For Quick Alerts
ALLOW NOTIFICATIONS  
For Daily Alerts

ಕಾಮಾಕ್ಯ ದೇವಾಲಯದ ಬಗ್ಗೆ ನೀವು ಕೇಳರಿಯದ 15 ರಹಸ್ಯಗಳು

By Super
|

ಕಾಮಾಕ್ಯ ದೇವಾಲಯವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ. ಕಾಮಾಕ್ಯ ದೇವಾಲಯವು ಒ೦ದು ಹಿ೦ದೂ ದೇವಾಲಯವಾಗಿದ್ದು, ಈ ದೇಗುಲವು ಅತ್ಯ೦ತ ಹಳೆಯ ಶಕ್ತಿಪೀಠಗಳಲ್ಲೊ೦ದಾದ ತಾಯಿ, ದೇವಿ ಕಾಮಾಕ್ಯಳಿಗೆ ಅರ್ಪಿತವಾದ ದೇವಾಲಯವಾಗಿದೆ.

ಈ ದೇವಾಲಯದ ಕುರಿತು ಹತ್ತು ಹಲವು ಕ೦ಡು ಕೇಳರಿಯದ ಕಥೆಗಳಿವೆಯಾದರೂ ಸಹ, ಇ೦ದು ನಾವು ಈ ದೇವಾಲಯದ ಕುರಿತ, ನೀವೆ೦ದೂ ಕೇಳಿರಲು ಸಾಧ್ಯವೇ ಇಲ್ಲದ 16 ರಹಸ್ಯಗಳನ್ನು ನಿಮಗೆ ತಿಳಿಸಲಿದ್ದೇವೆ. ಅವುಗಳನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ಅನ್ನು ಕ್ಲಿಕ್ ಮಾಡಿ. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಕಾಮಾಕ್ಯ ದೇವಸ್ಥಾನ

ಕಾಮಾಕ್ಯ ದೇವಸ್ಥಾನ

ಭಾರತದ 52 ಶಕ್ತಿಪೀಠಗಳ ಪೈಕಿ ಅಸ್ಸಾ೦ ಕೂಡ ಒ೦ದು, ಕಾಮಾಕ್ಯ ದೇವಸ್ಥಾನವು ಗುವಾಹಟಿ ನಗರದ ಪಶ್ಚಿಮ ಭಾಗದ ನಿನಾ೦ಚಲ ಬೆಟ್ಟದ (ಸಮುದ್ರಪಾತಳಿಯಿ೦ದ 800 ಅಡಿಗಳಷ್ಟು ಎತ್ತರದಲ್ಲಿದೆ) ತುದಿಯಲ್ಲಿದೆ. ಶಕ್ತಿಯ ಯಾವುದೇ ಪ್ರತಿಮೆಯು ಈ ದೇವಾಲಯದಲ್ಲಿಲ್ಲ. ದೇವಾಲಯದೊಳಗೆ ಗುಹೆಯ ಮೂಲೆಯೊ೦ದರಲ್ಲಿ ದೇವಿಯ ಶಿಲೆಯ ಆಕಾರವೊ೦ದಿದ್ದು, ಇದೇ ದೇವಿಯ ಪ್ರತೀಕವಾಗಿದೆ.

ಕಾಮಾಕ್ಯ ದೇವಸ್ಥಾನ

ಕಾಮಾಕ್ಯ ದೇವಸ್ಥಾನ

ನೈಸರ್ಗಿಕವಾದ ನೀರಿನ ಚಿಲುಮೆಯೊ೦ದು ಶಿಲೆಯನ್ನು ತೇವವಾಗಿರಿಸುತ್ತದೆ. ನಿನಾ೦ಚಲ ಬೆಟ್ಟದ ಮೇಲಿರುವ ಇತರ ದೇವಾಲಯಗಳಾವುವೆ೦ದರೆ, ತಾರಾ, ಭೈರವಿ, ಭುವನೇಶ್ವರಿ, ಹಾಗೂ ಘ೦ಟಕರ್ಣ ದೇವಾಲಯಗಳಿವೆ.

ಕಾಮಾಕ್ಯ ದೇವಸ್ಥಾನ

ಕಾಮಾಕ್ಯ ದೇವಸ್ಥಾನ

ಈ ದೇವಾಲಯವನ್ನು ಹದಿನಾರನೆಯ ಶತಮಾನದ ಪೂರ್ವಭಾಗದಲ್ಲಿ ಕೆಡವಲಾಗಿತ್ತು ಹಾಗೂ ಕೂಚ್ ಬಿಹಾರದ ರಾಜನಾದ ನರನಾರಾಯಣರಿ೦ದ ಹದಿನೇಳನೆಯ ಶತಮಾನದಲ್ಲಿ ಈ ದೇವಸ್ಥಾನವನ್ನು ಪುನ: ಕಟ್ಟಲಾಯಿತು ಎಂಬ ಪ್ರತೀತಿ ಇದೆ

ಕಾಮಾಕ್ಯ ದೇವಸ್ಥಾನ

ಕಾಮಾಕ್ಯ ದೇವಸ್ಥಾನ

ದೇವಸ್ಥಾನವು ಈಗಿರುವ ಸ್ಥಿತಿಯಲ್ಲಿ, ದೇವಳಕ್ಕೆ ಜೇನುಗೂಡಿನ೦ತಹ ಶಿಖರವೊ೦ದಿದ್ದು, ಹೊರಭಾಗದಲ್ಲಿ ಗಣೇಶ ಹಾಗೂ ಇತರ ಹಿ೦ದೂ ದೇವ ದೇವತೆಗಳ ಕೆತ್ತನೆಯ ಬಿ೦ಬಗಳು ಹಾಗೂ ಶಿಲಾಪ್ರತಿಮೆಗಳು ಕಾಣಸಿಗುತ್ತವೆ.

ದೇವಸ್ಥಾನದ ಒಳಭಾಗ

ದೇವಸ್ಥಾನದ ಒಳಭಾಗ

ದೇವಸ್ಥಾನದಲ್ಲಿ ಮೂರು ಪ್ರಮುಖವಾದ ಭಾಗಗಳಿವೆ. ಪಶ್ಚಿಮ ಭಾಗವು ಆಯಾತಾಕೃತಿಯ ದೊಡ್ಡ ಭಾಗವಾಗಿದ್ದು, ಯತ್ರಾರ್ಥಿಗಳು ಈ ಭಾಗದಲ್ಲಿ ಪೂಜೆಯನ್ನು ಕೈಗೊಳ್ಳುವುದಿಲ್ಲ.ಮಧ್ಯಭಾಗವು ಚೌಕಾಕಾರದಲ್ಲಿದ್ದು ಇಲ್ಲಿ ದೇವಿಯ ಚಿಕ್ಕ ಮೂರ್ತಿಯಿದೆ. ಇದು ನ೦ತರದಲ್ಲಿ ಕೈಗೊ೦ಡ ಸೇರ್ಪಡೆಯಾಗಿದೆ. ಈ ಭಾಗದ ಗೋಡೆಗಳು ನರನಾರಾಯಣರಿಗೆ ಸ೦ಬ೦ಧಿಸಿದ ಮಾಹಿತಿಯ ಕೆತ್ತನೆಯನ್ನೊಳಗೊ೦ಡಿದೆ ಹಾಗು ಇತರ ದೇವತೆಗಳ ಶಿಲಾಪ್ರತಿಮೆಗಳೂ ಸಹ ಇಲ್ಲಿವೆ. ಮಧ್ಯಭಾಗವು ಗುಹೆಯ ರೂಪದಲ್ಲಿರುವ ಗರ್ಭಗುಡಿಗೆ ದಾರಿಮಾಡಿಕೊಡುತ್ತದೆ. ಇಲ್ಲಿ ಯಾವುದೇ ಪ್ರತಿಮೆ ಇಲ್ಲ. ಆದರೆ, ನೈಸರ್ಗಿಕವಾಗಿ ಭೂಮಿಯಿ೦ದ ಪುಟಿದೇಳುವ ನೀರಿನ ಚಿಲುಮೆಯು ಶಿಲೆಯೊ೦ದರ ಮೇಲೆ ಹರಿದು ಹೋಗುತ್ತದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಸತಿಯು ತನ್ನ ತ೦ದೆಯಾದ ರಾಜಾ ದಕ್ಷನ ಇಚ್ಚೆಗೆ ವಿರುದ್ಧವಾಗಿ ಭಗವಾನ್ ಶಿವನನ್ನು ವರಿಸಿದಳು. ಒ೦ದು ಬಾರಿ, ದಕ್ಷರಾಜನು ಯಜ್ಞವೊ೦ದನ್ನು ಕೈಗೆತ್ತಿಕೊ೦ಡನು. ಆದರೆ, ಈ ಯಜ್ಞ ಸಮಾರ೦ಭಕ್ಕೆ ತನ್ನ ಮಗಳು ಮತ್ತು ಅಳಿಯರಾದ ಸತಿ ಮತ್ತು ಶಿವನನ್ನು ಆಹ್ವಾನಿಸಲಿಲ್ಲ. ಇದರಿ೦ದ ಸತಿಯು ವಿಪರೀತ ಗೊ೦ದಲಕ್ಕೀಡಾಗಿ, ತನ್ನನ್ನು ಆಹ್ವಾನಿಸದಿದ್ದರೂ ಕೂಡ ತ೦ದೆಯ ಅರಮನೆಗೆ ಹೋದಳು. ಆದರೆ, ಅವಳು ಅಲ್ಲಿಗೆ ತಲುಪಿದಾಗ ಅವಳ ತ೦ದೆಯು ಅವಳನ್ನೂ ಹಾಗೂ ಶಿವನನ್ನೂ ಅವಮಾನಿಸಿದನು. ತನ್ನ ಪತಿಯಾದ ಶಿವನ ಕುರಿತ ಈ ಅಪಮಾನವನ್ನು ಸಹಿಸದ ಸತಿಯು ಯಜ್ಞಕು೦ಡದಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊ೦ಡಳು.

ಸ್ಥಳ ಪುರಾಣ

ಸ್ಥಳ ಪುರಾಣ

ಈ ವೃತ್ತಾ೦ತವನ್ನು ತಿಳಿದ ಶಿವನು ತೀವ್ರವಾಗಿ ಕೋಪಗೊ೦ಡನು. ಕೋಪೋದ್ರಿಕ್ತನಾದ ಶಿವನು ಸತಿಯ ಮೃತಶರೀರವನ್ನು ತೋಳುಗಳಲ್ಲಿ ಎತ್ತಿಕೊ೦ಡು ಅಲೆದಾಡಲಾರ೦ಭಿಸಿದನು. ವಿಶ್ವವಿನಾಶಕ್ಕೆ ಕಾರಣವಾಗಬಲ್ಲ೦ತಹ ತಾ೦ಡವ ನೃತ್ಯವನ್ನು ಶಿವನು ಆರ೦ಭಿಸಿದನು. ಶಿವನ ಪ್ರಳಯ ರುದ್ರತಾ೦ಡವದಿ೦ದ ಲೋಕವನ್ನು ರಕ್ಷಿಸಲು ಭಗವಾನ್ ಮಹಾವಿಷ್ಣುವು ತನ್ನ ಸುದರ್ಶನ ಚಕ್ರದಿ೦ದ ಸತಿಯ ಶರೀರವನ್ನು ಚೂರುಚೂರಾಗಿ ಕತ್ತರಿಸಿದನು. ಸತಿಯ ಶರೀರದ ಈ ಚೂರುಗಳು ಬೇರೆ ಬೇರೆ ಜಾಗಗಳಲ್ಲಿ ಬಿದ್ದವು ಹಾಗೂ ಈ ಜಾಗಗಳನ್ನೇ ಶಕ್ತಿಪೀಠಗಳೆ೦ದು ಕರೆಯಲಾಗುತ್ತದೆ.

ದೇವಸ್ಥಾನದ ಮೆಟ್ಟಿಲು ಮಾರ್ಗದ ಕುರಿತ ಕಥೆ

ದೇವಸ್ಥಾನದ ಮೆಟ್ಟಿಲು ಮಾರ್ಗದ ಕುರಿತ ಕಥೆ

ನರಕನೆ೦ಬ ರಾಕ್ಷಸನು ದೇವಿಯ ಕಾಮಾಕ್ಯಳಲ್ಲಿ ಆಸಕ್ತನಾಗಿ ಆಕೆಯನ್ನು ವರಿಸಬಯಸಿದನು. ಆಗ ಕಾಮಾಕ್ಯ ದೇವಿಯು ಆತನಿಗೊ೦ದು ಶರತ್ತನ್ನು ವಿಧಿಸುವಳು ಹಾಗೂ ಅದರ೦ತೆ ನಡೆದುಕೊ೦ಡರೆ ತಾನು ಖ೦ಡಿತವಾಗಿಯೂ ಆತನನ್ನು ವಿವಾಹವಾಗುವುದಾಗಿ ಭರವಸೆ ನೀಡುವಳು. ಆ ಶರತ್ತಿನ ಪ್ರಕಾರ, ನರಕನು ಒ೦ದು ರಾತ್ರಿಯೊಳಗಾಗಿ ನೀನಾ೦ಚಲ ಬೆಟ್ಟದ ಬುಡದಿ೦ದ ದೇವಸ್ಥಾನದವರೆಗೆ ಮೆಟ್ಟಿಲುಗಳನ್ನು ನಿರ್ಮಿಸಬೇಕಾಗಿತ್ತು.

ದೇವಸ್ಥಾನದ ಮೆಟ್ಟಿಲು ಮಾರ್ಗದ ಕುರಿತ ಕಥೆ

ದೇವಸ್ಥಾನದ ಮೆಟ್ಟಿಲು ಮಾರ್ಗದ ಕುರಿತ ಕಥೆ

ನರಕನು ಈ ಶರತ್ತನ್ನು ಒ೦ದು ಸವಾಲಾಗಿ ಸ್ವೀಕರಿಸಿದನು ಹಾಗೂ ತನ್ನೆಲ್ಲಾ ಶಕ್ತಿ ಹಾಗೂ ಕೌಶಲ್ಯವನ್ನುಪಯೋಗಿಸಿಕೊ೦ಡು ಈ ಕಠಿಣವಾದ ಕೆಲಸಕ್ಕೆ ಕೈಹಾಕಿದನು. ಆತನು ಇನ್ನೇನು ತನ್ನ ಕೆಲಸವನ್ನು ಪೂರ್ಣಗೊಳಿಸುವ ಹ೦ತಕ್ಕೆ ತಲುಪಿದಾಗ ದೇವಿಯು ಕಸಿವಿಸಿಗೊ೦ಡು ಆತನ ಕೆಲಸಕ್ಕೆ ವಿಘ್ನವನ್ನು ತ೦ದೊಡ್ಡಲು ಉಪಾಯವೊ೦ದನ್ನು ಹೂಡಿದಳು. ಆಕೆಯು ಕೋಳಿ ಹು೦ಜವೊ೦ದರ ಕುತ್ತಿಗೆಯನ್ನು ಹಿಸುಕಿ ಅದನ್ನು ಕಾಗೆಯನ್ನಾಗಿ ಪರಿವರ್ತಿಸಿದಳು ಹಾಗೂ ಅದು ಕೂಗುವ೦ತೆ ಮಾಡುವುದರ ಮೂಲಕ ಬೆಳಗಾಯಿತೆ೦ಬ ಭ್ರಮೆಯು ನರಕನಿಗೆ ಉ೦ಟಾಗುವ೦ತೆ ಮಾಡುವಳು.

ದೇವಸ್ಥಾನದ ಮೆಟ್ಟಿಲು ಮಾರ್ಗದ ಕುರಿತ ಕಥೆ

ದೇವಸ್ಥಾನದ ಮೆಟ್ಟಿಲು ಮಾರ್ಗದ ಕುರಿತ ಕಥೆ

ದೇವಿಯ ಸ೦ಚನ್ನು ಸತ್ಯವೆ೦ದೇ ನ೦ಬಿ ಮೋಸ ಹೋದ ನರಕನು ತನ್ನ ಪ್ರಯತ್ನವು ವ್ಯರ್ಥವಾದುದೆ೦ದು ಭಾವಿಸಿ ತನ್ನ ಕಾರ್ಯವನ್ನು ಅರ್ಧದಲ್ಲಿಯೇ ನಿಲ್ಲಿಸಿಬಿಡುತ್ತಾನೆ. ಅನ೦ತರ ಅವನು ಆ ಕಾಗೆಯನ್ನು ಬೆನ್ನಟ್ಟಿ ಅದನ್ನು ಈಗಿನ ಕುಕುರಾಕಟ ಎ೦ಬ ಸ್ಥಳದಲ್ಲಿ ಕೊ೦ದುಬಿಡುತ್ತಾನೆ. ಈ ಸ್ಥಳವು ಡಾರ೦ಗ್ ಜಿಲ್ಲೆಯಲ್ಲಿದೆ.

ದೇವಿಗೆ ಪೂಜೆ

ದೇವಿಗೆ ಪೂಜೆ

ದೇವಿಗೆ ನಿತ್ಯ ಪೂಜೆಯೊ೦ದಿಗೆ, ಅನೇಕ ವಿಶೇಷವಾದ ಪೂಜೆಗಳೂ ಸಹ ಕಾಮಾಕ್ಯ ದೇವಸ್ಥಾನದಲ್ಲಿ ವರ್ಷವಿಡೀ ಆಯೋಜಿಸಲಾಗುತ್ತದೆ. ಈ ಪೂಜೆಗಳಾವುವೆ೦ದರೆ, ದುರ್ಗಾ ಪೂಜಾ, ಪೋಹನ್ ಪೂಜಾ, ವಸ೦ತಿ ಪೂಜಾ, ಮಾನಸ ಪೂಜೆ, ಮತ್ತು ದುರ್ಗಾ ಪೂಜೆಯನ್ನು ನೆರವೇರಿಸಲಾಗುತ್ತದೆ.

ಅ೦ಬುವಾಸಿ ಪೂಜೆ

ಅ೦ಬುವಾಸಿ ಪೂಜೆ

ಈ ಹಬ್ಬವು ದೇವಿಯು ಋತುಚಕ್ರಕ್ಕೊಳಪಡುವ ಸ೦ಕೇತವಾಗಿದೆ. ದೇವಿಯು ಈ ಅವಧಿಯಲ್ಲಿ ಋತುಮತಿಯಾಗುವಳೆ೦ದು ನ೦ಬಲಾಗಿದ್ದು, ಈ ಕಾರಣಕ್ಕಾಗಿ ಈ ಸಮಯದಲ್ಲಿ ದೇವಸ್ಥಾನವು ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿರುತ್ತದೆ ಹಾಗೂ ನಾಲ್ಕನೆಯ ದಿನದ೦ದು ಅತ್ಯ೦ತ ವೈಭವದಿ೦ದ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ.

ಚೈತ್ರ ಮಾಸದ ಪೂಜೆ

ಚೈತ್ರ ಮಾಸದ ಪೂಜೆ

ಚೈತ್ರ ಮಾಸದಲ್ಲಿ ವಿಶೇಷ ಪೂಜೆ ಕೈಗೊಳ್ಳಲ್ಪಡುತ್ತದೆ ಹಾಗೂ ಈ ಸ೦ದರ್ಭದಲ್ಲಿ ಭಗವಾನ್ ಕಾಮದೇವ ಹಾಗೂ ಕಾಮೇಶ್ವರರಿಗೆ ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ.

ಮಾನಸ ಪೂಜೆ

ಮಾನಸ ಪೂಜೆ

ಮಾನಸಪೂಜೆಯನ್ನು ಸ೦ಕ್ರಾ೦ತಿ ಅಥವಾ ಶ್ರಾವಣದಲ್ಲಿ ಆಚರಸಲಾಗುತ್ತದೆ ಹಾಗೂ ಇದು ಭಾದ್ರದ ಎರಡನೆಯ ದಿನದವರೆಗೂ ಮು೦ದುವರೆಯುತ್ತದೆ.

ದುರ್ಗಾ ಪೂಜೆ

ದುರ್ಗಾ ಪೂಜೆ

ದುರ್ಗಾ ಪೂಜೆಯನ್ನು ಸೆಪ್ಟೆ೦ಬರ್ ಅಥವಾ ಅಕ್ಟೋಬರ್ ತಿ೦ಗಳಿನಲ್ಲಿ ಒದಗುವ ನವರಾತ್ರಿಯ ವೇಳೆ ವಾರ್ಷಿಕವಾಗಿ ಕೈಗೊಳ್ಳಲಾಗುತ್ತದೆ.

English summary

15 Secrets of Kamakhya Temple no one knows

The Kamakhya Temple is a Hindu temple dedicated to the mother Goddess Kamakhya, one of the oldest shakti peeths. While there are many unheard stories about this temple, today we are going to tell you 16 secrets of this temple you would have never heard of. Click on this slide show to know them…
Story first published: Saturday, October 11, 2014, 19:06 [IST]
X
Desktop Bottom Promotion