For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠ ಧರ್ಮವೇಕೆ?

By Suma
|

ಹಿಂದೂ ಧರ್ಮವು ತನ್ನದೇ ಆದ ವಿಶೇಷತೆಗಳಿಂದ ಪ್ರಪಂಚದಲ್ಲಿ ಅಗ್ರಮಾನ್ಯ ಸ್ಥಾನವನ್ನು ಪಡೆದುಕೊಂಡಿದೆ. ನಾವು ನಡೆಸಿಕೊಂಡು ಬರುತ್ತಿರುವ ಪೂಜಾ ವಿಧಿಗಳು, ಹಬ್ಬಗಳು, ಆಚರಣೆಗಳು, ಸಂಸ್ಕಾರಗಳು ಹೀಗೆ ನಮ್ಮಲ್ಲಿ ವೈವಿಧ್ಯತೆಗಳು ಪ್ರಪಂಚದ ಮೂಲೆಮೂಲೆಗಳಲ್ಲಿ ಪ್ರಸಿದ್ಧತೆಯನ್ನು ಹೆಚ್ಚಿಸಿಕೊಳ್ಳಲು ಕಾರಣವಾಗಿದೆ ಮತ್ತು ನಮ್ಮ ಧರ್ಮಕ್ಕೆ ಬಲವಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ವಿದೇಶಿಗರೂ ನಮ್ಮ ಧರ್ಮವನ್ನು ಮೆಚ್ಚಿ ಗೌರವಿಸಿ ಅದನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಂಕುಮವನ್ನು ಧರಿಸಿಕೊಳ್ಳುವುದು, ಸೀರೆಯನ್ನು ಧರಿಸಿಕೊಳ್ಳುವುದು, ಪೂಜೆ ಪುನಸ್ಕಾರಗಳನ್ನು ಮಾಡುವುದು ಹೀಗೆ ಹಿಂದೂಧರ್ಮವನ್ನು ಅವರೂ ಹಿಂಬಾಲಿಸಿ ಅನುಯಾಯಿಗಳಾಗುತ್ತಿದ್ದಾರೆ.

ಹಿಂದೂ ಧರ್ಮದಲ್ಲಿ ನಡೆಸುವ ಪೂಜಾ ವಿಧಿ ವಿಧಾನಗಳು ತನ್ನದೇ ಆದ ಆಚಾರ ವಿಚಾರಗಳನ್ನು ಒಳಗೊಂಡಿದೆ. ಶ್ರದ್ಧೆ ಏಕಾಗ್ರತೆಯನ್ನು ಪಡೆದುಕೊಂಡಿರುವ ಪೂಜಾ ವಿಧಿ ವಿಧಾನಗಳನ್ನು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬರುತ್ತಿದ್ದೇವೆ. ದೇವರ ಮೂರ್ತಿ ಇಲ್ಲವೇ ದೇವರ ಫೋಟೋವನ್ನಿಟ್ಟುಕೊಂಡು ನಡೆಸುವ ಈ ಪೂಜೆಗಳು ತಮ್ಮದೇ ಆದ ಪ್ರತ್ಯೇಕತೆಯಿಂದ ಧಾರ್ಮಿಕ ನೆಲೆಗಟ್ಟಿನಲ್ಲಿ ನೆಲೆಗೊಂಡಿವೆ. ಪೂಜೆ ನಡೆಸುವಾಗ ಪಠಿಸುವ ಮಂತ್ರಗಳಿರಬಹುದು ಆರಾಧನೆಗಳಿರಬಹುದು, ಹೂವು ಇಲ್ಲವೇ ನೈವೇದ್ಯದ ಅರ್ಪಣೆಯಾಗಿರಬಹುದು ಪ್ರತಿಯೊಂದೂ ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿದೆ. ಇಂದಿನ ಲೇಖನದಲ್ಲಿ ಆ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತಿದ್ದು ಅದು ಏನು ಎಂಬುದನ್ನು ಮುಂದೆ ಓದಿ...

ದೇವರ ವಿಗ್ರಹ ಪೂಜೆ

ದೇವರ ವಿಗ್ರಹ ಪೂಜೆ

ವೇದಗಳ ಪ್ರಕಾರ ವಿಗ್ರಹಾರಾಧನೆ ಎನ್ನುವುದು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವ ಅತ್ಯಂತ ಕೆಳ ಹಂತದ ಅಥವಾ ಮೊದಲನೆ ಮಾರ್ಗವಾಗಿದೆ. ವಿಗ್ರಹವು ದೇವರ ದೈಹಿಕ ಕಾಯವಾಗಿದೆ. ಇದು ಮಾನವರಿಗೆ ದೇವರ ಕುರಿತಾದ ಕಲ್ಪನೆಯನ್ನು ನೀಡಿ, ಭಕ್ತಿಗೆ ಅಗತ್ಯವಾದ ಏಕಾಗ್ರತೆಯನ್ನು ಒದಗಿಸುತ್ತದೆ. ಇಲ್ಲಿ ಭಕ್ತಾಧಿಗಳು ಮೊದಲು ದೇವರ ವಿಗ್ರಹವನ್ನು ನೋಡುತ್ತಾರೆ. ಆಗ ಅವರ ಏಕಾಗ್ರತೆಯು ದೇವರ ಮೇಲೆ ಸ್ಥಿರಗೊಳ್ಳುತ್ತದೆ, ನಂತರ ಅವರ ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಲು ಶುರು ಮಾಡುತ್ತಾರೆ. ಕೊನೆಗೆ ಅವನು ದೈವದ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ.

ಆರತಿಯನ್ನು ಬೆಳಗಿಸುವುದು

ಆರತಿಯನ್ನು ಬೆಳಗಿಸುವುದು

ಹಿ೦ದೂ ಧರ್ಮದಲ್ಲಿ ಆಚರಿಸಲ್ಪಡುವ ಹಲವಾರು ಪೂಜಾ ವಿಧಿ ವಿಧಾನಗಳ ಪೈಕಿ ಆರತಿಯು ಒ೦ದು ಅವಿಭಾಜ್ಯ ಅ೦ಗವಾಗಿದೆ. ಪೂಜೆಗೆ ಸ೦ಬ೦ಧಿಸಿದ ಎಲ್ಲಾ ವಿಧಿಗಳನ್ನು ಪೂರೈಸಿದ ಬಳಿಕ ಸಾಮಾನ್ಯವಾಗಿ ಆರತಿಯನ್ನು ಬೆಳಗಲಾಗುತ್ತದೆ. ಆರತಿಯನ್ನು ಕೈಗೊಳ್ಳುವುದರ ಉದ್ದೇಶವೇನೆ೦ದರೆ, ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಅದ್ದಿರುವ ಬತ್ತಿಗಳನ್ನು ಬೆಳಗಿ ದೇವರ ಮು೦ದೆ ದೀನತೆ ಮತ್ತು ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸುತ್ತಾ ಈ ಸ೦ದರ್ಭದಲ್ಲಿ ಭಗವಧ್ಭಕ್ತರು ದೇವರ ದೈವಿಕ ರೂಪದಲ್ಲಿ ಲೀನವಾಗುವುದಕ್ಕೆ ಒ೦ದು ಮಾರ್ಗೋಪಾಯನ್ನು ಕಲ್ಪಿಸಿಕೊಡುವುದೇ ಆರತಿಯ ಉದ್ದೇಶ.

ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವುದು

ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವುದು

ಒಂದು ಕಾಲದಲ್ಲಿ, ಹಿಂದೂ ಧರ್ಮದಲ್ಲಿ ಪ್ರಾಣಿಬಲಿ ಹಾಗೂ ನರಬಲಿಗಳು ಸರ್ವೇಸಾಮಾನ್ಯವಾಗಿದ್ದವು. ಆದಿಶoಕರಾಚಾರ್ಯರ ರಂಗಪ್ರವೇಶವಾದಾಗ ಅವರು ಪ್ರಾಣಿ ಬಲಿ ಹಾಗೂ ನರ ಬಲಿಗಳoತಹ ಅಮಾನವೀಯ ಆಚರಣೆಗಳನ್ನು ಅಲ್ಲಿಗೇ ತಡೆದು ಅದರ ಬದಲಿಗೆ ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವ ಸತ್ಸಂಪ್ರದಾಯವನ್ನು ಜಾರಿಗೆ ತಂದರು. ತೆಂಗಿನ ಕಾಯಿಯು ಮಾನವನ ತಲೆಯನ್ನು ಅನೇಕವಿಧಗಳಲ್ಲಿ ಹೋಲುತ್ತದೆ.-ಹೊರಭಾಗದಲ್ಲಿರುವ ನಾರನ್ನು ಮಾನವನ ತಲೆಕೂದಲಿಗೂ, ಅದರ ಗಟ್ಟಿಯಾದ ಹೊರಪದರ ಅಥವಾ ಚಿಪ್ಪನ್ನು ಮಾನವನ ತಲೆಬುರುಡೆಗೂ, ಕಾಯಿಯೊಳಗಿರುವ ನೀರನ್ನು ಮಾನ ದೇಹದಲ್ಲಿ ಪ್ರವಹಿಸುತ್ತಿರುವ ರಕ್ತಕ್ಕೂ, ಹಾಗೂ ಒಳಗಿನ ಬಿಳಿಯ ಪದರವನ್ನು ತಲೆಯೊಳಗಿನ ಅವಕಾಶಕ್ಕೂ ಹೋಲಿಕೆ ಮಾಡಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವುದು

ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವುದು

ಅಲ್ಲಿದೆತೆಂಗಿನಕಾಯಿಯನ್ನು ಸಂಸ್ಕೃತದಲ್ಲಿ "ಶ್ರೀಫಲ" ಎಂದು ಕರೆಯುತ್ತಾರೆ. ಶ್ರೀ ಫಲ ಎಂದರೆ ದೇವರ ಫಲ ಎಂದರ್ಥ. ಹಾಗಾಗಿ ತೆಂಗಿನಕಾಯಿ ದೇವರಿಗೆ ಅತ್ಯಾವಶ್ಯಕವಾದ ಹಣ್ಣಾಗಿ ಗುರುತಿಸಲ್ಪಟ್ಟಿದೆ.ತೆಂಗಿನಕಾಯಿಯನ್ನು ಒಡೆಯುವುದು ನಿಮ್ಮ ಅಹಂ ಅನ್ನು ತ್ಯಜಿಸಿ, ದೇವರಲ್ಲಿ ಶರಣಾಗುವುದನ್ನು ತಿಳಿಸುವ ವಿಧಾನ ಇದಾಗಿದೆ. ಅಜ್ಞಾನ ಮತ್ತು ಅಹಂ ಎಂಬ ತೆಂಗಿನಕಾಯಿಯನ್ನು ಒಡೆದರೆ ಅದರಲ್ಲಿರುವ ಬಿಳಿಯ ಭಾಗದಂತೆ ಜ್ಞಾನವು ಸಹ ನಮಗೆ ಕಾಣುತ್ತದೆ ಎಂಬ ತತ್ವ ಇದರಲ್ಲಿ ಅಡಗಿದೆ.

ಪೂರ್ಣ ಕುಂಭ

ಪೂರ್ಣ ಕುಂಭ

ಪೂರ್ಣ ಕುಂಭ ಮಣ್ಣಿನ ಮಡಿಕೆ ಅಥವಾ ಬಿಂದಿಗೆಯನ್ನು "ಪೂರ್ಣ ಕುಂಭ" ಎಂದು ಕರೆಯಲಾಗುತ್ತದೆ. ಇದರಲ್ಲಿ ಪೂರ್ಣ ಪ್ರಮಾಣದ ನೀರು ಇರಬೇಕು, ತಾಜಾ ಮಾವಿನ ಎಲೆಗಳನ್ನು ಇದಕ್ಕೆ ಕಟ್ಟಿರಬೇಕು ಮತ್ತು ಇದರ ಮೇಲೆ ಒಂದು ತೆಂಗಿನಕಾಯಿಯನ್ನು ಇಟ್ಟಿರಬೇಕು. ಇದನ್ನು ಸಾಮಾನ್ಯವಾಗಿ ಮುಖ್ಯ ದೇವರ ಮುಂದೆ ಅಥವಾ ಪೂಜೆ ಮಾಡುವ ಸ್ಥಳದಲ್ಲಿ ಪೂಜೆ ಆರಂಭಿಸುವ ಮೊದಲು ಇರಿಸಿರುತ್ತಾರೆ. ಪೂರ್ಣ ಕುಂಭಎಂದರೆ ತುಂಬಿದ ಮಡಿಕೆ ಎಂದರ್ಥ. ಇಲ್ಲಿ ಆ ಬಿಂದಿಗೆ ಅಥವಾ ಕುಂಭವು ಭೂದೇವಿಯನ್ನು, ನೀರು ಎಂಬುದು ಜೀವ ಜಲವನ್ನು, ಎಲೆಗಳು ಜೀವನವನ್ನು ಮತ್ತು ತೆಂಗಿನಕಾಯಿಯು ದೇವರ ಪ್ರಜ್ಞೆಯನ್ನು ಪ್ರತಿನಿಧಿಸುತ್ತವೆ.

English summary

Symbolism of Puja, the Ritual Worship of God in Hinduism

Puja is worshipping the deities through ritual offerings and prayers which are performed either on a daily basis or on special days in front of the idols of deities. Some dedicated devotees perform puja on a daily basis in their house while others go to temples for the same. The process of puja consists of a series of ritual stages beginning with personal purification, invocation of the Gods, offering flowers, food etc. followed by prayers. Check out the symbolism of the Hindu puja rituals.
X
Desktop Bottom Promotion