For Quick Alerts
ALLOW NOTIFICATIONS  
For Daily Alerts

ಹನುಮಾನ್ ಜಯಂತಿ 2020: ಹಬ್ಬದ ಮಹತ್ವ ಹಾಗೂ ದಂತಕಥೆಗಳು

ಹನುಮಂತನು ತನ್ನ ಶಕ್ತಿಯಿಂದ ದುಷ್ಟರನ್ನು ಸದೆಬಡಿಯುತ್ತಾ ಇದ್ದ ಎಂದು ಪುರಾಣಗಳಲ್ಲಿ ಇದೆ. ಹನುಮಾನ್ ಜಯಂತಿಯಂದು ಹನುಮಂತನ ಪೂಜೆ ಮಾಡಿದರೆ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕತೆ ಬರುವುದು.

By Manu
|

ರಾಮಾಯಣದಲ್ಲಿ ರಾವಣನ ವಧೆ ಮಾಡಲು ರಾಮನಿಗೆ ಪ್ರತಿಯೊಂದು ಹಂತದಲ್ಲಿಯೂ ನೆರವಾಗಿ ರಾಮಭಕ್ತನೆನಿಸಿಕೊಂಡಿರುವ ಹನುಮಂತನ ಜಯಂತಿಯು ಚೈತ್ರ ಮಾಸದ 15ನೇ ದಿನದಂದು ಆಚರಿಸಲಾಗುತ್ತದೆ. ಹನುಮಂತನ ಹುಟ್ಟುಹಬ್ಬವನ್ನು ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಕೆಲವೇ ದಿನಗಳ ಮೊದಲು ನಾವು ರಾಮನವಮಿಯನ್ನು ಆಚರಿಸಿದ್ದೇವೆ. ಈ ವರ್ಷ ಏಪ್ರಿಲ್ 8ಕ್ಕೆ ಹನುಮಾನ್ ಜಯಂತಿಯನ್ನು ಆಚರಿಸುತ್ತಿದ್ದೇವೆ

ಈಗ ರಾಮನ ಭಕ್ತ ಹನುಮಂತನ ಜಯಂತಿ. ರಾಮನನ್ನು ಪೂಜಿಸುವ ಪ್ರತಿಯೊಬ್ಬರಿಗೂ ಹನುಮಂತನ ದಯೆ ಇರುತ್ತದೆ ಎಂದು ನಂಬಲಾಗಿದೆ. ರಾಮನಿರುವ ಪ್ರತಿಯೊಂದು ಮಂದಿರದಲ್ಲಿ ಹನುಮನಿರಲೇಬೇಕು. ಹನುಮಂತನ ಸ್ವಾಮಿನಿಷ್ಠೆ ಮತ್ತು ಆತನ ಶಕ್ತಿಯು ಅಗಾಧವಾಗಿರುವಂತದ್ದಾಗಿದೆ. ಶಕ್ತಿ ದೇವತೆ ಹನುಮಂತನನ್ನು ಪೂಜಿಸುವ ವಿಧಿ-ವಿಧಾನ

ಹನುಮಂತನು ತನ್ನ ಶಕ್ತಿಯಿಂದ ದುಷ್ಟರನ್ನು ಸದೆಬಡಿಯುತ್ತಾ ಇದ್ದ ಎಂದು ಪುರಾಣಗಳಲ್ಲಿ ಇದೆ. ಹನುಮಾನ್ ಜಯಂತಿಯಂದು ಹನುಮಂತನ ಪೂಜೆ ಮಾಡಿದರೆ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕತೆ ಬರುವುದು. ಈ ಲೇಖನದಲ್ಲಿ ಹನುಮಾನ್ ಜಯಂತಿಯ ಮಹತ್ವವನ್ನು ತಿಳಿದುಕೊಂಡು ಹನುಮಂತನನ್ನು ಪೂಜಿಸಿ.....

ಹನುಮಾನ್ ಜಯಂತಿ ಬಗ್ಗೆ ಇರುವ ದಂತಕಥೆಗಳು

ಹನುಮಾನ್ ಜಯಂತಿ ಬಗ್ಗೆ ಇರುವ ದಂತಕಥೆಗಳು

ಒಂದು ದಿನ ಸೀತಾಮಾತೆಯು ಹಣೆಗೆ ಕುಂಕುಮವನ್ನಿಡುವುದನ್ನು ಹನುಮಂತ ನೋಡುತ್ತಾನೆ. ಇದನ್ನು ನೋಡಿ ಆತನಿಗೆ ತುಂಬಾ ಅಚ್ಚರಿಯಾಗುತ್ತದೆ ಮತ್ತು ಹಣಿಗೆ ಯಾಕೆ ಕುಂಕುಮವನ್ನಿಡುತ್ತಾ ಇದ್ದೀರಿ ಎಂದು ಸೀತೆಯಲ್ಲಿ ಕೇಳುತ್ತಾನೆ.

ಹನುಮಾನ್ ಜಯಂತಿ ಬಗ್ಗೆ ಇರುವ ದಂತಕಥೆಗಳು

ಹನುಮಾನ್ ಜಯಂತಿ ಬಗ್ಗೆ ಇರುವ ದಂತಕಥೆಗಳು

ಕುಂಕುಮವನ್ನು ಇಟ್ಟರೆ ಪತಿ ರಾಮನ ಆಯಸ್ಸು ಹೆಚ್ಚಾಗುತ್ತದೆ ಎಂದು ಸೀತೆಯು ವಿವರಿಸುತ್ತಾಳೆ. ಇದನ್ನು ಕೇಳಿದ ಹನುಮಂತ ತನ್ನ ದೇಹವನ್ನು ಕುಂಕುಮದಿಂದ ಮೆತ್ತಿಸಿಕೊಂಡು ರಾಮನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದನಂತೆ!

ಲಡ್ಡು ಅಂದರೆ ಹನುಮಾನ್‌ಗೆ ಪಂಚಪ್ರಾಣ...

ಲಡ್ಡು ಅಂದರೆ ಹನುಮಾನ್‌ಗೆ ಪಂಚಪ್ರಾಣ...

ಹನುಮಾನ್ ಜಯಂತಿಯ ದಿನ ಜನರು ಹನುಮಂತನ ಮೂರ್ತಿಗೆ ಮಜ್ಜನಗೈದು ಬಳಿಕ ಸಿಂಧೂರವನ್ನು ಇಡುತ್ತಾರೆ. ಹನುಮಂತನಿಗೆ ಲಡ್ಡು ತುಂಬಾ ಇಷ್ಟವಾಗಿರುವ ಕಾರಣದಿಂದ ಪ್ರಸಾದವಾಗಿ ಲಡ್ಡುವನ್ನು ಇಡುತ್ತಾರೆ. ಈ ವೇಳೆ ಭಕ್ತರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ. ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ.

ಹನುಮಂತ ಸ್ವಾಮಿನಿಷ್ಠೆ ಮತ್ತು ಭಕ್ತಿಯ ಪ್ರತೀಕ

ಹನುಮಂತ ಸ್ವಾಮಿನಿಷ್ಠೆ ಮತ್ತು ಭಕ್ತಿಯ ಪ್ರತೀಕ

ಹನುಮಂತನನ್ನು ಶಿವನ ಅವತಾರವೆಂದು ನಂಬಲಾಗಿದೆ. ಹನುಮಂತ ಸ್ವಾಮಿನಿಷ್ಠೆ ಮತ್ತು ಭಕ್ತಿಯ ಪ್ರತೀಕ. ಹನುಮಂತನ ಶಕ್ತಿಗೆ ಯಾರೂ ಎದುರಿಲ್ಲ ಮತ್ತು ಆತನೊಬ್ಬ ಜ್ಞಾನಿಯೆಂದು ಪರಿಗಣಿಸಲಾಗಿದೆ. ಹನುಮಾನ್ ಜಯಂತಿಯಂದು ಜನರು ಉಪವಾಸ ಮಾಡಿ ಹನುಮಂತನ ಆಶೀರ್ವಾದ ಬಯಸುತ್ತಾರೆ.

ಹನುಮಾಣ್ ಚಾಲೀಸ

ಹನುಮಾಣ್ ಚಾಲೀಸ

ಸುತ್ತಲು ಇರುವಂತಹ ದುಷ್ಟಶಕ್ತಿಗಳ ನಿವಾರಣೆ ಮಾಡಲು ಭಕ್ತರು ದಿನವಿಡಿ ಹನುಮಾಣ್ ಚಾಲೀಸವನ್ನು ಪಠಿಸುತ್ತಾರೆ. ಹನುಮಾನ್ ಮಂದಿರ ಹಾಗೂ ರಾಮಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಿ ಪ್ರಸಾದ ವಿತರಿಸಲಾಗುತ್ತದೆ. ಹನುಮಾನ್ ಜಯಂತಿಯಂದು ಹನುಮಂತನನ್ನು ಪೂಜಿಸುವ ಭಕ್ತರು ಶಕ್ತಿ ಹಾಗೂ ಜೀವನದ ಸಂಕಷ್ಟಗಳಿಂದ ಹೊರಬರುತ್ತಾರೆ.ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ

English summary

Here's why we celebrate the festival of Hanuman Jayanti

According to the folk traditions, Hanuman is the conqueror of evil powers and spirits through His magical powers. Hence, people worship Lord Hanuman on His birthday to get rid of all kinds of negative energies and evil powers. Let us take a look at the legends and significance of Hanuman Jayanti.
X
Desktop Bottom Promotion