For Quick Alerts
ALLOW NOTIFICATIONS  
For Daily Alerts

ಜುಲೈ ತಿಂಗಳು ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ!

By Deepu
|

ಜ್ಯೋತಿಷ್ಯದ ಪ್ರಕಾರ ಐದು ಗ್ರಹಗಳಲ್ಲಿ ವಿರುದ್ಧಗತಿಯು ನಡೆಯುತ್ತಲಿರುವುದು ರಾಶಿಗಳಿಗೆ ತುಂಬಾ ಕಠಿಣ ಸಮಯವಾಗಿದೆ. ಮಂಗಳ, ಪ್ಲೂಟೊ, ನೆಪ್ಚೂನ್, ಶನಿ ಮತ್ತು ಗುರುವಿನ ವಿರುದ್ಧಗತಿಯು ಈ ಸಮಯದಲ್ಲಿ ನಡೆಯುತ್ತಲಿದೆ.

ಜುಲೈ 12ರಂದು ಸೂರ್ಯಗ್ರಹಣದೊಂದಿಗೆ ಬುಧನು ಜುಲೈ 26ರಂದು ವಿರುದ್ಧಗತಿಯನ್ನು ಸೇರಲಿದ್ದಾನೆ. ಜುಲೈ 27ರಂದು ಚಂದ್ರಗ್ರಹಣವು ನಡೆಯಲಿದೆ. ಈ ತಿಂಗಳು ರಾಶಿಗಳಿಗೆ ತುಂಬಾ ಕಠಿಣವಾಗಿರಲಿದೆ. ಆದರೆ ಜುಲೈ ತಿಂಗಳು ಯಾವ ರಾಶಿಗಳಿಗೆ ಅದೃಷ್ಟ ತರಲಿದೆ ಎನ್ನುವುದನ್ನು ನಾವು ಈ ಲೇಖನ ಮೂಲಕ ತಿಳಿಸಲಿದ್ದೇವೆ....

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಕುಂಭ ರಾಶಿಯವರು ತಮ್ಮದೇ ಆದ ದಾರಿಯಲ್ಲಿ ನಡೆಯಲು ಬಯಸುವರು. ಇವರು ತಾವೇ ಎಲ್ಲವನ್ನು ಮಾಡಲು ಬಯಸುವರು. ಇದರಿಂದಾಗಿ ಇವರು ಏಕಾಂಗಿಯಾಗುವರು. ಆದರೆ ಜುಲೈನಲ್ಲಿ ಇವರಲ್ಲಿ ಹಠಾತ್ ಆಗಿ ಕಾಣಿಸಿಕೊಳ್ಳುವ ಆಕಾಂಕ್ಷೆ ಯಿಂದ ಇವರು ಹರಿವಿನೊಂದಿಗೆ ಇರುವರು. ಇದನ್ನು ಅವರು ಅಪ್ಪಿಕೊಳ್ಳಬೇಕು. ಇವರು ಹೆಚ್ಚೆಚ್ಚು ನಗಲು ಪ್ರಯತ್ನಿಸಬೇಕು. ಐದು ಅಂಕೆ ಬರುವಂತಹ ವಿಚಾರಗಳ ಕಡೆ ಹೆಚ್ಚಿನ ಗಮನಹರಿಸಬೇಕು. ಇದರು ಅವರಿಗೆ ಅದೃಷ್ಟ ತಂದುಕೊಡುವುದು. ಇನ್ನು ಈ ತಿಂಗಳಲ್ಲಿ ಕುಂಭ ರಾಶಿಯವರ ಕೆಲಸದಲ್ಲಿ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ನಾವೀನ್ಯತೆ ಮತ್ತು ಸ್ವಂತಿಕೆಯು ಕಂಡುಬರಲಿದೆ. ಈ ತಿಂಗಳಲ್ಲಿ ದೈನಂದಿನ ಕೆಲಸ ಮತ್ತು ಸೇವೆಗಳ ಬಗ್ಗೆ ಕಲಿಯುವುದು ಮತ್ತು ಆರೋಗ್ಯಕರ ದೇಹ ಕಾಪಾಡುವ ಸಮಯವಾಗಲಿದೆ. ಪಾಲುದಾರಿಕೆ ಮತ್ತು ಸಂಬಂಧದ ಬಗ್ಗೆ ಸಂವಹನವು ಸೃಜನಾತ್ಮಕವಾಗಿ ಹರಿಯುತ್ತದೆ ಎಂದು ಊಹಿಸಲಾಗಿದೆ. ಇವರ ಜೀವನದಲ್ಲಿ ಹೊಸ ಜನರು ಪ್ರವೇಶಿಸ ಬಹುದು. ಮನರಂಜನೆ, ಸಂಭ್ರಮ ಮತ್ತು ಒಳ್ಳೆಯ ಸಮಯವು ಇವರಿಗೆ ದೊಡ್ಡ ಆಸ್ತಿಯಾಗಲಿದೆ. ಹೊಸ ಸಂಬಂಧವು ಆರಂಭವಾಗುವ ಸಾಧ್ಯತೆಯಿದೆ. ಈ ತಿಂಗಳಲ್ಲಿ ಇವರು ಇತರರೊಂದಿಗೆ ಕೂಡ ಬೆರೆಯುತ್ತಲಿರಬೇಕಾಗುತ್ತದೆ.

ಧನು: ನ.23- ಡಿ.22

ಧನು: ನ.23- ಡಿ.22

ಧನು ರಾಶಿಯವರಿಗೆ ಜುಲೈ ತಿಂಗಳು ಶಕ್ತಿ ತುಂಬಲಿದೆ. ಇದರಿಂದ ಅವರಿಗೆ ಜೀವನದಲ್ಲಿ ಏನು ಬೇಕು ಎನ್ನುವ ಅರಿವಾಗುವುದು. ಕನಸನ್ನು ನನಸಾಗಿಸಲು ಇವರು ಹೆಜ್ಜೆಯಿಡಬೇಕು. ಇನ್ನೊಂದೆಡೆಯಲ್ಲಿ ಇವರು ಯಾವುದೇ ವಿಷಯದಲ್ಲೂ ಅವಸರ ಮಾಡಬಾರದು, ನಿಧಾನವಾಗಿ ಸಾಗಬೇಕು ಮತ್ತು ಪ್ರೇರಣೆ ಪಡೆಯಬೇಕು. ಸಂತೋಷದ ಬಗ್ಗೆ ಇವರು ಅಧಿಪತ್ಯ ಪಡೆಯಲು ದೃಷ್ಟಿಹರಿಸಬೇಕು ಮತ್ತು ಒಮ್ಮೆ ಇದನ್ನು ಮಾಡಿದರೆ ಜೀವನದಲ್ಲಿ ಎಲ್ಲವೂ ಸುಗಮವಾಗಲಿದೆ. ಇನ್ನು ಧನು ರಾಶಿಯವರಿಗೆ ಈ ತಿಂಗಳಲ್ಲಿ ಅವರ ಸುತ್ತಮುತ್ತಲು ಹೆಚ್ಚಿನ ತೀವ್ರತೆಯಿರಲಿದೆ. ಇವರು ತಮ್ಮ ಸಂಪನ್ಮೂಲದ ಮಿತಿಯ ಬಗ್ಗೆ ಈಗಲೂ ಕಲಿಯುತ್ತಲಿದ್ದಾರೆ ಮತ್ತು ಇತರರ ಮೇಲೆ ಹೆಚ್ಚು ಅವಲಂಬಿತವಾಗಿರಬಾರದು ಎಂದು ತಿಳಿದುಕೊಂಡಿದ್ದಾರೆ. ಹೊಸ ವೃತ್ತಿಯು ಇವರ ಜೀವನದಲ್ಲಿ ಹೊಸ ದಾರಿ ಮಾಡಿಕೊಡುವುದು ಮಾತ್ರವಲ್ಲದೆ ಆತ್ಮದಲ್ಲಿಯೂ ಇವರನ್ನು ಆಳವಾಗಿ ಎಚ್ಚರಿಸಲಿದೆ. ಕೆಲವರು ಈ ತಿಂಗಳಲ್ಲಿ ಮದುವೆಯಾಗಬಹುದು. ಇನ್ನೊಂದು ಕಡೆಯಲ್ಲಿ ಕಾನೂನು ಸಂಬಂಧಿಸಿದ ವಿಚಾರಗಳು ಕೋರ್ಟ್ ನ ಹೊರಗಡೆ ಬಗೆಹರಿಯಲಿದೆ. ಹೊಸ ಅನುಭವಗಳು ಇವರನ್ನು ಎದುರುನೋಡುತ್ತಲಿದೆ. ಈ ತಿಂಗಳಲ್ಲಿ ಪ್ರಯಾಣದ ಅವಕಾಶವಿದೆ.

ಸಿಂಹ: ಜುಲೈ 23-ಆ.23

ಸಿಂಹ: ಜುಲೈ 23-ಆ.23

ಅಂತರಂಗದ ಆಲೋಚನೆಗಳನ್ನು ಹೊರಹಾಕಲು ಜುಲೈ ತಿಂಗಳು ಸಿಂಹ ರಾಶಿಯವರಿಗೆ ಸೂಕ್ತ ಸಮಯ. ಗೌಪ್ಯವಾಗಿರುವಂತಹ ಸತ್ಯವನ್ನು ಹೊರಹಾಕಲು ಜುಲೈ ತಿಂಗಳು ಈ ರಾಶಿಯವರಿಗೆ ಅತ್ಯುತ್ತಮ ಸಮಯವಾಗಿದೆ. ಸಣ್ಣ ಸಣ್ಣ ವಿಷಯಗಳಲ್ಲೂ ಇವರು ಈ ರಾಶಿಯವರು ಸಂತೋಷ ಕಾಣುವರು. ಇನ್ನು ಕಳೆದ ಕೆಲವು ದಿನಗಳಿಂದ ಸಿಂಹ ರಾಶಿಯವರು ಎದುರಿಸುತ್ತಿರುವ ಸಮಸ್ಯೆಯು ತಿಂಗಳ ಮಧ್ಯದಲ್ಲಿ ಬಗೆಹರಿಯಲಿದೆ. ಇದಕ್ಕಾಗಿ ಇವರು ಹೆಚ್ಚು ಮಾತುಕತೆ ನಡೆಸಬೇಕಾಗಿದೆ. ಇವರ ಜನ್ಮ ರಾಶಿಯಲ್ಲಿ ಆ.10ರ ತನಕ ಮಂಗಳನು ಪ್ರಯಾಣಿಸುತ್ತಿರುವ ಕಾರಣದಿಂದಾಗಿ ಇವರು ಹೆಚ್ಚಿನ ಶಕ್ತಿ ವಿನಿಯೋಗಿಸಬೇಕಾಗಿದೆ. ಇವರ ಸಾಮಾಜಿಕ ಸಂಪರ್ಕವು ಹೆಚ್ಚಾಗಲಿರುವ ಕಾರಣದಿಂದಾಗಿ ಇವರು ವಿರುದ್ಧ ಲಿಂಗಿಯ ಜತೆಗೆ ಮಾತುಕತೆ ನಡೆಸುವಂತಹ ಪರಿಸ್ಥಿತಿಯು ಬರಬಹುದು. ವೃತ್ತಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಇವರಿಗೆ ಈ ತಿಂಗಳು ಜ್ಞಾನೋದಯವಾಗಲಿದೆ.

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ: ಜೂನ್ 21-ಜುಲೈ 22

ಜುಲೈ ತಿಂಗಳಲ್ಲಿ ಕರ್ಕಾಟಕ ರಾಶಿಯವರು ತಮ್ಮ ಪೋಷಕ, ಅಂತರ್ಮುಖಿ ಮತ್ತು ಅಸುರಕ್ಷಿತಯಿಂದ ಹೊರಬರುವರು. ಐದು ಗ್ರಹಗಳ ಹಾನಿಕಾರಕ ಪರಿಣಾಮದ ಬಗ್ಗೆ ಯೋಚಿಸುವ ಬದಲು, ಈ ರಾಶಿಯವರು ತುಂಬಾ ಶಾಂತತೆಯನ್ನು ಹಲವಾರು ವರ್ಷಗಳ ಬಳಿಕ ಆನಂದಿಸುವರು. ಶಾಂತವಾಗಿದ್ದರೆ ಒಳ್ಳೆಯ ಫಲಿತಾಂಶ ಪಡೆಯ ಬಹುದು ಎನ್ನುವ ಕಾರಣದಿಂದ ಈ ರಾಶಿಯವರು ಖುಷಿಯಾಗಿರಬೇಕು. ಇನ್ನು ಕರ್ಕಾಟಕ ರಾಶಿಯವರು ತುಂಬಾ ಶಾಂತ, ಕಾಳಜಿ ಮತ್ತು ಪೋಷಣೆ ಮಾಡುವ ರಾಶಿಯವರು. ಈ ರಾಶಿಯವರಿಗೆ ವರ್ಷದ ಗ್ರಹಗತಿಗಳ ಪರಿಣಾಮದ ಅನುಭವವಾಗುವುದು. ಯಾಕೆಂದರೆ ಶನಿಯು ಇವರ ಪ್ರಾಮಾಣಿಕತೆಯ ಸ್ವಯಂಮೌಲ್ಯಮಾಪನ ಮಾಡುವಂತೆ ಕಲಿಸಲಿದ್ದಾನೆ. ಇದರೊಂದಿಗೆ ಇವರು ತಮ್ಮ ದುರ್ಬಲತೆ ಹಾಗೂ ನ್ಯೂನ್ಯತೆಗಳನ್ನು ತಿದ್ದಿಕೊಳ್ಳಲು ಸಹಕಾರಿ ಯಾಗಲಿದೆ. ಹಣ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೇರೆಯವರೊಂದಿಗೆ ಮಾತುಕತೆ ಮಾಡಬೇಕಾಗಿ ಬರಬಹುದು. ಪ್ರೀತಿಪಾತ್ರರಿಗೆ ಕಾಳಜಿ ಬೇಕೆಂದು ಇವರು ಅರ್ಥ ಮಾಡಿಕೊಳ್ಳಬೇಕು. ಇದರ ಹೊರತಾಗಿ ಇವರು ಅನಗತ್ಯ ಹಾಗೂ ಅತಿಯಾದ ಖರ್ಚಿಗೆ ಕಡಿವಾಣ ಹಾಕಬೇಕು ಮತ್ತು ಬೇರೆಯವರನ್ನು ಬೇಗನೆ ನಂಬುವ ಬುದ್ಧಿ ಬಿಡಬೇಕು.

English summary

BEST TIME FOR THESE ZODIACS IN JULY 2018

According to astrology, the retrograde happening in the five planets can bring in a tough time for the zodiac signs. Mars, Pluto, Neptune, Saturn, and Jupiter are the planets that are currently undergoing retrograde. With the solar eclipse on July 12, to the Mercury joining the retro mix on July 26, or even the blood moon total lunar eclipse happening on July 27, 2018, this month seems to be a rough one for the zodiacs. But fret not as we bring in details about the lucky four zodiac signs for July 2018.
Story first published: Wednesday, July 4, 2018, 17:25 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more