For Quick Alerts
ALLOW NOTIFICATIONS  
For Daily Alerts

  ಶಕ್ತಿ ದೇವತೆ ಹನುಮಂತನನ್ನು ಪೂಜಿಸುವ ವಿಧಿ-ವಿಧಾನ

  By Manu
  |

  ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರಿದ್ದಾರೆ. ಅವರವರ ಇಷ್ಟಕ್ಕೆ ತಕ್ಕಂತೆ ಒಬ್ಬೊಬ್ಬ ದೇವರನ್ನು ಪೂಜಿಸಬಹುದಾಗಿದೆ. ನೀವು ಈ ದೇವರನ್ನೇ ಪೂಜಿಸಬೇಕೆಂಬ ಕಟ್ಟುಪಾಡಿಲ್ಲ. ವಿಶ್ವದೆಲ್ಲೆಡೆಯಲ್ಲಿ ಹಿಂದೂ ದೇವರನ್ನು ಪೂಜಿಸಲಾಗುತ್ತಿದೆ. ಅದರಲ್ಲಿ ಆಂಜನೇಯ ದೇವರು ಕೂಡ ಒಬ್ಬರು. ಆಂಜನೇಯ ದೇವರ ಮೂರ್ತಿಯನ್ನು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಕೂಡ ತನ್ನೊಂದಿಗೆ ಇಟ್ಟುಕೊಂಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.... ಹನುಮಂತ ದೇವರ ಪ್ರಭಾವ ಎಷ್ಟಿದೆ ಎಂದು ಇದರಿಂದ ತಿಳಿದುಕೊಳ್ಳಬಹುದು.  ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು!

  ವಾನರ ಮೂರ್ತಿಯ ಹನುಮಂತ ದೇವರನ್ನು ಹೇಗೆ ಪೂಜಿಸಬೇಕು ಎಂದು ಕೆಲವರು ಪ್ರಶ್ನಿಸಬಹುದು. ಹನುಮಂತ ದೇವರಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಪುರುಷರು ಹನುಮಂತ ದೇವರನ್ನು ಪೂಜಿಸಬಹುದು. ಆದರೆ ಬ್ರಹ್ಮಚಾರಿಯಾಗಿರುವ ಹನುಮಂತ ದೇವರನ್ನು ಮಹಿಳೆಯರು ಪೂಜಿಸಬಾರದು ಎನ್ನುವ ನಂಬಿಕೆ ಇದೆ. ಪುರುಷರು ಹನುಮಂತನನ್ನು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು. ಹನುಮಂತ ದೇವರನ್ನು ಒಲಿಸಿಕೊಳ್ಳುವ ಕೆಲವೊಂದು ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ದೇವರನ್ನು ಒಲಿಸಿಕೊಳ್ಳಿ.....

  ಸಿಂಧೂರ ಹಾಕಿಕೊಳ್ಳಿ

  ಸಿಂಧೂರ ಹಾಕಿಕೊಳ್ಳಿ

  ಕಿತ್ತಳೆ ಬಣ್ಣದ ಸಿಂಧೂರವನ್ನು ಹನುಮಂತ ದೇವರ ಮೂರ್ತಿಗೆ ಹಚ್ಚಲಾಗುತ್ತದೆ. ಹೆಚ್ಚಿನ ಮಂದಿರಗಳಲ್ಲಿ ಹನುಮಂತ ದೇವರ ಮೂರ್ತಿಗಳಿಗೆ ಕಿತ್ತಳೆ ಬಣ್ಣದ ಸಿಂಧೂರವನ್ನು ಹಚ್ಚಿರುತ್ತಾರೆ. ಕಿತ್ತಳೆ ಬಣ್ಣದ ಸಿಂಧೂರವನ್ನು ಹನುಮಂತನ ಮೂರ್ತಿಗೆ ಹಚ್ಚುವ ಮೂಲಕ ಆತನನ್ನು ಪೂಜಿಸಬಹುದು.

  ಸಿಂಧೂರ ಹಾಕಿಕೊಳ್ಳಿ

  ಸಿಂಧೂರ ಹಾಕಿಕೊಳ್ಳಿ

  ಹಣೆ ಅಥವಾ ಸಂಪೂರ್ಣ ದೇಹಕ್ಕೆ ಸಿಂಧೂರ ಹಚ್ಚಬಹುದು. ಸಿಂಧೂರಕ್ಕೆ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮೂರ್ತಿಗೆ ಹಚ್ಚಿ. ಮಂಗಳವಾರ ಅಥವಾ ಶನಿವಾರದಂದು ಪುರುಷರು ಹೀಗೆ ಮಾಡಬೇಕು.

  ಹನುಮಂತನ ಮಂತ್ರ ಪಠಿಸಿ

  ಹನುಮಂತನ ಮಂತ್ರ ಪಠಿಸಿ

  ಮನೋಜವಂ ಮಾರುತತುಲ್ಯವೆಗಂ ಜಿತೇಂದ್ರಿಯಂ ಬುದ್ಧಿಮಾತಂ ವರಿಸ್ತಂ, ವಾತಾತಮಜಂ ವಾನರಾಯುಕ್ತಮುಖ್ಯಂ ಶ್ರೀರಾಮ ದೂತಂ ಸರನಾಮ ಪ್ರಪಾದಯೆ. ಪುರುಷರು ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ. ಸ್ನಾನ ಮಾಡಿದ ಬಳಿಕ ಅಥವಾ ರಾತ್ರಿ ವೇಳೆ ಈ ಮಂತ್ರವನ್ನು ಪಠಿಸಬಹುದು. ಮಧ್ಯರಾತ್ರಿ ವೇಳೆ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು.ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ

  ರಾಮ ದೇವರನ್ನು ಪೂಜಿಸಿ

  ರಾಮ ದೇವರನ್ನು ಪೂಜಿಸಿ

  ಹನುಮಂತ ದೇವರ ಶ್ರೀರಾಮಚಂದ್ರ ದೇವರ ದೂತನಾಗಿದ್ದಾರೆ. ಯಾವಾಗಲೂ ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಹನುಮಂತ ದೇವರ ಕೃಪೆಗೆ ಪಾತ್ರರಾಗಬೇಕಾದರೆ ರಾಮ ದೇವರನ್ನು ಪೂಜಿಸಬೇಕು. ಜೈ ಶ್ರೀರಾಮ್ ಮಂತ್ರವನ್ನು ಪಠಿಸುತ್ತ ಇರಬೇಕು.

  ಮಂಗಳವಾರ ಉಪವಾಸ

  ಮಂಗಳವಾರ ಉಪವಾಸ

  ಮಂಗಳವಾರದಂದು ಉಪವಾಸ ಮಾಡಿಕೊಂಡು ಹನುಮಂತ ದೇವರನ್ನು ಪ್ರಾರ್ಥಿಸಬಹುದು. ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು.

  ಮಂಗಳವಾರ ಉಪವಾಸ

  ಮಂಗಳವಾರ ಉಪವಾಸ

  ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ.

   

  English summary

  Hanuman Worship Tips For Men

  There are many Hindu gods that are worshiped across the world. Even the different incarnations of deities are worshiped by devotees. Lord Hanuman is one of the most popular Hindu gods who is worshiped worldwide. There are many people who think why one should worship the monkey-faced God, Hanuman. So, here are few tips for Hanuman worship. Follow them and win the heart of the monkey God.
  Story first published: Monday, September 26, 2016, 15:45 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more