ಈ ದೇವಾಲಯಗಳಲ್ಲಿ ವಿತರಿಸುವ ಪ್ರಸಾದ ಸಿಕ್ಕಾಪಟ್ಟೆ ಫೇಮಸ್!

By Manu
Subscribe to Boldsky

ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ಒಂದಲ್ಲಾ ಒಂದು ರೀತಿಯ ಪ್ರಸಾದವನ್ನು ನಾವೆಲ್ಲರೂ ಸ್ವೀಕರಿಸುತ್ತಲೇ ಬಂದಿದ್ದೇವೆ. ಚಿಕ್ಕಂದಿನಲ್ಲಿ ಮನೆಯಲ್ಲಿ ಅಮ್ಮ ಅಜ್ಜಿಯರು ದೇವರ ಪೂಜೆಯ ಬಳಿಕ ವಿತರಿಸುವ ಪ್ರಸಾದಕ್ಕಾಗಿ ಸದಾ ಮಕ್ಕಳು ತವಕಿಸುತ್ತಾ ಇರುತ್ತಾರೆ.

ಅದರಲ್ಲೂ ವಿಶೇಷ ದಿನಗಳು, ಹಬ್ಬಗಳ ಸಮಯದಲ್ಲಿ ಪ್ರಸಾದದ ರೂಪದಲ್ಲಿ ನೀಡಲಾಗುವ ವಿಶೇಷ ಸಿಹಿಪದಾರ್ಥ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇಷ್ಟವಾದ ತಿನಿಸಾಗಿದೆ. ಪ್ರಸಾದದ ರೂಪದಲ್ಲಿ ದೊರಕುವ ಹಲ್ವಾ,ಪುರಿ, ಚನಾ ಮೊದಲಾದವೂ ಭಕ್ತಿಯಿಂದ ಪ್ರಸಾದದ ರೂಪದಲ್ಲಿ ಹೊಟ್ಟೆ ಸೇರುತ್ತವೆ. ಶ್ರೀಮಂತ ದೇವಾಲಯಗಳು: ಇಲ್ಲಿ ಧನ ಸಂಪತ್ತು ತುಂಬಿ ತುಳುಕುತ್ತಿದೆ!

ಪ್ರತಿ ಪೂಜೆಯಲ್ಲಿಯೂ ಪ್ರಸಾದಕ್ಕೆ ವಿಶೇಷ ಸ್ಥಾನವಿದೆ. ಅಂದರೆ ಪೂಜೆ ಕೊನೆಗೊಳ್ಳುವವರೆಗೂ ಪ್ರಸಾದವನ್ನು ನೋಡಬಹುದೇ ಹೊರತು ಮುಟ್ಟುವಂತಿಲ್ಲ. ವಾಸ್ತವವಾಗಿ ಪ್ರಸಾದ, ಅಥವಾ ಪ್ರಶಾದ ಅಥವಾ ಪ್ರಸಾದಂ ಎಂದೂ ಕರೆಯಲ್ಪಡುವ ಈ ಸಿಹಿವಸ್ತು ದೇವರಿಗೆ ನೀಡುವ ನೈವೇದ್ಯ. ದೇವರು ಸ್ವತಃ ತಿನ್ನುವುದಿಲ್ಲದ ಕಾರಣ ಭಕ್ತರ ಹೃದಯದಲ್ಲಿ ನೆಲೆಸಿದ್ದು ಅಲ್ಲಿಂದ ಪಡೆಯುತ್ತಾನೆ ಎಂಬುದು ಒಂದು ನಂಬಿಕೆ.

ಪ್ರತಿ ದೇವಾಲಯದಲ್ಲಿಯೂ ತನ್ನದೇ ಆದ ವಿಶಿಷ್ಟ ಪ್ರಸಾದವಿದೆ. ಪ್ರಸಾದ ತಯಾರಿಕೆ ಮತ್ತು ಭಿನ್ನತೆಯಲ್ಲಿ ಕೆಲವು ದೇವಾಲಯದ ಆಡಳಿತ ವರ್ಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಈ ದೇವಾಲಯಕ್ಕೇ ವಿಶಿಷ್ಟವಾದ ಪ್ರಸಾದವನ್ನು ತಯಾರಿಸಿ ಆಗಮಿಸುವ ಭಕ್ತರಿಗೆ ವಿಧಿಸುತ್ತವೆ. ಬನ್ನಿ, ಇಂತಹ ಭಿನ್ನ ಮತ್ತು ವಿಶಿಷ್ಟ ಪ್ರಸಾದಗಳನ್ನು ವಿತರಿಸುವ ಭಾರತದ ದೇವಾಲಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ....

prasadam
 

ಕೇರಳದ ತ್ರಿಶೂರ್‌ನ ಮಳುವಾಂಛೇರಿಯಲ್ಲಿರುವ ಮಹಾದೇವ ದೇವಾಲಯ

ಕೇರಳದ ತ್ರಿಶೂರ್‌ ಎಂದಾಕ್ಷಣ ವಾರ್ಷಿಕ ಪೂರಂ ಉತ್ಸವ ಮತ್ತು ಆನೆಗಳ ಮೆರವಣಿಗೆಯೇ ಪ್ರಮುಖವಾಗಿ ನೆನಪಿಗೆ ಬರುತ್ತದೆ. ಇಲ್ಲಿನ ಪ್ರಮುಖ ಶಿವಾಲಯವಾದ ಮಹಾದೇವ ದೇವಾಲಯದಲ್ಲಿ ವಿತರಿಸುವ ಪ್ರಸಾದ ಎಲ್ಲಕ್ಕಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಪ್ರಸಾದ ಎಂದರೆ ಕೇವಲ ತಿನ್ನುವ ತಿನಿಸನ್ನೇ ನಿರೀಕ್ಷಿಸಿ ಹೋದ ಭಕ್ತರಿಗೆ ಈ ದೇವಾಲಯ ವಿತರಿಸುವ ಪ್ರಸಾದ ಹಿತವಾದ ಅಚ್ಚರಿಯನ್ನು ನೀಡುತ್ತದೆ. 

prasada
 

ಏಕೆಂದರೆ ಈ ಪ್ರಸಾದದಲ್ಲಿ ಸಿಹಿತಿನಿಸಿನೊಂದಿಗೆ ಮಾಹಿತಿಕ ಕೆಲವು ಕರಪತ್ರಗಳು, ದೇವಾಲಯದ ಮಹತ್ವವನ್ನು ಸಾರುವ ಪುಸ್ತಕ, ಡೀವೀಡಿ, ಸೀಡಿ ಮತ್ತು ಇತರ ಲೇಖನಗಳ ಮುದ್ರಿತ ಪ್ರತಿಗಳನ್ನು ಒಳಗೊಂಡಿರುತ್ತದೆ. ಸಿಹಿತಿನಿಸು ತಿಂದ ಕೆಲ ಕ್ಷಣಗಳ ಬಳಿಕ ಇಲ್ಲವಾಗುತ್ತದೆ. ಆದರೆ ಜ್ಞಾನ ಸದಾ ಇರುತ್ತದೆ. ಜ್ಞಾನವನ್ನು ಹಂಚುವುದರಿಂದ ದೇವರಿಗೆ ಹೆಚ್ಚಿನ ಸೇವೆ ಸಲ್ಲಿಸಿದಂತಾಗುತ್ತದೆ ಎಂಬುದು ದೇವಾಲಯದ ಆಡಳಿತವರ್ಗದ ಅಭಿಪ್ರಾಯವಾಗಿದೆ. ಇದರಲ್ಲಿ ಎರಡು ಮಾತಿಲ್ಲ, ಅಲ್ಲವೇ?

ಪಳನಿಯ ದಂಡಾಯುಧಪಾಣಿ ಸ್ವಾಮಿ ದೇವಾಲಯ

ತಮಿಳುನಾಡಿನ ಪಳನಿ ಬೆಟ್ಟಗಳಲ್ಲಿರುವ ಸ್ವಾಮಿ ಮುರುಗನ್ ದೇವರ ಆಸ್ಥಾನದಲ್ಲಿ ನೀಡಲಾಗುವ ಪ್ರಸಾದವೂ ಇನ್ನೊಂದು ವಿಶಿಷ್ಟವಾಗಿದೆ. ಈ ದೇವಾಲಯದಲ್ಲಿ ನೀಡಲಾಗುವ ಪ್ರಸಾದವನ್ನು ಐದು ಬಗೆಯ ಹಣ್ಣುಗಳು, ಬೆಲ್ಲ, ಕಲ್ಲುಸಕ್ಕರೆ ಬಳಸಿ ತಯಾರಿಸಲಾಗಿರುತ್ತದೆ.

ಈ ಐದೂ ಹಣ್ಣುಗಳ ತಿರುಳನ್ನು ಬೆರೆಸಿದ ಬಳಿಕ ಲಭ್ಯವಾಗುವ ರಸ ಅತಿ ಸ್ನಿಗ್ಧವಾಗಿದ್ದು ಪಂಚಾಮೃತವೆಂದು ಕರೆಯಲಾಗುತ್ತದೆ. ಈ ಪಂಚಾಮೃತ ಎಷ್ಟು ಜನಪ್ರಿಯವೆಂದರೆ ಇದನ್ನು ಪಡೆಯಲೆಂದೇ ಬರುವ ಆಗಾಧ ಪ್ರಮಾಣದ ಭಕ್ತವೃಂದಕ್ಕೆ ವಿತರಿಸಲು ಪ್ರಮಾಣ ಸಾಕಾಗದೇ ಈಗ ಸ್ವಯಂಚಾಲಿತ ಯಾಂತ್ರೀಕೃತ ಘಟಕವೊಂದನ್ನು ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಲಾಗಿದೆ.  

madurai temple
 

ಮದುರೈ ಯಲ್ಲಿರುವ ಅಳಘರ್ ಕೋವಿಲ್

ಅಲಗಾರ್ ದೇವಾಲಯ ಎಂದೇ ಪ್ರಖ್ಯಾತವಾಗಿರುವ ಈ ದೇವಸ್ಥಾನ ತಮಿಳುನಾಡಿನ ಮದುರೈ ನಿಂದ ಇಪ್ಪತ್ತೊಂದು ಕಿಮೀ ದೂರದಲ್ಲಿದೆ. ವಿಷ್ಣುದೇವರಿಗೆ ಮುಡಿಪಾದ ಈ ದೇವಾಲಯದಲ್ಲಿಯೂ ವಿಶಿಷ್ಟವಾದ ಪ್ರಸಾದವನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ವೈಶಿಷ್ಟ್ಯದಲ್ಲಿಯೂ ಇನ್ನೊಂದು ವಿಶಿಷ್ಟತೆ ಇದೆ.

dosa

ಅದೆಂದರೆ ಈ ಪ್ರಸಾದವನ್ನು ಭಕ್ತರು ಕಾಣಿಕೆಯಾಗಿ ನೀಡುವ ಅಕ್ಕಿಯಿಂದಲೇ ತಯಾರಿಸಲಾಗುತ್ತದೆ. ಅಂದರೆ ವಿವಿಧ ಭಕ್ತ ನೀಡುವ ಭಿನ್ನವಾದ ಅಕ್ಕಿಯನ್ನೆಲ್ಲಾ ಬೆರೆಸಿ ನೆನೆಸಿ ಕಡೆದು ದೋಸೆ ಹಿಟ್ಟು ತಯಾರಿಸಿ ಬಿಸಿಬಿಸಿ ದೋಸೆ ತಯಾರಿಸಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.

ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಾಲಯ

ಅಸ್ಸಾಂ ರಾಜ್ಯದಲ್ಲಿರುವ ಕಾಮಾಕ್ಯ ದೇವಿ ದೇವಾಲಯ ವಾಸ್ತವವಾಗಿ ಆರು ದೇವಾಲಯಗಳ ಒಟ್ಟು ಸಮೂಹವಾಗಿದೆ. ಪ್ರತಿವರ್ಷ ಆಹಾರ್ ತಿಂಗಳ ಏಳನೆಯ ದಿನ ಅಸ್ಸಾಂ ಸಂಸ್ಕೃತಿಯ ಪ್ರಕಾರ ಆಚರಿಸಲ್ಪಡುವ ಅಂಬುಬಾಚಿ ಮೂರು ದಿನಗಳ ಉತ್ಸವವಾಗಿದೆ. ಕಾಮಾಕ್ಯ ದೇವಾಲಯದ ಬಗ್ಗೆ ನೀವು ಕೇಳರಿಯದ 15 ರಹಸ್ಯಗಳು  

kamamkya temple
 

ಈ ಉತ್ಸವದ ಸಮಯದಲ್ಲಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮೂರೂ ದಿನಗಳಂದು ಕಡ್ಡಾಯವಾಗಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಭಂದಿಸಲಾಗಿದ್ದು ನಾಲ್ಕನೆಯ ದಿನ ತೆರೆಯಲಾಗುತ್ತದೆ. ಆಗ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಪ್ರಸಾದ ಸ್ವೀಕರಿಸಲು ಮುಗಿಬೀಳುತ್ತಾರೆ. ಇಲ್ಲಿ ಪ್ರಸಾದದ ರೂಪದಲ್ಲಿ ಚಿಕ್ಕ ಬಟ್ಟೆಯ ತುಂಡೊಂದನ್ನು ತೇವಗೊಳಿಸಿ ವಿತರಿಸಲಾಗುತ್ತದೆ. ಈ ಬಟ್ಟೆಯಲ್ಲಿ ಕಾಮಾಖ್ಯ ದೇವಿಯ ಕನ್ಯಾರಸದ ಅಂಶವಿದೆ ಎಂದು ಭಕ್ತರು ನಂಬುತ್ತಾರೆ.

ಬಿಕಾನೇರ್‌ನಲ್ಲಿರುವ ಕರಣಿ ಮಾತಾ ಮಂದಿರ್

ಭಾರತವನ್ನು ಅರಿಯಬಯಸುವ ವಿದೇಶೀಯರನ್ನು ಅತಿ ಹೆಚ್ಚು ಆಕರ್ಷಿಸುವ ಮತ್ತು ಕಾಡುವ ಒಂದು ದೇವಾಲಯವೆಂದರೆ ರಾಜಸ್ಥಾನದ ಬಿಕಾನೇರ್ ನಲ್ಲಿರುವ ಕರಣಿ ಮಾತಾ ಮಂದಿರ್. ಏಕೆಂದರೆ ಇಲ್ಲಿ ಭಕ್ತರ ಹೊರತಾಗಿ ಇಲಿಗಳಿಗೂ ಆಹಾರವನ್ನು ವಿತರಿಸಲಾಗುತ್ತದೆ.

ಈ ದೇವಾಲಯದಲ್ಲಿ ಸಹಸ್ರಾರು ಇಲಿಗಳು ನಿರ್ಬಿಢೆಯಿಂದ ಓಡಾಡುತ್ತಾ ದೇವಾಲಯದ ಆಡಳಿತ ವರ್ಗ ಪ್ರತಿದಿನ ಪ್ರಥಮ ಪ್ರಸಾದದ ರೂಪದಲ್ಲಿ ವಿತರಿಸುವ ಸಿಹಿಪದಾರ್ಥ ಮತ್ತು ಹಾಲನ್ನು ಕುಡಿದು ಕೊಬ್ಬಿರುತ್ತವೆ. ಇಲಿಗಳಿಗೆ ಪ್ರಸಾದ ವಿತರಿಸಿದ ಬಳಿಕವೇ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಅಂದರೆ ಈ ಪ್ರಸಾದ ಇಲಿ ತಿಂದು ಬಿಟ್ಟಿದ್ದಾಗಿದ್ದು ಇಲಿಯ ಎಂಜಲು ಶುಭವನ್ನು ತರುತ್ತದೆ ಎಂದು ಭಕ್ತರು ನಂಬುತ್ತಾರೆ.

ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ಮಂದಿರ

ಜೈ ಮಾತಾ ದೀ!. ಈ ಮೂರು ಪದಗಳು ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಂದ ಸತತವಾಗಿ ಕೇಳುಬರುತ್ತಲೇ ಇರುತ್ತವೆ. ಪ್ರತಿವರ್ಷ ದುರ್ಗಮ ಸ್ಥಳದಲ್ಲಿರುವ ಈ ಮಂದಿರವನ್ನು ತಲುಪಲು ಲಕ್ಷಾಂತರ ಜನರು ಕಷ್ಟಪಡುತ್ತಾರೆ. ಈ ದೇವಾಲಯದಲ್ಲಿ ನೀಡುವ ಪ್ರಸಾದ ಮಂಡಕ್ಕಿ, ಸಕ್ಕರೆ ಉಂಡೆ, ಒಣ ಸೇಬು ಮತ್ತು ಕೊಬ್ಬರಿಯ ಚಿಕ್ಕ ಚಿಕ್ಕ ಚೂರುಗಳನ್ನು ಒಳಗೊಂಡಿದ್ದು ಪರಿಸರ ಸ್ನೇಹಿ ಸೆಣಬಿನ ಚಿಕ್ಕ ಚೀಲದಲ್ಲಿ ವಿತರಿಸಲಾಗುತ್ತದೆ.

vaishno devi temple

ಇನ್ನೊಂದು ವಿಶೇಷವೆಂದರೆ ನಮಗೆ ಪ್ರಸಾದವನ್ನು ಮನೆಗೆ ಕಳಿಸಿಕೊಡಿ ಎಂದು ವಿಳಾಸ ನೀಡಿ ಕೇಳಿಕೊಂಡರೆ ಈ ಪ್ರಸಾದ ಅಂಚೆ ಮೂಲಕ ನಿಮ್ಮ ಮನೆಗೆ ಬಂದು ತಲುಪುತ್ತದೆ.

ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯ

ತಿರುಪತಿಯ ಈ ದೇವಾಲಯ ಎಷ್ಟು ಜನಪ್ರಿಯವೋ, ಅಷ್ಟೇ ಇಲ್ಲಿ ನೀಡಲಾಗುವ ಪ್ರಸಾದರೂಪದಲ್ಲಿರುವ ಲಾಡು ಸಹಾ ಜನಪ್ರಿಯ. ತಿರುಪತಿ ಲಡ್ಡೂ ಅಥವಾ ಶ್ರೀವರಿ ಲಡ್ಡೂ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಈ ಲಡ್ಡು ಎರಡು ಗಾತ್ರದಲ್ಲಿ ಲಭ್ಯವಿದೆ. ಒಮ್ಮೆ ಈ ಪ್ರಸಾದದ ರುಚಿ ಕಂಡವರು ಪ್ರಸಾದಕ್ಕಾಗಿಯೇ ಮತ್ತೆ ಮತ್ತೆ ತಿರುಪತಿಗೆ ತೆರಳುವ ಮನಸ್ಸು ಮಾಡುವುದಂತೂ ಖಂಡಿತ. ವೆಂಕಟೇಶ್ವರ ದೇವರ ಮೂರ್ತಿಯ ಕೆಲವೊಂದು ರಹಸ್ಯಗಳು   

tirupathi temple
 

ತಿರುಪತಿಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗುವವರಲ್ಲಿ ಅವರ ಸ್ನೇಹಿತರು ಮತ್ತು ಮನೆಯವರು ತಿರುಪತಿಯ ಬಳಿ ತಮಗಾಗಿಯೂ ಪ್ರಾರ್ಥಿಸು ಎಂದು ಕೇಳಿಕೊಂಡ ಬಳಿಕ 'ಲಾಡು ಮಾತ್ರ ಮರೆಯಬೇಡ' ಎಂಬುದನ್ನೂ ತಪ್ಪದೇ ಸೇರಿಸುತ್ತಾರೆ. ದಿನೇ ದಿನೇ ಹೆಚ್ಚುತ್ತಿರುವ ಈ ಬೇಡಿಕೆಯನ್ನು ಪೂರೈಸಲು ಈಗ ಆಡಳಿತವೃಂದ ಇದಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದೆ. ಅಷ್ಟೇ ಅಲ್ಲ, ಈ ಪ್ರಯತ್ನಕ್ಕೆ ವಿಶ್ವಮಟ್ಟದ ಮಾನ್ಯತೆ ದೊರಕಿದ್ದು ಇದನ್ನು ಬೇರೆ ಯಾರೂ ನಕಲು ಮಾಡದಂತೆ ಕೃತಿ ಸ್ವಾಮ್ಯವನ್ನೂ ಪಡೆಯಲಾಗಿದೆ.

ಪುರಿಯ ಜಗನ್ನಾಥ ದೇವಾಲಯ

ರಥ ಯಾತ್ರೆಯ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಒರಿಸ್ಸಾದ ಜಗನ್ನಾಥ ದೇವಾಲಯ ಭಾರತದ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯವಾಗಿದ್ದು ಈ ದೇವಾಲಯದಲ್ಲಿ ವಿತರಿಸಲಾಗುವ ಮಹಾಪ್ರಸಾದವೂ ವಿಶಿಷ್ಟವಾಗಿದೆ. ಈ ಪ್ರಸಾದದಲ್ಲಿ ಐವತ್ತಾರು ಬಗೆಯ ಬೆಂದ ಮತ್ತು ಬೇಯದೇ ಇರುವ ಆಹಾರವಸ್ತುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ

purijaganath
 

ದೇವಾಲಯದಲ್ಲಿ ವಿತರಿಸಲಾಗುವ ಚಿಕ್ಕ ಪ್ರಮಾಣವನ್ನು ಸವಿದು ತೃಪ್ತರಾಗದ ಭಕ್ತರ ಬೇಡಿಕೆಯನ್ನು ಪೂರೈಸಲು ಪ್ರಸಾದವನ್ನು ಬಳಿಯ ಆನಂದ ಬಾಜಾರ್‌ನಲ್ಲಿರುವ ಮಳಿಗೆಗಳಲ್ಲಿ ನಿಗದಿತ ಬೆಲೆಗೆ ಮಾರಲಾಗುತ್ತದೆ. ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಸಾದವನ್ನು ತಮ್ಮೊಂದಿಗೆ ಕೊಂಡೊಯ್ದು ತಮ್ಮ ಸ್ನೇಹಿತರು ಮತ್ತು ಬಂಧುಬಳಗದವರಿಗೂ ವಿತರಿಸುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    Indian temples that offer unique prasads

    Most temples have their own special prasad, i.e. every deity is known to be offered a particular type of prasad. Some of these temples go an extra mile to ensure that their prasad is the most unique. So let us have a look at the various unique temple prasad’s across India
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more