For Quick Alerts
ALLOW NOTIFICATIONS  
For Daily Alerts

ರಾಹು ದೋಷ ನಿವಾರಣೆಗೆ ಆಧ್ಯಾತ್ಮಿಕ ಪರಿಹಾರ

By Viswanath S
|

ಹಿಂದೂ ಪುರಾಣಗಳಲ್ಲಿ ರಾಹು ಮತ್ತು ಕೇತು ಎಂಬ ಎರಡು ಗ್ರಹಗಳ ಉಲ್ಲೇಖವಿದೆ. ರಾಹು ಮತ್ತು ಕೇತುಗಳಿಬ್ಬರೂ ಮೂಲತಃ ಅಸುರರಾಗಿದ್ದು ದೇವತೆಗಳಿಗೆ ಅಮೃತವನ್ನು ಬಡಿಸುತ್ತಿದ್ದಾಗ ಅವರುಗಳ ಮಧ್ಯೆ ಕುಳಿತುಕೊಂಡುಬಿಟ್ಟರು. ಅವರು ಹಾಗೆ ಕುಳಿತು ಅಮೃತವನ್ನು ಅರ್ಧ ಕುಡಿಯುತ್ತಿದ್ದಾಗ ಭಗವಾನ್ ವಿಷ್ಣು ಅವರನ್ನು ಗಮನಿಸಿ ತನ್ನ ಸುದರ್ಶನ ಚಕ್ರದಿಂದ ಅವರ ತಲೆಯನ್ನು ಕತ್ತರಿಸಿಬಿಟ್ಟನು.

ಹೀಗೆ ಅವರು ಅರ್ಧ ಅಮೃತವನ್ನು ಕುಡಿದಿದ್ದರಿಂದಲೇ ಅವರು ಸಾವಿಲ್ಲದೇ ಅಮರರಾಗಿ ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿರುವರು ಎಂದು ನಂಬಲಾಗಿದೆ. ಆದರೆ ರಾಹು ದೋಷವನ್ನು ಪರಿಹರಿಸಲು ಸುಲಭವಾದ ಕ್ರಮವಿದ್ದರೂ ಸಹ ಆ ಕಾರ್ಯಗಳನ್ನು ನಿಯಮಿತವಾಗಿ ಮಾಡುತ್ತಿರಬೇಕು.

ಹಾಗಾಗಿ ನೀವು ರಾಹು ದೋಷವನ್ನು ನಿವಾರಿಸಿಕೊಳ್ಳಲು ಬಯಸಿದರೆ ಅದನ್ನು ಆಧ್ಯಾತ್ಮಿಕ ರೀತಿಯನ್ನು ತೆಗೆದುಕೊಳ್ಳಬೇಕು. ರಾಹು ಶಾಂತಿ ಪೂಜೆ ಮಾಡುವುದು ಒಂದು ರೀತಿಯ ಪರಿಹಾರ ಕ್ರಮ. ರಾಹು ದೋಷ ನಿವಾರಣೆಗೆ ಇತರ ಪರಿಹಾರಕ್ರಮಗಳನ್ನು ಈ ಕೆಳಗೆ ಕೊಟ್ಟಿದ್ದೇವೆ.

ಭಗವಾನ್ ಶಿವನನ್ನು ಪ್ರಾರ್ಥಿಸಬೇಕು

ಭಗವಾನ್ ಶಿವನನ್ನು ಪ್ರಾರ್ಥಿಸಬೇಕು

ಶನಿ, ರಾಹು ಮತ್ತು ಕೇತು - ಈ ಮೂವರಿಗೂ ಭಗವಾನ್ ಶಿವನು ಅಧಿಪತಿ ಮತ್ತು ಗುರು. ಈ ಕಾರಣದಿಂದಲೇ ರಾಹು ದೋಷದಿಂದ ಪರಿಹಾರ ಪಡೆಯಲು ಭಗವಾನ್ ಶಿವನನ್ನು ಹಾಲು, ಗಂಗಾಜಲ ಮತ್ತು ತುಪ್ಪಗಳಿಂದ ಅಭಿಷೇಕ ಮಾಡುತ್ತಾರೆ. ನಿಮಗೆ ರಾಹುದೋಷದಿಂದ ಪರಿಹಾರಬೇಕಿದ್ದರೆ, ಭಗವಾನ್ ಶಿವನನ್ನು ಪ್ರತಿ ದಿನವೂ 21 ಬಾರಿ 'ಓಂ ನಮಃ ಶಿವಾಯ' ಎಂದು ಪ್ರಾರ್ಥಿಸಿ.

ಶನಿವಾರದಂದು ಸಸ್ಯಾಹಾರಿ ಆಹಾರವನ್ನೇ ಸೇವಿಸಿ

ಶನಿವಾರದಂದು ಸಸ್ಯಾಹಾರಿ ಆಹಾರವನ್ನೇ ಸೇವಿಸಿ

ರಾಹು ಮತ್ತು ಕೇತುಗಳೆರಡೂ ಗ್ರಹಗಳಾಗಿರುವುದರಿಂದ ಶನಿವಾರದಂದು ಸಸ್ಯಾಹಾರಿ ಆಹಾರವನ್ನೇ ತಿನ್ನಬೇಕು. ಸಾಮಾನ್ಯವಾಗಿ ಶನಿದೇವರನ್ನು ಶನಿವಾರ ಪೂಜಿಸುವಂತೆ ಅವರಿಬ್ಬರನ್ನೂ ಅಂದೇ ಪೂಜಿಸಬೇಕು. ಆದ್ದರಿಂದ ರಾಹು ದೋಷವಿರುವವರು ಶನಿವಾರದಂದು ಕಟ್ಟುನಿಟ್ಟಾಗಿ ಸಸ್ಯಾಹಾರಿ ಪದಾರ್ಥಗಳನ್ನೇ ತಿನ್ನಲು ಅಗತ್ಯವಾಗಿದೆ.

ರಾಹು ಶಾಂತಿ ಪೂಜೆಯನ್ನು ಮಾಡಿ

ರಾಹು ಶಾಂತಿ ಪೂಜೆಯನ್ನು ಮಾಡಿ

ಕೆಲವು ದೇವಾಲಯಗಳಲ್ಲಿ ರಾಹು ಮತ್ತು ಕೇತು ಶಾಂತಿಯ ವಿಶೇಷ ಪೂಜೆಯನ್ನು ಮಾಡುತ್ತಾರೆ. ನೀವು ಕೂಡ ಈ ಪೂಜೆಯನ್ನು ಮನೆಯಲ್ಲೇ ಮಾಡಬಹುದು. ಈ ಪೂಜೆಯನ್ನು ಮಾಡುವುದರಿಂದ ನೀವು ರಾಹುವನ್ನು ಶಾಂತಿಗೊಳಿಸಿ ನಿಮ್ಮ ಮುಂದಿನ ಜೀವನವು ಸಂತೋಷದಿಂದರಬೇಕೆಂದು ಅವನ ಆಶೀರ್ವಾದವನ್ನು ಪಡೆಯಬಹುದು.

ಶ್ರೀ ಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿ

ಶ್ರೀ ಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿ

ಆಂಧ್ರಪ್ರದೇಶದಲ್ಲಿ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಶ್ರೀ ಕಾಳಹಸ್ತಿದೇವರ ದೇವಾಲಯವಿದೆ. ಈ ದೇವಾಲಯದಲ್ಲಿ ರಾಹು ಮತ್ತು ಕೇತುಗಳಿಂದ ತಮ್ಮ ಜೀವನದಲ್ಲಿ ಸಮಸ್ಯೆಗಳು ಉಂಟಾಗಿದ್ದರೆ ಅಂತಹವರಿಗೆ ಸಮಸ್ಯೆಗಳನ್ನು ಪರಿಹರಿಸಲು ತಕ್ಕ ಸ್ಥಳವಾಗಿದೆ. ಈ ದೇವಾಲಯದಲ್ಲಿ ರಾಹು ಮತ್ತು ಕೇತು ಇಬ್ಬರೂ ನೆಲಸಿರುವರೆಂದು ನಂಬಲಾಗಿದೆ. ಲಕ್ಷಗಟ್ಟಲೆ ಭಕ್ತರು ಪ್ರತಿವರ್ಷವೂ ರಾಹು ಶಾಂತಿ ಪೂಜೆಯನ್ನು ಮಾಡಿ ಇಲ್ಲಿರುವ ಪ್ರಾಚೀನಕಾಲದ ಶಿವಲಿಂಗದ ದರ್ಶನ ಪಡೆಯುತ್ತಾರೆ.

ತೆಂಗಿನಕಾಯಿಯನ್ನು ದಾನ ಕೊಡುವುದು

ತೆಂಗಿನಕಾಯಿಯನ್ನು ದಾನ ಕೊಡುವುದು

ರಾಹುದೋಷ ಪರಿಹಾರಕ್ಕೆ ತೆಂಗಿನಕಾಯಿ, ಗೋಧಿ, ಬಾಳೆಹಣ್ಣು ಮತ್ತು ಇತರ ಆಹಾರ ಪದಾರ್ಥಗಳನ್ನು ಭಕ್ತಾದಿಗಳು ದಾನ ಮಾಡುತ್ತಾರೆ. ಅತ್ಯಂತ ಕಡು ಬಡವರು ತುಂಬು ಹೃದಯದಿಂದ ಸಹಾಯಮಾಡಿದ ಪಕ್ಷದಲ್ಲಿ ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ದಾನವನ್ನು ಪ್ರೀತಿ ಮತ್ತು ದಾನ ಮಾಡುವ ಉದ್ದೇಶದಿಂದ ಮಾತ್ರ ಬಡವರಿಗೆ ಕೊಡುಗೆ ಕೊಡಬೇಕು. ತನ್ನ ವೈಯುಕ್ತಿಕ ಲಾಭಗಳಿಗೆ ಮಾತ್ರ ದಾನಗಳನ್ನು ಮಾಡಬಾರದು.

English summary

Spiritual Remedies For Rahu Dosha

Rahu and Ketu are two shadow plants in Hindu mythology. Rahu and Ketu were basically asuras who came and sat with the devas when they were being served 'amrit' or elixir.
X
Desktop Bottom Promotion