For Quick Alerts
ALLOW NOTIFICATIONS  
For Daily Alerts

  ಎಲ್ಲಾ ರಾಶಿಯವರಿಗೆ ಪ್ರೀತಿಯ ಬಗ್ಗೆ ಸಲಹೆಗಳು

  By Deepu
  |

  ಪ್ರೀತಿಸುವವರ ಲೋಕವೇ ಬೇರೆ. ಪ್ರೀತಿಸುವ ಜೋಡಿ ಜತೆಯಾಗಿದ್ದರೆ ಅವರಿಗೆ ತಮ್ಮ ಸುತ್ತಲು ಏನಾಗುತ್ತಿದೆ ಎನ್ನುವುದನ್ನೇ ಮರೆಯುವರು. ಅದರಲ್ಲೂ ಕೆಲವರು ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಮೇಲೆ ಪ್ರಭಾವ ಬೀರಲು ಸಾಕಷ್ಟು ಪ್ರಯತ್ನಿಸುವರು. ಪ್ರೀತಿಯಲ್ಲಿರುವವರು ತಮ್ಮ ಭಾವನೆ ಹಾಗೂ ಪ್ರೀತಿಯನ್ನು ತೋರಿಸಿಕೊಳ್ಳುವಂತಹ ವಿಧಾನಗಳು ತುಂಬಾ ಭಿನ್ನವಾಗಿರುವುದು. ಕೆಲವರು ಪ್ರೀತಿಯನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ತುಂಬಾ ದೀರ್ಘ ಸಮಯದ ತನಕ ಇದನ್ನು ವ್ಯಕ್ತಪಡಿಸುವುದೇ ಇಲ್ಲ.

  ಇನ್ನು ಕೆಲವರಿಗೆ ನಿರಾಕರಣೆಯ ಭೀತಿಯಿಂದ ಇದನ್ನು ಹೇಳಲ್ಲ. ಕೆಲವು ಮಂದಿ ಪ್ರೀತಿ ಮೂಡಿದ ತಕ್ಷಣ ಅದನ್ನು ಹೇಳಿಕೊಳ್ಳುವ ಗುಣ ಹೊಂದಿರುವರು. ಈ ಲೇಖನದಲ್ಲಿ ಪ್ರತಿಯೊಂದು ರಾಶಿಯವರಿಗೆ ಪ್ರೀತಿಯ ಬಗ್ಗೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ ನಿಮ್ಮ ಪ್ರೀತಿಯ ಜೀವನ ಸುಗಮಗೊಳಿಸಿ.... 

   ಮೇಷ: ಮಾ.21- ಎ.19

  ಮೇಷ: ಮಾ.21- ಎ.19

  ಮೇಷ ರಾಶಿಯ ವ್ಯಕ್ತಿಗಳು ಸಾಂದರ್ಭಿಕ ಆಕರ್ಷಣೆಯನ್ನು ಸರಿ ಎಂದು ಅರಿತುಕೊಳ್ಳುವುದನ್ನು ಕಡಿಮೆ ಮಾಡಬೇಕು. ಇವರು ತುಂಬಾ ಸಹಜತೆ ಮತ್ತು ಸಾಹಸಪ್ರವೃತಿ ಮೀರಿ ಬರಬೇಕು. ಆದರೆ ಇವರು ಸಂಬಂಧದ ಸ್ಥಿರತೆಗಾಗಿ ಬಯಸುವರು. ಇವರು ಮನಸ್ಸಿನ ಆಳದಲ್ಲಿ ತುಂಬಾ ದೀರ್ಘವಾದ ಬೇರೆ ಆಲೋಚನೆ ಹೊಂದಿದ್ದರೂ ಸಾಮಾನ್ಯ ಸಂಬಂಧಕ್ಕೆ ಒಪ್ಪುವರು. ಈ ರಾಶಿಯವರಿಗೆ ಜೀವನದಲ್ಲಿ ಇನ್ನು ಹೆಚ್ಚಿನ ಭಾವೋದ್ರೇಕತೆ ಬೇಕಾಗಿದೆ. ನಿಮ್ಮ 5ನೇ ಮನೆ ಯಾವುದೇ ಋಣಾತ್ಮಕ ಗ್ರಹಗಳನ್ನು ಹೊಂದಿಲ್ಲ. ಆದ್ದರಿಂದ ಹೊಸ ಸಂಬಂಧಗಳಿಗೆ ಪ್ರವೇಶಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸೌಮ್ಯವಾಗಿರುತ್ತವೆ. ಸಣ್ಣ ವಿವರಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಅವು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ವಾದವನ್ನು ನಿರ್ವಹಿಸುವಾಗ ಸ್ಪಷ್ಟವಾದ ಚಿಂತನೆ ಮತ್ತು ತರ್ಕ ನಿಮಗೆ ಕಾರಣವಾಗಬಹುದು ಎಂದು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಇದು ವರ್ಷವಿಡೀ ನಿಮಗಾಗಿ ಮೃದು ಪ್ರೇಮ ಜೀವನವನ್ನು ಖಚಿತಪಡಿಸುತ್ತದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನೀವು ಪ್ರೀತಿಯ ಸಂಪರ್ಕವನ್ನು ಎದುರಿಸಿದರೆ ವಿರಸ ಉಂಟಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಯಾವುದೇ ಹಳೆಯ ಪ್ರೀತಿಯ ಸಂಬಂಧವೂ ಸಹ ನಿಮ್ಮನ್ನು ಕಳೆದುಕೊಳ್ಳುತ್ತದೆ. ಹಳೆಯದನ್ನು ಉಳಿಸಿಕೊಳ್ಳುವಾಗ ಹೊಸ ಪ್ರೀತಿಯ ಸಂಪರ್ಕವನ್ನು ಮಾಡಲು ಎಚ್ಚರಿಕೆಯಿಂದಿರಿ.

  ವೃಷಭ: ಎಪ್ರಿಲ್ 20- ಮೇ 20

  ವೃಷಭ: ಎಪ್ರಿಲ್ 20- ಮೇ 20

  ಇತರರನ್ನು ಅವರ ಹಿಂದಿನ ತಪ್ಪುಗಳಿಂದ ತೀರ್ಮಾನಿಸುವುದನ್ನು ವೃಷಭ ರಾಶಿಯವರು ನಿಲ್ಲಿಸಬೇಕು. ತಾವು ಏನು ಎಂದು ಸಾಬೀತುಮಾಡುವ ಮೊದಲೇ ಬೇರೆಯವರ ಬಗ್ಗೆ ತೀರ್ಪು ನೀಡುವಂತಹ ಗುಣವು ಇವರಲ್ಲಿ ಇರುವುದು. ಈ ವ್ಯಕ್ತಿಗಳು ತುಂಬಾ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜನರನ್ನು ಮತ್ತು ಬೇರೆಯವರ ಹಿಂದಿನ ಜೀವನವು ತುಂಬಾ ಶುಭ್ರವಾಗಿರಬೇಕೆಂದು ಬಯಸುವರು. ಉನ್ನತ ಗುಣಮಟ್ಟವನ್ನು ಇಟ್ಟುಕೊಳ್ಳುವುದು ಸರಿ ಎಂದು ಅವರು ಅರ್ಥ ಮಾಡಿ ಕೊಳ್ಳಬೇಕು. ನಿಮ್ಮ ವೈಯಕ್ತಿಕ ಆಕರ್ಷಣೆಯು ಪಾಲುದಾರರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ನೀವು ಇನ್ನೂ ವಿವಾಹವಾಗದವರಾಗಿದ್ದರೆ ನಿಮ್ಮ ಜೀವನದಲ್ಲಿ ವರ್ಧಕವನ್ನು ಕಾಣುವಿರಿ. ಶುಕ್ರನು ನಿಮ್ಮ ರಾಶಿಚಕ್ರದ ಮನೆಯಲ್ಲಿಯೇ ಸಕ್ರಿಯನಾಗಿರುತ್ತಾನೆ. ಇದರಿಂದ ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ವಿವಾಹಿತರಲ್ಲಿ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ನೀವು ವಿಷಯವನ್ನು ದೀರ್ಘ ಸಮಯದವರೆಗೆ ಎಳೆಯದೆ ಅಲ್ಲಿಯೇ ಬಿಟ್ಟುಬಿಡಿ. ಸಣ್ಣ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಸಂತೋಷವನ್ನು ಅನುಭವಿಸಬಹುದಾಗಿದೆ. ವಿವಾಹಿತರಲ್ಲಿ ಸಂಗಾತಿಯನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ತೆಗೆದು ಕೊಳ್ಳುವುದು.

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ಜನರು ತಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂದು ಚಿಂತೆ ಮಾಡುವುದನ್ನು ಮಿಥುನ ರಾಶಿಯವರು ಬಿಟ್ಟು ಬಿಡಬೇಕು. ಜನರು ಯಾವಾಗಲೂ ತೀರ್ಪು ನೀಡುವರು ಮತ್ತು ಟೀಕಿಸುತ್ತಾ ಇರುವರು ಎಂದು ಈ ರಾಶಿಯವರು ಯೋಚಿಸುವರು. ಇತರರನ್ನು ಟೀಕಿಸಲು ಯಾರಲ್ಲಿಯೂ ಸಮಯವಿಲ್ಲವೆನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ಜೂನ್ ತಿಂಗಳ ಮಧ್ಯದ ಸಮಯದ ವರೆಗೂ ಸಂಗಾತಿಯೊಂದಿಗೆ ಸಣ್ಣ ಪುಟ್ಟ ತರ್ಕಗಳು ಹಾಗೂ ವಾದಗಳು ನಡೆಯುತ್ತಲೇ ಇರುತ್ತವೆ. ಇದು ವಿಭಿನ್ನವಾದ ಸ್ವಭಾವ ಹಾಗೂ ಅಭಿಪ್ರಾಯಗಳಿಂದ ಆಗಿರಬಹುದು. ನಿಮ್ಮ ಮಧ್ಯೆ ಉತ್ತಮವಾದ ಸಂಬಂಧ ಬೆಳೆಯಲು ಮುಂದೆ ಹೆಜ್ಜೆಯನ್ನು ಹಾಕಬೇಕು. ಇದರಿಂದ ನೀವೊಬ್ಬ ಉತ್ತಮ ವ್ಯಕ್ತಿಯಾಗುವಿರಿ. ಇದರಿಂದಾಗಿ ನಿಮ್ಮ ಪಾಲುದಾರರ ನಡವಳಿಕೆಯ ಮೇಲೆ ಪ್ರಭಾವ ಬೀರುವುದು. ನಿಮ್ಮ ಪ್ರೀತಿಯ ಜೀವನವು ಸಕ್ರಿಯವಾಗಿರುತ್ತದೆ. ಇದರೊಂದಿಗೆ ನೀವು ಆವರ್ತನದೊಂದಿಗೆ ಹೊಸ ಮತ್ತು ಆಸಕ್ತಿದಾಯಕ ವಿಚಾರದಲ್ಲಿ ಹೆಚ್ಚು ತಲ್ಲೀನರಾಗುವಿರಿ. ವಿರೋಧಾಭಾಸಗಳು ಕಡಿಮೆಯಾಗುವುದರ ಮೂಲಕ ಸಂಬಂಧದಲ್ಲಿ ಆಕರ್ಷಣೆ ಹೆಚ್ಚುವುದು. ಸಾಮಾನ್ಯವಾದ ಗುಣಗಳಿಂದ ಸಂಬಂಧದ ವ್ಯಾಪ್ತಿಯು ಹೆಚ್ಚುವುದು.

   ಕರ್ಕಾಟಕ: ಜೂ.21-ಜು.22

  ಕರ್ಕಾಟಕ: ಜೂ.21-ಜು.22

  ಗತಿಸಿರುವುದರಲ್ಲೇ ಕಾಲ ಕಳೆಯುವುದನ್ನು ಕರ್ಕಾಟಕ ರಾಶಿಯವರು ಬಿಟ್ಟು ಬಿಡಬೇಕು. ನಿಮಗೆ ನೋವುಂಟು ಮಾಡಿರುವವರನ್ನು ಬಿಟ್ಟುಬಿಡುವ ಸಮಯವಿದು. ಈ ವ್ಯಕ್ತಿಗಳು ಪ್ರತೀ ಸಲ ನೋವನ್ನು ಅನುಭವಿಸಿರುವರು. ಯಾಕೆಂದರೆ ಕೆಲವೊಂದು ಕೆಟ್ಟ ವ್ಯಕ್ತಿಗಳು ನಿಮ್ಮ ಸಮಯ, ಆಲೋಚನೆ ಮತ್ತು ಶಕ್ತಿ ವ್ಯಯಿಸಲು ಬಿಟ್ಟಿದ್ದೀರಿ. ಇವರು ಸ್ವಾಭಾವಿಕವಾಗಿ ಕ್ಷಮಿಸುವ ಹಾಗೂ ಕಾಳಜಿ ಹೊಂದಿರುವ ವ್ಯಕ್ತಿಗಳು. ತಮಗೆ ನೋವುಂಟು ಮಾಡಿದವರನ್ನು ಇವರು ಮರೆತು ಬಿಡಬೇಕು ಮತ್ತು ತಮ್ಮನ್ನು

  ಸಂತೋಷವಾಗಿಡಬಲ್ಲ ವ್ಯಕ್ತಿಗಳಿಗೆ ತಮ್ಮ ಜೀವನದಲ್ಲಿ ಜಾಗ ಮಾಡಿಕೊಡಬೇಕು.

  ಸಿಂಹ: ಜುಲೈ 23- ಆ.23

  ಸಿಂಹ: ಜುಲೈ 23- ಆ.23

  ತಮ್ಮ ಪ್ರತಿಷ್ಠೆಯು ಮೇಲಾಗುವುದನ್ನು ಸಿಂಹ ರಾಶಿಯವರು ತಡೆಯಬೇಕು. ಇಲ್ಲವಾದಲ್ಲಿ ಈ ಹಾದಿಯಲ್ಲಿ ಬರುವಂತಹ ಪ್ರತಿಯೊಂದು ಕೂಡ ತೊಂದರೆಗೀಡಾಗುವುದು. ಇವರು ಯಾವುದೇ ವಿಚಾರವನ್ನು ಕೆಡಿಸುವಂತಹ ಗುಣವನ್ನು ಹೊಂದಿರುವರು. ಇವರ ಪ್ರತಿಷ್ಠೆಯು ಮಧ್ಯೆ ಬರುವ ಕಾರಣದಿಂದಾಗಿ ಇವರು ಸಂಬಂಧದಲ್ಲಿ ಒಳಗೊಳ್ಳುವುದು ಅಸಾಧ್ಯ. ಇನ್ನೊಂದು ಬದಿಯಲ್ಲಿ ಇವರು ತುಂಬಾ ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಇರುವರು. ಈ ರಾಶಿಯವರನ್ನು ಅರ್ಥ

  ಮಾಡಿಕೊಳ್ಳಬಹುದು. ಇದನ್ನು ಹೊರತುಪಡಿಸಿ, ಇವರು ಯಾವಾಗಲೂ ಸರಿಯಾಗಿರಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಂಗಾತಿಯನ್ನು ಹುಡುಕಲು ಸಾಕಷ್ಟು ಸಾಮಾಜಿಕ ಸಂಪರ್ಕ ಹಾಗೂ ಸಂವಹನವನ್ನು ಪಡೆದುಕೊಳ್ಳುವಿರಿ. ಈಗಾಗಲೇ ಸಂಬಂಧದಲ್ಲಿ ಇರುವವರಿಗೆ ಪ್ರೀತಿಯು ಉತ್ತೇಜನಗೊಳ್ಳುವುದು. ನೀವು ನಿಮ್ಮ ಸಂಗಾತಿಯೊಂದಿಗೆ ನಿಷ್ಠಾವಂತರಾಗಿರಲು ಖಚಿತಪಡಿಸಿಕೊಳ್ಳಿ. ಮೂರನೆ ವ್ಯಕ್ತಿಯ ಹಸ್ತಕ್ಷೇಪವು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನಿಮ್ಮ ಪಾಲುದಾರರನ್ನು ನೀವು ರಕ್ಷಿಸಲು ಕಷ್ಟವಾಗಬಹುದು. ವಿವಾಹಿತರು ತಮ್ಮ ಪಾಲುದಾರರೊಂದಿಗೆ ವಿನೋದದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸರಿಯಾದ ಸಮಯ ಎಂದು ಹೇಳಲಾಗುತ್ತದೆ. ಶೀಘ್ರದಲ್ಲಿಯೇ ನೀವು ನಿಮ್ಮ ಪಾಲುದಾರರಿಂದ ಉತ್ತಮ ಸುದ್ದಿಯನ್ನು ಪಡೆಯುವ ಸಾಧ್ಯತೆಗಳಿವೆ.

   ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಸಂಬಂಧದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಅತಿಯಾಗಿ ಪರಾಮರ್ಶಿಸುವುದನ್ನು ಕನ್ಯಾ ರಾಶಿಯವರು ಬಿಟ್ಟುಬಿಡಬೇಕು. ಇವರು ತುಂಬಾ ದೀರ್ಘವಾಗಿ ಚಿಂತಿಸುವವರು ಮತ್ತು ಕೆಲವೊಂದು ಸಮಯದಲ್ಲಿ ಇವರು ಶ್ರೇಷ್ಠ ಆಲೋಚನೆಗಳು ಹೊರಬರಬಹುದು. ತಮ್ಮ ಮನಸ್ಥಿತಿಗೆ ತುಂಬಾ ಸಣ್ಣ ವಿಚಾರವು ಭಾದಿಸದಂತೆ ನೋಡಿಕೊಳ್ಳಬೇಕು. ಇವರು ಏನೂ ಇಲ್ಲದಿದ್ದರೂ ಅದರಿಂದ ಏನನ್ನಾದರೂ ಸುಲಭವಾಗಿ ಪಡೆಯುವರು. ಈ ರಾಶಿಯವರಿಗೆ ಪ್ರೀತಿಯಲ್ಲಿ ಹುಚ್ಚರಾಗುವಂತೆ ಮಾಡುವ ಸಮಯವಿದು. ಉತ್ತಮ ಸಂಬಂಧವು ನಿಮ್ಮ ಕೈಗೂಡಿಬರುವುದು. ಪ್ರೀತಿಯ ವಿಚಾರದಲ್ಲಿ ಇಬ್ಬರು ಒಂದೇ ಭಾವನೆಯನ್ನು ತಳೆದಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ವೃತ್ತಿ ಜೀವನದ ಜೊತೆಗೆ ಪ್ರೀತಿ ಪಾತ್ರರಿಗೆ ಅಥವಾ ಸಂಗಾತಿಗೂ ಒಂದಿಷ್ಟು ಸಮಯವನ್ನು ಮೀಸಲಿಡಲು ನೀವು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳಬೇಕು. ಇದರಿಂದ ಭಾವನಾತ್ಮಕ ಬೆಂಬಲ ದೊರೆಯುವುದು. ಮಾನಸಿಕ ನೆಮ್ಮದಿ ದೊರೆಯುವುದು. ನಿಮ್ಮ ಪ್ರೀತಿಯನ್ನು ಸಂಗಾತಿಯನ್ನಾಗಿ ಪರಿವರ್ತಿಸಿ ಮನೆಗೆ ಕರೆತರುವುದರಿಂದ ಉತ್ತಮ ಜೀವನವನ್ನು ಕಾಣುವಿರಿ. ಸಂಬಂಧದ ವಿಚಾರ ಬಂದಾಗ ಆದಷ್ಟು ಹೃದಯದ ಮಾತಿಗೆ ಆದ್ಯತೆ ನೀಡಿದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ.

   ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ಕೆಟ್ಟ ಜನರು ಸಂಬಂಧ ಬೆಳೆಸುವುದನ್ನು ಇವರು ತಪ್ಪಿಸಬೇಕು. ಇವರು ಸರಿಯಾದ ವ್ಯಕ್ತಿಯನ್ನು ಹುಡುಕಿ, ಅವರಿಗೆ ಅವಕಾಶ ನೀಡಬೇಕು. ಇವರು ತುಂಬಾ ಜನಪ್ರಿಯರಾಗಿರಲು ಇಷ್ಟಪಡುವರು ಮತ್ತು ಇವರು ಹೋದ ಕಡೆಯೆಲ್ಲವೂ ಸಂಭ್ರಮವು ಮನೆಮಾಡಿರುವುದು. ಹೊಸ ಹೊಸ ಜನರನ್ನು ಭೇಟಿಯಾಗಲು ಇವರು ಇಷ್ಟಪಡುವರು ಮತ್ತು ರೋಮಾಂಚಕ ಸಂಬಂಧವನ್ನು ಇಷ್ಟಪಡುವರು. ಈ ರೀತಿಯಿಂದಾಗಿ ಅವರು ಕೆಲವು ಸಲ ಕೆಟ್ಟ ಸಂಬಂಧದಲ್ಲಿ ಸಿಲುಕುವರು. ತಾವು ಏನು ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಅವರು ಅಂಧರಾಗಿರುವರು. ತಮ್ಮ ಜೀವನದಲ್ಲಿ ಘಟಿಸುತ್ತಿರುವಂತಹ ವಿಚಾರಗಳ ಬಗ್ಗೆ ಇವರು ಜಾಗೃತೆಯಿಂದ ಇರಬೇಕು. ಗ್ರಹಗತಿಗಳ ಪ್ರಭಾವದಿಂದ ಈ ತಿಂಗಳು ನೀವು ಉತ್ತಮ ಪ್ರೀತಿಯ ಜೀವನವನ್ನು ಹೊಂದುವಿರಿ. ನಿಮ್ಮ ಪಾಲುದಾರರೊಂದಿಗೆ ಸಿಹಿ-ಕಹಿ ಜೀವನವನ್ನು ಅನುಭವಿಸುವಿರಿ. ನಿಮ್ಮ ನಡುವೆ ಉತ್ತಮ ಹೊಂದಾಣಿಕೆ ಹಾಗೂ ತಿಳಿವಳಿಕೆ ಇರುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ಪ್ರೀತಿಯು ಹೆಚ್ಚುತ್ತದೆ. ಆದರೆ ಕೆಲವು ಸಮಸ್ಯೆಗಳು ಆಗಾಗ ದುಃಖವನ್ನು ಉಂಟುಮಾಡಬಹುದು. ಪರಸ್ಪರ ಸಹಕಾರ ಹಾಗೂ ಪ್ರೀತಿಯನ್ನು ಹೊಂದಿರುವುದರಿಂದ ಉತ್ತಮ ಬದುಕನ್ನು ಕಾಣುವಿರಿ. ಅವಿವಾಹಿತರು ವಿವಾಹವಾಗಲು ಅಥವಾ ಸಂಗಾತಿಯನ್ನು ಹೊಂದಲು ಸ್ವಲ್ಪ ಕಷ್ಟವಾಗಬಹುದು. ಗ್ರಹಗಳ ಉತ್ತಮ ಸಹಕಾರ ದೊರೆಯದ ಕಾರಣ ಪ್ರೇಮಿಗಳು ಭಾವೋದ್ರಿಕ್ತತೆಗೆ ಒಳಗಾಗುವ ಸಾಧ್ಯತೆಗಳಿವೆ. ವಿವಾಹಿತರು ಕುಟುಂಬದಲ್ಲಿ ಸಿಹಿ ಸುದ್ದಿಯನ್ನು ಪಡೆದುಕೊಳ್ಳುವರು.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ರೋಮ್ಯಾನ್ಸ್ ಮಾಡುವುದೇ ಇಲ್ಲ ಎನ್ನುವಂತ ಆಲೋಚನೆಯಿಂದ ವೃಶ್ಚಿಕ ರಾಶಿಯ ಜನರು ದೂರವಿರಬೇಕು. ಇವರು ಪ್ರೀತಿಯಿಂದ ದೂರ ಹೋದಷ್ಟು ಅವರನ್ನು ಒಂದು ದಿನ ಇದು ಸೆಳೆಯುವುದು. ಒಂದು ಸಮಯದಲ್ಲಿ ಪ್ರೀತಿಯು ಇವರ ಜೀವನದಲ್ಲಿ ಬಂದೇ ಬರುವುದು. ಇದನ್ನು ಅವರು ಇಷ್ಟಪಡಲಿ ಅಥವಾ ತಿರಸ್ಕರಿಸಲಿ. ಇದು ಅವರನ್ನು ಸಂಪೂರ್ಣವಾಗಿ ಹಿಡಿದುಕೊಳ್ಳುವುದು ಮತ್ತು ಅವರು ತಕ್ಷಣ ಇದನ್ನು ದೂರ ಮಾಡಿಕೊಳ್ಳಲು ಬಯಸುವರು. ಆದರೆ ಇದರ ಮೌಲ್ಯವೇನೆಂದು ಅವರಿಗೆ ತಿಳಿದಿರುವುದಿಲ್ಲ. ಇವರು ತುಂಬಾ ಮೃಧುವಾಗಿರಬೇಕು ಮತ್ತು ಇದು ಖಂಡಿತವಾಗಿಯೂ ತುಂಬಾ ಸುಂದರ ಕ್ಷಣವಾಗಿರುವುದು. ಪ್ರೀತಿಯ ಜೀವನದಲ್ಲಿ ಅಥವಾ ಸಂಬಂಧಗಳಲ್ಲಿ ನೀವು ಒಂದಿಷ್ಟು ಬದ್ಧತೆಯನ್ನು ಹೊಂದಿರುವಿರಿ. ಗ್ರಹಗತಿಗಳ ಸಹಕಾರ ಅಷ್ಟಾಗಿ ಅನುಕೂಲಕರವಾಗಿರದೆ ಇರುವುದರಿಂದ ಸಂಗಾತಿಯೊಂದಿಗೆ ನಿರಾಶೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ನಡುವೆ ತುಸು ವೈಮನಸ್ಸು ಅಥವಾ ಕಹಿಯಾದ ಸ್ಥಿತಿ ಉಂಟಾಗಬಹುದು. ನಿಮ್ಮ ನಡವಳಿಕೆಯು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇಬ್ಬರಿಂದಲೂ ನಕಾರಾತ್ಮಕ ವರ್ತನೆ ಇರುವುದರಿಂದ ಕೊಂಚ ಬೇಸರ ಉಂಟಾಗಬಹುದು. ನಿಮ್ಮ ಭಾವನೆಗಳನ್ನು ಸ್ವಲ್ಪ ನಿಯಂತ್ರಣದಲ್ಲಿ ಇಡಬೇಕು. ಸಂದರ್ಭಗಳನ್ನು ಅರಿತು ನಡೆಯುವುದನ್ನು ಅರಿಯಬೇಕಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಒಂದಿಷ್ಟು ಸಮಯ ನೀಡುವುದು ಉತ್ತಮ. ಪ್ರೀತಿಯ ಕುರಿತು ವ್ಯವಹರಿಸುವಾಗ ವಿವಿಧ ದೃಷ್ಟಿಕೋನಗಳಿಂದ ಚಿಂತಿಸುವುದು ಸೂಕ್ತ.

  ಧನು: ನ.23-ಡಿ.22

  ಧನು: ನ.23-ಡಿ.22

  ಧನು ರಾಶಿಯವರು ತಮ್ಮ ಜೀವನವು ಹಾದು ಹೋಗುವುದನ್ನು ನೋಡಬೇಕು. ಏನೇ ಆಗುವುದಿದ್ದರೂ ಅದಾಗಿಯೇ ಆಗಲಿ ಎನ್ನುವಂತಹ ಆಲೋಚನೆಯು ಇವರಲ್ಲಿ ಇರುವುದು ಮತ್ತು ಕೆಲವು ಸಲ ಇದು ಒಳ್ಳೆಯದನ್ನೇ ಉಂಟು ಮಾಡುವುದು. ಆದರೆ ಕೆಲವೊಂದು ಸಲ ತಾವು ಯಾವುದೇ ಪ್ರಯತ್ನ ಮಾಡದೆ ಎಲ್ಲವೂ ಅದರಷ್ಟಕ್ಕೆ ನಡೆದೇ ಬಿಡುತ್ತದೆ ಎಂದು ಇವರು ಭಾವಿಸುವರು. ಸರಿಯಾದ ಸಮಯದಲ್ಲಿ ಪ್ರೀತಿಯು ಇವರ ಜೀವನದಲ್ಲಿ ಬರುವುದು. ಆದರೆ ಇವರು ಇದನ್ನು ಸ್ವಾಗತಿಸಲು ಸ್ವಲ್ಪ ಮಟ್ಟಿನ ಶ್ರಮ ವಹಿಸಬೇಕು.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ಪ್ರೀತಿಯ ವಿಚಾರದಲ್ಲಿ ತುಂಬಾ ನಕಾರಾತ್ಮಕವಾಗಿ ಇರುವುದನ್ನು ಬಿಡಬೇಕು. ಇವರಿಗೆ ಹಿಂದೆ ಒಂದೆರಡು ಸಲ ತುಂಬಾ ಕೆಟ್ಟ ಅನುಭವವಾಗಿದ್ದರೂ ಸಹಿತ ಮತ್ತೆ ತಮಗೆ ಕೆಟ್ಟದು ಆಗಲಿದೆ ಎಂದು ಭಾವಿಸಿಕೊಂಡು ಕುಳಿತರೆ ಒಳ್ಳೆಯದಂತೂ ಆಗಲ್ಲ. ತಮಗೆ ಆಗಿರುವಂತಹ ಸಂಕಷ್ಟ ಮತ್ತು ಹೃದಯ ಮುರಿದ ನೋವುಗಳು ನಿಜವಾಗಿಯೂ ತಮ್ಮನ್ನು ಒಬ್ಬ ದೃಢ ವ್ಯಕ್ತಿಯನ್ನಾಗಿ ಮಾಡಿದೆ ಎಂದು ತಿಳಿಯಬೇಕು.

  ಕುಂಭ: ಜ.21- ಫೆ.18

  ಕುಂಭ: ಜ.21- ಫೆ.18

  ಭಾವನಾತ್ಮಕವಾಗಿ ತಾವು ಲಭ್ಯರಿಲ್ಲ ಎನ್ನುವ ಸಂದೇಶ ಸಾರುವುದನ್ನು ಇವರು ನಿಲ್ಲಿಸಬೇಕು. ಪ್ರೀತಿ ಎನ್ನುವುದು ಏರಿಳಿತಗಳ ಪಯಣ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇವರು ಯಾವಾಗಲೂ ಇಳಿತವನ್ನೇ ನೋಡುತ್ತಾ ಕುಳಿತುಕೊಂಡರೆ ಯಾವತ್ತೂ ಉನ್ನತಿಯನ್ನು ಕಾಣುವುದಿಲ್ಲ. ಭಾವನೆಗಳು ಆರೋಗ್ಯಕರ ಆಯ್ಕೆ ಮಾಡಿಕೊಳ್ಳಲು ಬಿಡಬೇಕು ಮತ್ತು ಇದರಿಂದ ಅವರಿಗೆ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುವುದು.

  ಮೀನ: ಫೆ. 19-ಮಾ.20

  ಮೀನ: ಫೆ. 19-ಮಾ.20

  ಮೀನ ರಾಶಿಯವರು ತಮ್ಮನ್ನು ಇತರರಿಗಾಗಿ ಬದಲಾಯಿಸುವುದನ್ನು ನಿಲ್ಲಿಸಬೇಕು. ಕೆಲವೊಮ್ಮೆ ಅವರು ವ್ಯಕ್ತಿಗೆ ನಿರ್ದಿಷ್ಟ ಪಾತ್ರಗಳನ್ನು ಕೆಲವೊಂದು ಸಲ ಬದಲಾವಣೆ ಮಾಡಿಕೊಳ್ಳುವರು. ತಮ್ಮ ಸಂಗಾತಿಯನ್ನು ಸಂತೋಷವಾಗಿಡುವ ಕಾರಣಕ್ಕಾಗಿ ಇವರು ತಮ್ಮಲ್ಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವರು. ಸಂತೋಷವೆನ್ನುವುದು ಮನಸ್ಸಿನೊಳಗಿನ ವಿಚಾರ ಎನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ಇತರರು ತಮ್ಮ ಜೀವನದ ಮೇಲೆ ನಿಯಂತ್ರಣ ಹೊಂದಲು ಬಿಟ್ಟರೆ ಇವರು ಯಾವತ್ತೂ ಸಂತೋಷವಾಗಿರಲ್ಲ.

  English summary

  Brutal Honest Love Advice For Each Zodiac Sign

  When you are in love, everything seems rosy and you tend to go overboard at times to impress your partner and there are those individuals who love to get pampered and this is love according to them.Since the preferences of handling the love feeling and emotions while being in love can vary, we bring in the details about each zodiac sign that needs advice in a way or other.Check out on what is in store for your zodiac sign.
  Story first published: Saturday, June 9, 2018, 15:39 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more