For Quick Alerts
ALLOW NOTIFICATIONS  
For Daily Alerts

ಯಾವ ದಿನಗಳಂದು ಯಾವ್ಯಾವ ದೇವರನ್ನು ಆರಾಧಿಸಬೇಕು?

By Jaya Subramanya
|

ನಮ್ಮ ಹಿಂದೂ ಧರ್ಮವು ತನ್ನದೇ ಆದ ಸಿದ್ಧಾಂತಗಳು ಮತ್ತು ಪಾವಿತ್ರ್ಯತೆಗಳಿಂದ ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ನಮ್ಮ ಆಚಾರ ವಿಚಾರಗಳು, ಶಾಸ್ತ್ರ ಸಂಪ್ರದಾಯಗಳಿಗೆ ಸ್ವತಃ ವಿದೇಶೀಯರೇ ಮನಸೋತಿದ್ದು ಸ್ವಇಚ್ಛೆಯಿಂದ ನಮ್ಮ ಧರ್ಮಕ್ಕೆ ಅವರು ಮತಾಂತರಗೊಂಡಿದ್ದಾರೆ.

ಸರ್ವಶಕ್ತನಾದ ಭಗವಂತನನ್ನು ನಂಬುವ ನಾವು ಕಷ್ಟದಲ್ಲೂ ಸುಖದಲ್ಲೂ ಅವನನ್ನೇ ನೆನೆಯುಂತವರು. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭ್ಯವಾಗಲಿ ಎಂದು ದಿನದಲ್ಲಿ ಒಂದೊಂದು ದೇವರನ್ನು ಸ್ಮರಿಸುತ್ತಾ ಆ ದೇವರುಗಳಿಗೆ ಸಂತೃಪ್ತಿಯನ್ನು ಮಾಡುತ್ತಿರುತ್ತೇವೆ.

ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ವೃತ ನಿಷ್ಟೆಗಳನ್ನು ಅನುಸರಿಸುತ್ತಾ ಆಯಾ ವಾರದಲ್ಲಿ ಆಯಾ ದೇವರುಗಳಿಗೆ ಬೇಕಾದ ದೇವತಾ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ. ಇಂದಿನ ಲೇಖನದಲ್ಲಿ ವಾರದಲ್ಲಿ ಯಾವ ದಿನ ಯಾವ ದೇವರುಗಳಿಗೆ ಮಹತ್ವ ನೀಡಬೇಕು ಅವರುಗಳ ಪೂಜೆ ಪುನಸ್ಕಾರಗಳನ್ನು ಹೇಗೆ ನಡೆಸುವುದು ಎಂಬುದನ್ನು ಕೆಳಗಿನ ಸ್ಲೈಡರ್‎ಗಳಲ್ಲಿ ತಿಳಿಸಿಕೊಡುತ್ತಿದ್ದೇವೆ, ಮುಂದೆ ಓದಿ...

 ಸೋಮವಾರ

ಸೋಮವಾರ

ಸೋಮವಾರವನ್ನು ಶಿವನಿಗೆ ನಾವು ಅರ್ಪಿಸುತ್ತಿದ್ದು ಶಿವನ ಸಹಧರ್ಮಿಣಿ ಪಾರ್ವತಿಯೊಂದಿಗೆ ದೇವರನ್ನು ಸ್ಮರಿಸಿಕೊಳ್ಳುತ್ತೇವೆ. ಈ ದಿನದಂದು ಶಿವನಿಗಾಗಿ ನಡೆಯುವ ವಿಶೇಷ ಪೂಜೆಯಲ್ಲಿ ಅವರು ಪಾಲ್ಗೊಂಡು ದೇವರಿಗೆ ವೃತವನ್ನು ಕೈಗೊಳ್ಳುತ್ತಾರೆ. ದೇವರು ಇದರಿಂದ ಸಂತೃಪ್ತಗೊಂಡು ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮಂಗಳವಾರ ಹನುಮನ ಪೂಜೆ

ಮಂಗಳವಾರ ಹನುಮನ ಪೂಜೆ

ಮಂಗಳವಾರವನ್ನು ಭಗವಾನ್ ಹನುಂತನಿಗೆ ಸಮರ್ಪಿಸಲಾಗಿದೆ. ಮಂಗಳವಾರ ವೃತವನ್ನು ಈ ಸಮಯದಲ್ಲಿ ಹನುಮ ಭಕ್ತರು ಕೈಗೊಳ್ಳಲಿದ್ದು 21 ದಿನಗಳವರೆಗೆ ಇದು ಮುಂದುವರಿಯುತ್ತದೆ. ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಆಹಾರವನ್ನು ಮಾತ್ರ ಈ ವೃತದಂದು ಸೇವಿಸಲಾಗುತ್ತದೆ. ಗಂಡು ಮಗುವಿನ ಬಯಕೆಯುಳ್ಳ ದಂಪತಿಗಳು ಈ ವೃತವನ್ನು ಕೈಗೊಂಡಲ್ಲಿ ಹನುಮಾನ್ ಹರಸುತ್ತಾರೆ ಎಂದಾಗಿದೆ. ಅಲ್ಲದೆ ಈತ ಶಿವನ ಅವತಾರಗಳಲ್ಲಿ ಒಬ್ಬನೆಂದು, ಶಕ್ತಿಯನ್ನು ದಯಪಾಲಿಸುವ ದೇವನೆಂದು ಪರಿಗಣಿಸಲ್ಪಟ್ಟಿದ್ದಾನೆ. ಈತನನ್ನು ಪೂಜಿಸಿದರೆ ನಿಮಗೆ ರಾಮನ ಅನುಗ್ರಹವು ದೊರೆಯುತ್ತದೆ. ಕೆಂಪು ವಸ್ತ್ರ, ಕೆಂಪು ಹೂ, ಕೇಸರಿಯಿಂದ ಸ್ವಾಮಿಯನ್ನು ಪೂಜಿಸಿ. ಕೆಂಪು ಗ್ರಹವಾದ ಮಂಗಳನ ಕೃಪೆಗೆ ಪಾತ್ರರಾಗಿ.

ಬುಧವಾರ ಶ್ರೀ ಕೃಷ್ಣನ ಸ್ಮರಣೆ

ಬುಧವಾರ ಶ್ರೀ ಕೃಷ್ಣನ ಸ್ಮರಣೆ

ಬುಧವಾರದಂದು ಶ್ರೀಕೃಷ್ಣ ಭಜನೆಗಳನ್ನು ಕೈಗೊಳ್ಳಲಾಗುತ್ತದೆ. ಈ ದಿನದಂದು ವೃತವನ್ನು ಕೈಗೊಳ್ಳುವವರು ಹೊಸ ವ್ಯವಹಾರವನ್ನು ಆರಂಭಿಸುವವರಾಗಿರುತ್ತಾರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಯಶಸ್ಸು ಗಳಿಸಲು ಈ ದಿನ ಶ್ರೀಕೃಷ್ಣ ಭಗವಂತನನ್ನು ನೆನೆಯಬಹುದು ಅಂತೆಯೇ ದಂಪತಿಗಳು ತಮ್ಮ ಸುಖಕರ ದಾಂಪತ್ಯಕ್ಕಾಗಿ ಭಗವಾನ್ ಕೃಷ್ಣನನ್ನು ಸ್ಮರಿಸಿಕೊಳ್ಳಬಹುದು.

ಗುರುವಾರ ವಿಷ್ಣುವಿನ ಸ್ಮರಣೆ

ಗುರುವಾರ ವಿಷ್ಣುವಿನ ಸ್ಮರಣೆ

ವಿಷ್ಣುವಿನ ಭಕ್ತರು ಈ ದಿನದಂದು ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಈ ದಿನದಂದು ವೃತವನ್ನು ಕೈಗೊಳ್ಳುವವರು ಗಜ್ಜರಿ ಮತ್ತು ತುಪ್ಪವನ್ನು ಬಳಸಿದ ವೃತಾಹಾರವನ್ನು ಸೇವಿಸುತ್ತಾರೆ. ಈ ದಿನದಂದು ವೃತವನ್ನು ಕೈಗೊಂಡವರು, ಧನ, ಕೀರ್ತಿ ಮತ್ತು ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಶುಕ್ರವಾರ ದೇವಿಯ ಆರಾಧನೆ

ಶುಕ್ರವಾರ ದೇವಿಯ ಆರಾಧನೆ

ತಾಯಿ ದುರ್ಗಾ ಮಾತೆಗೆ ಈ ದಿನವನ್ನು ಅರ್ಪಿಸಲಾಗುತ್ತಿದ್ದು ಸಂತೋಷಿ ಮಾ ದೇವರ ವೃತವನ್ನು ಕೈಗೊಳ್ಳುತ್ತಾರೆ. ಸೂರ್ಯೋದಯದಿಂದ ಆರಂಭವಾಗಿ ಸೂರ್ಯಾಸ್ತಕ್ಕೆ ಈ ವೃತ ಮುಗಿಯುತ್ತದೆ. ಭಕ್ತರು ಈ ದಿನದಂದು ಬಿಳಿ ವಸ್ತ್ರವನ್ನು ಧರಿಸಿ ರಾತ್ರಿಯೂಟದಲ್ಲಿ ಪಾಲ್ಗೊಳ್ಳುತ್ತಾರೆ. ಬಿಳಿ ಬಣ್ಣದ ಆಹಾರವನ್ನು ಸೇವಿಸುತ್ತಾರೆ.

ಶನಿವಾರ: ಶನಿ ದೇವರಿಗೆ ಅರ್ಪಣೆ

ಶನಿವಾರ: ಶನಿ ದೇವರಿಗೆ ಅರ್ಪಣೆ

ಭಯವನ್ನುಂಟು ಮಾಡುವ ದೇವರಾಗಿ ಶನಿಯನ್ನು ಕಾಣುತ್ತಾರೆ. ಬಿಲ್ಲುಗಳ ಧನುಸ್ಸನ್ನು ಕೈಯಲ್ಲಿ ಹಿಡಿದುಕೊಂಡು ಕಾಗೆಯನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ಈ ದಿನದಂದು ಶನಿದೇವಸ್ಥಾನಗಳಿಗೆ ಭೇಟಿ ಕೊಡುವವರು ಕಪ್ಪು ಬಣ್ಣದ ವಸ್ತುಗಳನ್ನು ದೇವರಿಗೆ ಅರ್ಪಿಸುತ್ತಾರೆ. ಎಳ್ಳೆಣ್ಣೆ, ಕಪ್ಪು ಬಟ್ಟೆಗಳು ಮತ್ತು ಕಪ್ಪು ಬಣ್ಣದ ಧಾನ್ಯಗಳನ್ನು ಅರ್ಪಿಸುತ್ತಾರೆ. ಜೀವನದಲ್ಲಿ ಬಂದೊದಗುವ ಕಷ್ಟಗಳನ್ನು ನಿವಾರಿಸುವ ಶನಿ ದೇವರು ಅನಾರೋಗ್ಯವನ್ನು ನಿವಾರಿಸುತ್ತಾರೆ.

ಆದಿತ್ಯವಾರ: ಸೂರ್ಯದೇವರಿಗೆ ಅರ್ಪಣೆ

ಆದಿತ್ಯವಾರ: ಸೂರ್ಯದೇವರಿಗೆ ಅರ್ಪಣೆ

ಆದಿತ್ಯವಾರವನ್ನು ಸೂರ್ಯದೇವರಿಗೆ ಸಮರ್ಪಿಸುತ್ತಿದ್ದು, ಸೂರ್ಯನಾರಾಯಣ ಅಥವಾ ಸೂರ್ಯ ದೇವ ಎಂಬ ಹೆಸರಿನಿಂದ ಇವರನ್ನು ಕರೆಯಲಾಗುತ್ತದೆ. ಈ ದಿನದಂದು ಸೂರ್ಯನ ಭಕ್ತರು, ಧಾರ್ಮಿಕ ಸ್ನಾನಾದಿಗಳಲ್ಲಿ ಪಾಲ್ಗೊಂಡು ತಮ್ಮ ದೇಹ ಮತ್ತು ಮನೆಯನ್ನು ಶುದ್ಧೀಗೊಳಿಸುತ್ತಾರೆ. ದೇವರಿಗೆ ಕೆಂಪು ಹೂಗಳನ್ನು ಸಮರ್ಪಿಸಿ ಕೆಂಪು ಚಂದನದ ಪ್ರಸಾದವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಈ ದಿನದಂದು ಸೂರ್ಯದೇವರು ಎಲ್ಲಾ ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತಾರೆ ಎಂಬ ನಂಬಿಕೆ ಇದೆ.

English summary

Deities & Rituals For 7 Days Of The Week

Hindus follow a lot of rituals right through the week. It is believed that for the 7 days in a week, each of the days are dedicated to one or two Gods. So, today, let us discuss some of the Deities & Rituals that are followed on the 7 days of the week right through the year. Read on to know more about this beautiful and vast religion:
X
Desktop Bottom Promotion