ಹೌದು ಸ್ವಾಮಿ! ಮೂಗು ನೋಡಿ, ವ್ಯಕ್ತಿತ್ವ ತಿಳಿಯಬಹುದಂತೆ!

By: Deepak
Subscribe to Boldsky

ಭವಿಷ್ಯವನ್ನು ಹಾಗು ವ್ಯಕ್ತಿತ್ವವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲಕ ಎಲ್ಲರಿಗೂ ಸಹಜವಾಗಿ ಇರುತ್ತದೆ. ಅದಕ್ಕಾಗಿ ಕೈ ನೋಡಿ, ಜಾತಕ ನೋಡಿ, ಹುಟ್ಟಿದ ದಿನ ನೋಡಿ ಭವಿಷ್ಯ ಮತ್ತು ವ್ಯಕ್ತಿತ್ವ ಹೇಳುವವರು ಸಾವಿರಾರು ಜನ ಇದ್ದಾರೆ. ಆದರೆ ಮೂಗು ನೋಡಿ ವ್ಯಕ್ತಿತ್ವ ಹೇಳುವುದನ್ನು ಕೇಳಿದ್ದೀರಾ? ಬನ್ನಿ ಆ ಕುತೂಹಲಕಾರಿ ಅಂಶಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ. ತುಟಿಯನ್ನು ನೋಡಿ ಭವಿಷ್ಯ ಹೇಳಬಹುದಂತೆ, ನಂಬುತ್ತೀರಾ?

ಮೂಗು ನೋಡಿ ಅದೆಂತಹ ವ್ಯಕ್ತಿತ್ವ ಹೇಳಬಹುದು ಎಂದು ಮೂಗು ಮುರಿಯಬೇಡಿ. ಮೂಗಿನ ಮೇಲೆ ಬೆರಳಿಡುವಂತಹ ವಿಚಾರಗಳನ್ನು ಮೂಗು ನೋಡಿಯೇ ಗುರುತಿಸಬಹುದು. ವ್ಯಕ್ತಿ ಎಂತಹವನು ಮತ್ತು ಅವರ ಹಿನ್ನಲೆ ಮುನ್ನಲೆ ಎಲ್ಲಾ ಸಂಗತಿಗಳು ಮೂಗು ನೋಡುವುದರಿಂದಲೇ ತಿಳಿಯುತ್ತವೆ. ಆ ವ್ಯಕ್ತಿ ಸಂಶಯಾಸ್ಪದವಾಗಿದ್ದರೆ ಆ ವಿಚಾರವೂ ನಿಮ್ಮ ಮೂಗಿಗೆ ಬಡಿಯುತ್ತದೆ. ಆ ವ್ಯಕ್ತಿ ಅದ್ಭುತ ವ್ಯಕ್ತಿತ್ವ ಹೊಂದಿದ್ದರೆ ನೀವು ಮೂಕ ವಿಸ್ಮಿತರಾಗುತ್ತೀರಿ. ಬನ್ನಿ ಇನ್ನು ಮೂಗಿನ ಕತೆ ನೋಡೋಣ....   

 ದೊಡ್ಡ ಮೂಗು

ದೊಡ್ಡ ಮೂಗು

ದೊಡ್ಡ ಮೂಗು ಶಕ್ತಿಯ ಸಂಕೇತ, ನಾಯಕತ್ವ, ಮುನ್ನುಗುವ ಛಲ, ಅಹಂ ಹಾಗು ಸ್ವತಂತ್ರ ಮನೋಭಾವ ಇರುವವರು ಈ ದೊಡ್ಡ ಮೂಗಿನ ಒಡೆಯರಾಗಿರುತ್ತಾರೆ. ಯಾರೋ ಹೇಳಿದ್ದನ್ನು ಕೇಳುವ ಗುಣ ಇವರಿಗೆ ಇರುವುದಿಲ್ಲ ಹಾಗು ಇವರು ಬಾಸ್ ಆಗಿ ಇರಲು ಇಷ್ಟಪಡುತ್ತಾರೆ.

ಸಣ್ಣ ಮೂಗು

ಸಣ್ಣ ಮೂಗು

ಇವರು ತುಂಬಾ ಚುರುಕಾಗಿರುತ್ತಾರೆ, ಬೆರೆಯುತ್ತಾರೆ, ಹೊಂದಾಣಿಕೆ ಇರುತ್ತದೆ ಆದರೆ ಕೋಪ ಎನ್ನುವುದು ಇವರ ಮೂಗಿನ ತುದಿಯ ಮೇಲೆಯೇ ಇರುತ್ತದೆ!

ಉದ್ದ ಮೂಗು

ಉದ್ದ ಮೂಗು

ವ್ಯವಹಾರ ಚತುರರು, ಹಂಬಲ ಇರುತ್ತದೆ, ಮಹತ್ವಾಕಾಂಕ್ಷಿಗಳು, ಪಕ್ಕಾ ಕಾರ್ಯತಂತ್ರ ರೂಪಿಸಿ ಕಾರ್ಯ ಸಾಧನೆ ಮಾಡುತ್ತಾರೆ ಹಾಗು ಇವರ ನಾಯಕತ್ವಕ್ಕೆ ಎಲ್ಲರೂ ತಲೆದೂಗುತ್ತಾರೆ.

ನೇರವಾದ ಮೂಗು

ನೇರವಾದ ಮೂಗು

ಇವರು ಸ್ಫೂರ್ತಿಯ ಚಿಲುಮೆ. ಎಂತಹ ಬಿಕ್ಕಟ್ಟನ್ನು ಬೇಕಾದರೂ ಬಗೆಹರಿಸುತ್ತಾರೆ. ಒಳ್ಳೆಯ ವ್ಯಕ್ತಿಗಳು. ಈ ಗ್ರೀಕ್ ಮೂಗು ಹೊಂದಿರುವವರು ತರ್ಕಬದ್ಧವಾಗಿ ಆಲೋಚನೆ ಮಾಡುತ್ತಾರೆ ಮತ್ತು ಆತಂಕಕ್ಕೆ ಒಳಗಾಗುವುದಿಲ್ಲ.

ಅಗಲವಾದ ಮೂಗು

ಅಗಲವಾದ ಮೂಗು

ಇಂತಹ ಮೂಗು ಇರುವವರು ದೃಢ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಕೋಪಿಷ್ಠರು. ಇವರು ನಿಧಾನವಾಗಿ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಇತರರ ಮೇಲೆ ಪ್ರಭಾವ ಬೀರುತ್ತಾರೆ.

ನೂಬಿಯನ್ ಮೂಗು

ನೂಬಿಯನ್ ಮೂಗು

ನೂಬಿಯನ್ ಮೂಗು ಹೊಂದಿರುವವರು ಸಮಸ್ಯೆಯನ್ನು ಬಗೆಹರಿಸಲು ಯಾವಾಗಲು ಹೊಸ ಮಾರ್ಗಗಳನ್ನು ಹುಡುಕುತ್ತಾರೆ. ಅವರು ಯಾವಾಗಲೂ ಮುಕ್ತ ಮನೋಭಾವದಿಂದ ಇರುತ್ತಾರೆ. ಆಕರ್ಷಕ ವ್ಯಕ್ತಿಗಳು, ಅಭಿವ್ಯಕ್ತಿಯನ್ನು ಉತ್ತಮವಾಗಿ ಹೊಂದಿರುತ್ತಾರೆ. ಭಾವುಕರಾಗಿರುತ್ತಾರೆ.

ಫ್ಲೇಶಿ ಮೂಗು

ಫ್ಲೇಶಿ ಮೂಗು

ಇಂತಹ ಮೂಗು ಹೊಂದಿರುವವರು ವೇಗವಾಗಿ ಆಲೋಚನೆ ಮಾಡುತ್ತಾರೆ. ಇಂತಹ ಮೂಗು ಇರುವವರು ತುಂಬಾ ಜಾಣರು ಹಾಗು ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೆ.

ತಲೆಕೆಳಗಾದ ಮೂಗು

ತಲೆಕೆಳಗಾದ ಮೂಗು

ಇಂತಹ ಮೂಗು ಇರುವವರು ಆಶಾವಾದಿಗಳಾಗಿರುತ್ತಾರೆ, ಅನುಕಂಪವನ್ನು ವ್ಯಕ್ತಪಡಿಸುತ್ತಾರೆ ಮತ್ತು ಪರಿಪೂರ್ಣವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ಬಗೆಯ ಮೂಗು ಇರುವ ಜನರು ಪ್ರೀತಿ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ, ಸಹಾಯ ಮಾಡುತ್ತಾರೆ ಮತ್ತು ಸ್ಪೂರ್ತಿಯನ್ನು ನೀಡುವ ವ್ಯಕ್ತಿತ್ವ ಇವರದಾಗಿರುತ್ತದೆ.

ರೋಮನ್ ಮೂಗು

ರೋಮನ್ ಮೂಗು

ರೋಮನ್ ಮೂಗು ಇರುವವರು ಸ್ಥಿತ ಪ್ರಜ್ಞರಾಗಿರುತ್ತಾರೆ ಹಾಗು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರು ಉತ್ತಮ ನಾಯಕರು ಹಾಗು ಪ್ರಭಾವ ಬೀರುವಂತಹ ವ್ಯಕ್ತಿಗಳಾಗಿರುತ್ತಾರೆ. ಇವರು ನಿರ್ಧಾರ ತೆಗೆದುಕೊಳ್ಳಲು ಹಾತೊರೆಯುವುದಿಲ್ಲ. ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.

 

English summary

Types Of Nose Shapes Reveal About Your Nature & Personality

There are various types of noses and each of them reveals something about you. The shape, size, and structure of a person's nose dictate many things about their individuality and, even though these aren't 100% proven facts, the information tends to be pretty accurate. Let's just find out here what your nose says about you!
Subscribe Newsletter