For Quick Alerts
ALLOW NOTIFICATIONS  
For Daily Alerts

ತಮಾಷೆಯಾದರೂ ನಂಬಲೇಬೇಕು! ಇದು ಹಣ್ಣುಗಳ ವಿಷಯ

By Manu
|

ಹಣ್ಣುಗಳಿಗೆ ನಮ್ಮ ಆಹಾರ ಪದ್ಧತಿಯಲ್ಲಿ ಪ್ರಮುಖವಾದ ಸ್ಥಾನ ನೀಡಲಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ಸ್ನೇಹ ಮತ್ತು ವಿಶ್ವಾಸದ ಸಂಕೇತವಾಗಿ ಹಣ್ಣುಗಳನ್ನು ನೀಡಲಾಗುತ್ತದೆ. ಅನಾರೋಗ್ಯಪೀಡಿತರಿಗೆ ಹಣ್ಣುಗಳನ್ನು ವಿತರಿಸಲಾಗುತ್ತದೆ. ಆದರೆ ಈ ಹಣ್ಣುಗಳಲ್ಲಿ ಕೆಲವು ಆಸಕ್ತಿಕರ ವಿಷಯಗಳು ಅಡಗಿವೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ನೀವು ಈ ಹಿಂದೆ ಕೇಳಿರದ ಅಚ್ಚರಿಪಡುವ ಕೆಲವು ತಮಾಷೆಯ ಸಂಗತಿಗಳು ಹಣ್ಣುಗಳಲ್ಲಿವೆ.
ಹೌದು, ಹಣ್ಣುಗಳಲ್ಲಿ ಅನೇಕ ವಿಧದ ಅನೇಕ ರೀತಿಯ ತರಹೇವಾರಿ ಜಾತಿಯ ತಳಿಗಳಿವೆ. ಅದರ ಪೌಷ್ಠಿಕಾಂಶಗಳು ಹಣ್ಣುಗಳಿಂದ ಹಣ್ಣುಗಳಿಗೆ ವ್ಯಾತ್ಯಾಸಗಳಿರುತ್ತವೆ.

ಹಾಗಾಗಿ ಹಣ್ಣುಗಳ ಗುಣಗಳನ್ನು ಅರಿಯಲು ಅದರ ವೈಜ್ಞಾನಿಕ ಅಂಶಗಳನ್ನು ಮೊದಲು ಅರಿಯಬೇಕು. ಭೂಮಿಯ ಮೇಲೆ ಸಿಗುವಂತಹ ಆರೋಗ್ಯಕರವಾದ ಆಹಾರ ಸತ್ವಗಳಲ್ಲಿ ಹಣ್ಣುಗಳೂ ಸಹ ಒಂದು ಭಾಗವಾಗಿದೆ. ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಹಣ್ಣುಗಳು ಇರಲೇಬೇಕು. ಹಣ್ಣುಗಳಿಂದ ನಿಮ್ಮ ದೇಹದ ಆರೋಗ್ಯ ಸದೃಢವಾಗುವುದಲ್ಲದೇ ರೋಗನಿರೋಧಕ ಶಕ್ತಿಯು ಸಹ ಹೆಚ್ಚುತ್ತದೆ.

 Fun Facts About Fruits You Probably Didn't Know

ದಿನನಿತ್ಯ ಹಣ್ಣುಗಳ ಸೇವನೆಯಿಂದ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಆದರೆ ನೀವು ಸೇವಿಸುವ ಆಹಾರವನ್ನು ಒಮ್ಮೆ ಅವಲೋಕಿಸಲೇಬೇಕು. ಆಹಾರ ತಜ್ಞರ ಪ್ರಕಾರ ನಾವು ಸೇವಿಸುವ ಹಣ್ಣುಗಳಲ್ಲಿರುವ ಪೌಷ್ಠಿಕಾಂಶದ ಸತ್ವಗಳ ಬಗ್ಗೆ ನಮಗೆ ಹೆಚ್ಚಾಗಿ ಅರಿವಿಲ್ಲ. ಇದು ನಿಜಕ್ಕೂ ವಿಷಾದದ ಸಂಗತಿ. ಕೆಲವು ಹಣ್ಣುಗಳಲ್ಲಿ ನಿಜಕ್ಕೂ ಬೆಚ್ಚಿಬೀಳಿಸುವ ಸತ್ಯಗಳೂ ಅಡಗಿವೆ. ಉದಾಹರಣೆಗೆ ಬಾಳೆಹಣ್ಣಿನಲ್ಲಿ ವಿಕಿರಣಶೀಲ ಶಕ್ತಿಯ ಅಂಶವು ಸ್ವಲ್ಪ ಅಡಗಿದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಅದೇ ರೀತಿ, ಅನಾನಸ್ ಹಣ್ಣಿನಲ್ಲಿ ಸೇಬಿನ ಅಂಶ ಇಲ್ಲ. ಅದನ್ನು ಬೆರ್ರಿಗೆ ಹೋಲಿಸಲಾಗಿದೆ. ಇದು ಪೂರ್ತಿ ಫಲವಾಗಿ ಹೊರಹೊಮ್ಮಲು ಬರೋಬ್ಬರಿ ಒಂದು ವರ್ಷ ತೆಗೆದುಕೊಳ್ಳುತ್ತದೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಫ್ರೂಟ್ ಸಲಾಡ್ ಎಂಬ ಹೆಸರಿನ ಹಣ್ಣು ಸಹ ಇದೆ ಎಂಬುದು.

ಒಂದು ಸುಂದರವಾದ ಮರವು ಕನಿಷ್ಠ 3 ರಿಂದ 7 ವಿಧದ ಪೂರ್ತಿ ಬೆಳವಣಿಗೆಯಾದ ಹಣ್ಣುಗಳನ್ನು ನೀಡುತ್ತದೆ. ಪ್ರತಿಯೊಂದು ಹಣ್ಣಿನಲ್ಲಿಯೂ ಸಹ ಅದರದೇ ಆದ ಪೌಷ್ಠಿಕಾಂಶದ ಗುಣಗಳಿರುತ್ತವೆ. ಹಣ್ಣುಗಳ ಬಗ್ಗೆ ನೀವು ತಿಳಿಯದ ಅಚ್ಚರಿಯ ಸಂಗತಿಗಳನ್ನು ಒಮ್ಮೆ ಅವಲೋಕಿಸಿ. ಸ್ಟ್ರಾಬೆರ್ರಿ ಹಣ್ಣುಗಳು ನಿಜಕ್ಕೂ ಬೆರ್ರಿ ಕುಟುಂಬಕ್ಕೆ ಸೇರಿರುವುದೇ? ಖಂಡಿತಾ ಇಲ್ಲ, ಇದು ವಿಷಾದವಾದರೂ ಸತ್ಯದ ಸಂಗತಿ. ಆದರೆ ಈ ವಿಷಯದಲ್ಲಿ ಒಳ್ಳೆಯ ಸಂಗತಿಗಳೂ ಸಹ ನಮಗೆ ಕಾಣಸಿಗುತ್ತವೆ. ಬಾಳೆಹಣ್ಣುಗಳು ಬೆರ್ರಿ ಕುಟುಂಬಕ್ಕೆ ಸೇರುತ್ತವೆ. ದ್ರಾಕ್ಷಿಯ ಬಗ್ಗೆ ಒಂದು ತಮಾಷೆಯ ಸಂಗತಿಯೇನೆಂದರೆ ದ್ರಾಕ್ಷಿಯನ್ನು ನೀವು ಮೈಕ್ರೊಓವನ್ ನಲ್ಲಿ ಇಟ್ಟರೆ ಚಿಕ್ಕ ಬಾಂಬ್ ಸ್ಫೋಟಗೊಳ್ಳುವಂತೆ ಆಗುತ್ತದೆ. ಆದ್ದರಿಂದ ದ್ರಾಕ್ಷಿ ಇರುವಂತಹ ಯಾವುದೇ ಆಹಾರವನ್ನು ಬಿಸಿ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಸೇಬು ಹಣ್ಣುಗಳು, ರಾಸ್ಪ್ ಬೆರ್ರಿ ಹಣ್ಣುಗಳು ಮತ್ತು ಪೀಚ್ ಹಣ್ಣುಗಳು ಗುಲಾಬಿ ಜಾತಿಗೆ ಸೇರಿದ್ದಾಗಿದ್ದು, ಬೆರ್ರಿ ಜಾತಿಗೆ ಸೇರಿರುವುದಿಲ್ಲ. ಪ್ರಪಂಚದಲ್ಲೇ ಹೆಚ್ಚು ಪ್ರಖ್ಯಾತವಾದ ಹಣ್ಣು ಯಾವುದೆಂದು ನಿಮಗೆ ಗೊತ್ತೇ? ಅದು ಸುಂದರವಾದ ಮಾಗಿದ ಟೊಮೇಟೋ ಆಗಿದ್ದು, ಇದನ್ನು ತರಕಾರಿಯಾಗಿ ಹೆಚ್ಚು ಬಳಸಲಾಗುತ್ತದೆ. ಕಾಫಿ ಬೀನ್ಸ್ ನಿಜಕ್ಕೂ ಬೀನ್ಸ್ ಜಾತಿಗೆ ಸೇರಿರುವುದಲ್ಲ, ಆದರೆ ಅದನ್ನು ಹಣ್ಣಿನ ಪಿಟ್ಸ್ ನಿಂದ ಹೊರತೆಗೆದು ಸಂಸ್ಕರಿಸಿ ಕಾಫಿ ರುಚಿ ಬರುವ ಹಾಗೆ ತಯಾರಿಸಲಾಗುತ್ತದೆ.

ಪ್ರಪಂಚದಲ್ಲಿ ಹೆಚ್ಚು ಜನ ಇಷ್ಟಪಡುವದು ಬಾಳೆಹಣ್ಣುಗಳನ್ನು. ಇದರಲ್ಲಿ ಹೆಚ್ಚು ಪೌಷ್ಠಿಕಾಂಶದ ಸತ್ವಗಳು ಅಡಗಿದ್ದು ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥವಾಗಿದೆ. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಬಾಳೆಹಣ್ಣಿನಲ್ಲಿ ವಿಕಿರಣಶೀಲ ಶಕ್ತಿಯ ಅಂಶಗಳಿರುವುದು ಕಂಡುಬಂದಿದೆ. ಹಾಗಾಗಿ ಸೂಕ್ಷ್ಮ ಔಷಧೀಯ ಪದ್ಧತಿಯನ್ನು ಅನುಸರಿಸುತ್ತಿರುವವರು ಕೆಲವು ಮಾರಕವೆನಿಸುವ ಹಣ್ಣುಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು.

ಅದರಲ್ಲಿ ದ್ರಾಕ್ಷಿ ಹಣ್ಣು ಕೂಡ ಒಂದು. ನಿಜ, ಸೂಕ್ಷ್ಮ ಔಷಧೀಯ ಪದ್ಧತಿಯನ್ನು ಅನುಸರಿಸುತ್ತಿರುವವರು ದ್ರಾಕ್ಷಿ ಹಣ್ಣನ್ನು ಸೇವಿಸಬಾರದು. ಏಕೆಂದರೆ ಇದನ್ನು ಔಷಧಿ ಸೇವಿಸಿದ ತಕ್ಷಣವೇ ಸೇವಿಸಿದಲ್ಲಿ ತಕ್ಷಣವೇ ಮರಣ ಸಂಭವಿಸುವ ಸನ್ನಿವೇಶ ಎದುರಾಗುತ್ತದೆ. ಇದು ಅಚ್ಚರಿಯಾದರೂ ನಂಬಲೇಬೇಕಾದ ಸತ್ಯ. ಇನ್ನೊಂದು ಆಸಕ್ತಿಕರ ಸಂಗತಿಯೇನೆಂದರೆ ಫ್ರೂಟ್ ಸಲಾಡ್ ಮರವು ಪ್ರತಿ ವರ್ಷ 4 ರಿಂದ 7 ವಿವಿಧ ರೀತಿಯ ಹಣ್ಣುಗಳನ್ನು ನೀಡುತ್ತದೆ.

ಇತಿಹಾಸದಲ್ಲೇ ಟೊಮೇಟೊ ಹಣ್ಣುಗಳು ಹೆಚ್ಚು ಶಕ್ತಿಯುತವಾದ ಹಣ್ಣುಗಳೆಂದು ಗುರುತಿಸಲಾಗಿದೆ ಏಕೆಂದರೆ ಟೊಮೇಟೊನಲ್ಲಿ ಮಾನವನಿಗೆ ಇರುವುದಕ್ಕಿಂತಲೂ ಹೆಚ್ಚು ಅನುವಂಶಿಕ ಧಾತುಗಳು ಕಂಡುಬರುತ್ತವೆ. ಈ ವಿಶಿಷ್ಟ ಸಂಗತಿಗಳು ನಿಜಕ್ಕೂ ನಮಗೆ ಯಾರೂ ತಿಳಿಸಿರಲಿಲ್ಲ. ಮುಂದೆ ಒಂದು ದಿನ ನಿಮಗೆ ಅನಾರೋಗ್ಯ ಉಂಟಾಗಿ ವೈದ್ಯರು ನಿಮಗೆ ವಿಟಮಿನ್ ಸಿ ಸತ್ವ ಹೆಚ್ಚಿರುವ ಕಿತ್ತಳೆಯನ್ನು ಸೇವಿಸಲು ತಿಳಿಸಿದರೆ, ತಡಮಾಡದೇ ಸ್ಟ್ರಾಬೆರ್ರಿ ಹಣ್ಣುಗಳನ್ನು ಸೇವಿಸಿ. ಏಕೆಂದರೆ ಸ್ಟ್ರಾಬೆರ್ರಿ ಹಣ್ಣುಗಳಲ್ಲಿ ಕಿತ್ತಳೆಯಲ್ಲಿರುವುದಕ್ಕಿಂತ 10 ಪಟ್ಟು ವಿಟಮಿನ್ ಸಿ ಸತ್ವ ಅಡಗಿದೆ. ಇದೊಂದು ನಿಜಕ್ಕೂ ಆಸಕ್ತಿಕರ ಮತ್ತು ನೀವು ತಿಳಿದಿಲ್ಲದ ಅಚ್ಚರಿಯ ಸಂಗತಿಯಾಗಿದೆ.

Read more about: ಜೀವನ ಕೆಲಸ life work
English summary

Fun Facts About Fruits You Probably Didn't Know

Fruits are the healthiest forms of food that are found on the face of this earth. Fruits should be added to your daily diet, as they provide you with better health and immunity. Consuming fruits on a daily basis can keep you away from all sorts of diseases.
X
Desktop Bottom Promotion