ಅಕ್ಷಯ ತೃತೀಯ ಹಬ್ಬದ ಮಹತ್ವ, ಹಾಗೂ ಐತಿಹಾಸಿಕ ಹಿನ್ನೆಲೆ

By: manu
Subscribe to Boldsky

ಈ ನಂಬಿಕೆಯನ್ನು ಆಧರಿಸಿ ವಿಶ್ವದಾದ್ಯಂತ ಹಿಂದೂ ಧರ್ಮವನ್ನು ಪಾಲಿಸುವವರು ಸಾಧ್ಯವಾದಷ್ಟು ಚಿನ್ನ, ಬೆಳ್ಳಿ ಮೊದಲಾದ ಅಧಿಕ ಮೌಲ್ಯದ ಲೋಹ ಅಥವಾ ಆಭರಣ, ವಾಹನ ಅಥವಾ ತಮಗೆ ಅಗತ್ಯವೆನಿಸಿದ ಇನ್ನಾವುದೋ ಸ್ಥಿರಾಸ್ತಿಯನ್ನು ಕೊಳ್ಳುತ್ತಾರೆ. ಹೆಚ್ಚಿನವರು ವರ್ಷವಿಡೀ ಕೊಂಚ ಕೊಂಚವಾಗಿ ಈ ದಿನಕ್ಕೆಂದೇ ಹಣವನ್ನು ಒಟ್ಟುಗೂಡಿಸಿ ಅಕ್ಷಯ ತೃತೀಯದಂದೇ ಪ್ರಮುಖವಾಗಿ ಚಿನ್ನವನ್ನೇ ಕೊಳ್ಳುತ್ತಾರೆ. ಈ ದಿನದಂದು ನಗರದ ಎಲ್ಲಾ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ.

ಈ ದಿನದ ವ್ಯಾಪಾರದ ಗರಿಷ್ಟ ಲಾಭವನ್ನು ಪಡೆಯಲು ವ್ಯಾಪಾರಿಗಳೂ ಬಣ್ಣಬಣ್ಣದ ಜಾಹೀರಾತುಗಳನ್ನೂ ವಿವಿಧ ಕೊಡುಗೆಗಳನ್ನೂ ನೀಡಿ ಗ್ರಾಹಕರನ್ನು ಆಕರ್ಷಿಸುತ್ತಾರೆ. ಒಂದು ವಾರದಿಂದ ಇಂತಹ ಭರ್ಜರಿ ಜಾಹೀರಾತು ಮತ್ತು ಅಬ್ಬರದ ಪ್ರಚಾರದ ಬಳಿಕ ಎಲ್ಲರೂ ವರ್ಷವಿಡೀ ಕಾಯುತ್ತಿದ್ದ ಈ ಸುದಿನ 'ಅಕ್ಷಯ ತೃತೀಯ' ಮತ್ತೊಮ್ಮೆ ಬಂದಿದೆ.   ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಹೆಚ್ಚಿನವರಿಗೆ ಈ ದಿನ ಚಿನ್ನ ಕೊಳ್ಳಬೇಕೆಂದು ಗೊತ್ತೇ ಹೊರತು ಏಕಾಗಿ ಈ ದಿನದಂದೇ ಚಿನ್ನವನ್ನು ಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಕೇಳಿದರೂ, ಈ ದಿನ ಚಿನ್ನ ಕೊಂಡರೆ ಒಳ್ಳೆಯದು ಎಂಬ ಉತ್ತರ ನೀಡಿ ತಮ್ಮ ಅಜ್ಞಾನವನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಾರೆ. ಈ ಗುಂಪಿಗೆ ಸೇರದೇ ಇರಲು ನಿಮಗೆ ಬೋಲ್ಡ್ ಸ್ಕೈ ತಂಡ ಕೆಳಗಿನ ಸ್ಲೈಡ್ ಶೋ ಮುಖಾಂತರ ಕೆಲವು ಮಾಹಿತಿಗಳನ್ನು ನೀಡುವ ಮೂಲಕ ಜಾಣರಾಗಿಸುತ್ತಿದೆ, ಮುಂದೆ ಓದಿ...

ಹಿಂದೂ ಧರ್ಮದ ಪ್ರಾರಂಭ

ಹಿಂದೂ ಧರ್ಮದ ಪ್ರಾರಂಭ

ಹಿಂದೂ ಧರ್ಮದ ಪ್ರಾರಂಭದ ಬಗ್ಗೆ ಪುರಣಾಗಳಲ್ಲಿ ವಿವರಿಸಿರುವ ಪ್ರಕಾರ ಈ ದಿನ ವಿನಾಯಕ, ವಿಘ್ನನಿವಾರಕ ಅಥವಾ ಗಣೇಶನು ವೇದವ್ಯಾಸರು ಹೇಳುತ್ತಾ ಹೋದಂತೆ ಮಹಾಭಾರತವನ್ನು ಬರೆಯುತ್ತಾ ಹೋಗುತ್ತಾನೆ. ಈ ದಿನದಂದು ಲೋಕವನ್ನು ಲೋಕರಕ್ಷಕನಾದ ಭಗವಾನ್ ವಿಷ್ಣು ಆಳುತ್ತಿದ್ದ. ಪುರಾಣದ ಪ್ರಕಾರ ತ್ರೇತಾಯುಗದ ಈ ದಿನದಂದು ಭಾರತದ ಪವಿತ್ರ ನದಿಯಾದ ಗಂಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು ಎಂದು ಹೇಳಲಾಗಿದೆ. ಇವೆರಡೂ ಕಾರಣಗಳಿಗಾಗಿ 'ಅಕ್ಷಯ ತೃತೀಯ' ಪವಿತ್ರ ದಿನವಾಗಿದೆ.

ಪರಶುರಾಮನ ಹುಟ್ಟಿದ ದಿನ

ಪರಶುರಾಮನ ಹುಟ್ಟಿದ ದಿನ

'ಅಕ್ಷಯ ತೃತೀಯ'ವನ್ನು "ಆಖಾ ತೀಜ್" ಎಂದು ಕರೆಯಲಾಗುತ್ತದೆ. ಆಖಾ ತೀಜ್ ಎಂದರೆ ಸಾಂಪ್ರಾದಾಯಕವಾಗಿ ವಿಷ್ಣುವಿನ ಆರನೆಯ ಅವತಾರವಾದ ಪರಶುರಾಮನ ಹುಟ್ಟಿದ ದಿನ ಎಂದೂ ಕರೆಯಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಶುರಾಮನ ಹುಟ್ಟಿದ ದಿನ

ಪರಶುರಾಮನ ಹುಟ್ಟಿದ ದಿನ

ಅಲ್ಲದೇ ಇದೇ ದಿನದಂದು ನಾಲ್ಕು ಯುಗಗಳಲ್ಲಿ ಪ್ರಥಮ ಮತ್ತು ಸುವರ್ಣಯುಗ ಎಂದೇ ಕರೆಯಲಾಗುತ್ತಿದ್ದ ಸತ್ಯಯುಗವೂ ಪ್ರಾರಂಭವಾಯಿತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಜೈನರ ಪ್ರಕಾರ ಪ್ರಥಮ ತೀರ್ಥಂಕರ ದಿನವೂ ಹೌದು

ಜೈನರ ಪ್ರಕಾರ ಪ್ರಥಮ ತೀರ್ಥಂಕರ ದಿನವೂ ಹೌದು

'ಅಕ್ಷಯ ತೃತೀಯ' ಹಿಂದೂಗಳಿಗೆ ಮಾತ್ರವಲ್ಲದೇ ಜೈನರಿಗೂ ಪವಿತ್ರ ದಿನವಾಗಿದೆ. ಈ ದಿನದಂದು ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಮೊದಲನೆಯವರಾದ ಋಷಭದೇವರು ಈ ದಿನದಂದು ಜೈನಧರ್ಮವನ್ನು ಪ್ರಾರಂಭಿಸಿದರು ಎಂದು ನಂಬುತ್ತಾರೆ.

ಜಾಟ್ ಕೃಷಿಕರಿಗೂ ಪವಿತ್ರ

ಜಾಟ್ ಕೃಷಿಕರಿಗೂ ಪವಿತ್ರ

ಉತ್ತರ ಭಾರತದಲ್ಲಿ ಕೃಷಿಯನ್ನು ಅವಲಂಬಿಸಿದ ಪಂಗಡಗಳಲ್ಲಿ ಪ್ರಮುಖರಾದ ಜಾಟ್ ಸಮುದಾಯಕ್ಕೂ ಈ ದಿನ ಪವಿತ್ರವಾಗಿದೆ. ಈ ದಿನದ ಮುಂಜಾನೆ ಸಮುದಾಯದ ಪುರುಷರು ಗುದ್ದಲಿಯನ್ನು ತಮ್ಮ ಗದ್ದೆಗಳಿಗೆ ಕೊಂಡೊಯ್ಯುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಾಟ್ ಕೃಷಿಕರಿಗೂ ಪವಿತ್ರ

ಜಾಟ್ ಕೃಷಿಕರಿಗೂ ಪವಿತ್ರ

ದಾರಿಯಲ್ಲಿ ಸಿಕ್ಕ ಹಕ್ಕಿ ಮತ್ತು ಪ್ರಾಣಿಗಳು ಗುದ್ದಲಿಗೆ ಸಿಕ್ಕರೆ ಇವು ಮುಂದಿನ ಬೆಳೆಗೆ ಮತ್ತು ಮಳೆಗೆ ನೆರವಾಗುತ್ತದೆ ಮತ್ತು ಶುಭಶಕುನ ಎಂದು ಇವರು ನಂಬುತ್ತಾರೆ.

ವರ್ಸಿತಾಪವನ್ನು ಕೊನೆಗೊಳಿಸುವ ದಿನ

ವರ್ಸಿತಾಪವನ್ನು ಕೊನೆಗೊಳಿಸುವ ದಿನ

ಪ್ರಥಮ ತೀರ್ಥಂಕರರು ಪ್ರಾರಂಭಿಸಿದ ಪ್ರಕಾರ ಜೈನರು ವರ್ಸಿತಾಪ ಅಥವಾ ಒಂದು ದಿನ ಆಹಾರ ಮತ್ತು ಒಂದು ದಿನ ಉಪವಾಸವಿರುವ ಕ್ರಮವನ್ನು ಅನುಸರಿಸುತ್ತಾರೆ. ಒಂದು ವರ್ಷ ಪೂರ್ತಿ ಅನುಸರಿಸುವ ಈ ಕ್ರಮವನ್ನು ಅಕ್ಷಯ ತೃತೀಯದ ದಿನದಂದೇ ಸಂಪನ್ನಗೊಳಿಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವರ್ಸಿತಾಪವನ್ನು ಕೊನೆಗೊಳಿಸುವ ದಿನ

ವರ್ಸಿತಾಪವನ್ನು ಕೊನೆಗೊಳಿಸುವ ದಿನ

ಈ ದಿನದಂದು ಗುಜರಾತಿನ ಪಾಲಿತಾನಾ ನಗರದಲ್ಲಿರುವ ಶೇತೃಂಜಯ ಪರ್ವತದ ಅಥವಾ ಪುಂಡರೀಕಗಿರಿಯ ನೆರಳಿನಲ್ಲಿ ಕಬ್ಬಿನ ಹಾಲನ್ನು ಸೇವಿಸುವ ಮೂಲಕ ಉಪವಸವನ್ನು ಸಂಪನ್ನಗೊಳಿಸಲಾಗುತ್ತದೆ.

 
English summary

Akshaya Tritiya: 5 historic facts about this auspicious day

While it is known that any meaningful activity started on this day would be fruitful, and buying ornaments has becomes customary, there is little known about the history of this festival. Hindus all over the worlds prepare to lure their money over luxury and gold. Hindus have always been believers in the concept of auspicious timings and days to make purchases.
Please Wait while comments are loading...
Subscribe Newsletter