For Quick Alerts
ALLOW NOTIFICATIONS  
For Daily Alerts

ಮಹಾಭಾರತವೆ೦ಬ ಮಹಾಕಾವ್ಯದ ಹಿಂದಿನ ಸತ್ಯಾಸತ್ಯತೆ

By Manu
|

ನಮ್ಮಲ್ಲಿ ಹೆಚ್ಚಿನವರ ಪಾಲಿಗೆ ಮಹಾಭಾರತವು ಒ೦ದು ಅತ್ಯ೦ತ ಗೊ೦ದಲಮಯವಾದ ಮಹಾಕಾವ್ಯವಾಗಿದೆ. ಇದಕ್ಕೆ ಕಾರಣವೇನೆ೦ದರೆ, ಮಹಾಭಾರತದಲ್ಲಿ ಹಲವಾರು ಪಾತ್ರಗಳು ವಿಜೃ೦ಭಿಸುತ್ತವೆ ಹಾಗೂ ಪ್ರತಿಯೊ೦ದು ಪಾತ್ರವೂ ಸಹ ಒ೦ದಲ್ಲ ಒ೦ದು ರೀತಿಯಲ್ಲಿ ಮತ್ತೊ೦ದು ಪಾತ್ರದೊ೦ದಿಗೆ ತಳುಕು ಹಾಕಿಕೊ೦ಡಿರುತ್ತದೆ.

ಮಹಾಭಾರತವೆ೦ಬ ಮಹಾಕಾವ್ಯವು ಪಾ೦ಡವರು, ದ್ರೌಪದಿ, ಕೌರವರೇ ಮೊದಲಾದ ಅನೇಕ ದ೦ತಕಥೆಗಳ೦ತಹ ಪಾತ್ರಗಳ ಸ೦ಗಮವೇ ಆಗಿದ್ದು, ಇಡಿಯ ಮಹಾಭಾರತವೇ ಈ ಪಾತ್ರಗಳ ಸುತ್ತಲೂ ಹೆಣೆದುಕೊಳ್ಳುವುದರಿ೦ದ, ಜನರಿಗೆ ಆ ಮಹಾಕಾವ್ಯದಲ್ಲಿ ಕ೦ಡುಬರುವ ಇತರ ಪಾತ್ರಗಳ ಕುರಿತಾಗಿ ಅಷ್ಟೊ೦ದು ಪರಿಚಯವಿರುವುದಿಲ್ಲ. ಆದರೆ, ಈ ಪಾತ್ರಗಳೂ ಕೂಡ ಮಹಾಕಾವ್ಯದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಬನ್ನಿ ಅಂತಹ ಪಾತ್ರಗಳು ಯಾವುದು ಎಂಬುದನ್ನು ನೋಡೋಣ...

Untold stories of Mahabharata that You Haven't Heard About

ಉಲೂಪಿಯ ಮಗ ಅರಾವಣ

ಮಹಾಭಾರತದ ಮಹಾಯೋಧನಾದ ಸವ್ಯಸಾಚಿ, ಧನ೦ಜಯನೆ೦ದು ಕರೆಯಲ್ಪಡುವ ಅರ್ಜುನನ ಪುತ್ರನೇ ಈ ಅರಾವಣನಾಗಿದ್ದು, ಈತನು ಅರ್ಜುನ ಹಾಗೂ ಅರ್ಜುನನ ಪತ್ನಿಯಾದ ನಾಗಕನ್ನಿಕೆ ಉಲೂಪಿಯ ಮಗನಾಗಿದ್ದಾನೆ. ಮಹಾಭಾರತದ ಮಹಾಯೋಧನಾದ ಸವ್ಯಸಾಚಿ, ಧನ೦ಜಯನೆ೦ದು ಕರೆಯಲ್ಪಡುವ ಅರ್ಜುನನ ಪುತ್ರನೇ ಈ ಅರಾವಣನಾಗಿದ್ದು, ಈತನು ಅರ್ಜುನ ಹಾಗೂ ಅರ್ಜುನನ ಪತ್ನಿಯಾದ ನಾಗಕನ್ನಿಕೆ ಉಲೂಪಿಯ ಮಗನಾಗಿದ್ದಾನೆ.

ತ೦ದೆಯ೦ತೆ ಪುತ್ರನಾದ ಅರಾವಣನೂ ಸಹ ಮಹಾಭಯಾನಕ ಯೋಧನಾಗಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಅರಾವಣನೂ ಸಹ ತನ್ನ ತ೦ದೆ ಹಾಗೂ ಇತರ ಪಾ೦ಡವರೊ೦ದಿಗೆ ಪಾಲ್ಗೊಳ್ಳುತ್ತಾನೆ. ಅರಾವಣನು ಯುದ್ಧದಲ್ಲಿ ವೀರಾವೇಶದಿ೦ದ ಹೋರಾಡಿ ಮಹಾನ್ ಉದ್ದೇಶಕ್ಕಾಗಿ ಆತ್ಮಾರ್ಪಣೆಯನ್ನು ಮಾಡಿಕೊಳ್ಳುತ್ತಾನೆ.

ಅಭಿಮನ್ಯು

ಕೌರವರ ಕುತಂತ್ರಕ್ಕೆ ಬಲಿಯಾಗಿ, ಚಕ್ರವ್ಯೂಹದೊಳಗೆ ಒಬ್ಬಂಟಿಯಾದ ಅಭಿಮನ್ಯು ತನಗಿಂತಲೂ ವಯಸ್ಸಿನಲ್ಲಿಯೂ, ಶೌರ್ಯದಲ್ಲಿಯೂ, ಯುದ್ಧದ ಅನುಭವದಲ್ಲಿಯೂ ಹಿರಿಯರಾಗಿದ್ದ ಎಲ್ಲರ ಎದುರು ಅಭಿಮನ್ಯು ಧೃತಿಗೆಡದೇ ಹೋರಾಡಿದ. ತನ್ನ ವಯಸ್ಸಿಗೂ ಮಿಗಿಲಾದ ಪರಾಕ್ರಮವನ್ನೂ ಶೌರ್ಯವನ್ನೂ ಮೆರೆದ. ತನ್ನ ಮಾವ ಕೃಷ್ಣನಿಂದ ಕಲಿತ ಎಲ್ಲಾ ವರಸೆ ವಿದ್ಯೆಗಳನ್ನು ಆ ಸಮಯದಲ್ಲಿ ಉಪಯೋಗಿಸಿಕೊಂಡ. ಈ ಪುಟಾಣಿಯ ಶೌರ್ಯವನ್ನು ಕಂಡು ಅಂದು ಇಡಿಯ ಕೌರವ ಸೇನೆಯೇ ದಂಗಾಗಿತ್ತು. ಸ್ವತಃ ದ್ರೋಣಾಚಾರ್ಯರೇ ಅಭಿಮನ್ಯುವಿನ ಪರಾಕ್ರಮವನ್ನು ಕೊಂಡಾಡಿದರು. ಅಭಿಮನ್ಯು- ಮಹಾಭಾರತದ ಅತಿ ಕಿರಿಯ ಶೂರನ ವೀರಗಾಥೆ

ಘಟೋತ್ಕಚ

ಅರ್ಜುನನ ಸಹೋದರನಾದರೂ ವೈರಿಪಾಳ್ಯದ ಪರವಾಗಿ ಸೆಣೆಸುತ್ತಿರುವ ಕರ್ಣನ ಬಳಿ ವಾಸವಶಕ್ತಿ ಎಂಬ ಅಸ್ತ್ರವಿರುವವರೆಗೂ ಆತನನ್ನು ಕೊಲ್ಲುವುದು ಭಾರೀ ಕಠಿಣ ಎಂದು ಪಾಂಡವರಿಗೆ ಹಾಗೂ ಕೃಷ್ಣನಿಗೆ ಗೊತ್ತಿತ್ತು. ಕರ್ಣನಿಂದ ಅರ್ಜುನನ್ನು ರಕ್ಷಿಸಲು ಕೃಷ್ಣ ಒಂದು ತಂತ್ರ ಹೂಡುತ್ತಾನೆ. ತಮ್ಮವನೇ ಆದ ಘಟೋತ್ಕಚನನ್ನು (ಭೀಮನ ಪುತ್ರ) ದುರ್ಯೋಧನನ ಮೇಲೆ ಪ್ರಹಾರ ಮಾಡಲು ಸೂಚಿಸುತ್ತಾನೆ. ಆಗ ಅನಿವಾರ್ಯವಾಗಿ ಕರ್ಣನು ಈ ಅಸ್ತ್ರವನ್ನು ಉಪಯೋಗಿಸಿ ಘಟೋದ್ಗಜನನ್ನು ಕೊಲ್ಲುತ್ತಾನೆ. ಇದರಿಂದ ಅರ್ಜುನನಿಗೆ ಈ ಅಸ್ತ್ರದ ಅಪಾಯ ಇಲ್ಲವಾಗುತ್ತದೆ. ಅರ್ಜುನನ್ನು ಉಳಿಸಲು ಘಟೋದ್ಗಜ ತನ್ನ ಪ್ರಾಣವನ್ನು ಅರ್ಪಿಸುತ್ತಾನೆ.

ಶ್ರೀ ಕೃಷ್ಣನ ಚಾಣಾಕ್ಷ್ಯ

ಎಲ್ಲವನ್ನೂ ಬಲ್ಲವನಾಗಿದ್ದ ಶ್ರೀಕೃಷ್ಣ ಮಹಾಭಾರತದ ಯುದ್ಧದಲ್ಲಿ ಭೀಷ್ಮ ಪಿತಾಮಹರು ತಮ್ಮ ಪ್ರತಿಜ್ಞೆಗೆ ಬದ್ಧರಾಗಿದ್ದು ಹೆಣ್ಣಿನ ಮೇಲೆ ಅಸ್ತ್ರ ಉಪಯೋಗಿಸುತ್ತಿರಲಿಲ್ಲ. ಆದ್ದರಿಂದ ಅರ್ಜುನನನ್ನು ಶಿಖಂಡಿಯ ರೂಪ ಧರಿಸಿ ರಣರಂಗಕ್ಕೆ ಕರೆತಂದ ಕೃಷ್ಣ. ಭೀಷ್ಮ ಶಿಖಂಡಿಯ ರೂಪದಲ್ಲಿದ್ದ ಅರ್ಜುನನ ಮೇಲೆ ಅಸ್ತ್ರ ಉಪಯೋಗಿಸಲಿಲ್ಲ. ಇದರ ಉಪಯೋಗ ಪಡೆದ ಅರ್ಜುನ ಬಾಣಗಳ ಮಳೆಯನ್ನೇ ಸುರಿಸಿ ಭೀಷ್ಮರನ್ನು ವಧಿಸಿದ.

English summary

Untold stories of Mahabharata that You Haven't Heard About

Mahabharat is one such epic about which the whole world knows, but there are hardly few who know every minute detail about it. so some of the characters are mentioned here have a look
Story first published: Tuesday, November 24, 2015, 10:20 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more