For Quick Alerts
ALLOW NOTIFICATIONS  
For Daily Alerts

ಮಹಾಭಾರತದಲ್ಲಿ ಕೃಷ್ಣಾರ್ಜುನರ ಸ್ನೇಹ, ಪ್ರೀತಿಗೆ ಬಹುಪರಾಕ್

By Super
|

ಮಹಾಭಾರತದಲ್ಲಿ ಪ್ರೇಮ, ದ್ವೇಶ, ಸ್ನೇಹ, ಕಾಳಜಿ, ಮರುಕ, ಮಮತೆ, ಕ್ರೌರ್ಯ, ದ್ವಂದ್ವ ಮೊದಲಾದ ಎಲ್ಲಾ ಭಾವನೆಗಳಿಗೆ ಪೂರಕವಾದ ಕಥೆಗಳನ್ನು ಕಾಣಬಹುದು. ಆದರೆ ಇಲ್ಲಿ ಪ್ರಮುಖ ಪಾತ್ರಧಾರಿಗಳಾದ ಕೃಷ್ಣ ಮತ್ತು ಅರ್ಜುನರ ನಡುವೆ ಇದ್ದ ಸ್ನೇಹ ಮಾತ್ರ ಅತ್ಯಂತ ವಿಶೇಷವಾಗಿದೆ. ಜೀವನದಲ್ಲಿ ಜೀವಕ್ಕಿಂತ ಪ್ರೀತಿಸುವ ಸ್ನೇಹಿತರಿಗೆ ಕೃಷ್ಣಾರ್ಜುನರ ಸ್ನೇಹವನ್ನು ಮಾದರಿಯಾಗಿ ಪರಿಗಣಿಸಲಾಗುತ್ತದೆ. ಮಹಾಭಾರತದ ರಹಸ್ಯ: ಕೃಷ್ಣ ಏಕೆ ಕರ್ಣನನ್ನು ಕೊಲ್ಲಲು ಬಯಸಿದ್ದ?

ಇಡಿಯ ವಿಶ್ವ ತಮ್ಮನ್ನು ತೊರೆದರೂ ತಾವಿಬ್ಬರೂ ಒಬ್ಬರನ್ನೊಬ್ಬರ ಸ್ನೇಹವನ್ನು ತೊರೆಯಲಾರೆವು ಎಂದು ಇಬ್ಬರಿಗೂ ಗೊತ್ತಿತ್ತು. ಅವರ ಪ್ರೇಮ ಅತ್ಯಂತ ಗಾಢವಾಗಿದ್ದು ಯಾವ ಕಾರಣಕ್ಕೂ ಅಲುಗಾಡುವಂತಿರಲಿಲ್ಲ. ಆದರೆ ಅವರ ಈ ಗಾಢ ಸ್ನೇಹಕ್ಕೆ ಕಾರಣವೇನು ಗೊತ್ತೇ? ಮಹಾಭಾರತದಲ್ಲಿ ಈ ಸ್ನೇಹಕ್ಕೆ ಕಾರಣವಾದ ವಿಷಯಗಳನ್ನು ' ಸ್ನೇಹದ ಐದು ಸ್ತಂಭ' ಗಳ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ

ಪರಸ್ಪರ ಗೌರವ

ಪರಸ್ಪರ ಗೌರವ

ಕೃಷ್ಣಾರ್ಜುನರ ನಡುವಣ ಸ್ನೇಹಕ್ಕೆ ಅವರು ಪರಸ್ಪರರಿಗೆ ನೀಡುತ್ತಿದ್ದ ಗೌರವ ತಳಹದಿಯಾಗಿದೆ. ಕೃಷ್ಣನು ಭಗವಂತನಾಗಿದ್ದರು ಆತನನ್ನು ಪೂಜಿಸುವುದು ಅರ್ಜುನನಿಗೆ ಎರಡನೆಯ ಆದ್ಯತೆಯಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಸ್ಪರ ಗೌರವ

ಪರಸ್ಪರ ಗೌರವ

ಮಹಾಯುದ್ಧದ ಕಾಲದಲ್ಲಿ ಚಿಂತೆಗೀಡಾಗಿದ್ದ ಅರ್ಜುನನನ್ನು ಓರ್ವ ಸ್ನೇಹಿತ ಸಂತೈಸಿದಂತೆ ಕೃಷ್ಣ ನೀಡಿದ 'ಕರ್ಮಣ್ಯೇ ವಾಧಿಕಾರಸ್ತೇ...' ಎಂಬ ವಾಕ್ಯಗಳು ಲೋಕದಲ್ಲಿ ಶಾಶ್ವತವಾಗಿದೆ.

Image courtesy- Dailybhaskar.com

ಜೊತೆಯಲ್ಲಿ ನಡೆಸಿದ ಯುದ್ಧಗಳು

ಜೊತೆಯಲ್ಲಿ ನಡೆಸಿದ ಯುದ್ಧಗಳು

ಮಹಾಭಾರತದಲ್ಲಿ ಬರುವ ಕಥೆಗಳಲ್ಲಿ ಎಷ್ಟೋ ಪ್ರಸಂಗಗಳಲ್ಲಿ ಕೃಷ್ಣಾರ್ಜುನರು ಜೊತೆಯಾಗಿ ನಡೆಸಿದ ಯುದ್ಧಗಳನ್ನು ವಿವರಿಸಲಾಗಿದೆ. ಇದು ಅವರ ಸ್ನೇಹದ ವೈಶಿಷ್ಟ್ಯತೆಯನ್ನು ಬಿಂಬಿಸುತ್ತದೆ.

ಜೊತೆಯಲ್ಲಿ ನಡೆಸಿದ ಯುದ್ಧಗಳು

ಜೊತೆಯಲ್ಲಿ ನಡೆಸಿದ ಯುದ್ಧಗಳು

ಉದಾಹರಣೆಗೆ ಖಾಂಡವವನಕ್ಕೆ ಬೆಂಕಿ ಹಚ್ಚುವ ಕಥೆ, ಸುಭದ್ರೆಯ ಅಪಹರಣ, ಅಂತಿಮ ಮಹಾಯುದ್ಧ ಮತ್ತಿತರ ಪ್ರಸಂಗಗಳಲ್ಲಿ ಇಬ್ಬರೂ ಜೊತೆಯಾಗಿರುವುದಕ್ಕೆ ಅವರ ಸ್ನೇಹವೇ ಕಾರಣ ಎಂದು ಸ್ಪಷ್ಟಪಡಿಸಲಾಗಿದೆ.

Image courtesy- Dailybhaskar.com

ನಡುವೆ ನುಸುಳದ ಅಸೂಯೆ

ನಡುವೆ ನುಸುಳದ ಅಸೂಯೆ

ಕೃಷ್ಣಾರ್ಜುನರಲ್ಲಿ ಭಿನ್ನವಾದ ಅರ್ಹತೆ ಮತ್ತು ಪರಾಕ್ರಮಗಳಿದ್ದರೂ ಎಂದಿಗೂ ಒಬ್ಬರನ್ನೊಬ್ಬರು ಹೊಗಳಿಕೊಳ್ಳದೇ ಅಸೂಯೆಗೆ ಒಳಗಾಗುತ್ತಿರಲಿಲ್ಲ. ಪರಸ್ಪರರ ಸಾಮರ್ಥ್ಯವನ್ನು ಇನ್ನೊಬ್ಬರು ಒರೆಹಚ್ಚಿ ಹೆಚ್ಚಿಸಲು ಪ್ರೇರೇಪಿಸುತ್ತಿದ್ದರೇ ಹೊರತು ಎಂದಿಗೂ ಅವರ ನಡುವೆ ಅಸೂಯೆ ನುಸುಳಲಿಲ್ಲ.

Image courtesy- Dailybhaskar.com

ಅಪ್ಪಟ ಸ್ನೇಹ

ಅಪ್ಪಟ ಸ್ನೇಹ

ಅರ್ಜುನನ ಜೀವನದಲ್ಲಿ ಕೃಷ್ಣನ ಪ್ರವೇಶವಾದ ಬಳಿಕ, ದ್ರೌಪದಿಯ ಸ್ವಯಂವರ, ನಂತರ ಕೃಷ್ಣನ ಸಾವಿನವರೆಗೂ ಈ ಸ್ನೇಹ ಮುಂದುವರೆಯುತ್ತದೆ. ಅಂದರೆ ಅಪ್ಪಟ ಸ್ನೇಹವನ್ನು ಕೇವಲ ಸಾವು ಮಾತ್ರ ಬೇರ್ಪಡಿಸಬಲ್ಲುದು.

Imagecourtesy -Daliybhaskar.com

ಸ್ನೇಹಕ್ಕೆ ತ್ಯಾಗವೂ ಮುಖ್ಯ

ಸ್ನೇಹಕ್ಕೆ ತ್ಯಾಗವೂ ಮುಖ್ಯ

ಈ ಸ್ನೇಹಿತರು ಪರಸ್ಪರರಿಗಾಗಿ ಏನು ಮಾಡಿದ್ದಾರೆ ಎನ್ನುವುದಕ್ಕಿಂತ ಏನು ಮಾಡಿಲ್ಲ ಎಂದು ಕೇಳುವುದೇ ಉತ್ತಮ. ಕರ್ಣನಿಂದ ಅರ್ಜುನನಿಗೆ ಅಪಾಯವಿದೆ ಎಂದು ಅರಿವಾದ ಬಳಿಕ ಕೃಷ್ಣ ಈ ಅಪಾಯಕ್ಕೆ ಕಾರಣವಾದ ಅಮೋಘಾಸ್ತ್ರವನ್ನು ಕರ್ಣನು ಪಾಂಡವರ ಕಡೆಯವನೇ ಆದ ಘಟೋದ್ಘಜನನ್ನು ಕೊಲ್ಲಲು ಬಳಸುವಂತೆ ಮಾಡಿ ಅರ್ಜುನನ್ನು ಕಾಪಾಡುತ್ತಾನೆ. ಅರ್ಜುನನೂ ಯಾದವ ಮಹಿಳೆಯರನ್ನು ಡಕಾಯಿತರು ಅಪಹರಿಸದಂತೆ ರಕ್ಷಣೆ ನೀಡಿ ಕೃಷ್ಣನಿಗೆ ನೆರವಾಗುತ್ತಾನೆ.

Image courtesy- Dailybhaskar.com

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ದ್ರೌಪದಿ ಐವರು ಪಾಂಡವರಿಗೆ ಪತ್ನಿಯಾಗಿದ್ದರೂ ಭೀಮನಲ್ಲಿ ಹೆಚ್ಚಿನ ಅನುರಕ್ತಿಯನ್ನು ಹೊಂದಿದ್ದಳು. ಏಕೆಂದು ತಿಳಿಯಲು ಕೆಳಗಿನ ಸ್ಲೈಡ್ ಶೋ ನೋಡುತ್ತಾ ಸಾಗಿ:

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ಯಾವುದೇ ಹೆಣ್ಣು ತನ್ನ ಪ್ರಿಯಕರನಿಂದ ಅಪ್ಪಟ ಪ್ರೇಮವನ್ನು ಅಪೇಕ್ಷಿಸುತ್ತಾಳೆ. ಪ್ರೇಮವಿಲ್ಲದ ಯಾವುದೇ ಗುಣವನ್ನು ಆಕೆ ಇಚ್ಛಿಸುವುದಿಲ್ಲ. ಹಿರಿಯನಾದ ಯುಧಿಷ್ಟಿರ ಪಗಡೆಯಾಟದಲ್ಲಿ ಸೋತು ದ್ರೌಪದಿಯನ್ನೇ ಪಣಕ್ಕಿಡುವ ಮೂಲಕ ಆಕೆಯ ಪ್ರೇಮವನ್ನು ಕಳೆದುಕೊಂಡರೆ ಅರ್ಜುನ ತನ್ನ ಇತರ ಪತ್ನಿಯರಿಗಾಗಿ ನೀಡುವ ಸಮಯ ಮತ್ತು ಅನುರಕ್ತತೆಯಿಂದ ದ್ರೌಪದಿಯಿಂದ ದೂರಾಗುತ್ತಾನೆ.

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ನಕುಲ ಮತ್ತು ಸಹದೇವರು ದ್ರೌಪದಿಯನ್ನು ಪತ್ನಿಯ ದೃಷ್ಟಿಗಿಂಗಲೂ ಎಚ್ಚರಿಕೆಯ ದೃಷ್ಟಿಯಿಂದಲೇ ನೋಡುತ್ತಿದ್ದುರೂ ಆಕೆಗೆ ಹಿಡಿಸಿರಲಿಲ್ಲ. ಉಳಿದವನೆಂದರೆ ಭೀಮ. ಗಜಗಾತ್ರ, ದಟ್ಟವರ್ಣ ಮತ್ತು ಸುರೂಪಿಯಲ್ಲದಿದ್ದರೂ ದ್ರೌಪದಿಯ ಬಗ್ಗೆ ಆತ ಹೊಂದಿದ್ದ ಕಾಳಜಿಯೇ ಆಕೆಯ ಮನ ಗೆದ್ದಿತ್ತು.

Image courtesy- Dailybhaskar.com

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ಪಗಡೆಯಾಟದಲ್ಲಿ ದ್ರೌಪದಿಯನ್ನು ಸೋತ ಬಳಿಕ ಸೇಡು ತೀರಿಸಿಕೊಳ್ಳಲಾಗಲೀ, ಜಯದ್ರಥನನ್ನು ಕೊಲ್ಲುವ ಮೂಲಕವಾಗಲೀ, ಕೀಚಕನನ್ನು ವಧಿಸುವ ಮೂಲಕವಾಗಲೀ, ಅಷ್ಟೇ ಏಕೆ, ದ್ರೌಪದಿ ಬಯಸಿದ ಕಲ್ಯಾಣಸೌಗಂಧಿಕಾ ಪುಷ್ಪವನ್ನು ಹುಡುಕಲು ಹೊರಟವರಲ್ಲಿ ಮುಂದೆ ಬಂದವನೇ ಭೀಮ. ಅಷ್ಟು ಮಾತ್ರವಲ್ಲದೇ ಆಕೆಯ ಯಾವುದೇ ಕೋರಿಕೆಗಳನ್ನು ಈಡೇರಿಸಲು ಭೀಮನೇ ಪ್ರಮುಖನಾಗಿ ಮುಂದೆ ಬರುತ್ತಿದ್ದ ಕಾರಣ ದ್ರೌಪದಿಯ ಹೃದಯವನ್ನು ಗೆದ್ದಿದ್ದ.

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ಅಪ್ರತಿಮ ಬಿಲ್ಲುಗಾರನಾಗಿದ್ದ ಅರ್ಜುನನ ಅಭಿಮಾನಿಯಾಗಿದ್ದ ದ್ರೌಪದಿ ಅರ್ಜುನ ಸುಭದ್ರೆಯನ್ನು ವಿವಾಹವಾದ ಬಳಿಕ ಆತನಲ್ಲಿದ್ದ ಅಭಿಮಾನವನ್ನೂ ಕಳೆದುಕೊಳ್ಳುವ ಮೂಲಕ ಭೀಮನಲ್ಲಿ ಹೆಚ್ಚು ಅನುರಕ್ತಳಾಗುತ್ತಾಳೆ.

English summary

Reasons behind great friendship between Krishna and Arjun

There are many love, hatred and friendship stories we can find in the great Indian epic Mahabharat. However, the relation Lord Krishna and Pandava Arjun shared was special. This was the relation of true friendship. Both of them knew that the world could betray them, but not one of them. Their bond was deep and unbreakable. . Click on this slide show to know these reasons…
X
Desktop Bottom Promotion