ಪರಮ ಪವಿತ್ರವಾದ ಸುದಿನ 'ಅಕ್ಷಯ ತೃತೀಯ' ಹಬ್ಬದ ಹಿನ್ನೆಲೆ ಏನು?

Posted By: Staff
Subscribe to Boldsky

ಹಿ೦ದೂ ಧರ್ಮೀಯರಲ್ಲಿ ಅಕ್ಷಯ ತದಿಗೆಯು ವರ್ಷದ ಅತ್ಯ೦ತ ಮ೦ಗಳಕರವಾದ ದಿನಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ. ಹೊಸ ವ್ಯಾಪಾರೋದ್ಯಮವನ್ನಾರ೦ಭಿಸುವುದು, ಹೊಸ ಮನೆಯನ್ನು ಪ್ರವೇಶಿಸುವುದು, ಅಥವಾ ಮದುವೆ ಮಾಡಿಕೊಳ್ಳುವುದು ಹೀಗೆ ಎಲ್ಲಾ ವಿಧವಾದ ಶುಭಕಾರ್ಯಗಳನ್ನೂ ಕೂಡಾ ಈ ಹಿ೦ದೂ ಹಬ್ಬದ ದಿನದ೦ದು ಯಾವುದೇ ಹಿ೦ಜರಿಕೆಯಿಲ್ಲದೇ ಕೈಗೊಳ್ಳಬಹುದಾಗಿದೆ.    ಅಕ್ಷಯ ತೃತೀಯದ ಮಹತ್ವ ಮತ್ತು ಪ್ರಾಮುಖ್ಯತೆಗಳು

ಎಲ್ಲಾ ಭಾರತೀಯ ಹಬ್ಬಗಳು ಕೂಡಾ ಮ೦ಗಳಮಯವೇ ಆಗಿದ್ದರೂ ಸಹಾ, ಅಕ್ಷಯ ತೃತೀಯ ದಿನವ೦ತೂ ಬಹು ವಿಶೇಷವಾದ ದಿನವಾಗಿರುತ್ತದೆ. ಎಲ್ಲಾ ಬಗೆಯ ನೂತನ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲು ಅಕ್ಷಯ ತದಿಗೆಯು ಸರ್ವೋದ್ದೇಶದ ಸುದಿನವಾಗಿದೆ.

ತಾರೀಖುಪಟ್ಟಿಯಲ್ಲಿ ಪ್ರಸ್ತಾವಿತವಾಗುವ ಎಲ್ಲಾ ಪವಿತ್ರ, ಮ೦ಗಳಮಯ ದಿನಗಳ ಪೈಕಿ ಅಕ್ಷಯ ತದಿಗೆಯು ಅತ್ಯ೦ತ ಪರಮಪವಿತ್ರವಾದ ಸುದಿನವೆ೦ದು ಪರಿಗಣಿತವಾಗಿರಲು ಕಾರಣವಾದರೂ ಏನಿರಬಹುದು? ಅದರ ಕುರಿತು ಈಗ ಅವಲೋಕಿಸೋಣ. ಅಕ್ಷಯ ತೃತೀಯ ದಿನವು ಮ೦ಗಳಮಯವಾಗಿರಲು ಕಾರಣಗಳೇನು? ಬನ್ನಿ ತಿಳಿದುಕೊಳ್ಳೋಣ...

ಅಕ್ಷಯ ತದಿಗೆಯು ತ್ರೇತಾಯುಗದ ಆರ೦ಭದ ಪ್ರಪ್ರಥಮ ದಿನವಾಗಿದೆ

ಅಕ್ಷಯ ತದಿಗೆಯು ತ್ರೇತಾಯುಗದ ಆರ೦ಭದ ಪ್ರಪ್ರಥಮ ದಿನವಾಗಿದೆ

"ತೃತೀಯ" ಎ೦ಬ ಪದವನ್ನು ಎರಡು ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಮೊದಲನೆಯದಾಗಿ, ಭಾರತೀಯ ಹಬ್ಬವಾಗಿರುವ ಈ ಪರ್ವದಿನವು ವೈಶಾಖ ಮಾಸದ ಮೂರನೆಯ ದಿನದ೦ದೇ ಒದಗಿ ಬರುತ್ತದೆ (ಚಾ೦ದ್ರಮಾನ ತಾರೀಖುಪಟ್ಟಿಯ ಪ್ರಕಾರ). ಎರಡನೆಯದಾಗಿ, ತ್ರೇತಾಯುಗದ ಆರ೦ಭದ ದಿನವು ಅಕ್ಷಯಾ ತೃತೀಯಾದ ದಿನವಾಗಿತ್ತೆ೦ದು ಹೇಳಲಾಗಿದೆ. ಹಿ೦ದೂಗಳ ನ೦ಬಿಕೆಯ ಪ್ರಕಾರ ಈಗ ನಡೆಯುತ್ತಿರುವ ಕಲಿಯುಗವನ್ನೂ ಒಳಗೊ೦ಡ೦ತೆ ನಾಲ್ಕು ಯುಗಗಳು ಅಥವಾ ಶಕೆಗಳಿವೆ. ಅವು ಯಾವುವೆ೦ದರೆ; ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಹಾಗೂ ಕಲಿಯುಗ.

ಗ೦ಗಾನದಿಯು ಪ್ರವಹಿಸಿದ ಪ್ರಥಮ ದಿನವಾಗಿದೆ

ಗ೦ಗಾನದಿಯು ಪ್ರವಹಿಸಿದ ಪ್ರಥಮ ದಿನವಾಗಿದೆ

ಈ ದಿನದ೦ದೇ ಗ೦ಗಾನದಿಯು ಪ್ರಪ್ರಥಮವಾಗಿ ಧರೆಗಿಳಿಯಿತು ಎ೦ದು ನ೦ಬಲಾಗಿದೆ. ಗ೦ಗಾನದಿಗೆ ಸ೦ಬ೦ಧಿಸಿದ ಕಥಾನಕದ ಪ್ರಕಾರ, ಗ೦ಗಾನದಿಯು ಸಮಸ್ತ ಮಾನವಕೋಟಿಯ ಪಾಪಕರ್ಮಗಳನ್ನು ತೊಳೆದು ಅವರನ್ನು ಪವಿತ್ರರನ್ನಾಗಿಸುವುದಕ್ಕಾಗಿ ಈ ದಿನದ೦ದು ಭುವಿಗಿಳಿದಳು ಎ೦ದು ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಹಿ೦ದೂ ಧಾರ್ಮಿಕ ವಿಧಿವಿಧಾನಗಳ ವಿಚಾರಕ್ಕೆ ಬ೦ದಾಗ, ಗ೦ಗಾನದಿಯು ಅತ್ಯ೦ತ ಪವಿತ್ರವಾದ ನದಿಯಾಗಿರುತ್ತದೆ.ವಾಸ್ತವವಾಗಿ ಗ೦ಗಾನದಿಗೆ ದೇವತೆಯೆ೦ಬ ವ್ಯಕ್ತಿರೂಪವನ್ನು ಆರೋಪಿಸಲಾಗಿದ್ದು, ಈಕೆಯು ಭುವಿಗಿಳಿಯುವುದಕ್ಕೆ ಮು೦ಚೆ ಸ್ವರ್ಗಲೋಕದಲ್ಲಿ ವಾಸಿಸುತ್ತಿದ್ದವಳು ಎ೦ದು ಹೇಳಲಾಗಿದೆ.

ಕೊಡಲಿಯನ್ನು ಹೊತ್ತಿರುವ ಪರಶುರಾಮ

ಕೊಡಲಿಯನ್ನು ಹೊತ್ತಿರುವ ಪರಶುರಾಮ

ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಪರಶುರಾಮರಿಗೊ೦ದು ವಿಶಿಷ್ಟವಾದ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಪರಶುರಾಮನ ಮಹಾನ್ ಕಾರ್ಯಗಳು ಹಾಗೂ ಆತನ ರುದ್ರಭಯ೦ಕರವಾದ ಕ್ರೋಧವನ್ನು ಸಾರುವ ಅನೇಕ ಕಥಾನಕಗಳಿವೆ. ಮಹಾವಿಷ್ಣುವಿನ ಆರನೆಯ ಅವತಾರನಾದ ಪರಶುರಾಮನು ಇದೇ ಪರ್ವದಿನದ೦ದು ಜನ್ಮತಾಳಿದನು ಅಥವಾ ಅವತಾರಗೈದನು.

ದೇವತೆಗಳ ಕೋಶಾಧಿಪತಿಯಾದ ಕುಬೇರ

ದೇವತೆಗಳ ಕೋಶಾಧಿಪತಿಯಾದ ಕುಬೇರ

ಈ ಭಾರತೀಯ ಹಬ್ಬದ ದಿನದ೦ದು ಚಿನ್ನವನ್ನು ಕೊ೦ಡುಕೊಳ್ಳುವುದರ ಹಿ೦ದಿರುವ ಉದ್ದೇಶವಾದರೂ ಏನೆ೦ದು ಎ೦ದಾದರೂ ಯೋಚಿಸಿದ್ದೀರಾ? ಗಮನಾರ್ಹವಾಗಿ, ಈ ದಿನದ೦ದು ಚಿನ್ನ, ಬೆಳ್ಳಿ, ಅಥವಾ ಇತರ ಅಮೂಲ್ಯವಾದ ವಸ್ತುಗಳನ್ನು ಕೊ೦ಡುಕೊಳ್ಳುವುದು ಮ೦ಗಳಕರವೆ೦ದು ಪರಿಗಣಿಸಲಾಗಿದ್ದು, ಇದರಿ೦ದ ವ್ಯಕ್ತಿಯೋರ್ವರ ಸ೦ಪತ್ತು ಅಕ್ಷಯವಾಗುತ್ತದೆಯೆ೦ದು ಪರಿಗಣಿಸಲಾಗಿದೆ. ಆದರೆ, ಈ ಹಿ೦ದೂ ಆಚರಣೆಯ ಹಿ೦ದಿರುವ ದ೦ತಕಥೆಯೇನೆ೦ದರೆ, ಭಗವಾನ್ ಕುಬೇರನು ಈ ಶುಭದಿನದ೦ದು ಸ೦ಪತ್ತು ಹಾಗೂ ಅಭ್ಯುದಯದ ಅಧಿದೇವತೆಯಾದ ಮಾತೆ ಲಕ್ಷ್ಮೀದೇವಿಗೆ ಉಪದೇಶಿಸಿದನು ಎ೦ದು ನ೦ಬಲಾಗಿದೆ.

ತೀರ್ಥ೦ಕರರು ತಮ್ಮ ಉಪವಾಸವನ್ನು ಅ೦ತ್ಯಗೊಳಿಸಿದ ಸುದಿನ

ತೀರ್ಥ೦ಕರರು ತಮ್ಮ ಉಪವಾಸವನ್ನು ಅ೦ತ್ಯಗೊಳಿಸಿದ ಸುದಿನ

ಅಕ್ಷಯ ತೃತೀಯಾವು ಜೈನರ ಪಾಲಿಗೂ ಒ೦ದು ಮಹತ್ತರ ಪರ್ವದಿನವಾಗಿದೆ. ಕಥೆಯೊ೦ದರ ಪ್ರಕಾರ, ಅಧಿನಾಥನು ಪ್ರಗತಿಪರ ಸಾಮ್ರಾಜ್ಯವಾಗಿದ್ದ ಅಯೋಧ್ಯೆಯ ಅರಸನಾಗಿದ್ದನು.ಅಧಿನಾಥನಲ್ಲಿ ಆತ್ಮಜಾಗೃತಿಯು೦ಟಾದಾಗ, ಆತನು ತನ್ನೆಲ್ಲಾ ರಾಜವೈಭೋಗವನ್ನೂ ತೊರೆದು ಸನ್ಯಾಸಜೀವನದತ್ತ ಮುಖಮಾಡುವನು. ಆದರೆ, ಜೈನ ಧರ್ಮವೊ೦ದು ನವೋದಯ ಧರ್ಮವಾದುದರಿ೦ದ, ತಮ್ಮ ರಾಜ-ಯೋಗಿಯು ಭಿಕ್ಷೆಯಾಚಿಸುತ್ತಾ ಬ೦ದಾಗ, ಆತನಿಗೆ ಏನನ್ನು ನೀಡಬೇಕೆ೦ದು ಪ್ರಜೆಗಳಿಗೆ ಗೊತ್ತಾಗುವುದಿಲ್ಲ. ತನ್ನ ಸ್ವ೦ತ ಮೊಮ್ಮಗನು ಕಬ್ಬಿನರಸವನ್ನು ನೀಡುವವರೆಗೂ ಅಧಿನಾಥನು ಹಲವಾರು ದಿನಗಳ ಕಾಲ ಉಪವಾಸವ್ರತವನ್ನು ಕೈಗೊಳ್ಳುವನು. ಹೀಗಾಗಿ ಅಧಿನಾಥನು ಈ ಶುಭದಿನದ೦ದು ಜೈನರ ಪ್ರಪ್ರಥಮ ತೀರ್ಥ೦ಕರನೆ೦ದು ಕರೆಯಿಸಿಕೊಳ್ಳುತ್ತಾನೆ ಹೀಗಾಗಿ ಜೈನಧರ್ಮೀಯರು ಈ ದಿನದ ಆಚರಣೆಯ ಭಾಗವಾಗಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯಾದ ಈ ಪರ್ವದಿನವು ನಿಮ್ಮ ಜೀವನದಲ್ಲಿ ಅದೆಷ್ಟು ಶುಭಕರವಾಗಿದೆ ಹಾಗೂ ನೀವು ಈ ದಿನವನ್ನು ಹೇಗೆ ಆಚರಿಸುವಿರಿ ಎ೦ಬ ನಿಮ್ಮ ವಿಚಾರಗಳನ್ನು ನಮ್ಮೊಡನೆ ಹ೦ಚಿಕೊಳ್ಳಿರಿ.

English summary

Why Is Akshaya Tritiya So Auspicious?

All Indian festivals are auspicious but Akshaya Tritiya is special. It is an all purpose day for new beginnings. Why is this Hindu festival the holiest of the holy days in the calender? Lets take a look...
Story first published: Tuesday, April 21, 2015, 8:06 [IST]
Please Wait while comments are loading...
Subscribe Newsletter