Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುಟಿಯನ್ನು ನೋಡಿ ಭವಿಷ್ಯ ಹೇಳಬಹುದಂತೆ, ನಂಬುತ್ತೀರಾ?
ಓರ್ವ ಮನುಷ್ಯನ ಸ್ವಭಾವವನ್ನು ಅವರ ತುಟಿಗಳನ್ನು ನೋಡುವ ಮೂಲಕ ಸ್ಥೂಲವಾಗಿ ಅರಿಯಬಹುದಂತೆ..! ನಂಬಿಕೆ ಬರುತ್ತಿಲ್ಲವಲ್ಲವೇ..? ವಾಸ್ತವವಾಗಿ ಇತ್ತೀಚೆಗೆ ಚೀನಾದಲ್ಲಿ ವ್ಯಕ್ತಿಯ ತುಟಿಯನ್ನು ನೋಡಿ ಇವರ ಸ್ವಭಾವ ಹೀಗಿರಬಹುದು ಎಂದು ಸ್ಥೂಲವಾಗಿ ಅಂದಾಜಿಸುವ ಪ್ರಾಚೀನ ಕಲೆ ಬಹುತೇಕ ನಿಜವೆಂದು ಸಾಬೀತಾಗಿದೆ. ಇದನ್ನು ಸಂಶೋಧನೆಗೆ ವಿಷಯವಾಗಿ ಪರಿಗಣಿಸಿದ ವಿಜ್ಞಾನ ಇದನ್ನು ಒಪ್ಪಿಕೊಂಡು ಒಂದು ಭಾಗವನ್ನಾಗಿ ಪರಿಗಣಿಸಿದೆ. ಈ ಭಾಗಕ್ಕೆ lipsology ಎಂದು ಕರೆಯುತ್ತಾರೆ.
ಭಾರತದ ಜ್ಯೋತಿಷ್ಯದಷ್ಟೇ ಇತಿಹಾಸವಿರುವ ಈ ಕಲೆ ತುಟಿಯ ಗಾತ್ರ, ಆಕಾರ, ಎಷ್ಟು ಭಾಗ ಹೊರಗೆ ಚಾಚಿದೆ, ಬಣ್ಣ ಮೊದಲಾದವುಗಳನ್ನು ಪರಿಗಣಿಸಿ ವ್ಯಕ್ತಿಯ ಸ್ವಭಾವವನ್ನು ಅಳೆಯಲಾಗುತ್ತದೆ. ಇನ್ನೂ ಸೂಕ್ಷ್ಮವಾಗಿ ಪರಿಗಣಿಸುವುದಾದರೆ ಮೇಲ್ತುಟಿಯ ನಡುವಣ ಭಾಗ (cupids bow) ಮತ್ತು ದುಂಡುದುಂಡಾಗಿರುವ ಪರಿಯನ್ನು ಅಳೆದು ಇವರ ವಿಶಿಷ್ಟ ಲಕ್ಷಣಗಳನ್ನೂ ಹೇಳಬಹುದಂತೆ. ಗುಲಾಬಿ ಎಸಳಿನಂತಹ ತುಟಿಗಾಗಿ ಟಾಪ್ ಸಲಹೆಗಳು
ವ್ಯಕ್ತಿಯ ಚಹರೆಯ ಮುಖ್ಯಭಾಗಗಳಲ್ಲಿ ಒಂದಾದ (ಕಣ್ಣು, ಮೂಗು ತುಟಿ) ಈ ಭಾಗ ಪ್ರಮುಖವಾಗಿ ಗಮನಕ್ಕೆ ಬರುವ ಕಾರಣ ವ್ಯಕ್ತಿಯನ್ನು ಅಳೆಯಲು ಸುಲಭವಾಗಿ ಸಾಧ್ಯ. ಏಕೆಂದರೆ ಕಣ್ಣುಗಳನ್ನು ಹೆಚ್ಚಿನವರು ಕನ್ನಡಕ ಹಾಕಿ ಮರೆಮಾಚಿರುವ ಕಾರಣ ತುಟಿಗಳನ್ನು ನೋಡಿ ಸ್ವಭಾವ ಅರಿಯಲು ಸಾಧ್ಯ. ಕುತೂಹಲ ಮೂಡಿದವರು ಮೊದಲಾಗಿ ಕನ್ನಡಿಯಲ್ಲಿ ತಮ್ಮ ತುಟಿಗಳನ್ನೇ ಕಂಡು ತಮ್ಮ ವ್ಯಕ್ತಿತ್ವವನ್ನು ತಾಳೆ ಹಾಕಲು ಯತ್ನಿಸುವುದು ಸಾಮಾನ್ಯ.
ಈ
ಕಲೆಯಲ್ಲಿ
ಸಿದ್ಧಿಸಿದವರು
ಇಡಿಯ
ಮುಖವನ್ನು
ಕೂಲಂಕಶವಾಗಿ
ಪರಿಗಣಿಸಿ
ವ್ಯಕ್ತಿಯ
ಸ್ವಭಾವನ್ನು
ಅಳೆಯಲು
ಸಮರ್ಥರಿರುತ್ತಾರೆ.
ಬನ್ನಿ
ಇಂದು
ತುಟಿಗಳು
ನಿಮ್ಮ
ಮತ್ತು
ನಿಮ್ಮ
ಸ್ನೇಹಿತರ
ಬಗ್ಗೆ
ಏನು
ಹೇಳುತ್ತವೆ
ಎಂಬ
ಮಾಹಿತಿಯನ್ನು
ಕೆಳಗಿನ
ಸ್ಲೈಡ್
ಶೋ
ಮೂಲಕ
ನೋಡೋಣ:
ಹೃದಯದಾಕಾರದ ತುಟಿಗಳು
ಹೃದಯದಾಕಾರದ ತುಟಿಗಳಿರುವ ವ್ಯಕ್ತಿಗಳು ಸದಾ ನೂತನ ವಿಚಾರಗಳ ಬಗ್ಗೆ ಚಿಂತನೆ ನಡೆಸುತ್ತಿದ್ದು ಕ್ರಿಯಾತ್ಮಕರಾಗಿರುತ್ತಾರೆ. ಇವರು ತಕ್ಷಣವೇ ಯೋಚಿಸಿ ನಿರ್ಧಾರಕ್ಕೆ ಬರುವವರಾಗಿರುತ್ತಾರೆ. ಇವರಿಗೆ ತಮ್ಮದೇ ಒಂದು ವ್ಯಕ್ತಿತ್ವವಿದ್ದು ಇತರರನ್ನು ಇದರೊಳಗೆ ಅಳವಡಿಸಿಕೊಳ್ಳುವ ಗುಣವಿದೆ. ತಮ್ಮ ವಿಚಾರಗಳನ್ನು ಇವರು ನೇರವಾಗಿ ಯಾವುದೇ ಅಳುಕಿಲ್ಲದೇ ವ್ಯಕ್ತಪಡಿಸಲು ಸಮರ್ಥರಿರುತ್ತಾರೆ. ಇವರು ಪ್ರಣಯ ಪ್ರವೃತ್ತಿಯವರೂ ಆಗಿರುತ್ತಾರೆ.
ಪೂರ್ಣ ಗಾತ್ರದ ತುಟಿಗಳು
ತುಟಿಗಳು ಪೂರ್ಣವಾಗಿ ಹೊರಗೆ ತೆರೆದುಕೊಂಡಂತಿರುವ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯಶಾಲಿಗಳಾಗಿರುತ್ತಾರೆ. ಇವರಿಗೆ ತಮ್ಮ ಅಗತ್ಯಕ್ಕಿಂತಲೂ ಇತರರ ಅಗತ್ಯಗಳೇ ಹೆಚ್ಚು ಮುಖ್ಯವಾಗಿರುತ್ತವೆ. ಇವರು ದಯಾಪರರೂ, ಸುಖದುಃಖಗಳನ್ನು ಹಂಚಿಕೊಳ್ಳುವರೂ ಆಗಿದ್ದು ಎಲ್ಲರೊಂದಿಗೆ ಸುಲಭವಾಗಿ ಸ್ನೇಹವನ್ನು ಸಂಪಾದಿಸುತ್ತಾರೆ. ಇಂತಹ ತುಟಿಗಳಿರುವ ಮಹಿಳೆಯರು ಅತ್ಯುತ್ತಮ ದಾದಿ ಹಾಗೂ ತಾಯಿಯಾಗಿರುತ್ತಾರೆ.
ಅಗಲವಾಗ ತುಟಿಗಳು
ಮೇಲ್ನೋಟಕ್ಕೆ ಕಿವಿಯಿಂದ ಕಿವಿಯವರೆಗೆ ಅಗಲವಾಗಿರುವಂತೆ ಕಾಣುವ ತುಟಿಗಳಿರುವ ವ್ಯಕ್ತಿಗಳು ಪ್ರತಿಭಾಶಾಲಿಯಾಗಿದ್ದು ಯಾವುದಾದರೊಂದು ವಿಷಯವನ್ನು ತದೇಕಚಿತ್ತದಿಂದ ಅಭ್ಯಸಿಸಿ ಪಾಂಡಿತ್ಯ ಗಳಿಸುವವರಾಗಿರುತ್ತಾರೆ. ಇವರು ಯಾರೊಂದಿಗೂ ಸುಲಭವಾಗಿ ಬೆರೆತುಕೊಳ್ಳುವ ಸ್ವಭಾವದವರಾಗಿದ್ದು ಅತಿ ಹೆಚ್ಚಿನ ಸಂಖ್ಯೆಯ ಸ್ನೇಹಿತರನ್ನು ಹೊಂದಿರುತ್ತಾರೆ.
ತೆಳುವಾದ ತುಟಿಗಳು
ಹೆಚ್ಚಿನ ಭಾಗ ಒಳಗೇ ಇದ್ದು ಕೇವಲ ಒಂದು ಚಿಕ್ಕ ಭಾಗ ಮಾತ್ರ ಹೊರಗೆ ಕಾಣುವಂತಹ ಚಿಕ್ಕ ತುಟಿಗಳಿರುವ ವ್ಯಕ್ತಿಗಳು ಸಮಾನ್ಯವಾಗಿ ಏಕಾಂತಪ್ರಿಯರಾಗಿದ್ದು ತಮ್ಮ ಜೀವನದ ಲಕ್ಷ್ಯಗಳ ಬಗ್ಗೆಯೇ ಹೆಚ್ಚು ಯೋಚಿಸುವವರಾಗಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ತೆಳುವಾದ ತುಟಿಗಳು
ಅಲ್ಲದೆ ಇವರು ಯಾವಾಗಲೂ ಎಚ್ಚರಿಕೆಯಿಂದಿದ್ದು ತಟಸ್ಥ ಮನೋಭಾವವನ್ನು ಪ್ರಕಟಿಸುತ್ತಾರೆ. ಇಂತಹ ತುಟಿಗಳಿರುವ ಮಹಿಳೆಯರು ಅತ್ಯಂತ ಕುತೂಹಲ ಪ್ರವೃತ್ತಿಯವರಾಗಿದ್ದು ಸ್ವತಂತ್ರರಾಗಿರಲು ಬಯಸುತ್ತಾರೆ. ಆದರೆ ಇವರು ಸೂಕ್ಷ್ಮ ಸ್ವಭಾವದವರೂ ಆಗಿರುತ್ತಾರೆ.
ಉರುಟಾದ ತುಟಿಗಳು
ಥಟ್ಟನೆ ನೋಡಿದರೆ ಸೀಟಿ ಹೊಡೆಯುತ್ತಿರುವಂತೆ ಕಾಣುವ ವೃತ್ತಾಕಾರದ ತುಟಿಗಳಿರುವ ವ್ಯಕ್ತಿಗಳು ಸಾಹಸ ಪ್ರವೃತ್ತಿಯುಳ್ಳವರಾಗಿದ್ದು ಎಲ್ಲರಿಗೆ ಬೇಕಾಗಿರುವವರಾಗಿರುತ್ತಾರೆ. ಅದರಲ್ಲೂ ಉರುಟು ತುಟಿಗಳ ಮಹಿಳೆಯರು ಅಪಾಯವನ್ನು ಎದುರಿಸುವ ವ್ಯಕ್ತಿತ್ವದವರಾಗಿದ್ದು ತಮ್ಮ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಉರುಟಾದ ತುಟಿಗಳು
ಇವರು ಹೆಚ್ಚಾಗಿ ಪುರುಷರಿಗೇ ಮೀಸಲಾದ ವೃತ್ತಿಗಳನ್ನು ಹೊಂದಲು ಬಯಸುತ್ತಾರೆ. ಇವರು ಹಿಂದಿನ ಬಗ್ಗೆ ಯೋಚಿಸದೇ ಸದಾ ಭವಿಷ್ಯದ ಬಗ್ಗೆ ಆಶಾವಾದವನ್ನು ಹೊಂದಿರುತ್ತಾರೆ.
ನಡುಭಾಗ ಮಾತ್ರ ಉಬ್ಬಿರುವ ತುಟಿಗಳು
ಈ ತುಟಿಗಳನ್ನು ಹೊಂದಿರುವ ವ್ಯಕ್ತಿಗಳು ಭಗವಂತನ ವಿಶೇಷ ಕೊಡುಗೆ ಎಂದೇ ಹೇಳಬಹುದು. ಇವರು ಯಾವುದಾದರೊಂದು ಕಲೆಯನ್ನು ಸಿದ್ಧಿಸಿದ ಕಲಾವಿದರಾಗಿದ್ದು ಸಾಮಾನ್ಯವಾಗಿ ಈ ವಿಷಯದಲ್ಲಿ ಎಲ್ಲರ ಗಮನವನ್ನು ತಮ್ಮೆಡೆಗೆ ಕೇಂದ್ರೀಕರಿಸುವಷ್ಟು ಸಮರ್ಥರಿರುತ್ತಾರೆ. ಇವರು ಉತ್ತಮ ವ್ಯಕ್ತಿಗಳಾಗಿದ್ದು ಸುಲಭವಾಗಿ ಎಲ್ಲರ ಸ್ನೇಹ, ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸುತ್ತಾರೆ.
ಸಮ್ಮಿತೀಯ ತುಟಿಗಳು
ಸಾಮಾನ್ಯವಾಗಿ ಮೇಲ್ತುಟಿ ಮತ್ತು ಕೆಳತುಟಿ ಆಕಾರದಲ್ಲಿ ಕೊಂಚ ದೊಡ್ಡ ಚಿಕ್ಕದಾಗಿರುತ್ತವೆ. ಆದರೆ ಕೆಲವರಲ್ಲಿ ಇವು ಏಕಸಮಾನವಾಗಿರುತ್ತವೆ. ಇಂತಹ ತುಟಿಗಳನ್ನು ಹೊಂದಿರುವವರು ಅತಿ ಹೆಚ್ಚಿನ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಸಮ್ಮಿತೀಯ ತುಟಿಗಳು
ಅಲ್ಲದೆ ಇವರು ಜನರೊಂದಿಗೆ ಬೆರೆಯಲು ಕೊಂಚ ಸಮಯ ತೆಗೆದುಕೊಳ್ಳುತ್ತಾರೆ. ಎದುರಿನ ವ್ಯಕ್ತಿ ತಮ್ಮ ವಿಶ್ವಾಸಕ್ಕೆ ಅರ್ಹನೋ ಅಲ್ಲವೋ ಎಂಬುದನ್ನು ಕೊಂಚ ಆಳವಾಗಿ ಅಭ್ಯಸಿಸಿದ ಬಳಿಕವೇ ಅವರನ್ನು ಸ್ನೇಹಿತರನ್ನಾಗಿ ಸ್ವೀಕರಿಸುತ್ತಾರೆ. ಇವರಿಗೆ ಸಾಮಾನ್ಯವಾಗಿ ಕೆಲವೇ ಸ್ನೇಹಿತರಿದ್ದರೂ ಪ್ರಾಣಕ್ಕೆ ಪ್ರಾಣ ಕೊಡುವಂತಹವರೇ ಇರುತ್ತಾರೆ.