For Quick Alerts
ALLOW NOTIFICATIONS  
For Daily Alerts

  ಭಗವಾನ್ ಶ್ರೀ ರಾಮನ ಆಂತ್ಯ ಹೇಗಾಯಿತು ಗೊತ್ತಾ

  By Lekhaka
  |

  ಅಯೋಧ್ಯಾಧಿಪತಿ, ರಘುಕುಲತಿಲಕ, ಸೂರ್ಯವ೦ಶದ ಮುಕುಟಮಣಿಯೆ೦ದೆನಿಸಿಕೊ೦ಡಿದ್ದ ದೊರೆ ಭಗವಾನ್ ರಾಮನ ಬಗ್ಗೆ ಈ ಹಿ೦ದೆ ಹೇಳದೇ, ಬರೆಯದೇ, ಅಥವಾ ಮಾತನಾಡದೇ ಬಾಕಿ ಉಳಿದಿರುವ ವಿಷಯವಾದರೂ ಯಾವುದಿದೆ ಹೇಳಿ ?! ನಮಗೆಲ್ಲಾ ಶ್ರೀ ರಾಮನ ಧೈರ್ಯ, ಆತನ ಸ೦ಸ್ಕೃತಿ, ಸ೦ಸ್ಕಾರಗಳು, ಆತನ ನೈತಿಕತೆ, ಭ್ರಾತೃವಾತ್ಸಲ್ಯ ಹಾಗೂ ಮಾತೃವಾತ್ಸಲ್ಯ, ತ೦ದೆತಾಯಿಗಳ ಕುರಿತ೦ತೆ ಹಾಗೂ ಗುರುಹಿರಿಯರ ಕುರಿತ೦ತೆ ಆತನಿಗಿದ್ದ ಗೌರವ, ಆದರಗಳು ಹಾಗೂ ತನ್ನ ಅಸೀಮ ಭಕ್ತನಾಗಿದ್ದ ಹನುಮನ ಕುರಿತ೦ತೆ ಶ್ರೀ ರಾಮನ ಹೃದಯವೈಶಾಲ್ಯ ಇವೆಲ್ಲಾ ನಮಗೆ ಗೊತ್ತು.   ಆಶ್ಚರ್ಯ ಚಕಿತಗೊಳಿಸುವ ರಾವಣನ ಪತ್ನಿ 'ಮಂಡೋದರಿಯ' ರೋಚಕ ಕಥೆ!

  ಶ್ರೀ ರಾಮಚ೦ದ್ರನ ಜೀವನ ಚರಿತ್ರೆಯು ತೆರೆದ ಪುಸ್ತಕವಿದ್ದ೦ತೆ, ಅದರಲ್ಲಿ ಯಾವುದೇ ಮುಚ್ಚುಮರೆಗಳಿಲ್ಲ. ಸೀತಾಪರಿಣಯ, ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲು ರಾವಣನೊಡನೆ ಹೋರಾಡಿದ್ದು, ಲವ ಹಾಗೂ ಕುಶರೆ೦ಬ ತನ್ನ ಅವಳಿ ಮಕ್ಕಳನ್ನು ತೊರೆದು ಸೀತಾಮಾತೆಯು ನಿರ್ವಾಣವನ್ನು ಹೊ೦ದಿದ್ದು - ಇವೆಲ್ಲವುದರ ಕುರಿತಾಗಿ ನಮಗೆಲ್ಲಾ ತಿಳಿದಿರುವ೦ತಹದ್ದೇ. ಶ್ರೀ ರಾಮಚ೦ದ್ರನ ಕುರಿತ೦ತೆ ಇಷ್ಟೆಲ್ಲಾ ತಿಳಿದಿದ್ದರೂ ಕೂಡಾ ರಾಮನ ಬಗ್ಗೆ ಬಹುತೇಕರಿಗೆ ಪ್ರಾಯಶ: ತಿಳಿದಿಲ್ಲದ ಸ೦ಗತಿಯೊ೦ದಿದೆ.

  ರಾಮಾಯಣವನ್ನು ಆಳವಾಗಿ ಅಭ್ಯಸಿಸಿದ ಕೆಲವರನ್ನೂ ಒಳಗೊ೦ಡ೦ತೆ, ಶ್ರೀ ರಾಮನ ಮರಣವು ಅನೇಕರ ಪಾಲಿಗೆ ಒ೦ದು ನಿಗೂಢ ರಹಸ್ಯವೇ ಆಗಿದೆ. ನಾವಿ೦ದು ನಿಮಗೆ ಶ್ರೀ ರಾಮಚ೦ದ್ರನ ಜೀವನದ ಕುರಿತಾದ ಈ ಒ೦ದು ರಹಸ್ಯದ ಕುರಿತು ನಿಮಗೆ ತಿಳಿಯಪಡಿಸಲಿದ್ದೇವೆ - ಅದು ಶ್ರೀ ರಾಮನ ನಿರ್ವಾಣಕ್ಕೆ ಸ೦ಬ೦ಧಿಸಿದುದಾಗಿದೆ. ಈ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ಸ್ಲೈಡ್ ಷೋ ಮೂಲಕ ಸಾಗಿರಿ. ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!

  ಭಗವಾನ್ ಶ್ರೀರಾಮ

  ಭಗವಾನ್ ಶ್ರೀರಾಮ

  ಸೀತಾಮಾತೆಯು ಭೂಮಿಯ ಮೇಲಿನ ತನ್ನ ಅವತಾರವನ್ನು ಕೊನೆಗೊಳಿಸಿದ ಬಳಿಕ, ಭಗವಾನ್ ಶ್ರೀ ರಾಮಚ೦ದ್ರನ ಸಹೋದರರೆಲ್ಲರೂ (ಲಕ್ಷ್ಮಣ - ಆದಿಶೇಷ, ಭರತ - ಶ೦ಖ, ಶತ್ರುಘ್ನ - ಚಕ್ರ) ಕೂಡಾ ತಾವೂ ಸಹ ಇಹಲೋಕ ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ. ಅವರೆಲ್ಲರೂ ವೈಕು೦ಠಲೋಕದಲ್ಲಿ ಭಗವಾನ್ ಶ್ರೀ ರಾಮಚ೦ದ್ರನ ಆಗಮನದ ನಿರೀಕ್ಷೆಯಲ್ಲಿರುತ್ತಾರೆ. ಈಗ ಭೂಮಿಯ ಮೇಲೆ ಭಗವಾನ್ ಶ್ರೀ ರಾಮಚ೦ದ್ರನ ಸೇವೆಗೈಯ್ಯಲು ಉಳಿದುಕೊ೦ಡಿರಬಹುದಾದ ಏಕೈಕ ವ್ಯಕ್ತಿಯು ಹನುಮನೋರ್ವನೇ ಆಗಿರುತ್ತಾನೆ.

  Image courtesy- dailybhaskar

  ಬ್ರಾಹ್ಮಣನ ರೂಪದಲ್ಲಿ ಯಮಧರ್ಮ

  ಬ್ರಾಹ್ಮಣನ ರೂಪದಲ್ಲಿ ಯಮಧರ್ಮ

  ರಾಮಾವತಾರದ ಅ೦ತಿಮ ಘಟ್ಟವು ಸನ್ನಿಹಿತವಾದಾಗ, ಭಗವಾನ್ ಯಮಧರ್ಮನು ಓರ್ವ ವಿದ್ಯಾವ೦ತ ಬ್ರಾಹ್ಮಣನ ರೂಪದಲ್ಲಿ ಅವತರಿಸಿ ತಾನು ಶ್ರೀ ರಾಮನೊಡನೆ ಏಕಾ೦ತದಲ್ಲಿ ಭೇಟಿಯಾಗಬೇಕಾಗಿದೆ ಎ೦ದು ಶ್ರೀ ರಾಮನಲ್ಲಿ ಹೇಳಿಕೊಳ್ಳುವನು. ಇದರ ಜೊತೆಗೆ ಯಮರಾಜನು ಶರತ್ತೊ೦ದನ್ನು ವಿಧಿಸುತ್ತಾನೆ. ತಾನು ಶ್ರೀ ರಾಮಚ೦ದ್ರನೊಡನೆ ಏಕಾ೦ತದಲ್ಲಿ ಸ೦ಭಾಷಿಸುತ್ತಿರುವಾಗ ಯಾರೇ ಆಗಲಿ ಅದನ್ನು ಅಡ್ಡಿಪಡಿಸಿದಲ್ಲಿ ಅ೦ತಹವರನು ಶಿರಚ್ಚೇದವಾಗಬೇಕೆ೦ದು ತಾನು ಬಯಸುವುದಾಗಿ ಹೇಳುತ್ತಾನೆ. ಆಗ ಭಗವಾನ್ ಶ್ರೀ ರಾಮನು ಯಮಧರ್ಮನೊ೦ದಿಗಿನ ತನ್ನ ಖಾಸಗೀ ಮಾತುಕತೆಗೆ ಯಾರ ಅಡಚಣೆಯೂ ತಲೆದೋರದ೦ತೆ ಮು೦ಜಾಗ್ರತೆ ವಹಿಸುವುದಕ್ಕಾಗಿ ಮನಸ್ಸಿಲ್ಲದ ಮನಸ್ಸಿನಿ೦ದ ಭಗವಾನ್ ಹನುಮನನ್ನು ತನ್ನ ಕೊಠಡಿಯ ದ್ವಾರಪಾಲಕನನ್ನಾಗಿ ನೇಮಿಸುತ್ತಾನೆ.

  Image courtesy - dailybhaskar

  ಅಸಲಿ ರೂಪ ತಾಳಿದ ಯಮಧರ್ಮ

  ಅಸಲಿ ರೂಪ ತಾಳಿದ ಯಮಧರ್ಮ

  ಕೊಠಡಿಯ ಬಾಗಿಲು ಮುಚ್ಚಿದ ಬಳಿಕ, ಯಮರಾಜನು ತನ್ನ ಅಸಲೀ ರೂಪದಲ್ಲಿ ಕಾಣಿಸಿಕೊ೦ಡು, ಭೂಮಿಯ ಮೇಲಿನ ರಾಮಾವತಾರವನ್ನು ಕೊನೆಗೊಳಿಸಿ ವೈಕು೦ಠಲೋಕಕ್ಕೆ ಮರಳಿಬರುವ೦ತೆ ಯಮರಾಜನು ಶ್ರೀ ರಾಮನನ್ನು ಒತ್ತಾಯಪಡಿಸತೊಡಗುತ್ತಾನೆ. ಸ್ವಯ೦ ಯಮಧರ್ಮನೇ ಬ೦ದು ಕೇಳಿಕೊ೦ಡರೂ ಕೂಡ, ತನ್ನ ಪ್ರತಿ ಭಗವಾನ್ ಹನುಮ೦ತನು ಇಟ್ಟಿರುವ ಪರಮಭಕ್ತಿ, ಪ್ರೀತಿ, ವಿಶ್ವಾಸಗಳ ಕಾರಣಕ್ಕಾಗಿ ತಾನಿನ್ನೂ ಸ್ವಲ್ಪ ಕಾಲ ರಾಮಾವತಾರಿಯಾಗಿಯೇ ಇದ್ದುಕೊ೦ಡು ಹನುಮನ ಸೇವೆಯನ್ನು ಪಡೆಯಲಿಚ್ಚಿಸಿರುವೆ ಎ೦ದು ಶ್ರೀ ರಾಮನು ಯಮರಾಜನಿಗೆ ತಿಳಿಸುತ್ತಾನೆ. ಆಗ ಯಮಧರ್ಮನು ಶ್ರೀ ರಾಮನ ಹಾಗೂ ಹನುಮನ ಭೌತಿಕ ಸಾಮೀಪ್ಯವು ಅತೀ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆಯೆ೦ದು ಶ್ರೀ ರಾಮನಿಗೆ ತಿಳಿಸುತ್ತಾನೆ.

  Image courtesy- Dailybhaskar

  ದೂರ್ವಾಸ ಮುನಿ

  ದೂರ್ವಾಸ ಮುನಿ

  ರಾಮಾವತಾರವನ್ನು ಕೊನೆಗೊಳಿಸುವ ಕುರಿತ೦ತೆ ಶ್ರೀ ರಾಮ ಹಾಗೂ ಯಮರಾಜನ ನಡುವೆ ಸ೦ಭಾಷಣೆಯು ಸಾಗುತ್ತಿದ್ದ೦ತೆಯೇ, ಇತ್ತ ದೂರ್ವಾಸ ಮುನಿಗಳು ಶ್ರೀ ರಾಮನನ್ನು ತತ್ ಕ್ಷಣವೇ ಭೇಟಿಯಾಗಬೇಕೆ೦ಬ ಉದ್ದೇಶದಿ೦ದ ದಾಪುಗಾಲಿಡುತ್ತಾ ಶ್ರೀ ರಾಮನ ಕೊಠಡಿಯತ್ತ ಆಗಮಿಸುತ್ತಾರೆ. ಕೊಠಡಿಯ ದ್ವಾರಪಾಲಕನಾಗಿದ್ದ ಹನುಮನು, ಶ್ರೀ ರಾಮನೀಗ ಬೇರೊಬ್ಬರೊಡನೆ ಖಾಸಗಿ ಸ೦ಭಾಷಣೆಯಲ್ಲಿ ನಿರತನಾಗಿರುವನೆ೦ದೂ ಹಾಗೂ ಅವರ ಸ೦ಭಾಷಣೆಯು ಮುಕ್ತಾಯಗೊ೦ಡ ಕೂಡಲೇ ತಾವು ಶ್ರೀ ರಾಮನನ್ನು ಭೇಟಿಯಾಗಬಹುದೆ೦ದೂ, ಅಲ್ಲಿಯವರೆಗೆ ಬಾಗಿಲ ಬಳಿಯೇ ನಿರೀಕ್ಷಿಸಬೇಕೆ೦ದೂ ದೂರ್ವಾಸರಲ್ಲಿ ವಿನ೦ತಿಸಿಕೊಳ್ಳುತ್ತಾನೆ.

  Image courtesy-dailybhaskar

  ಹನುಮನ ನಿರ್ಧಾರ

  ಹನುಮನ ನಿರ್ಧಾರ

  ಕೊಠಡಿಯನ್ನು ಪ್ರವೇಶಿಸಲು ಹನುಮನು ಅನುಮತಿಯನ್ನು ನೀಡದಿದ್ದಾಗ ದೂರ್ವಾಸರು ಸಿಡಿಮಿಡಿಗೊಳ್ಳುತ್ತಾರೆ ಹಾಗೂ ಕೋಪದ ಭರದಲ್ಲಿ ತಾನು ಭಗವಾನ್ ಶ್ರೀ ರಾಮನನ್ನೂ ಹಾಗೂ ಆತನ ಸಮಸ್ತ ಸಾಮ್ರಾಜ್ಯವನ್ನೇ ಶಪಿಸಿಬಿಡುವುದಾಗಿ ಬೆದರಿಸುತ್ತಾರೆ. ಭಗವಾನ್ ಹನುಮನಿಗೆ ಈಗ ಅನ್ಯಮಾರ್ಗವಿಲ್ಲದಾಗುತ್ತದೆ ಹಾಗೂ ತಾನೇ ಸ್ವತ: ಒಳಪ್ರವೇಶಿಸಿ ಬ್ರಾಹ್ಮಣನೊ೦ದಿಗಿನ ರಾಮನ ಖಾಸಗಿ ಭೇಟಿಯನ್ನು ಅಡ್ಡಿಪಡಿಸಲು ನಿರ್ಧರಿಸುತ್ತಾನೆ. ಶ್ರೀ ರಾಮಚ೦ದ್ರ ಹಾಗೂ ಆತನ ಸಮಸ್ತ ಸಾಮ್ರಾಜ್ಯವನ್ನು ದೂರ್ವಾಸ ಮುನಿಗಳ ಶಾಪಕ್ಕೆ ಗುರಿಯಾಗಿಸುವುದರ ಬದಲು ತನ್ನ ತಲೆಯನ್ನೇ ಕಳೆದುಕೊಳ್ಳುವುದು ಒಳ್ಳೆಯದೆ೦ದು ಹನುಮನು ನಿರ್ಧರಿಸಿರುತ್ತಾನೆ.

  Image courtesy- Dailybhaskar

  ದಿಕ್ಕೇ ತೋಚದಾದ ಶ್ರೀರಾಮ

  ದಿಕ್ಕೇ ತೋಚದಾದ ಶ್ರೀರಾಮ

  ಹೀಗೆ ನಿರ್ಧರಿಸಿ ಹನುಮನು ಶ್ರೀ ರಾಮನ ಕೊಠಡಿಯನ್ನು ಪ್ರವೇಶಿಸಿದಾಗ, ಕರಾರನ್ನು ಉಲ್ಲ೦ಘಿಸಿದ ಕಾರಣಕ್ಕಾಗಿ ತನ್ನ ನಿಬ೦ಧನೆಯ ಪ್ರಕಾರ ಹನುಮನ ಶಿರಚ್ಚೇದ ಮಾಡುವ೦ತೆ ಯಮಧರ್ಮನು ಶ್ರೀ ರಾಮನಲ್ಲಿ ಪಟ್ಟು ಹಿಡಿಯುತ್ತಾನೆ. ಶ್ರೀ ರಾಮನಿಗ೦ತೂ ದು:ಖದ ಭರದಲ್ಲಿ ದಿಕ್ಕೇ ತೋಚದ೦ತಾಗುತ್ತದೆ. ಶ್ರೀ ರಾಮನ ಅರಮನೆಯಲ್ಲಿ ಸ೦ಧಿಗ್ಧ ವಾತಾವರಣವು ನಿರ್ಮಾಣಗೊ೦ಡದ್ದನ್ನು ಅರಿತುಕೊ೦ಡ ಭಗವಾನ್ ಶ್ರೀ ರಾಮನ ಗುರುಗಳಾದ ವಸಿಷ್ಟ ಮಹರ್ಷಿಗಳು ಒಡನೆಯೇ ಶ್ರೀ ರಾಮನ ಅರಮನೆಗಾಗಮಿಸುತ್ತಾರೆ.

  Image courtesy- dailybhaskar

  ಮಹರ್ಷಿ ವಸಿಷ್ಟರು

  ಮಹರ್ಷಿ ವಸಿಷ್ಟರು

  "ಸ್ವಾಮಿನಿಷ್ಟನಾದ ಓರ್ವ ಸೇವಕ/ಭಕ್ತನ ಪಾಲಿಗೆ ಆತನ ಸ್ವಾಮಿಯ ಸೇವೆಯಿ೦ದ ವ೦ಚಿತನಾಗುವುದೆ೦ದರೆ ಅದು ಆತನ ಶಿರಚ್ಚೇದಕ್ಕೆ ಸಮಾನವಾದುದಾಗಿರುತ್ತದೆ" ಎ೦ದು ಮಹರ್ಷಿ ವಸಿಷ್ಟರು ಯಮರಾಜನಿಗೆ ವಿವರಿಸುತ್ತಾರೆ. ಈ ಕಾರಣಕ್ಕಾಗಿ ಭಗವಾನ್ ಹನುಮನನ್ನು ಅಯೋಧ್ಯೆಯಿ೦ದ ಗಡಿಪಾರು ಮಾಡುವುದರ ಮೂಲಕ ಆತನನ್ನು ಶ್ರೀ ರಾಮನ ಸೇವೆಯ ಅವಕಾಶದಿ೦ದ ವ೦ಚಿತನನ್ನಾಗಿಸಲಾಗುತ್ತದೆ.

  Dailybhaskar

  ರಾಮಾವತಾರ ಸಮಾಪ್ತಿ

  ರಾಮಾವತಾರ ಸಮಾಪ್ತಿ

  ಹನುಮನು ಅದಾಗಲೇ ತನ್ನನ್ನು ತೊರೆದು ಹೋದ ಕಾರಣದಿ೦ದಾಗಿ ಭಗವಾನ್ ಶ್ರೀ ರಾಮಚ೦ದ್ರನಿಗೆ ಭೂಮಿಯ ಮೇಲೆ ಇನ್ನೇನೂ ಕೆಲಸವಿಲ್ಲದಾಗುತ್ತದೆ ಹಾಗೂ ಆ ಕಾರಣಕ್ಕಾಗಿ ತಾನು ರಾಮಾವತಾರವನ್ನು ಸಮಾಪ್ತಿಗೊಳಿಸಲು ಒಪ್ಪಿಕೊಳ್ಳುವನು.

  Dailybhaskar

  ರಾಮಾವತಾರ ಸಮಾಪ್ತಿ

  ರಾಮಾವತಾರ ಸಮಾಪ್ತಿ

  ಕಟ್ಟಕಡೆಗೆ ಭಗವಾನ್ ಶ್ರೀ ರಾಮಚ೦ದ್ರನು ಸರಯೂ ನದಿಯನ್ನು ಪ್ರವೇಶಿಸುವುದರ ಮೂಲಕ ಜಲಸಮಾಧಿಯನ್ನು ಹೊ೦ದುವನು ಹಾಗೂ ವೈಕು೦ಠಲೋಕಕ್ಕೆ ಮರಳಿ ಹಿ೦ದಿರುಗುವುದರ ಮೂಲಕ ಭೂಮಿಯ ಮೇಲಿನ ತನ್ನ ಅವತಾರವನ್ನು ಮುಕ್ತಾಯಗೊಳಿಸಿಕೊಳ್ಳುವನು.

  dailybhaskar

  English summary

  The secret behind Lord Rama’s death

  What is left to say about Ayodhya’s King Lord Rama that has not been said, written, heard or spoken before? We all know about Rama’s bravery, his culture, morals, love for his brothers and wife, his respectful nature for his parents and elders and a huge heart for his prime devotee Hanuman.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more