For Quick Alerts
ALLOW NOTIFICATIONS  
For Daily Alerts

ಆಭರಣಗಳನ್ನು ಧರಿಸುವುದರ ಹಿಂದಿನ ವೈಜ್ಞಾನಿಕ ಮಹತ್ವಗಳು

|

ಆಭರಣ ಎಂದಾಕ್ಷಣ ಮಹಿಳೆಯರ ಕಿವಿ ನೆಟ್ಟಗಾಗುತ್ತದೆ. ಅದರಲ್ಲೂ ಚಿನ್ನದ ಆಭರಣಗಳಿಗೆ ಭಾರತೀಯ ಮಹಿಳೆಯರು ಅತಿಹೆಚ್ಚಾಗಿ ಹಾತೊರೆಯುತ್ತಾರೆ. ಇತಿಹಾಸ ಕೆದಕಿದರೆ ಸಾವಿರಾರು ವರ್ಷಗಳ ಹಿಂದಿನ ಶಿಲ್ಪಗಳಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಮಹಿಳೆಯರು ಆಭರಣಗಳನ್ನು ತೊಟ್ಟಿರುವ ಕುರುಹುಗಳು ಕಂಡುಬರುತ್ತವೆ. ಅಂದರೆ ಆಭರಣದ ವ್ಯಾಮೋಹ ಎಲ್ಲೆಲ್ಲೂ ವ್ಯಾಪಿಸಿತ್ತು ಎಂದು ಖಚಿತವಾಗಿದೆ. ಇಂದಿಗೂ ಭಾರತೀಯ ಮಹಿಳೆಯರು, ಅದರಲ್ಲೂ ವಿಶೇಷವಾಗಿ ಹಿಂದೂ ಮಹಿಳೆಯರು ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಸದಾ ತೊಡುವುದು ದೇಶದಾದ್ಯಂತ ಕಂಡುಬರುತ್ತದೆ.

ಕಾಲ ಬದಲಾದಂತೆ ಆಭರಣಗಳ ವಿನ್ಯಾಸ ಮತ್ತು ಅದರೊಂದಿಗೆ ಉಪಯೋಗಿಸುವ ಇತರ ಅಲಂಕಾರಿಕಾ ಸಾಮಾಗ್ರಿಗಳು ಬದಲಾಗುತ್ತಿವೆಯೇ ವಿನಃ ಚಿನ್ನದ ವ್ಯಾಮೋಹ ಮಾತ್ರ ಕಡಿಮೆಯಾಗುವುದೇ ಇಲ್ಲ. ಹಿಂದೂ ಮತದಲ್ಲಿ ಆಭರಣಗಳನ್ನು ತೊಡುವುದರ ಹಿಂದೆ ಸೌಂದರ್ಯದ ಹೊರತಾಗಿ ಹಲವು ಕಾರಣಗಳಿವೆ. ಇವು ಮನೆಗೆ ಶುಭವನ್ನೂ, ಸಮೃದ್ಧಿಯನ್ನೂ ತರುತ್ತದೆ ಹಾಗೂ ಆಪತ್ಕಾಲದ ಧನವಾಗಿ ಮನೆಯನ್ನು ಕಾಪಾಡುತ್ತದೆ ಎಂಬುದು ನಂಬಿಕೆ. ವಿವಾಹದ ಬಳಿಕ ಕುತ್ತಿಗೆಯಲ್ಲಿ ಮಂಗಳಸೂತ್ರ ಧರಿಸುವುದು ಪತಿವ್ರತೆಗೆ ಕಡ್ಡಾಯವಾದ ವಿಧಿಯಾಗಿದೆ. ಹಿಂದೂ ಧರ್ಮದಲ್ಲಿರುವ ಅಷ್ಟ ವಿಧದ ವಿವಾಹ ಪದ್ಧತಿಗಳು

ಅಲ್ಲದೇ ಇವನ್ನು ಕುತ್ತಿಗೆಯಿಂದ ತೆಗೆದಿಡುವುದು ಅಪಶಕುನ ಎಂದೂ ನಂಬಲಾಗುತ್ತದೆ. ಮಂಗಳಸೂತ್ರದ ಹೊರತಾಗಿ ಮಹಿಳೆಯರು ತಮ್ಮ ದೇಹದ ವಿವಿಧ ಅಂಗಗಳಲ್ಲಿ ವಿವಿಧ ಆಭರಣಗಳನ್ನು ಧರಿಸುತ್ತಾರೆ. ವಿಶೇಷವೆಂದರೆ ದೇಹದ ಮೇಲ್ಭಾಗದಲ್ಲಿ ಚಿನ್ನದ ಆಭರಣಗಳನ್ನು ಧರಿಸಿದರೆ ದೇಹದ ಕೆಳಭಾಗದಲ್ಲಿ ಬೆಳ್ಳಿಯ ಆಭರಣಗಳನ್ನು ಧರಿಸುತ್ತಾರೆ.

ಇದರ ಹಿನ್ನೆಲೆಯನ್ನು ವೈಜ್ಞಾನಿಕ ದೃಷ್ಟಿಯಿಂದ ಕೊಂಚ ನೋಡಿದರೆ ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುತ್ತವೆ. ವೈಜ್ಞಾನಿಕ ತತ್ವದ ಪ್ರಕಾರ ಬೆಳ್ಳಿಯು ಭೂಮಿಯ ಶಕ್ತಿಯೊಂದಿಗೆ ಸ್ಪಂದಿಸಿದರೆ ಚಿನ್ನ ದೇಹದ ಅಗೋಚರ ಶಕ್ತಿಯೊಂದಿಗೆ ಸ್ಪಂದಿಸಿ ತೇಜಸ್ಸನ್ನು ಹೆಚ್ಚಿಸುತ್ತದೆ. ಈ ಲೇಖನದಲ್ಲಿ ವಿವಿಧ ಆಭರಣಗಳು ದೇಹದ ಮೇಲೆ ಬೀಳುವ ಪರಿಣಾಮಗಳ ವೈಜ್ಞಾನಿಕ ಮಹತ್ವಗಳನ್ನು ಅವಲೋಕಿಸೋಣ. ನಾರದ ಮಹರ್ಷಿ ಭಗವಾನ್ ವಿಷ್ಣುವನ್ನು ಶಪಿಸಲು ಕಾರಣವೇನು?

ಉಂಗುರ

ಉಂಗುರ

ಸಾಧಾರಣವಾಗಿ ಎಲ್ಲಾ ಧರ್ಮಗಳಲ್ಲಿಯೂ ನಿಶ್ಚಿತಾರ್ಥ ಮತ್ತು ಮದುವೆಯನ್ನು ಉಂಗುರಗಳ ವಿನಿಮಯದ ಮೂಲಕ ನೆರವೇರಿಸಲಾಗುತ್ತದೆ. ಉಂಗುರಗಳನ್ನು ಪುರುಷರು ಮತ್ತು ಮಹಿಳೆಯರು ಹೆಬ್ಬೆರಳಿನಿಂದ ತೊಡಗಿದರೆ ನಾಲ್ಕನೆಯ ಬೆರಳಿಗೆ ತೊಡುತ್ತಾರೆ. ಇದೇ ಕಾರಣಕ್ಕೆ ಈ ಬೆರಳಿಗೆ ಉಂಗುರ ಬೆರಳು ಎಂದೂ ಕರೆಯಲಾಗುತ್ತದೆ. ಈ ಬೆರಳಿನಲ್ಲಿರುವ ನರವು ಮೆದುಳಿನ ಮೂಲಕ ನೇರವಾಗಿ ಹೃದಯವನ್ನು ತಲುಪುತ್ತದೆ ಹಾಗೂ ಈ ಬೆರಳಿಗೆ ಉಂಗುರ ತೊಡುವ ಮೂಲಕ ಪರಸ್ಪರರ ಭಾವನೆಗಳನ್ನು ನೇರವಾಗಿ ಹೃದಯಕ್ಕೆ ತಲುಪಿಸಬಹುದೆಂದು ಎಲ್ಲರೂ ನಂಬುತ್ತಾರೆ.

ಉಂಗುರ

ಉಂಗುರ

ಅದೇ ಮಧ್ಯದ ಬೆರಳಿನ ನರವು ಮೆದುಳಿನ ನಟ್ಟ ನಡುವೆ ಹಾದುಹೋಗುವುದರಿಂದ ಕ್ಷಿಪ್ರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ವೇಳೆ ಮೆದುಳು ಖಚಿತವಾದ ತೀರ್ಮಾನಕ್ಕೆ ಬರಲಾಗದೇ ಸಂದಿಗ್ಧತೆಯನ್ನು ಎದುರಿಸಬೇಕಾಗಿ ಬರುವುದರಿಂದ ಈ ಬೆರಳಿಗೆ ಉಂಗುರವನ್ನು ಸಾಮಾನ್ಯವಾಗಿ ತೊಡುವುದಿಲ್ಲ. ಅಪರೂಪವಾಗಿ ಹೆಬ್ಬರಳಿಗೆ ಉಂಗುರವನ್ನು ತೊಡುವುದರಿಂದ ದೇಹಕ್ಕೆ ಹರ್ಷ ನೀಡುವ ಹಾರ್ಮೋನುಗಳನ್ನು ಬಿಡುಗಡೆಗೊಳಿಸಲು ನೆರವಾಗುತ್ತದೆ ಎಂದು ನಂಬಲಾಗಿದೆ.

ಕಿವಿಯೋಲೆಗಳು

ಕಿವಿಯೋಲೆಗಳು

ಸಾಧಾರಣವಾಗಿ ಕಿವಿಯೋಲೆಗಳನ್ನು ಮಹಿಳೆಯರು ಮಾತ್ರ ಧರಿಸುತ್ತಾರೆ. ಹುಡುಗರು ಸಾಧಾರಣವಾಗಿ ಚಿಕ್ಕ ಜುಮಕಿಯನ್ನು ಮಾತ್ರ ಧರಿಸುತ್ತಾರೆ. ಹೊರಕಿವಿಯ ಕೆಳಭಾಗದ ಮೂಳೆಯಿಲ್ಲದ ಭಾಗದ ನಟ್ಟನಡುವೆ ಕ್ರಿಮಿರಹಿತವಾದ ಸೂಜಿಯನ್ನು ಚುಚ್ಚಿ ಒಂದು ಚಿಕ್ಕ ತೂತು ಮಾಡುವುದು ಭಾರತದಲ್ಲಿ ಒಂದು ಸಂಪ್ರದಾಯವಾಗಿದೆ.

ಕಿವಿಯೋಲೆಗಳು

ಕಿವಿಯೋಲೆಗಳು

ಕಿವಿಯ ಈ ಭಾಗದಲ್ಲಿನ ನರವು ಗರ್ಭಕೋಶಕ್ಕೆ ಸಂಪರ್ಕಿಸುವುದರಿಂದ ಮಹಿಳೆಯರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುವುದು ಎಂದು ನಂಬಲಾಗಿದೆ. ಅದೇ ಹುಡುಗರಿಗೆ ಕಿವಿಯ ಈ ನರವು ಕಣ್ಣಿಗೆ ಸಂಪರ್ಕ ನೀಡುವುದರಿಂದ ಉತ್ತಮವಾದ ದೃಷ್ಟಿಯನ್ನು ಪಡೆಯಬಹುದು ಎಂದು ನಂಬಲಾಗಿದೆ.

ಮೂಗುತಿ

ಮೂಗುತಿ

ಆಯುರ್ವೇದದ ಪ್ರಕಾರ ಮೂಗಿನ ಹೊಳ್ಳೆಯಲ್ಲೊಂದು ತೂತು ಮಾಡುವ ಮೂಲಕ ಮಹಿಳೆಯರ ತಿಂಗಳ ರಜಾದಿನಗಳ ಕಾಲದ ನೋವನ್ನು ಕಡಿಮೆಗೊಳಿಸಬಹುದು. ಆದುದರಿಂದ ಪ್ರಾಯಕ್ಕೆ ಬಂದ ಹುಡುಗಿಯರಿಗೆ ಮೂಗುತಿಯೊಂದನ್ನು ಧರಿಸಲು ಹಿರಿಯರು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಮೂಗಿನ ಎಡಹೊಳ್ಳೆಯನ್ನೇ ತೂತು ಮಾಡಿಕೊಳ್ಳಲು ಆಯ್ಕೆ ಮಾಡಲಾಗುತ್ತದೆ. ಏಕೆಂದರೆ ಇಲ್ಲಿಂದ ಹೊರಟ ನರವು ನೇರವಾಗಿ ಗರ್ಭಕೋಶವನ್ನು ಸ್ಪಂದಿಸುವುದರಿಂದ ಸಂತಾನಭಾಗ್ಯ ಹಾಗೂ ಸುಖಪ್ರಸವಕ್ಕೆ ನಾಂದಿ ಎಂದು ನಂಬಲಾಗಿದೆ.

ಮಂಗಳಸೂತ್ರ ಅಥವಾ ತಾಳಿ

ಮಂಗಳಸೂತ್ರ ಅಥವಾ ತಾಳಿ

ವಿವಿಧ ಧರ್ಮಗ್ರಂಥಗಳಲ್ಲಿ ವಿವಾಹದ ಬಳಿಕ ಕುತ್ತಿಗೆಗೆ ಮಂಗಳಸೂತ್ರ ಕಡ್ಡಾಯವಾಗಿ ಧರಿಸಬೇಕೆಂದು ಬೋಧಿಸಲಾಗಿದೆ. ಇದರಿಂದಾಗಿ ದೇವರನ್ನು ಸಾಕ್ಷಿಯಾಗಿ ಪಾಣಿಗ್ರಹಣ ಮಾಡಿದ ದಂಪತಿಗಳು ಸದಾ ಒಬ್ಬರಿಗೊಬ್ಬರು ಬೆಂಬಲವಾಗಿರಲು ದೈವಿಕ ಶಕ್ತಿ ಪ್ರಾಪ್ತವಾಗುತ್ತದೆ ಎಂದು ವಿವರಿಸಲಾಗಿದೆ. ಸಾಮಾನ್ಯವಾಗಿ ಮಂಗಳಸೂತ್ರದಲ್ಲಿ ಎರಡು ಚಿಕ್ಕ ಬೋಗುಣಿಯಾಕಾರದ ಬಟ್ಟಲುಗಳಿದ್ದು ಟೊಳ್ಳುಭಾಗ ದೇಹದ ಮೇಲಿರುವಂತೆ ಧರಿಸಲಾಗುತ್ತದೆ.

ಮಂಗಳಸೂತ್ರ ಅಥವಾ ತಾಳಿ

ಮಂಗಳಸೂತ್ರ ಅಥವಾ ತಾಳಿ

ಇದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಧನಾತ್ಮಕ ಶಕ್ತಿಗಳನ್ನು ತನ್ನೆಡೆಗೆ ಸೆಳೆದು ಸಂಗ್ರಹಿಸಲು ಸಾಧ್ಯವಾಗುತ್ತದೆ. ಭಕ್ತಿಯಿಂದ ತಾಳಿಯನ್ನು ಕಣ್ಣಿಗೆ ಒತ್ತಿಕೊಳ್ಳುವ ಮೂಲಕ ಈ ಶಕ್ತಿ ದೇಹವನ್ನು ಪ್ರವೇಶಿಸಿ ಪತಿ ಪತ್ನಿಯರ ನಡುವಿನ ಸಂಬಂಧ ಇನ್ನಷ್ಟು ಗಾಢವಾಗುವುದು ಎಂದು ನಂಬಲಾಗಿದೆ. ಹಾಗೂ ಇದು ದೇಹ ಮತ್ತು ಮನಸ್ಸನ್ನು ಉತ್ತಮ ಆರೋಗ್ಯದಲ್ಲಿರಿಸಲು ಸಹಕಾರಿಯಾಗಿದೆ. ಅಲ್ಲದೇ ದೇಹದಲ್ಲಿ ರಕ್ತಸಂಚಾರ ಸುಗಮವಾಗಲೂ ನೆರವಾಗುತ್ತದೆ.

ಬಳೆಗಳು

ಬಳೆಗಳು

ಸಾಮಾನ್ಯವಾಗಿ ಮಹಿಳೆಯರು ಕೆಲವು ಚಿನ್ನದ ಮತ್ತು ನಡುವೆ ಗಾಜಿನ ಬಳೆಗಳನ್ನು ತೊಡುತ್ತಾರೆ. ಗಾಜಿನ ಬಳೆಗಳಿಗೆ ಅಲಂಕಾರನಿಮಿತ್ತ ಸ್ಥಾನ ದೊರೆತರೆ ಚಿನ್ನದ ಬಳೆಗಳಿಗೆ ವಿಶಿಷ್ಟ ಸ್ಥಾನವಿದೆ. ಬಳೆಗಳು ವೃತ್ತಾಕಾರದಲ್ಲಿರುವುದರಿಂದ ದೇಹವನ್ನು ತೂರಿಕೊಂಡು ಹೋಗುವ ವಿದ್ಯುದಾಯಸ್ಕಾಂತ (electromagnetic) ಅಲೆಗಳು ದೇಹದಲ್ಲಿ ಸಂಗ್ರಹವಾಗುವಂತೆ ಮಾಡುತ್ತದೆ.

ಬಳೆಗಳು

ಬಳೆಗಳು

ಬಳೆಗಳ ವೃತ್ತಾಕಾರದ ಕಾರಣ ಈ ಶಕ್ತಿ ಒಮ್ಮೆ ಒಳಬಂದರೆ ಹೊರಹೋಗಲು ಸಾಧ್ಯವಿಲ್ಲದಂತಾಗಿ ದೇಹದಲ್ಲಿ ಹೆಚ್ಚು ಹೆಚ್ಚು ಸಂಗ್ರಹವಾಗುತ್ತದೆ. ಅಗೋಚರವಾದ ಈ ಶಕ್ತಿ ಹಸ್ತದಿಂದ ಪ್ರಾರಂಭವಾಗಿ ಪಾದಗಳವರೆಗೆ ವ್ಯಾಪಿಸುತ್ತದೆ. ರೀಕಿ ವಿದ್ಯೆಯನ್ನು ಅಭ್ಯಸಿಸುವರು ಈ ಶಕ್ತಿಗೆ ಅತಿಹೆಚ್ಚಿನ ಮಹತ್ವ ನೀಡುತ್ತಾರೆ. ಈ ಶಕ್ತಿ ಪ್ರಾಪ್ತವಾದ ಮಹಿಳೆಯರಲ್ಲಿ ಸ್ಥೈರ್ಯ ತುಂಬಿ ತುಳುಕುತ್ತದೆ. ಬಳೆ ತೊಡದವರಲ್ಲಿ ಈ ಶಕ್ತಿ ಸಂಗ್ರಹವಾಗದೇ ಪೋಲಾಗಿ ಹೋಗುತ್ತದೆ.

ಹಣೆಯ ಆಭರಣ

ಹಣೆಯ ಆಭರಣ

ತಲೆಯ ಹಿಂಭಾಗದಿಂದ ತೊಡಗಿ ಬೈತಲೆಯ ಮೂಲಕ ಹಾದು ಹಣೆಯ ಮುಂಬಾಗದಲ್ಲಿ ಜೋತಾಡುವ ಈ ಆಭರಣ ದೇಹದ ಬಿಸಿಯನ್ನು ನಿಯಂತ್ರಿಸಲು ನೆರವಾಗುತ್ತದೆ.

ಡಾಬು (ಸೊಂಟದ ಆಭರಣ)

ಡಾಬು (ಸೊಂಟದ ಆಭರಣ)

ಸಾಧಾರಣವಾಗಿ ಉಡುಪಿನ ಮೇಲೆ ಸೊಂಟವನ್ನು ಆವರಿಸುವ ಈ ಅಭರಣ ಮಹಿಳೆಯರು ಮಾತ್ರ ತೊಡುತ್ತಾರೆ. ಏಕೆಂದರೆ ಈ ಆಭರಣವನ್ನು ತೊಡುವ ಮೂಲಕ ಮಹಿಳೆಯರ ತಿಂಗಳ ರಜಾದಿನಗಳನ್ನು ನಿಯಮಿತವಾಗಿ ಪಡೆಯುತ್ತಾರೆ. ಅಲ್ಲದೇ ಏರುಪೇರಿನ ಮೂಲಕ ಉಂಟಾಗುವ ಉದರ ನೋವನ್ನು ಕಡಿಮೆ ಮಾಡುತ್ತದೆ. ಚಿನ್ನದ ಡಾಬು ಅತಿ ದುಬಾರಿಯಾಗಿರುವ ಕಾರಣ ಬೆಳ್ಳಿಯ ಡಾಬುವನ್ನು ಹೆಚ್ಚಾಗಿ ಧರಿಸಲಾಗುತ್ತದೆ. ಬೆಳ್ಳಿ ದೇಹದ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ ಎಂದೂ ನಂಬಲಾಗಿದೆ.

ಕಾಲ್ಗೆಜ್ಜೆ

ಕಾಲ್ಗೆಜ್ಜೆ

ಸಾಧಾರನವಾಗಿ ಕಾಲ್ಗೆಜ್ಜೆಗಳನ್ನು ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಇದರೊಂಗಿದೆ ಚಿಕ್ಕದಾಗಿ ಶಬ್ದ ಬರುವಂತೆ ಪುಟ್ಟ ಪುಟ್ಟ ಗೆಜ್ಜೆಗಳನ್ನೂ ಅಳವಡಿಸುವುದರಿಂದ ಇದನ್ನು ತೊಟ್ಟ ಮಹಿಳೆ ನಡೆದಾಗಲೆಲ್ಲಾ ಸುಮಧುರವಾದ ಗೆಜ್ಜೆನಾದ ಮೂಡುತ್ತದೆ. ಈ ನಾದ ಋಣಾತ್ಮಕ ಶಕ್ತಿಗಳನ್ನು ದೂರವಿರಿಸುತ್ತದೆ. ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಕಾಲಿನಿಂದ ಹೊರಹೋಗಬಹುದಾದ ದೇಹದ ಅಗೋಚರ ಶಕ್ತಿಯನ್ನು ತಡೆದು ನಿಲ್ಲಿಸಿದಂತಾಗುತ್ತದೆ. ಅಲ್ಲದೇ ಸಂಧಿವಾತ ಮತ್ತು ಗಂಟುನೋವುಗಳಿಂದ ರಕ್ಷಣೆ ನೀಡುತ್ತದೆ.

ಕಾಲುಂಗುರಗಳು

ಕಾಲುಂಗುರಗಳು

ಸಾಧಾರಣವಾಗಿ ಬೆಳ್ಳಿಯ ಕಾಲುಂಗುರಗಳನ್ನು ವಿವಾಹಿತ ಸ್ತ್ರೀಯರು ಧರಿಸುತ್ತಾರೆ. ಕಾಲಿನ ಬೆರಳಿನಿಂದ ಹೊರಟ ನರ ನೇರವಾಗಿ ಹೃದಯದ ಮೂಲಕ ಗರ್ಭಕೋಶವನ್ನು ಸ್ಪಂದಿಸುವುದರಿಂದ ಮಾಸಿಕ ಸ್ರಾವ ಹಾಗೂ ಸಂತಾನಪ್ರಾಪ್ತಿಗೆ ಸಹಕರಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೇ ರಕ್ತದೊತ್ತಡವನ್ನೂ ನಿಯಂತ್ರಿಸಲಾಗುತ್ತದೆ ಎಂದು ನಂಬಲಾಗಿದೆ.


English summary

Amazing Scientific Reasons Behind Wearing Ornaments

Wearing ornaments is a dream of every woman. Indian women have a great liking towards gold and silver ornaments. Right from the time immemorial, women have been known to wear ornaments. Let us take a look at the amazing scientific reasons behind wearing ornaments.
X
Desktop Bottom Promotion