For Quick Alerts
ALLOW NOTIFICATIONS  
For Daily Alerts

ಈ 6 ರಾಶಿಯವರು, ತುಂಬಾನೇ ಕೋಪ ಮಾಡಿಕೊಳ್ಳುತ್ತಾರಂತೆ! ಆ ಸಮಯದಲ್ಲಿ ಇವರನ್ನು ಕೆಣಕಬೇಡಿ...

By Hemanth Amin
|

ಮನುಷ್ಯನೆಂದ ಮೇಲೆ ಕೋಪತಾಪವೆನ್ನುವುದು ಇದ್ದೇ ಇರುತ್ತದೆ. ಜೀವನದಲ್ಲಿ ಕೋಪ ಬರದೇ ಇರುವಂತಹ ಮನುಷ್ಯ ಖಂಡಿತವಾಗಿಯೂ ಇರಲಿಕ್ಕಿಲ್ಲ. ಯಾವುದಾದರೂ ಕಾರಣಕ್ಕಾಗಿ ಕೋಪ ಬಂದೇ ಬರುತ್ತದೆ. ಆದರೆ ಕೆಲವರು ಕೋಪಗೊಂಡಾಗ ಅವರ ವಿರುದ್ಧ ಮಾತನಾಡಲು ಹೋದರೆ ಆಗ ಭೂಮಿಯೇ ಬಾಯಿ ಬಿರಿದಂತೆ ಆಗಬಹುದು.

ಯಾರಾದರೂ ಕೋಪಗೊಂಡಿದ್ದರೆ ಆಗ ಸುಮ್ಮನಿದ್ದು ಅವರು ಶಾಂತರಾಗುವಂತೆ ನೋಡಿಕೊಳ್ಳಿ. ಅವರನ್ನು ಮತ್ತಷ್ಟು ಕೆಣಕುವ ಕೆಲಸ ಮಾಡಬೇಡಿ. ಕೆಲವು ಜನರು ತುಂಬಾ ಕ್ರೋಧಿತರಾಗಿದ್ದರೆ ಆಗ ಅವರ ಕೋಪ ಹೆಚ್ಚಿಸುವ ಬದಲು ನೀವು ಹಾಗೆ ಬಿಟ್ಟುಬಿಡುವುದು ಒಳಿತು. ಪ್ರತಿಯೊಂದು ರಾಶಿಯವರು ಕೂಡ ತಮ್ಮದೇ ಆದ ರೀತಿಯಲ್ಲಿ ಕೋಪವನ್ನು ತೋರಿಸಿಕೊಳ್ಳುವರು. ಕೆಲವು ರಾಶಿಯವರು ಬೇರೆ ರಾಶಿಗಿಂತ ತುಂಬಾ ಭಿನ್ನವಾಗಿ ಇದನ್ನು ತೋರಿಸಿಕೊಳ್ಳುವರು. ಕೋಪಗೊಂಡಿರುವಂತಹ ಕೆಲವು ರಾಶಿಯ ವ್ಯಕ್ತಿಯನ್ನು ಮತ್ತಷ್ಟು ಕೆಣಕಲು ಹೋಗಬಾರದು. ಈ ರಾಶಿಗಳು ಯಾವುದು ಎಂದು ನೀವು ತಿಳಿಯಿರಿ...

1.ವೃಷಭ (ಎಪ್ರಿಲ್ 20-ಮೇ 20)

1.ವೃಷಭ (ಎಪ್ರಿಲ್ 20-ಮೇ 20)

ವೃಷಭ ರಾಶಿಯ ಚಿಹ್ನೆಯೇ ಗೂಳಿ. ಇದರಿಂದ ವೃಷಭ ರಾಶಿಯವರು ಎಷ್ಟು ಕೋಪಗೊಳ್ಳುವರು ಎಂದು ನೀವೇ ಊಹಿಸಿಕೊಳ್ಳಿ. ಇವರು ಕೋಪಗೊಂಡಾಗ ತುಂಬಾ ಹಿಂಸಾತ್ಮಕವಾಗುವರು. ವೃಷಭ ರಾಶಿಯವರು ಬೇರೆಯವರ ಮಾತು ಕೇಳುವರು ಮತ್ತು ಇವರು ತುಂಬಾ ಹಠಮಾರಿಗಳು. ಇವರು ನಿಜವಾದ ಕಾರಣಕ್ಕೆ ಕೋಪಗೊಳ್ಳುವುದರಿಂದ ಇವರ ಕೋಪವು ನ್ಯಾಯಯುತವಾದದ್ದು. ಇವರು ಕೋಪಗೊಂಡಾಗ ಶಾಂತರಾಗಿ ಎಂದು ಹೇಳಲು ಸಾಧ್ಯವಿಲ್ಲ. ಇವರಿಗೆ ಶಾಂತರಾಗಲು ಸಮಯ ಬೇಕು.

2.ಕರ್ಕಾಟಕ (ಜೂನ್ 22-ಜುಲೈ22)

2.ಕರ್ಕಾಟಕ (ಜೂನ್ 22-ಜುಲೈ22)

ಈ ರಾಶಿಯ ಚಿಹ್ನೆಯನ್ನು ನೋಡಿದರೆ ನಿಮಗೆ ಕೋಪಗೊಳ್ಳುತ್ತಾರೆಂದು ಅನಿಸುವುದಿಲ್ಲವೇ? ಏಡಿ ಕೂಡ ನಿಮಗೆ ಕಡಿತ ಮಾಡಬಹುದು. ಕರ್ಕಾಟಕ ರಾಶಿಯವರು ಕೋಪಗೊಂಡಾಗ ಇದನ್ನು ಹಿಡಿದಿಟ್ಟುಕೊಳ್ಳುವರು ಮತ್ತು ತಮ್ಮ ನಿಷ್ಕ್ರೀಯ ಆಕ್ರಮಣಕಾರಿ ಗುಣದ ಮೂಲಕ ಇದರ ಎಚ್ಚರಿಕೆ ನೀಡುವರು. ಇವರ ಎಚ್ಚರಿಕೆ ಗಮನಿಸದೆ ಹೋದರೆ ಮತ್ತು ಪರಿಸ್ಥಿತಿ ಮುಂದುವರಿದರೆ ಆಗ ಅವರ ಕೋಪವು ಸ್ಫೋಟವಾಗುವುದು ಮತ್ತು ಇದು ಹೊರಬರುವುದು. ಕರ್ಕಾಟಕ ರಾಶಿಯವರ ಕೋಪವೆಂದರೆ ಅದು ಸ್ಫೋಟಗೊಂಡ ಜ್ವಾಲಾಮುಖಿಯಂತೆ. ಯಾಕೆಂದರೆ ಇದು ವರ್ಷಗಳ ಕಾಲ ಶಾಂತವಾಗಿದ್ದು, ಬಳಿಕ ಸ್ಫೋಟಗೊಳ್ಳುವುದು. ಇವರ ಕೋಪ ಸ್ಫೋಟಗೊಂಡಾಗ ನಿಮಗೆ ಇದು ಸಂಪೂರ್ಣವಾಗಿ ಅಚ್ಚರಿಯನ್ನು ಉಂಟು ಮಾಡುವುದು. ಈ ಹಂತಕ್ಕೆ ಬರಲು ಕರ್ಕಾಟಕ ರಾಶಿಯವರಿಗೆ ತುಂಬಾ ಸಮಯ ಬೇಕಾಗುವುದು. ಆದರೆ ಸ್ಫೋಟಗೊಂಡ ಕೋಪ ಶಮನಕ್ಕೆ ತುಂಬಾ ಸಮಯ ಬೇಕಾಗುವುದು. ಅವರನ್ನು ಕೆರಳಿಸಲು ಹೋದರೆ ಆಗ ಅವರು ನಿಮಗೆ ಏಡಿ ಮಾತ್ರ ಮಾಡಬಲ್ಲ ಗಾಯವನ್ನು ಮಾಡುವರು. ಕರ್ಕಾಟಕ ರಾಶಿಯವರ ಕೋಪಕ್ಕೆ ಮಿತಿಯೇ ಇಲ್ಲ. ಇನ್ನು ಈ ರಾಶಿಯವರಿಗೆ ವರ್ಷದ ಗ್ರಹಗತಿಗಳ ಪರಿಣಾಮದ ಅನುಭವವಾಗುವುದು. ಯಾಕೆಂದರೆ ಶನಿಯು ಇವರ ಪ್ರಾಮಾಣಿಕತೆಯ ಸ್ವಯಂಮೌಲ್ಯಮಾಪನ ಮಾಡುವಂತೆ ಕಲಿಸಲಿದ್ದಾನೆ. ಇದರೊಂದಿಗೆ ಇವರು ತಮ್ಮ ದುರ್ಬಲತೆ ಹಾಗೂ ನ್ಯೂನ್ಯತೆಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಲಿದೆ.

3.ಮೇಷ (ಮಾ.21-ಎಪ್ರಿಲ್ 19)

3.ಮೇಷ (ಮಾ.21-ಎಪ್ರಿಲ್ 19)

ಮೇಷ ರಾಶಿಯವರು ಕೋಪಗೊಂಡಾಗ ಅವರ ಸುತ್ತಲಿನವರಿಗೆ ಇದು ತಿಳಿದಿರುವುದು. ಅಗ್ನಿಯ ರಾಶಿಗಳಾಗಿರುವ ಸಿಂಹ ಹಾಗೂ ಧನುವಿನಂತೆ ಮಾನಸಿಕವಾಗಿ ತುಂಬಾ ಬಲಿಷ್ಠ ಮತ್ತು ಹಠಿವಾದಿಯಾಗಿರುವಿರಿ. ಆದರೆ ಸ್ವಲ್ಪ ಕೋಪ ಮಾಡಿದರೂ ನಿಮ್ಮ ಶಕ್ತಿ ಮತ್ತು ಅತ್ಯುತ್ಸಾಹವು ಹಿಂಸಾತ್ಮಕವಾಗಿ ಸ್ಪೋಟವಾಗುವುದು. ನೀವು ಚಲಿಸುತ್ತಿರುವಂತಹ ಟೈಬಾಂಬ್ ಇದ್ದಂತೆ ನೀವು ಇದನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವಂತೆ ಅನಿರೀಕ್ಷಿತವಾಗಿ ಇದು ಸ್ಫೋಟವಾಗುವುದು ಮತ್ತು ನಿಮ್ಮ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುವುದು. ಮೇಷ ರಾಶಿಯವರಿಗೆ ತಮ್ಮ ಕೋಪವನ್ನು ಹಿಡಿದಿಟ್ಟುಕೊಳ್ಳಲು ತಿಳಿದಿಲ್ಲ ಮತ್ತು ಇವರು ಕೋಪವು ಅವರ ಆಡುವಂತಹ ಮಾತುಗಳಲ್ಲಿ ಹೊರಬೀಳಬಹುದು.

ಮೇಷ (ಮಾ.21-ಎಪ್ರಿಲ್ 19)

ಮೇಷ (ಮಾ.21-ಎಪ್ರಿಲ್ 19)

ಇನ್ನು ಮೇಷ ರಾಶಿಯವರು ಕೋಪಗೊಂಡಾಗ ಅದು ಜ್ವಾಲಾಮುಖಿ ಸಿಡಿದಂತೆ ಸುತ್ತಲಿನವರೆಲ್ಲರೂ ಇದರಲ್ಲಿ ಸುಟ್ಟು ಬೂದಿಯಾಗುವರು. ಮೇಷ ರಾಶಿಯರ ಭಾವನೆಗಳು ಅವರಿಂದ ಉತ್ತಮವಾಗಿರುವುದನ್ನು ಹೊರಹಾಕುವುದು. ಅವರು ಕೋಪಗೊಂಡಾಗ ದೊಡ್ಡ ಮಟ್ಟದಲ್ಲಿ ಯಾವುದನ್ನೂ ನೋಡಲ್ಲ. ಅವರ ಕೋಪವು ಶಬ್ಧಗಳು ಮತ್ತು ಕಾರ್ಯದಲ್ಲಿ ಕಂಡುಬರುವುದು. ಇವರು ಕೋಪದಲ್ಲಿ ಆಡುವಂತಹ ಮಾತುಗಳು ಸಂಬಂಧವನ್ನು ಕೆಡಿಸಬಹುದು ಮತ್ತು ಇವರು ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರವು ಯುದ್ಧಕ್ಕೆ ಕಾರಣವಾಗಬಹುದು.

4.ಸಿಂಹ (ಜುಲೈ 23-ಆ.22)

4.ಸಿಂಹ (ಜುಲೈ 23-ಆ.22)

ಸಿಂಹ ರಾಶಿಯವರು ನಾಟಕೀಯ ಮತ್ತು ಪ್ರಭುತ್ವ ಸಾಧಿಸುವವರು. ಸಿಂಹ ರಾಶಿಯವರ ಕೋಪವು ಕೋಪವಲ್ಲ, ಅದು ಅಬ್ಬರ. ಈ ಅಬ್ಬರವು ಅವರಿಂದ ಆದಷ್ಟು ಕೂಗಾಟ ಮತ್ತು ಜೋರಾಗಿ ಶಬ್ಧವನ್ನು ಮಾಡಿಸುವುದು. ನಿಮ್ಮ ಆತ್ಮವಿಶ್ವಾಸವನ್ನೇ ನಲುಗಿಸುವಂತಹ ಏನಾದರೂ ಅವರು ಹೇಳಬಹುದು. ಅವರು ಕೋಪಗೊಂಡಾಗ ಅವರು ಸರಿಯೆಂದು ನಂಬುವರು ಮತ್ತು ವಾದದಿಂದ ಯಾವತ್ತೂ ಹಿಂದೆ ಸರಿಯಲ್ಲ. ಸಿಂಹ ರಾಶಿಯವರ ಯಾವಾಗಲೂ ಕೋಪಿಷ್ಠರಾಗಿರುವರು. ಇವರು ತಮ್ಮ ಅಧಿಕಾರ ತೋರಿಸಲು ಕೋಪವನ್ನು ತೋರಿಸುವರು. ತಾವು ಸರಿಯಾಗಿದ್ದೇವೆ ಎಂದು ತೋರಿಸಲು ಇವರು ಏನು ಬೇಕಾದರೂ ಮಾಡಬಲ್ಲರು. ಇವರು ತಮ್ಮನ್ನು ತಪ್ಪಿತಸ್ಥನೆಂದು ಒಪ್ಪಿಕೊಳ್ಳುವುದು ತುಂಬಾ ಅಪರೂ. ಬೇರೆಯವರ ಮೇಲೆ ಕೋಪಗೊಂಡಾಗ ಅವರನ್ನು ಅವಮಾನಿಸಲು ಇವರು ಹಿಂಜರಿಯಲ್ಲ.

5.ವೃಶ್ಚಿಕ (ಅ.23-ನ.21)

5.ವೃಶ್ಚಿಕ (ಅ.23-ನ.21)

ವೃಶ್ಚಿಕ ರಾಶಿಯವರು ಯಾವಾಗಲೂ ತುಂಬಾ ಶಾಂತ ಹಾಗೂ ಸಂಯೋಜನೆಯಲ್ಲಿ ಇರುವವರು. ಇವರು ವೈಮನಸ್ಸನ್ನು ವರ್ಷಾನುಗಟ್ಟಲೆ ಇಟ್ಟುಕೊಳ್ಳವರು. ಇವರು ಯಾವುದೇ ಪರಿಸ್ಥಿತಿಗೂ ತಯಾರಾಗಿರುವರು. ವೃಶ್ಚಿಕ ರಾಶಿಯವರು ಕೋಪಗೊಂಡಾಗ ಅವರ ಸುತ್ತಲು ಇರುವುದು ತುಂಬಾ ಅಪಾಯ. ಇವರಿಗೆ ನೋವುಂಟು ಮಾಡಿದಂತಹ ಜಗಳವನ್ನು ಸುಲಭವಾಗಿ ಮರೆಯುವುದಿಲ್ಲ. ಇವರು ಕೋಪಗೊಂಡಾಗ ಸಮಾಧಾನಪಡಿಸುವುದು ತುಂಬಾ ಕಷ್ಟ. ಯಾಕೆಂದರೆ ಇವರು ಯಾವುದಕ್ಕಾಗಿ ಕೋಪಗೊಂಡಿರುವರು ಎಂದು ಹೇಳುವುದಿಲ್ಲ. ತಮ್ಮ ವಿರುದ್ಧವಾಗಿರುವವರನ್ನು ಇವರು ಅವಮಾನಿಸಲು ಹಿಂದೆಮುಂದೆ ನೋಡಲ್ಲ. ಇದು ಇವರ ನಡತೆಯ ಕೆಟ್ಟ ಅಂಶ.

6. ಧನು (ನ.22-ಡಿ.21)

6. ಧನು (ನ.22-ಡಿ.21)

ಧನು ರಾಶಿಯವರು ದೊಡ್ಡ ಬಾಂಬ್ ಇದ್ದಂತೆ. ಈ ರಾಶಿಯವರು ಕೆಟ್ಟ ಮನಸ್ಥಿತಿಯಲ್ಲಿರುವಾಗ ಗಮನಹರಿಸಬೇಕು. ಇವರು ತುಂಬಾ ಒಳ್ಳೆಯ ಹಾಗೂ ಸಭ್ಯ ವ್ಯಕ್ತಿ. ಆದರೆ ಇವರು ಕೋಪಗೊಂಡಾಗ ಸ್ಪೋಟವಾಗುವುದು ಮತ್ತು ಇದನ್ನು ನೀವು ಮರೆಯಲು ಸಾಧ್ಯವಿಲ್ಲ. ಇವರು ಕೆಲವೊಮ್ಮೆ ಕೆಟ್ಟದಾಗಿ ವರ್ತಿಸಲು ಏನು ಬೇಕಾದರೂ ಮಾಡಬಹುದು. ಧನು ರಾಶಿಯವರು ಕೋಪಗೊಂಡಾಗ ದೆವ್ವದಂತೆ ವರ್ತಿಸುವರು. ಅಪರೂಪದಲ್ಲಿ ಇವರು ದೈಹಿಕ ಹಲ್ಲೆ ಕೂಡ ಮಾಡಬಹುದು. ಕೋಪಗೊಂಡಾಗ ಧನು ರಾಶಿಯವರು ಮಾತಿನಲ್ಲೇ ಹೀಯಾಳಿಸುವರು. ಇವರು ತುಂಬಾ ಕಟುವಾಗಿರುವ ಶಬ್ದಗಳನ್ನು ಬಳಸುವರು. ಇವರನ್ನು ನೀವು ಮತ್ತಷ್ಟು ಕೆರಳಿಸಲು ಹೋಗಬೇಡಿ. ಧನು ರಾಶಿಯವರ ಕೋಪವು ತಣ್ಣಗಾದ ಬಳಿಕ ಅವರು ಕ್ಷಮೆ ಕೋರವರು.

English summary

The Scariest Zodiac Signs When Angry

All of us get angry- sometimes, the anger is justified and sometimes it is not. It’s no secret that you probably shouldn’t mess with someone if they’re already mad. If you see that someone is mad, your first instinct is to probably back up and give them space - no need to provoke them and make them even angrier. But some people have buttons that you should NEVER press. These buttons should ESPECIALLY be avoided when they are angry. Each zodiac sign expresses their anger in different ways. Some zodiac signs express their anger more than others.
X
Desktop Bottom Promotion