For Quick Alerts
ALLOW NOTIFICATIONS  
For Daily Alerts

ಜಗತ್ತನ್ನೇ ತನ್ನತ್ತ ಸೆಳೆಯುವ ಹಿಂದೂ ಧರ್ಮದ ಸ೦ಪ್ರದಾಯ

|

ನ೦ಬಿಕೆ ಹಾಗೂ ವಿಶ್ವಾಸದ ಕುರಿತು ಮಾತನಾಡುವಾಗ, ಭಾರತ ದೇಶವು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ನಮ್ಮಲ್ಲಿ ಹಲವಾರು ವಿಚಾರಗಳ ಕುರಿತು ಅಸ೦ಖ್ಯಾತ ನ೦ಬಿಕೆ, ವಿಶ್ವಾಸಗಳು ಪ್ರಚಲಿತದಲ್ಲಿದ್ದು, ಪ್ರತಿಯೊ೦ದು ನ೦ಬಿಕೆ, ವಿಶ್ವಾಸವೂ ಕೂಡ ತನ್ನದೇ ಆದ ವೈಶಿಷ್ಟ್ಯಪೂರ್ಣವಾದ ಆಯಾಮವನ್ನು ಹೊ೦ದಿದೆ.

ಈ ಎಲ್ಲಾ ನ೦ಬಿಕೆ, ವಿಶ್ವಾಸಗಳ ಹೊರತಾಗಿಯೂ ಹಿ೦ದೂ ಧರ್ಮವು ಇ೦ದಿಗೂ ಕೂಡ ತನ್ನ ಕುರಿತಾದ ಆಸಕ್ತಿ, ಕುತೂಹಲ, ಹಾಗೂ ಆಕರ್ಷಣೆಗಳನ್ನು ಜಗತ್ತಿನಾದ್ಯ೦ತ ಅಸ೦ಖ್ಯಾತ ಜನರಲ್ಲಿ ಉಳಿಸಿಕೊ೦ಡಿದೆ.

ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ನ೦ಬಿಕೆಗಳಲ್ಲಿ ಒ೦ದು. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.

Some Incredible Facts About Hinduism

ಸಮಾಜದಲ್ಲಿ ಉತ್ತಮ ಮೌಲ್ಯಗಳ ಅರಿವನ್ನು ತುಂಬಲು ಬಹುಶಃ ಇಂದು ಜಗತ್ತಿನಲ್ಲಿ ಕಂಡಿರುವ ವಿವಿಧ ಧರ್ಮಗಳಲ್ಲಿ ಹಿಂದೂ ಧರ್ಮವು ಅತ್ಯಂತ ಪ್ರಭಾವಶಾಲಿ ಧರ್ಮಗಳಲ್ಲೊಂದಾಗಿದೆ. ಬನ್ನಿ ಹಿಂದೂಧರ್ಮದ ಬಗ್ಗೆ ಇರುವ ಕೆಲವು ಕುತೂಹಲಕಾರಿ ಸಂಗತಿಗಳನ್ನು ಪರಿಶೀಲಿಸೋಣ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

ನಮಸ್ತೆ
ಭಾರತೀಯರ ಸಾಂಪ್ರದಾಯಿಕ ಸ್ವಾಗತವು ನಮಸ್ತೆಯಿಂದಲೇ ಶುರುವಾಗುತ್ತದೆ. ಇದು ಗೌರವಪೂರ್ವಕವಾದ ನಿಲುವು ಸಹ ಆಗಿರುತ್ತದೆ. ನಿಮಗೆ ಗೊತ್ತೆ ನಾವು ನಮಸ್ತೆ ಮಾಡುವಾಗ ಎಲ್ಲಾ ಬೆರಳುಗಳನ್ನು ಜೋಡಿಸುತ್ತೇವೆ. ಅವುಗಳನ್ನು ಒಟ್ಟಾಗಿ ಜೋಡಿಸಿ, ಅವುಗಳ ಮೇಲೆ ಒತ್ತಡವನ್ನು ನೀಡುವುದರಿಂದ ನಾವು ನಮಗೆ ಪರಿಚಯವಾದ ವ್ಯಕ್ತಿಯನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಡಲು ಸಹಾಯವಾಗುತ್ತದೆಯಂತೆ.

ಕಾಲುಂಗುರಗಳು
ಮದುವೆಯಾದ ಪ್ರತಿ ಹಿಂದೂ ಹೆಂಗಸು ಕಾಲುಂಗುರವನ್ನು ತೊಡುವುದನ್ನು ನೀವು ನೋಡಿರುತ್ತೀರಿ. ಅದನ್ನು ಸುಮ್ಮನೆ ಅಲಂಕಾರಕ್ಕಾಗಿ ತೊಡುವುದಿಲ್ಲ. ಸಾಮಾನ್ಯವಾಗಿ ಕಾಲುಂಗುರಗಳನ್ನು ಎರಡನೆ ಬೆರಳಿಗೆ ತೊಡಿಸುತ್ತಾರೆ. ಏಕೆಂದರೆ ಎರಡನೆ ಬೆರಳಿನಲ್ಲಿರುವ ನರವು ನೇರವಾಗಿ ಗರ್ಭಾಶಯದ ಮೂಲಕ ಹಾದು ಹೃದಯವನ್ನು ತಲುಪುತ್ತದೆಯಂತೆ. ಈ ಬೆರಳಿಗೆ ಕಾಲುಂಗುರವನ್ನು ತೊಡುವುದರಿಂದ ಸ್ತ್ರೀಯರ ಮಾಸಿಕ ಋತು ಚಕ್ರದಲ್ಲಿ ರಕ್ತವು ಸಲೀಸಾಗಿ ಪ್ರಸಾರಗೊಳ್ಳಲು ಸಹಾಯ ಮಾಡುವುದುರ ಜೊತೆಗೆ ಗರ್ಭಾಶಯವು ಸಹ ಸದೃಢಗೊಳ್ಳುತ್ತದೆಯಂತೆ

ತಿಲಕ
ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಹೆಂಗಸರು ಮತ್ತು ಗಂಡಸರು ಇಬ್ಬರೂ ಹಣೆಗೆ ತಿಲಕಗಳನ್ನು ಇಟ್ಟುಕೊಳ್ಳುತ್ತಾರೆ. ಈ ತಿಲಕಗಳನ್ನು ಇಟ್ಟುಕೊಳ್ಳುವ ಸ್ಥಳದಲ್ಲಿ ಚಕ್ರ ಇರುತ್ತದೆಯಂತೆ. ಇದು ನಮ್ಮ ಶರೀರದಲ್ಲಿರುವ ಚಕ್ರಗಳಲ್ಲಿಯೇ ಅತ್ಯಂತ ಪ್ರಮುಖ ಚಕ್ರವಾಗಿದೆ. ಇದರ ಮೇಲೆ ತಿಲಕವನ್ನು ಇಟ್ಟುಕೊಳ್ಳುವುದರಿಂದ ಈ ಚಕ್ರವು ನಮ್ಮ ಶರೀರದಲ್ಲಿನ ಶಕ್ತಿಯ ಪೋಲಾಗುವಿಕೆಯನ್ನು ತಡೆಯುವುದರ ಜೊತೆಗೆ, ಏಕಾಗ್ರತೆಯನ್ನು ಸಹ ಹೆಚ್ಚಿಸುತ್ತದೆಯಂತೆ.

ಆತ್ಮಗಳು
ಆತ್ಮಗಳು ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆಯನ್ನು ಬಹಳವಾಗಿ ಚರ್ಚೆಮಾಡಲಾಗುತ್ತದೆ. ಹಿಂದೂಧರ್ಮದ ಪ್ರಕಾರ, ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳು ಆತ್ಮವನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಶಕ್ತಿಮಟ್ಟದಲ್ಲಿರುವ ದೇಹಗಳನ್ನು ಉತ್ತಮ ಸಾಮರ್ಥ್ಯವಿರುವ ಆತ್ಮಗಳನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ.

ಮನೆಯ ಅಂಗಳದಲ್ಲಿ ತುಳಸಿ ಗಿಡ
ಪ್ರತಿಯೊಬ್ಬ ಹಿಂದೂಗಳ ಮನೆಯ ಅಂಗಳದಲ್ಲಿ ತುಳಸಿಯನ್ನು ಇಟ್ಟುಕೊಂಡಿರುತ್ತಾರೆ. ಮನೆಯ ಹೊರಗಡೆ ಇಡಲಾಗುವ ಈ ಗಿಡವನ್ನು ದಿನವೂ ಪೂಜಿಸಲಾಗುತ್ತದೆ. ತುಳಸಿಯಲ್ಲಿರುವ ಔಷಧೀಯ ಗುಣಗಳು ಅದಕ್ಕೆ ದೈವತ್ವದ ಸ್ಥಾನವನ್ನು ತಂದುಕೊಟ್ಟಿವೆ. ವೇದ ಕಾಲದ ಋಷಿಗಳು ಈ ಗಿಡವು ಎಲ್ಲಿ ವಿರಳವಾಗುತ್ತದೆಯೋ ಎಂಬ ಭಯದಿಂದ ಅದನ್ನು ನಿತ್ಯ ಪೂಜಿಸುವ ಪರಿಪಾಠವನ್ನು ಜಾರಿಗೊಳಿಸಿದರು. ಹಾಗೆ ಅವರು ಅಂದು ಶುರು ಮಾಡಿದ ಜಾಗೃತಿ ಕಾರ್ಯಕ್ರಮವು ಇಂದು ಧಾರ್ಮಿಕ ಕಾರ್ಯವಾಗಿ ನಡೆದುಕೊಂಡು ಬರುತ್ತಿದೆ.

English summary

Some Incredible Facts About Hinduism

Hinduism has often been questioned, criticised and believed to promote superstitions and blind faith. But this is far from the truth. Hinduism is one of the most scientific religion of the world. The practices and traditions have logical scientific reasons behind them. Each ritual is meant for the well-being and is directed at self improvement of the individual. It is extremely interesting to find out the reason behind each ritual. Take a look.
Story first published: Monday, July 27, 2015, 17:38 [IST]
X
Desktop Bottom Promotion