For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ ದಿನದ ಮಹತ್ವ ಮತ್ತು ಪ್ರಾಮುಖ್ಯತೆ ಏನು?

By Jayasubramanya
|

ಅಕ್ಷಯ ತೃತೀಯವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಹೆಚ್ಚು ಪವಿತ್ರವಾದುದು ಎಂಬುದಾಗಿ ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯವೆಂಬುದು ಶುಭದ ಸಂಕೇತವಾಗಿದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳು ಎಂಬ ಅರ್ಥವನ್ನು ಅಕ್ಷಯ ತೃತೀಯ ಸಾರಿ ಹೇಳುತ್ತದೆ. ಈ ದಿನದಂದು ನೀವು ಏನು ಮಾಡಿದರೂ ಅದು ನಿಮಗೆ ದೊರೆಯುತ್ತದೆ ಅಂತೆಯೇ ನೀವು ಪಡೆದುಕೊಳ್ಳುವ ಲಾಭ ದುಪ್ಪಟ್ಟಾಗುತ್ತದೆ ಎಂಬ ವಿಶ್ವಾಸವಿದೆ. ಅಕ್ಷಯ ತೃತೀಯ ಹಬ್ಬದ ಮಹತ್ವ, ಹಾಗೂ ಐತಿಹಾಸಿಕ ಹಿನ್ನೆಲೆ

akshaya-tritiya

ಈ ದಿನದಂದು ಜನರು ದಾನ ಧರ್ಮಗಳನ್ನು ಮಾಡುತ್ತಾರೆ. ತಮ್ಮ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ಜನರು ದಾನ ಧರ್ಮಗಳನ್ನು ಮಾಡುತ್ತಾರೆ ಮತ್ತು ಮರಳಿ ಅವರಿಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯನ್ನು ಈ ದಿನವು ಹೊಂದಿದೆ. ಅಂತೆಯೇ ಯಾವುದೇ ಹೊಸ ಕೆಲಸಗಳನ್ನು ನೀವು ಈ ದಿನದಂದು ಆರಂಭಿಸಿದರೆ ನಿಮಗೆ ಅದು ಶುಭವಾಗುತ್ತದೆ ಎಂದಾಗಿದೆ. ವಿವಾಹಗಳಿಗೆ ಈ ದಿನ ಶುಭ ಎಂಬ ನಂಬಿಕೆ ಇದೆ.

akshaya-tritiya

ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೋನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತಾಗಿದೆ. ಅಂತೆಯೇ ದಂಪತಿಗಳು ಆನಂದದಿಂದ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ ಮುಂದಿನ ದಿನಗಳನ್ನು ಕಳೆಯುತ್ತಾರೆ. ಅಕ್ಷಯ ತೃತೀಯ ಕೂಡ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ.

ಹಿಂದೂಗಳಿಗೆ ಈ ದಿನವು ಹೆಚ್ಚು ಪವಿತ್ರವಾದುದಾಗಿದೆ. ಮಹಾವಿಷ್ಣುವಿಗೆ ಸಂಬಂಧಿಸಿದ ದಿನವಾಗಿದ್ದು ಈ ದಿನದಂದು ವಿಷ್ಣುವು ಪರಶುರಾಮನ ಅವತಾರವನ್ನು ತಾಳಿದ್ದರು ಎಂಬುದಾಗಿ ಪುರಾಣಗಳು ತಿಳಿಸುತ್ತವೆ. ಮಹಾವಿಷ್ಣುವಿನ ಆರನೆಯ ಅವತಾರವಾಗಿ ಪರಶುರಾಮ ಜನ್ಮವೆತ್ತಿದ್ದಾರೆ. ಋಷಿ ಜಮದಗ್ನಿ ಮತ್ತು ರೇಣುಕಾರ ಮಗನಾಗಿ ಬ್ರಾಹ್ಮಣ ಕುಟುಂಬದಲ್ಲಿ ವಿಷ್ಣುವು ಅವತಾರವನ್ನು ತಾಳಿದ್ದರು. ಅಕ್ಷಯ ತೃತೀಯದ ಮಹತ್ವ ಮತ್ತು ಪ್ರಾಮುಖ್ಯತೆಗಳು

ಬ್ರಾಹ್ಮನಾಗಿದ್ದರೂ ಭೂಮಿಯ ಮೇಲಿರುವ ಕ್ಷತ್ರಿಯರೆಲ್ಲರನ್ನೂ ವಧಿಸುವ ಪ್ರತಿಜ್ಞೆಯನ್ನು ಆ ಕೈಗೊಂಡಿದ್ದನು. ಬ್ರಾಹ್ಮಣರಾದವರು ರಕ್ತದ ಕೋಡಿಯನ್ನು ಹರಿಸಬಾರದು ಎಂಬ ನಂಬಿಕೆ ಇದ್ದರೂ ಪರಶುರಾಮ ಇದಕ್ಕೆ ತದ್ವಿರುದ್ಧ ಗುಣವನ್ನು ಹೊಂದಿದ್ದನು. ಪರಶುರಾಮನ ಭೂಮಿ ಕೇರಳ ಎಂಬುದಾಗಿ ಹೇಳಲಾಗಿದ್ದು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಪರಶುರಾಮನು ಕೇರಳವನ್ನು ತನ್ನದಾಗಿಸಿಕೊಂಡಿದ್ದನು ಎಂಬ ಮಾತಿದೆ.

Lord Vishnu

ಸ್ವರ್ಗದ ದಾರಿಯಲ್ಲಿ ಹರಿಯುವ ಗಂಗೆಯನ್ನು ಭಗೀರಥನು ಭೂಮಿಗೆ ಬರಮಾಡುವಂತೆ ಮಾಡಿದ್ದು ಈ ಶುಭದಿನದಂದು ಎಂಬ ನಂಬಿಕೆ ಇದೆ. ಈ ದಿನದ ಮಹತ್ವವವನ್ನು ಇದು ಸಾರಲಿದೆ. ಗಂಗಾ ಸ್ನಾನವನ್ನು ಈ ದಿನ ಮಾಡಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತದೆ ಎಂಬ ಮಾತಿದೆ.

ಅನ್ನಪೂರ್ಣೆಯು ಸಮೃದ್ಧತೆಯ ಸಂಕೇತವೆನಿಸಿದ್ದಾರೆ. ಆಕೆಯ ಆಶೀರ್ವಾದದೊಂದಿಗೆ ಯಾವುದೇ ಭಕ್ತರು ಹಸಿವಿನ ದಾಹದಿಂದ ಕಂಗೆಡುವುದಿಲ್ಲ. ಅನ್ನಪೂರ್ಣೆಯು ಪಾರ್ವತಿ ದೇವಿಯ ಅಂಶವಾಗಿದ್ದು ಎಲ್ಲಾ ಆಹಾರಗಳೂ ಆಕೆಯ ಕೃಪೆಯಾಗಿದೆ ಮತ್ತು ಆಕೆಯೇ ಖುದ್ದು ರಚನೆ ಮಾಡಿರುವಂತಹದ್ದಾಗಿದೆ.

Lord Lakshmi

ಅಕ್ಷಯ ತೃತಿಯದಂದು ಈ ದೇವಿ ಜನನವನ್ನು ತಾಳಿದ್ದರು ಎಂಬ ಮಾತಿದೆ. ಆದ್ದರಿಂದಲೇ ಅಕ್ಷಯ ತೃತೀಯದಂದು ದೇವಿಗೆ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ತಮ್ಮ ಅಡುಗೆಮನೆಯಲ್ಲಿ ಎಂದಿಗೂ ಬರಿದಾಗದ ಅಕ್ಷಯ ಪಾತ್ರೆಯನ್ನು ಕರುಣಿಸು ಎಂಬುದಾಗಿ ಭಕ್ತರು ಆಕೆಯನ್ನು ಬೇಡಿಕೊಳ್ಳುತ್ತಾರೆ. ಪರಮ ಪವಿತ್ರವಾದ ಸುದಿನ 'ಅಕ್ಷಯ ತೃತೀಯ' ಹಬ್ಬದ ಹಿನ್ನೆಲೆ ಏನು?

ಭಾರತದ ದಕ್ಷಿಣ ಭಾಗದಲ್ಲಿ ಕುಬೇರನು ಸಂಪತ್ತು ಮತ್ತು ಐಶ್ವರ್ಯಕ್ಕಾಗಿ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸುತ್ತಾರೆ. ತದನಂತರ ಕುಬೇರನು ಆಗರ್ಭ ಶ್ರೀಮಂತನಾಗುತ್ತಾನೆ ಅಂತೆಯೇ ದೇವತೆಗಳಿಗೆ ಸಾಲ ನೀಡುವಷ್ಟು ದೊಡ್ಡವನಾಗುತ್ತಾನೆ. ಅಕ್ಷಯ ತೃತೀಯದಂದು ದಕ್ಷಿಣ ಭಾರತದ ಜನರು ಮೊದಲು ವಿಷ್ಣುವನ್ನು ಪ್ರಾರ್ಥಿಸಿದರೆ ನಂತರ ಲಕ್ಷ್ಮೀಯನ್ನು ನೆನೆಯುತ್ತಾರೆ. ಲಕ್ಷ್ಮೀ ಯಂತ್ರವನ್ನು ಈ ದಿನ ಪೂಜಿಸಲಾಗುತ್ತದೆ. ವಿಷ್ಣು ಮತ್ತು ಲಕ್ಷ್ಮೀಯ ವಿಗ್ರಹಗಳೊಂದಿಗೆ ಕುಬೇರನ ವಿಗ್ರಹವನ್ನು ಪೂಜಿಸಲಾಗುತ್ತದೆ.

ಮಹಾಭಾರತದಲ್ಲಿ ಕೂಡ ಅಕ್ಷಯ ತೃತೀಯ ದಿನದ ವಿಶೇಷತೆಗಳನ್ನು ವ್ಯಾಖ್ಯಾನಿಸಲಾಗಿದೆ. ಅಕ್ಷಯ ತೃತೀಯದಂದೇ ಮಹರ್ಷಿ ವೇದ ವ್ಯಾಸರು ಮಹಾಭಾರತವನ್ನು ಬರೆಯುವುದನ್ನು ಆರಂಭಿಸಿರುವುದು. ಯುಧಿಷ್ಟಿರನಿಗೆ ಅಕ್ಷಯ ಪಾತ್ರೆ ದೊರೆತಿದ್ದು ಈ ದಿನದಂದೇ ಆಗಿದೆ. ಅಕ್ಷಯ ಪಾತ್ರೆಯು ಸುಭೀಕ್ಷವಾಗಿ ಆಹಾರವನ್ನು ನೀಡುವ ಪಾತ್ರವಾಗಿದೆ. ಅದರಲ್ಲಿ ಆಹಾರ ಎಂದಿಗೂ ಬರಿದಾಗುವುದೇ ಇಲ್ಲ.

Lord krishna

ದ್ರೌಪದಿಯು ತನ್ನ ಊಟವನ್ನು ಮುಗಿಸುವವರೆಗೂ ಈ ಪಾತ್ರೆಯು ಅನ್ನವನ್ನು ನೀಡುತ್ತಿತ್ತು ಎಂಬುದು ಪ್ರತೀತಿಯಾಗಿದೆ. ವಸ್ತ್ರಾಪಹರಣದ ಸಂದರ್ಭದಲ್ಲಿ ಕೂಡ ದ್ರೌಪದಿಯು ಆರ್ತಳಾಗಿ ಕೃಷ್ಣನನ್ನು ಬೇಡಿದಾಗ ಆಕೆಯ ಸಹಾಯಕ್ಕೆ ದೇವರು ಆಗಮಿಸುತ್ತಾರೆ ಮತ್ತು ಸೆಳೆದರೂ ಮುಗಿಯದಷ್ಟು ವಸ್ತ್ರವನ್ನು ಆಕೆಗೆ ಪ್ರಸಾದಿಸಿ ಆಕೆಯ ಮಾನವನ್ನು ರಕ್ಷಿಸುತ್ತಾರೆ. ಈ ದಿನ ಕೂಡ ಅಕ್ಷಯ ತೃತೀಯವಾಗಿತ್ತು.

ಕೃಷ್ಣನ ಗೆಳೆಯನಾದ ಸುಧಾಮನ ಕಥೆ ಕೂಡ ಅಕ್ಷಯ ತೃತೀಯಕ್ಕೆ ತಳುಕು ಹಾಕಿಕೊಂಡಿದೆ. ಕೃಷ್ಣನ ಬಾಲ್ಯ ಸಖನಾಗಿದ್ದು ಸುಧಾಮನು ಬಡತನವನ್ನು ಅನುಭವಿಸುತ್ತಿದ್ದರು. ಕೃಷ್ಣನ ಸಹಾಯವನ್ನು ಯಾಚಿಸುವುದಕ್ಕಾಗಿ ಆತ ಅವರ ಅರಮನೆಗೆ ಭೇಟಿಯನ್ನು ನೀಡುತ್ತಾರೆ. ಆದರೆ ಕೃಷ್ಣನನ್ನು ಕಂಡು ಅವರೊಂದಿಗೆ ಮಾತನಾಡಿದರೂ ಸುಧಾಮನು ಮುಜುಗರದಿಂದ ತನ್ನ ಯಾತನೆಯನ್ನು ಕೃಷ್ಣನಲ್ಲಿ ತೋಡಿಕೊಳ್ಳುವುದಿಲ್ಲ. ಆದರೆ ಕೃಷ್ಣನು ಸುಧಾಮನ ಯಾತನೆಯನ್ನು ಅರಿತುಕೊಂಡು ಅವರು ತಮ್ಮ ಮನೆಯನ್ನು ತಲುಪುವ ಮೊದಲೇ ಸಕಲ ಸಂಪತ್ತಿನಿಂದ ಅವರ ಮನೆಯನ್ನು ಸಿಂಗಾರಗೊಳಿಸಿ ಸುಧಾಮನ ಬಡತನವನ್ನು ನೀಗಿಸುತ್ತಾರೆ. ಆ ದಿನ ಅಕ್ಷಯ ತೃತೀಯವಾಗಿತ್ತು.

English summary

stories-associated-with-akshaya-tritiya

The word 'Akshaya' in 'Akshaya Tritiya' means one that never ends or something that does not degenerate with time. Just like the name suggests, Akshaya Tritiya is a day when no matter what you do, you will receive ten-fold benefits from it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more