂದು ಬಯಸುವಿರಿ.

Most Read:ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತೇ?

ನೀವು ಐದನೇ ಕಣ್ಣನ್ನು ಆಯ್ಕೆ ಮಾಡಿದವರಾದರೆ…

ನೀವು ಐದನೇ ಕಣ್ಣನ್ನು ಆಯ್ಕೆ ಮಾಡಿದವರಾದರೆ…

ಐದನೇ ಕಣ್ಣನ್ನು ನೀವು ಆಯ್ಕೆ ಮಾಡಿದವರಾದರೆ ಆಗ ನಿಮ್ಮನ್ನು ಬಣ್ಣಿಸಲು ಇರುವಂತಹ ಅತ್ಯುತ್ತಮವಾದ ಪದವೆಂದರೆ ಅದು ರಹಸ್ಯ. ನೀವೊಂದು ದೊಡ್ಡ ರಹಸ್ಯವಾಗಿರುವಿರಿ. ಕೇವಲ ಜಗತ್ತಿಗೆ ಮಾತ್ರವಲ್ಲದೆ, ನಿಮಗೂ ಕೂಡ ನೀವೊಂದು ರಹಸ್ಯವಾಗಿರುವಿರಿ. ನಿಮ್ಮ ಊಹಿಸುವುದು ತುಂಬಾ ಕಠಿಣ ವಿಚಾರವಾಗಿದೆ. ನಿಮ್ಮ ಮನಸ್ಥಿತಿಯಂತೆ ನಿಮ್ಮನ್ನು ಊಹಿಸಲು ಸಾಧ್ಯವಾಗದು. ನೀವು ಹಲವಾರು ರೀತಿಯ ವಿರೋಧಾಭಾಸಗಳನ್ನು ಹೊಂದಿರುವಿರಿ. ಕೆಲವು ಶಬ್ಧಗಳ ವ್ಯಕ್ತಿಯಾಗಿರುವಂತಹ ನೀವು ಹೇಗೆ ಎನ್ನುವುದನ್ನು ಜಗತ್ತಿಗೆ ಯಾವತ್ತೂ ತೋರಿಸಿಕೊಡುವುದಿಲ್ಲ. ನೀವು ಜನರೊಂದಿಗೆ ಸಂಪರ್ಕ ಸಾಧಿಸುವ ಮೊದಲು ಅವರು ಹೇಗೆ ಎಂದು ತಿಳಿಯಲು ಬಯಸುವಿರಿ.

ಆರನೇ ಕಣ್ಣು ಆಯ್ಕೆ ಮಾಡಿದ್ದರೆ…

ಆರನೇ ಕಣ್ಣು ಆಯ್ಕೆ ಮಾಡಿದ್ದರೆ…

ನೀವು ಒಂದು ವೇಳೆ ಆರನೇ ಕಣ್ಣನ್ನು ಆಯ್ಕೆ ಮಾಡಿದರೆ ಆಗ ನಿಮ್ಮನ್ನು ಬಣ್ಣಿಸಲು ಇರುವಂತಹ ಒಳ್ಳೆಯ ಪದವೆಂದರೆ ಅದು ಸೂಕ್ಷ್ಮತೆ. ನೀವು ಕ್ಷಮಿಸಿ ಬಿಡಬಹುದು. ಆದರೆ ಯಾವತ್ತಿಗೂ ಇದನ್ನು ಮರೆಯಲ್ಲ. ನೀವು ಅತ್ಯುತ್ತಮವಾಗಿರುವ ವೀಕ್ಷಕರಾಗಿರುವಿರಿ ಮತ್ತು ಪ್ರತಿಯೊಬ್ಬರನ್ನು ಗಮನಿಸುತ್ತಾ ಇರುವಿರಿ. ನೀವು ತುಂಬಾ ಸೂಕ್ಷ್ಮ ಆತ್ಮದವರಾಗಿರುವಿರಿ ಮತ್ತು ಯಾವುದೇ ವಿಚಾರದ ಬಗ್ಗೆ ಭಾವನಾತ್ಮಕವಾಗಿ ಆಲೋಚಿಸುವಿರಿ. ಇದರಿಂದಾಗಿ ಕೆಲವೊಂದು ಸಂದರ್ಭದಲ್ಲಿ ಸಣ್ಣ ವಿಚಾರಗಳು ನಿಮಗೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದು. ಹೀಗಾಗಿ ನೀವು ಸಣ್ಣ ವಿಷಯಕ್ಕೂ ಕಣ್ಣೀರು ಸುರಿಸುವ ಅಥವಾ ನಗುವ ವ್ಯಕ್ತಿಯಾಗಿರುವಿರಿ. ಒಳದೃಷ್ಟಿ ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದು ನೀವು ಬೇರೆಯವರಿಗೂ ತೋರಿಸುವಿರಿ. ನೀವು ಅತ್ಯುತ್ತಮವಾಗಿ ಪೂರ್ವ ನಿರೀಕ್ಷೆ ಮಾಡಿಕೊಳ್ಳುವಿರಿ. ಇದರಿಂದಾಗಿ ಮುಂದೆ ಏನಾಗಲಿದೆ ಎಂದು ನಿಮಗೆ ತಿಳಿದುಬರುವುದು.

Most Read:ಗರ್ಭಪಾತ ಮಾಡಿಸದೆ ಕುರೂಪಿ ಮಗುವಿಗೆ ಜನ್ಮ ನೀಡಿದ ತಾಯಿ!

ಏಳನೇ ಕಣ್ಣು ನಿಮ್ಮ ಆಯ್ಕೆಯಾಗಿದ್ದಲ್ಲಿ…

ಏಳನೇ ಕಣ್ಣು ನಿಮ್ಮ ಆಯ್ಕೆಯಾಗಿದ್ದಲ್ಲಿ…

ನೀವು ಏಳನೇ ಕಣ್ಣನ್ನು ಆಯ್ಕೆ ಮಾಡಿಕೊಂಡಿದ್ದರೆ ಆಗ ನಿಮ್ಮನ್ನು ವರ್ಣಿಸಲು ಇರುವಂತಹ ಒಳ್ಳೆಯ ಪದವೆಂದು ಅತ್ಯುತ್ಸಾಹ. ನೀವು ಪ್ರತಿಯೊಂದು ವಿಚಾರದಲ್ಲೂ ಅತ್ಯುತ್ಸಾಹ ತೋರಿಸುವಂತಹ ವ್ಯಕ್ತಿಯಾಗಿರುವಿರಿ. ನೀವು ತುಂಬಾ ಅತಿರೇಕದ ವ್ಯಕ್ತಿಯಾಗಿರುವಿರಿ. ಯಾರನ್ನೂ ಪ್ರೀತಿಸಲ್ಲ, ಯಾರನ್ನೂ ದ್ವೇಷಿಸಲ್ಲ ಮತ್ತು ಇದರ ನಡುವೆಯೂ ಇರಲ್ಲ. ಇದರಿಂದಾಗಿ ನಿಮ್ಮ ಬಗ್ಗೆ ಅನಿಸಿಕೆ ಬರುವುದು ಮತ್ತು ಅವರು ಒಂದು ತೀರ್ಮಾನಕ್ಕೆ ಬರುವಂತೆ ಮಾಡುವುದು. ನಿಮ್ಮ ಹೆಚ್ಚಿನ ಶಕ್ತಿ ಇರುವುದು, ಕೆಲವೊಂದು ಸಲ ಇದು ಅತಿಯಾಗಿ ಇರುವುದು. ಇದು ನಿಮ್ಮ ವಿರುದ್ಧವಾಗಿ ಕೆಲಸ ಮಾಡಬಹುದು ಮತ್ತು ತುಂಬಾ ಧೈರ್ಯಗುಂದುವರು. ಆತಂಕಿತ ಮನಸ್ಥಿತಿಯಾಗಿರುವ ಕಾರಣದಿಂದಾಗಿ ನೀವು ಎಲ್ಲವನ್ನು ಹೇಳಿಕೊಳ್ಳುವುದಿಲ್ಲ.

ಎಂಟನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದರೆ…

ಎಂಟನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದರೆ…

ಎಂಟನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದರೆ ಆಗ ನೀವು ಸಂಪ್ರದಾಯಬದ್ಧರಾದ ವ್ಯಕ್ತಿಯಲ್ಲವೆಂದು ಹೇಳಬಹುದು. ನಿಮ್ಮ ಸುತ್ತಲು ಇರುವ ವ್ಯಕ್ತಿಗಳಿಗಿಂತ ನಿಮ್ಮ ಆಸಕ್ತಿ, ಹವ್ಯಾಸಗಳು, ನಂಬಿಕೆಗಳು ಮತ್ತು ಕ್ರಮವು ತುಂಬಾ ಭಿನ್ನವಾಗಿರುವುದು. ನೀವು ನಿಯಮಗಳಿಗೆ ಕಟ್ಟಬೀಳದೆ ನಿಮ್ಮದೇ ಆಗಿರುವಂತಹ ಪಥದಲ್ಲಿ ಸಾಗಲು ಬಯಸುವಿರಿ. ನೀವು ಒಂದು ರೀತಿಯಲ್ಲಿ ಬದಲಾವಣೆ ಬಯಸುವಂತಹ ವ್ಯಕ್ತಿಯಾಗಿರುವಿರಿ. ನಿಮ್ಮ ಬಗ್ಗೆ ಬೇರೆಯವರು ಏನು ಹೇಳುವರು ಎನ್ನುವ ಬಗ್ಗೆ ನೀವು ಸ್ವಲ್ಪವೂ ಚಿಂತೆ ಮಾಡುವುದಿಲ್ಲ ಮತ್ತು ಜಗತ್ತು ನಿಮ್ಮ ಬಗ್ಗೆ ಪ್ರತಿಯೊಂದನ್ನೂ ತಿಳಿದುಕೊಳ್ಳಬೇಕೆಂದು ಬಯಸುವಿರಿ. ನಿಮ್ಮ ವ್ಯಕ್ತಿತ್ವದ ಬಗ್ಗೆ ತೀರ್ಪು ನೀಡುವಂತಹ ವ್ಯಕ್ತಿಗಳ ಬಗ್ಗೆ ನೀವು ನಗುವಿರಿ. ಬೇರೆಯವರು ಕೂಡ ನಿಮ್ಮಂತೆ ತುಂಬಾ ವಿಲಕ್ಷಣ ಹಾಗೂ ಸಂಪ್ರದಾಯಬದ್ಧವಲ್ಲದ ವ್ಯಕ್ತಿಯಾಗಬೇಕೆಂದು ನೀವು ಬಯಸುವಿರಿ.

9ನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದಲ್ಲಿ…

9ನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದಲ್ಲಿ…

9ನೇ ಕಣ್ಣನ್ನು ನೀವು ಆಯ್ಕೆ ಮಾಡಿದ್ದಲ್ಲಿ ಆಗ ನಿಮ್ಮನ್ನು ವರ್ಣಿಸಲು ಇರುವಂತಹ ಒಳ್ಳೆಯ ಪದವೆಂದರೆ ಅದು ಅರ್ಥಗರ್ಭಿತ. ನೀವು ತುಂಬಾ ಕಾಳಜಿ ಇರುವಂತಹ ವ್ಯಕ್ತಿಯಾಗಿರುವಿರಿ ಮತ್ತು ಬೇರೆಯವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಂತಹ ವ್ಯಕ್ತಿಯಾಗಿರುವಿರಿ. ಒಬ್ಬರ ನಡತೆಯನ್ನು ನೀವು ಬೇಗನೆ ಅರ್ಥ ಮಾಡಿಕೊಳ್ಳುವಿರಿ ಮತ್ತು ಕೇವಲ ಅವರ ಮುಖ ನೋಡುವ ಮೂಲಕ ಆ ವ್ಯಕ್ತಿಯ ನಡತೆ ಹೇಗಿದೆ ಎಂದು ಚೆನ್ನಾಗಿ ತಿಳಿಯುವಿರಿ. ಯಾರಾದರೂ ಸುಳ್ಳು ಹೇಳುತ್ತಿದ್ದಾರೆಯಾ ಎಂದು ತಿಳಿಯಲು ನಿಮಗೆ ಹೆಚ್ಚು ಕಷ್ಟವಾಗದು. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಕುಶಲತೆಯು ತಮ್ಮ ಬಗ್ಗೆ ಅಲ್ಲದೆ ಬೇರೆಯವರ ಬಗ್ಗೆ ಮಾತ್ರ ತಿಳಿಯಲು ಸಾಧ್ಯವಾಗುವುದು. ಅದಾಗ್ಯೂ, ನಿಮ್ಮ ವಿಚಾರದಲ್ಲಿ ನಿಮ್ಮಲ್ಲಿ ಏನಾದರೂ ಅದನ್ನೂ ಕಂಡುಕೊಳ್ಳುವಿರಿ.

English summary

Choose an Eye and It Will Reveal Your Personality

There are certain images that call upon you. You look at them and there's a certain choice that's made inside you. That's what we call the voice of subconscious. The following personality quiz is based on the same science. We give you nine images of different eyes and you have to pick one or two that speaks to you or calls out to you the most. Then, we will tell you what it reveals about your personality.
X
Desktop Bottom Promotion