ವರಮಹಾಲಕ್ಷ್ಮಿ ಪೂಜೆ ಮಾಡುವಾಗ ಇದರ ಬಗ್ಗೆ ಗಮನವಿರಲಿ

By: Hemanth
Subscribe to Boldsky

ದಕ್ಷಿಣ ಭಾರತದಲ್ಲಿ ನಾಗರಪಂಚಮಿ ಬಳಿಕ ಬರುವ ಪ್ರಮುಖ ಹಬ್ಬವೆಂದರೆ ಅದು ವರಮಹಾಲಕ್ಷ್ಮಿ ಪೂಜೆ. ಮಹಿಳೆಯರು ಹೆಚ್ಚಾಗಿ ಇದರಲ್ಲಿ ಭಾಗಿಯಾಗುವ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಿದರೆ ಅದರಿಂದ ಸಂಪೂರ್ಣ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ವರಮಹಾಲಕ್ಷ್ಮಿ ಪೂಜೆಯನ್ನು ದೇವಿ ಮಹಾಲಕ್ಷ್ಮೀಯನ್ನು ಒಲೈಸಿಕೊಳ್ಳಲು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ತುಂಬಾ ಶ್ರದ್ಧಾಭಕ್ತಿಯಿಂದ ಆಚರಿಸುವರು.

Varamahalakshmi

ವರಮಹಾಲಕ್ಷ್ಮಿ ಪೂಜೆಯನ್ನು ಮೊದಲ ಸಲ ಮಾಡುವವರಿಗೆ ಇದನ್ನು ಹೇಗೆ ಆಚರಿಸುವುದು ಮತ್ತು ಇದರ ವಿಧಿವಿಧಾನಗಳು ಹೇಗೆ ಎನ್ನುವ ಬಗ್ಗೆ ಗೊಂದಲಗಳು ಇರಬಹುದು. ವರಮಹಾಲಕ್ಷ್ಮಿ ಪೂಜೆಯನ್ನು ಯಾವ ರೀತಿಯಿಂದ ಮಾಡಬೇಕು ಹಾಗೂ ಅದರ ವಿಧಿವಿಧಾನಗಳು ಏನು ಎನ್ನುವ ಬಗ್ಗೆ ಇರುವ ಪ್ರಶ್ನೆ ಹಾಗೂ ಗೊಂದಲಗಳಿಗೆ ಬೋಲ್ಡ್ ಸ್ಕೈ ಉತ್ತರ ನೀಡಲಿದೆ. 

ವರಮಹಾಲಕ್ಷ್ಮಿ ಹಬ್ಬಕ್ಕೆ, ಪೂಜಾ ಕೋಣೆಯ ಸಿದ್ಧತೆ ಹೀಗಿರಲಿ

ವರಮಹಾಲಕ್ಷ್ಮಿ ಪೂಜೆಯನ್ನು ಯಾವಾಗ ಆಚರಿಸಲಾಗುವುದು?

ಶುಕ್ಲ ಪಕ್ಷದ ಮೊದಲ ಶುಕ್ರವಾರ ಅಥವಾ ಶ್ರಾವಣ ಮಾಸದ 15ನೇ ದಿನದಂದು ವರಮಹಾಲಕ್ಷ್ಮಿ ಪೂಜೆ ಆಚರಿಸಲಾಗುವುದು.

Varamahalakshmi pooja

ವರಮಹಾಲಕ್ಷ್ಮಿ ಪೂಜೆಯನ್ನು ಶ್ರಾವಣ ಮಾಸದಲ್ಲಿ ಆಚರಿಸುವುದು ಯಾಕೆ?

ಮಹಾವಿಷ್ಣು ದೇವರು ಶ್ರಾವಣ ನಕ್ಷತ್ರ ಹಾಗೂ ಶ್ರಾವಣ ಮಾಸದಲ್ಲಿ ಹುಟ್ಟಿದ್ದರೆಂದು ಪುರಾಣಗಳಲ್ಲಿದೆ. ಇದರಿಂದ ಈ ತಿಂಗಳನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ವಿಷ್ಣುವಿಗೆ ಈ ತಿಂಗಳು ತುಂಬಾ ಇಷ್ಟವಾಗಿರುವ ಕಾರಣದಿಂದ ಶ್ರಾವಣ ತಿಂಗಳನ್ನು ತುಂಬಾ ಪಾವಿತ್ರ್ಯವೆಂದು ಭಾವಿಸಲಾಗುತ್ತದೆ. ಈ ತಿಂಗಳಲ್ಲಿ ಮಾಡುವ ಎಲ್ಲಾ ರೀತಿಯ ಪೂಜೆ ಹಾಗೂ ಆರಾಧನೆಗಳು ತನ್ನನ್ನು ಬೇಗನೆ ತಲುಪುವುದು ಮತ್ತು ಅದಕ್ಕೆ ಬೇಗನೆ ಯಶಸ್ಸು ಸಿಗುವುದು ಎಂದು ಲಕ್ಷ್ಮೀ ದೇವರು ನಿರ್ಧರಿಸಿದ್ದಾರೆ. ಮಹಾಲಕ್ಷ್ಮಿ ದೇವರಿಗೆ ಮಾಡುವಂತಹ ಪೂಜೆಗೆ ವಿಷ್ಣು ದೇವರು ಆಶೀರ್ವಾದ ನೀಡುವರು.

Varamahalakshmi pooja

ಪೂಜೆ ಮಾಡಲು ಸರಿಯಾದ ಸಮಯ ಯಾವುದು?

ಬೆಳಿಗ್ಗೆ 10-30ರ ಮೊದಲು ಈ ಪೂಜೆಯನ್ನು ಮುಗಿಸಿಬಿಡಬೇಕು. ಯಾಕೆಂದರೆ ಇದರ ಬಳಿಕ ರಾಹುಕಾಲವು ಆರಂಭವಾಗುವುದು. ರಾಹು ಕಾಲವನ್ನು ಅಶುಭವೆಂದು ನಂಬಲಾಗಿದೆ ಮತ್ತು ಇದು ಪೂಜೆ ಮಾಡಲು ಸರಿಯಾದ ಸಮಯವಲ್ಲ. ಶುಕ್ರವಾರದಂದು 10.30ರ ಬಳಿಕ ರಾಹುಕಾಲ ಆರಂಭವಾಗುತ್ತದೆ ಮತ್ತು ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳುತ್ತದೆ. ಇದರಿಂದಾಗಿ ಮಧ್ಯಾಹ್ನದ ಬಳಿಕ ಅಥವಾ ಸಂಜೆ ವೇಳೆ ಪೂಜೆ ಮಾಡಬಹುದು. 

ವರಮಹಾಲಕ್ಷ್ಮಿ ಹಬ್ಬದ ವಿಶೇಷ- ಭಕ್ತೆ ಚಾರುಮತಿಯ ಕಥೆ

ಎಷ್ಟು ಸಮಯ ಉಪವಾಸವಿರಬೇಕು?

ಹಬ್ಬದ ದಿನ ಸೂರ್ಯ ಹುಟ್ಟಿದ ಬಳಿಕ ಉಪವಾಸ ಕೈಗೊಳ್ಳಬೇಕು ಮತ್ತು ಸಂಜೆ ಪೂಜೆ ಕೊನೆಗೊಂಡ ಬಳಿಕ ಉಪವಾಸ ಬಿಡಬೇಕು.

ಗರ್ಭಿಣಿ ಮಹಿಳೆಯರು ಪೂಜೆ ಮಾಡಬಹುದೇ?

ಗರ್ಭಿಣಿ ಮಹಿಳೆಯರು ಪೂಜೆ ಮಾಡಲು ನಿರ್ಧರಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪೂಜೆ ವೇಳೆ ಗರ್ಭಿಣಿ ಮಹಿಳೆಯರು ಉಪವಾಸ ಮಾಡಬಾರದು.

ಮನೆಯಲ್ಲಿ ಮಾಸಿಕ ಮುಟ್ಟಾದವರು ಇದ್ದರೆ ಪೂಜೆ ಮಾಡಬಹುದೇ?

ಮುಟ್ಟಾದ ಮಹಿಳೆಯರು ಪೂಜೆ ಮಾಡಬಾರದು ಎನ್ನುವ ನಿಯಮವಿದೆ. ಮುಟ್ಟಾದವರು ಮನೆಯಲ್ಲಿ ಇದ್ದು, ಮನೆಯಲ್ಲಿ ಬೇರೆ ಯಾರಾದರೂ ಪೂಜೆ ಮಾಡಿದರೆ ಯಾವುದೇ ಸಮಸ್ಯೆಯಿಲ್ಲ. ಮುಟ್ಟಾಗಿರುವವರು ಮನೆಯಲ್ಲಿ ಇರುವ ಕಾರಣದಿಂದಾಗಿ ವರಮಹಾಲಕ್ಷ್ಮಿ ಪೂಜೆ ಮಾಡುವುದು ಬೇಡವೆಂದು ನಿರ್ಧರಿಸಿದ್ದರೆ ಮುಂದಿನ ಶುಕ್ರವಾರ ಈ ಪೂಜೆ ಮಾಡಬಹುದು.

ಪೂಜೆಗೆ ಕಲಶವನ್ನು ಇಡುವುದು ಹೇಗೆ?

ಕಂಚು, ತಾಮ್ರ ಅಥವಾ ಬೆಳ್ಳಿಯಿಂದ ಮಾಡಿದ ಚೊಂಬಿನಲ್ಲಿ ನೀರು ಹಾಕಿರಬೇಕು. ಪೂಜೆಯ ವೇಳೆ ದೇವಿ ಮಹಾಲಕ್ಷ್ಮೀಯನ್ನು ಪ್ರತಿನಿಧಿಸಲು ಈ ಕಲಶವನ್ನು ಇಡಲಾಗುತ್ತದೆ.

ಕಲಶವನ್ನು ಸರಿಯಾಗಿಡಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ

*ಕಲಶವನ್ನು ತೊಳೆದು ಒಣಗಿಸಿ. ಅರಶಿನ ಹಾಗೂ ಕುಂಕುಮದಿಂದ ಕಲಶದ ಸುತ್ತ ಬೊಟ್ಟುಗಳನ್ನು ಹಾಕಿ ಅಲಂಕರಿಸಿ. ಕಲಶದ ಕೆಳಭಾಗದಲ್ಲಿ ಸುಣ್ಣವನ್ನು ಬಳಸಿ. ಇದರ ಬಳಿಕ ಕಲಶವನ್ನು ಅಕ್ಕಿ, ಒಣಹಣ್ಣುಗಳು ಮತ್ತು ನಾಣ್ಯಗಳಿಂದ ತುಂಬಿಡಿ.

* ಕಲಶದ ಮೇಲ್ಭಾಗವನ್ನು ಮಾವಿನ ಎಲೆಗಳಿಂದ ಶೃಂಗರಿಸಿ. ಎಲೆಯ ತುದಿಭಾಗವು ಮೇಲ್ಮುಖವಾಗಿರಬೇಕು ಮತ್ತು ದಂಟು ಕೆಳಭಾಗದಲ್ಲಿ ಇರಬೇಕು. ಕಲಶದ ಬಾಯಿಯಲ್ಲಿ ಒಂದು ತೆಂಗಿನಕಾಯಿಯನ್ನಿಡಿ.

Varamahalakshmi

*ತೆಂಗಿನಕಾಯಿಯನ್ನು ಅರಶಿನ, ಕುಂಕುಮ ಮತ್ತು ಗಂಧದ ಹುಡಿಯಿಂದ ಶೃಂಗಾರ ಮಾಡಿ. ತೆಂಗಿನಕಾಯಿಯ ಮೂರು ಕಣ್ಣುಗಳು ಮೇಲಿನ ಭಾಗಕ್ಕಿರಬೇಕು. ಹೊಸ ಬಟ್ಟೆಯನ್ನು ಕಲಶಕ್ಕೆ ಸುತ್ತಬೇಕು. ಇದು ದೇವಿಯ ಬಟ್ಟೆಯನ್ನು ಪ್ರತಿನಿಧಿಸುವುದು.

* ಹೂ ಹಾಗೂ ಹೂವಿನ ಹಾರಗಳಿಂದ ಕಲಶವನ್ನು ಶೃಂಗರಿಸಬೇಕು. ಗಂಧದ ಪೇಸ್ಟ್ ಮತ್ತು ದಾರವನ್ನು ಬಳಸಿಕೊಂಡು ಕಲಶಕ್ಕೆ ದೇವರ ಮುಖವನ್ನು ಅಂಟಿಸಬಹುದು. ಆಭರಣಗಳಿಂದಲೂ ಕಲಶವನ್ನು ಶೃಂಗರಿಸಬಹುದು.

* ಪೂಜೆ ಮಾಡುವ ಪವಿತ್ರ ಹಾಗೂ ಸ್ವಚ್ಛ ಸ್ಥಳದಲ್ಲಿ ಕಲಶವನ್ನು ಇಟ್ಟುಬಿಡಿ.

ಪೂಜೆ ಪೂರ್ಣಗೊಂಡ ಬಳಿಕ ಕಲಶವನ್ನು ಏನು ಮಾಡಬೇಕು?

ಪೂಜೆ ಪೂರ್ಣಗೊಂಡ ಬಳಿಕ ಕಲಶವನ್ನು ಶ್ರದ್ಧಾಭಕ್ತಿಯಿಂದ ತೆಗೆಯಬೇಕು. ಏನೂ ತೊಂದರೆಯಾಗದಂತೆ ಇದನ್ನು ತೆಗೆದು ಅದರಲ್ಲಿ ಇರುವ ವಸ್ತುಗಳನ್ನು ಮಣ್ಣಿನಲ್ಲಿ ಹೂತು ಹಾಕಬೇಕು ಅಥವಾ ನದಿಯಲ್ಲಿ ಬಿಡಬಹುದು.

English summary

Most Common Doubts About The Varamahalakshmi Pooja

Varamahalakshmi Pooja is one of the most significant poojas that one can do during his/her lifetime. It is an important pooja that is done mostly by the women folk of the Hindu community. The festival of Varamahalakshmi is dedicated to the Goddess Maha Lakshmi and is celebrated mainly in the South Indian states of Tamil Nadu, Karnataka, AndhraPradesh and Telangana.It is possible that you may have a lot of doubts about the correct procedure of the pooja, especially if you are going to perform the pooja for the first time.
Subscribe Newsletter