For Quick Alerts
ALLOW NOTIFICATIONS  
For Daily Alerts

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಒಂದಿಷ್ಟು ಆಸಕ್ತಿಕರ ಸಂಗತಿಗಳು

|

ಸಪ್ಟೆಂಬರ್ 5 ಅನ್ನು ದೇಶಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾರೆ. ಇದೇ ದಿನ ಮಹಾನ್ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣ ಅವರ ಹುಟ್ಟುಹಬ್ಬ ಕೂಡ. ಶಿಕ್ಷಕರಾಗಿ ದೇಶದ ರಾಷ್ಟ್ರಪತಿಗಳಾಗಿ ರಾಧಾಕೃಷ್ಣ ಅವರು ದುಡಿದಿದ್ದಾರೆ. ಮಹಾನ್ ವಿದ್ವಾಂಸ ಮತ್ತು ವಾಗ್ಮಿಯಾಗಿದ್ದ ಇವರು ಭಾರತದ ಅಭ್ಯುದಯಕ್ಕೆ ಮಹತ್ತರವಾಗಿ ಯೋಚಿಸಿದವರಾಗಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಮಾತ್ರ ಆಚರಿಸಿಕೊಳ್ಳಬಾರದು ಎಂಬ ಉದ್ದೇಶಕ್ಕಾಗಿ ಭವಿಷ್ಯವನ್ನು ರೂಪಿಸುವ ಗುರುಗಳ ದಿನವನ್ನಾಗಿ ಸಪ್ಟೆಂಬರ್ 5 ಅನ್ನು ರಾಧಾಕೃಷ್ಣ ಅವರು ಘೋಷಿಸಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಪೋಷಕರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅವರಿಗೆ ಯಾವ ರೀತಿಯ ಪುರಸ್ಕಾರವನ್ನು ನೀಡಿದರೂ ಅದು ಕಡಿಮೆಯೇ ಎಂಬುದು ರಾಧಾಕೃಷ್ಣ ಅವರ ಅಭಿಪ್ರಾಯವಾಗಿತ್ತು.

ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ತರವಾದ ಜವಬ್ದಾರಿಯನ್ನು ಹೊಂದಿದ್ದು ಸಣ್ಣ ಮಗುವಿನಿಂದ ಹಿಡಿದು ಅವರನ್ನು ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದುದು. ಮಹಾನ್ ವಿದ್ವಾಂಸರಾಗಿದ್ದು ಅವರು ದೇಶ ವಿದೇಶಗಳನ್ನು ಸುತ್ತಿ ಅಲ್ಲಿನ ವಿಚಾರಗಳನ್ನು ಭಾರತಕ್ಕೆ ತರುವ ಪ್ರಯತ್ನವನ್ನು ಮಾಡಿದ್ದರು. ತಮ್ಮ ಶಿಕ್ಷಕ ವೃತ್ತಿಯಲ್ಲೂ ಅವರು ಹೆಸರುವಾಸಿಯಾಗಿದ್ದರು ಮತ್ತು ತಮ್ಮ ಹುಟ್ಟಿದ ಹಬ್ಬವನ್ನು ಮಾತ್ರ ಈ ದಿನ ಆಚರಿಸಬಾರದು ಎಲ್ಲಾ ಶಿಕ್ಷಕರನ್ನು ಈ ದಿನ ದೇಶವಾಸಿಗಳು ನೆನೆಯಬೇಕು ಎಂಬ ಕಾರಣಕ್ಕಾಗಿ ಸಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಅವರು ಮಾರ್ಪಡಿಸಿದರು. ನಮ್ಮ ತಪ್ಪನ್ನು ತಿದ್ದಿ ನಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವವರು ಶಿಕ್ಷಕರಾಗಿದ್ದು ಅವರನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಗುರುವನ್ನು ದೈವಿಕ ಭಾವದಿಂದ ಕಾಣುವ ಒಂದೇ ಕಾರಣವೆಂದರೆ ಪೋಷಕರ ಸ್ಥಾನವನ್ನು ಅವರು ಪಡೆದುಕೊಂಡಿರುವುದಕ್ಕೆ.

ಇಂದು ಸಪ್ಟೆಂಬರ್ 5 ಆಗಿದ್ದು ಈ ದಿನ ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಅರಿತುಕೊಂಡು ಅವರನ್ನು ಜೊತೆಗೆ ನಮ್ಮ ಶಿಕ್ಷಕರನ್ನು ನೆನೆಯೋಣ.

*ವಾಗ್ಮಿ, ಶಿಕ್ಷಕರಾಗಿದ್ದು ರಾಧಾಕೃಷ್ಣನ್ ಅವರು ಭಾರತದ ಪ್ರಥಮ ಉಪರಾಷ್ಟ್ರಪತಿ (1952-1962) ಮತ್ತು ಎರಡನೆಯ ರಾಷ್ಟ್ರಪತಿಗಳಾಗಿದ್ದರು (1962-1967).

Sarvepalli Radhakrishnan

*ಮೈಸೂರಿನ ವಿಶ್ವವಿದ್ಯಾನಿಲಯವನ್ನು ತೊರೆದು ಕಲ್ಕತ್ತಾದಲ್ಲಿ ಪ್ರೊಫೆಸರ್ ಆಗಿ ಸೇರಿಕೊಂಡಾಗ, ಅವರನ್ನು ಮೈಸೂರಿನ ವಿದ್ಯಾರ್ಥಿಗಳು ರೈಲು ನಿಲ್ದಾಣದವರೆಗೆ ಹೂವಿನಿಂದ ಅಲಂಕರಿಸಲಾದ ಪಲ್ಲಕ್ಕಿಯೊಂದಿಗೆ ಹೊತ್ತೊಯ್ದಿದ್ದರು.

*ಲಂಡನ್‌ನಲ್ಲಿ ಡಾ. ರಾಧಾಕೃಷ್ಣನ್ ಉಪನ್ಯಾಸಗಳನ್ನು ಕೇಳಿದ ಎಚ್.ಎನ್. ಸ್ಪಾಲ್ಡಿಂಗ್ ಅವರು ತಮ್ಮ ವಿಷಯ ಮತ್ತು ಅವರ ವ್ಯಕ್ತಿತ್ವದಿಂದ ಆಕರ್ಷಿತರಾದರು, ಮತ್ತು ರಾಧಾಕೃಷ್ಣನ್ ಅವರು ತಮ್ಮ ವಾಕ್‌ಚಾತುರ್ಯದಿಂದ ಆಕ್ಸ್‌ಪರ್ಡ್‌ನಲ್ಲಿ ಉತ್ತಮ ಹುದ್ದೆಯನ್ನು ಅಲಂಕರಿಸಿದ್ದರು. ಈ ಹುದ್ದೆಯನ್ನು 1936 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದನ್ನು ರಾಧಾಕೃಷ್ಣನ್ ಅವರಿಗೆ ಅರ್ಪಿಸಲಾಯಿತು.

*ಆಂಧ್ರ ಯೂನಿವರ್ಸಿಟಿಯಲ್ಲಿ ಅವರು ವೈಸ್ ಚಾನ್ಸಲರ್ ಹುದ್ದೆಯನ್ನು ಅಲಂಕರಿಸಿದ್ದರು (1931-1936) ಮತ್ತು ಬನಾರಸ್ ಯೂನಿವರ್ಸಿಟಿಯಲ್ಲಿ ಕೂಡ ಅದೇ ಪದವಿಯನ್ನು ಅಲಂಕರಿಸಿದ್ದರು (1939-1948).

*ದೆಹಲಿ ಯೂನಿವರ್ಸಿಟಿಯಲ್ಲಿ ಕೂಡ ಅವರು ಚಾನ್ಸಲರ್ ಆಗಿ ಕಾರ್ಯನಿರ್ವಹಿಸಿದ್ದರು (1953-1962).

*ಅವರು ಉಪಾಧ್ಯಕ್ಷರಾಗಿದ್ದಾಗ ರಾಧಾಕೃಷ್ಣನ್ ರಾಜ್ಯಸಭೆ (ಮೇಲ್ಮನೆ) ಅಧಿವೇಶನಗಳ ಅಧ್ಯಕ್ಷತೆ ವಹಿಸಬೇಕಾಯಿತು. ಆಗಾಗ್ಗೆ, ಬಿಸಿಯಾದ ಚರ್ಚೆಯ ಸಮಯದಲ್ಲಿ, ರಾಧಾಕೃಷ್ಣನ್ ಅವರು ಸಂಸ್ಕೃತ ಶ್ಲೋಕಗಳಿಂದ ಸಭಾಸದರನ್ನು ಶಾಂತಗೊಳಿಸುತ್ತಿದ್ದರು.

*ಘನಶ್ಯಾಮ್ ದಾಸ್ ಬಿರ್ಲಾ ಜೊತೆಗೂಡಿ ಅವರು ಇತರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು, ರಾಧಾಕೃಷ್ಣನ್ ಕೃಷ್ಣಪ್ಪ ಚ್ಯಾರಿಟಿ ಟ್ರಸ್ಟ್ ಅನ್ನು ಕಟ್ಟಿದ್ದರು.

*1938 ರಲ್ಲಿ ಬ್ರಿಟಿಷ್ ಅಕಾಡೆಮಿಯಲ್ಲಿ ಅವರನ್ನು ಚುನಾಯಿಸಲಾಯಿತು.

*1954 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

*1946 ರಲ್ಲಿ ಅವರನ್ನು ಯುನೆಸ್ಕೋದ ರಾಯಭಾರಿಯಾಗಿ ನೇಮಿಸಲಾಯಿತು ಮತ್ತು ಸೋವಿಯತ್ ಯೂನಿಯನ್‌ನ ರಾಯಭಾರಿಯಾಗಿ 1949 ರಲ್ಲಿ ಅವರು ಕಾರ್ಯನಿರ್ವಹಿಸಿದ್ದರು. 1948 ರಲ್ಲಿ ಯೂನಿಯನ್ ಎಜುಕೇಷನ್ ಕಮಿಷನ್ ಮುಖ್ಯಸ್ಥರಾಗಿ, ಅವರು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತಂದರು. ಅವರು 1961 ರಲ್ಲಿ ಜರ್ಮನ್ ಬುಕ್ ಟ್ರೇಡ್ನ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದರು.

*1975 ರಲ್ಲಿ ಟೆಂಪಲ್ಟನ್ ಬಹುಮಾನವನ್ನು ಅವರಿಗೆ ಮರಣದ ಕೆಲವು ತಿಂಗಳ ಮುಂಚೆ ನೀಡಲಾಯಿತು. ಅವರು ಆಕ್ಸ್‌ಪರ್ಡ್ ವಿಶ್ವವಿದ್ಯಾನಿಲಯಕ್ಕೆ ಟೆಂಪಲ್ಟನ್ ಬಹುಮಾನದ ಸಂಪೂರ್ಣ ಮೊತ್ತವನ್ನು ದಾನ ಮಾಡಿದರು.

*ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ರಾಧಾಕೃಷ್ಣನ್ ಚೆವೆನಿಂಗ್ ವಿದ್ಯಾರ್ಥಿವೇತನ ಮತ್ತು ರಾಧಾಕೃಷ್ಣನ್ ಮೆಮೋರಿಯಲ್ ಪ್ರಶಸ್ತಿಯನ್ನು ಅವರ ಸ್ಮರಣಾರ್ಥವಾಗಿ ಸ್ಥಾಪಿಸಿತು.

*ಅವರು ಭಾರತದ ಅಧ್ಯಕ್ಷರಾದಾಗ, ಅವರ ಕೆಲವು ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ಬಯಸಿದರು. ಅವರು "ನನ್ನ ಜನ್ಮದಿನವನ್ನು ಆಚರಿಸಲು ಬದಲಾಗಿ 5 ಸೆಪ್ಟೆಂಬರ್ ಅನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಅದು ನನಗೆ ಹೆಮ್ಮೆಯಾಗುತ್ತದೆ" ಎಂದು ಉತ್ತರಿಸಿದರು. ಆಗಿನಿಂದಲೂ ನಾವು ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತೇವೆ.

*ಡಾ .ರಾಧಾಕೃಷ್ಣನ್ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ಪುಸ್ತಕಗಳು ಪ್ರಧಾನ ಉಪನಿಷತ್ತುಗಳು, ಭಾರತೀಯ ತತ್ವಶಾಸ್ತ್ರ ಸಂಪುಟ 1 ದ್ವಿತೀಯ ಆವೃತ್ತಿ: J.N.ಮೋಹಂಟಿಯವರ ಪರಿಚಯದೊಂದಿಗೆ, ದಿ ಭಗವದ್ಗೀತಾ, ದ ಹಿಂದೂ ವ್ಯೂ ಆಫ್ ಲೈಫ್ ಮೊದಲಾದವು ಪ್ರಸಿದ್ಧ ಪುಸ್ತಕಗಳಾಗಿವೆ.

English summary

Interesting Facts about Dr. Sarvepalli Radhakrishnan

Dr. Sarvepalli Radhakrishnan was first Vice President of India and second President of India. He was also a philosopher and introduced the thinking of western idealist philosophers into Indian thought. He was a famous teacher and his birthday(5 September) is celebrated as Teacher’s Day in India.15 Random Unknown facts About Dr. Sarvepalli Radhakrishnan
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more