For Quick Alerts
ALLOW NOTIFICATIONS  
For Daily Alerts

  2018 ಮೇ ತಿಂಗಳ ಕರ್ಕ ರಾಶಿಯ ಮಾಸಿಕ ಭವಿಷ್ಯವಾಣಿ

  |

  ಕರ್ಕ ರಾಶಿಯು ಎಲ್ಲಾ ರಾಶಿಗಳಿಗಿಂತ ಅತೀ ಹೆಚ್ಚು ಅನಿರೀಕ್ಷಿತ ರಾಶಿಯಾಗಿದೆ. ಈ ರಾಶಿಯ ವ್ಯಕ್ತಿಗಳು ಹೆಚ್ಚು ಭಾವನತ್ಮಕ ಜೀವಿಗಳಾಗಿದ್ದಾರೆ. ಹೆಚ್ಚಾಗಿ, ಅಸುರಕ್ಷಿತಾ ಭಾವನೆ ಮತ್ತು ಉದ್ವಿಗ್ನತೆಯಿಂದ ಕೂಡಿರುತ್ತಾರೆ.

  ಈ ವ್ಯಕ್ತಿಗಳು ತಾವು ಹತ್ತಿರವಿರುವ, ಇಷ್ಟಪಡುವವರ ನಿರಾಕರಣೆಗೆ/ಇಂದ ಭಯ ಪಡುತ್ತಾರೆ ಹಾಗೂ ಬಹಳ ಬೇಗ ಮಾನಸಿಕವಾಗಿ ಗಾಯಗೊಳ್ಳುತ್ತಾರೆ. ಆದರೆ ಮತ್ತೊಂದೆಡೆ, ಇವರು ಹೆಚ್ಚು ಅರ್ಥಗರ್ಭಿತ ಮತ್ತು ಕಲ್ಪನಾತ್ಮಕವಾಗಿ ತೋರುತ್ತಾರೆ.

  ಇದಲ್ಲದೆ, ಈ ರಾಶಿಯ ವ್ಯಕ್ತಿಗಳು ಪರಿಸ್ಥಿತಿಗೆ ಅನುಗುಣವಾಗಿ ಉಲ್ಲಾಸಕರ, ಸಹಾನುಭೂತಿ ಮತ್ತು ಪ್ರಬಲರಾಗಬಲ್ಲರು.

   2018 ಮೇ ತಿಂಗಳ ಕರ್ಕ ರಾಶಿಯ ಮಾಸಿಕ ಭವಿಷ್ಯವಾಣಿ

  ಇಲ್ಲಿ ನಾವು ಕರ್ಕ ರಾಶಿಯ ಬಗ್ಗೆ ನಮ್ಮ ಜ್ಯೋತಿಷ್ಯ ಶಾಸ್ತ್ರಜ್ನರು ಹೇಳಿರುವ ವಿವರಗಳನ್ನು ಕೊಟ್ಟಿದ್ದೇವೆ , ಈ ರಾಶಿಗೆ ಸೇರಿದವರು, ಈ ತಿಂಗಳು, ಪ್ರೀತಿ, ಹಣಕಾಸು ಮತ್ತು ವೃತ್ತಿಜೀವನದ ವಿಷಯದಲ್ಲಿ ನಿರೀಕ್ಷಿಸಬಹುದಾದ ವಿಷಯಗಳನ್ನು ನಾವು ಬಹಿರಂಗಪಡಿಸುತ್ತೇವೆ. ಇದಲ್ಲದೇ ನೀವು ಈ ತಿಂಗಳು ಕರ್ಕ ರಾಶಿಯ ಅದೃಷ್ಟ ಸಂಖ್ಯೆಗಳು ಮತ್ತು ಬಣ್ಣಗಳ ಬಗ್ಗೆ ಸಹ ತಿಳಿಯಬಹುದು.

  ಕರ್ಕ ರಾಶಿಗೆ ಸೇರಿದವರು ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ನೀವು ಈ ರಾಶಿಗೆ ಸೇರಿದವರಾದರೆ, ನಿಮ್ಮ ಉದ್ವೇಗವನ್ನು ನೀವು ನಿಯಂತ್ರಿಸಬೇಕು. ಇಲ್ಲದಿದ್ದರೆ ಈ ತಿಂಗಳ ನಿರ್ವಹಣೆ ನಿಮಗೆ ಕಠಿಣವಾಗಬಹುದು, ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಸಮತೋಲನ ಆಹಾರವನ್ನು ಸೇವಿಸಬೇಕು.

  ಹಾಗಾದರೆ, ಮೇ ೨೦೧೮ ರ ಕರ್ಕ ರಾಶಿಯ ಮಾಸಿಕ ಭವಿಷ್ಯದ ಕುರಿತು ತಿಳಿಯಲು ಮುಂದೆ ಓದಿ.

  ಆರೋಗ್ಯ ಭಾಗ್ಯ

  ಈ ತಿಂಗಳು, ವಿಶೇಷವಾಗಿ ನೀವು ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ನೀವು ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವಂತೆ ಕಾಣುತ್ತದೆ. ಇದಲ್ಲದೆ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು, ಆದಷ್ಟು ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಪೌಷ್ಟಿಕ ಆಹಾರ ಮತ್ತು ಹಣ್ಣುಗಳನ್ನು ಸೇವಿಸುವುದು ಉತ್ತಮ ಹಾಗೂ ನಿಮ್ಮ ದೇಹದಲ್ಲಿ ಶಕ್ತಿಯನ್ನು ತುಂಬಲು ಸರಿಯಾಗಿ ನಿದ್ದೆಮಾಡಬೇಕು.

  ವೃತ್ತಿಜೀವನದ ಬಗ್ಗೆ

  ಈ ತಿಂಗಳು, ನಿಮ್ಮ ವೃತ್ತಿಜೀವನ ಸಾಕಷ್ಟು ಅನುಕೂಲಕರವಾಗಿದೆ .ಈ ತಿಂಗಳಲ್ಲಿ ಪ್ರಯಾಣವು ಸೂಚಿಸಲ್ಪಡುತ್ತದೆ ಮತ್ತು ಇದು ಬಹಳ ಪ್ರಯೋಜನಕಾರಿಯಾಗಿದೆ. ಇದರ ಅನುಸಾರ, ದಕ್ಶಿಣದ ಕಡೆಗೆ ಪ್ರಯಾಣಿಸುವುದು ಹೆಚ್ಚು ಪ್ರಯೋಜನಕಾರಿಯಗಬಹುದು.

  ಉತ್ತಮ ಅದೃಷ್ಟವು ನಿಮ್ಮೆಡೆಗೆ ಬರುತ್ತಿರುವ ಸಾಧ್ಯತೆ ಬಹಳಷ್ಟಿದೆ. ಆದ್ದರಿಂದ, ಈ ತಿಂಗಳಲ್ಲಿ ನಿಮ್ಮೆಡೆಗೆ ಬರಲಿರುವ ಅದೃಷ್ಟವನ್ನು ನಿರೀಕ್ಶಿಸಿ ಮತ್ತು ಅದರ ಅತ್ಯುತ್ತಮ ಬಳಕೆಯನ್ನು ಪಡೆದುಕೊಳ್ಳಿ.

  ತಿಂಗಳ ಹಣಕಾಸಿನ ಬಗ್ಗೆ

  ಈ ತಿಂಗಳಲ್ಲಿ ನಿಮ್ಮ ಆರ್ಥಿಕ ಭವಿಷ್ಯದ ಕುರಿತು ಆಲೋಚಿಸಬೇಕಾದ ಕೆಲವು ವಿಷಯಗಳಿವೆ. ಸಾರಿಗೆ ಉದ್ಯಮದಲ್ಲಿ ತೊಡಗಿಸಿಕೊಂಡವರು ಈ ಅವಧಿಯಲ್ಲಿ ಕಠಿಣ ಸಮಯ ಅನುಭವಿಸುವ ಸಾಧ್ಯತೆ ಇದೆ. ಇಂತಹ ವ್ಯಕ್ತಿಗಳು ಅವಧಿಗೆ ಮುಂಚಿತವಾಗಿಯೇ ಹಣ ಕಾಸಿನ ವ್ಯವಸ್ಥೆಗಳನ್ನು ರೂಪಿಸುವುದು ಒಳ್ಳೆಯದು. ಈ ಅವಧಿಯು ನಿಮ್ಮ ಹಣಕಾಸಿನ ನಿರೀಕ್ಷೆಗಳಿಗೆ ಸರಿಹೊಂದುವಂತಿಲ್ಲ. ಆದ್ದರಿಂದ, ನೀವು ಹಣದ ವಿಚಾರದಲ್ಲಿ ಕಡಿಮೆ ದರ್ಜೆಯನ್ನು ನಿರ್ವಹಿಸಿ ಮತ್ತು ಪ್ರತಿಕೂಲ ಸಂದರ್ಭಕ್ಕಾಗಿ ಕಾಯಿರಿ.

  ಪ್ರೀತಿ ಪ್ರೇಮದ ಬಗ್ಗೆ

  ಈ ರಾಶಿಯ ಭವಿಷ್ಯದ ಪ್ರಕಾರ, ಈ ತಿಂಗಳು ನಿಮ್ಮ ಸಂಗಾತಿ ಅಥವಾ ಜೊತೆಗಾರರು ಹೆಚ್ಚು ಭಾವೋದ್ರಿಕ್ತವಾಗಿರುತ್ತಾರೆ, ಅಂದರೆ ನಿಮ್ಮ ಪ್ರೇಮ ಜೀವನವು ಪ್ರಣಯಕ್ಕಿಂತ ಹೆಚ್ಚು, ಭಾವೋದ್ವೇಕದಿಂದ ಕೂಡಿರುತ್ತದೆ. ಈ ತಿಂಗಳು ನಿಮ್ಮ ಸಂಗಾತಿಯು ಹಣಕಾಸಿನ ವಿಷಯದಲ್ಲಿ ಸ್ವಾತಂತ್ರವನ್ನು ಬಯಸುತ್ತಾರೆ ಮತ್ತು ಯಾವುದೇ ಭಾದ್ಯತೆಗಳಿಲ್ಲದೇ, ಹಣವನ್ನು ಗಳಿಸುವ ಮತ್ತು ಖರ್ಚು ಮಾಡುವ ವಿಧಾನಗಳನ್ನು ಹುಡುಕಲು ಇಷ್ಟಪಡುತ್ತಾರೆ.

   2018 ಮೇ ತಿಂಗಳ ಕರ್ಕ ರಾಶಿಯ ಮಾಸಿಕ ಭವಿಷ್ಯವಾಣಿ

  ಪ್ರೀತಿ ಮತ್ತು ಪ್ರೇಮಕ್ಕಿಂತ ಹೆಚ್ಚಾಗಿ ಸ್ನೇಹಿತರು ಮತ್ತು ಸಾಮಾಜಿಕ ಗುಂಪುಗಳೊಂದಿಗಿನ ಚಟುವಟಿಕೆಗಳಲ್ಲಿ ನೀವು ಹೆಚ್ಚು ಆಸಕ್ತರಾಗಿರುವಿರಿ. ಒಂಟಿಯಾಗಿರುವವರು ಸ್ನೇಹದ ಮೂಲಕ ಪ್ರೀತಿಗೆ ಒಳಗಾಗುತ್ತದೆ, ಆದರೆ ಸಂಬಂಧದಲ್ಲಿರುವ ವ್ಯಕ್ತಿಗಳು ಹಣಕಾಸಿನ ನಿರೀಕ್ಷೆಗಳ ಆಧಾರದ ಮೇಲೆ ಸಣ್ಣ ಪುಟ್ಟ ಅಡಚಣೆಗಳನ್ನು ಎದುರಿಸುವ ಸಾಧ್ಯತೆಯಿದೆ.

  ಅದೃಷ್ಟದ ದಿನಾಂಕಗಳು ಮತ್ತು ಬಣ್ಣಗಳು

  ಈ ತಿಂಗಳಲ್ಲಿ ನಿಮ್ಮ ರಾಶಿಯ ಅದೃಷ್ಟ ಸಂಖ್ಯೆಗಳು - 17, 40, 46, 61, ಮತ್ತು 76.

  ಅದೃಷ್ಟದ ದಿನಾಂಕಗಳು: 6, 7, 8, 17, 18, 25, 26.

  ಅದೃಷ್ಟ ಬಣ್ಣಗಳು ಕೆಂಪು, ಸೇಬಿನ ಹಸಿರು( ಆಪಲ್ ಗ್ರೀನ್) ಮತ್ತು ಆಕಾಶ ನೀಲಿ.

  Read more about: zodiac sign
  English summary

  2018 ಮೇ ತಿಂಗಳ ಕರ್ಕ ರಾಶಿಯ ಮಾಸಿಕ ಭವಿಷ್ಯವಾಣಿ

  Apart from this, these individuals can be tenacious, sympathetic and strong when the circumstances arise. Here, we bring in details of the cancer zodiac right from our astro-experts who reveal about what you need to expect this month in terms of love, finance, and career.You can also learn about the lucky numbers and colours for the month. Find out more about your May 2018 predictions for the Cancer sign.
  Story first published: Tuesday, May 1, 2018, 10:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more